`ಹೀಗೊಂದು ದಿನ’ ನಿರ್ಮಾಪಕನಿಂದ ಸಿಂಧು ಲೋಕನಾಥ್‍ಗೆ ದೋಖಾ!

0
277

ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಮಹಾ ದೋಖಾ ಎಸಗಲಾಗಿದೆಯಂತೆ. ‘ಹೀಗೊಂದು ದಿನ’ ಚಿತ್ರದ ನಿರ್ಮಾಪಕರಾದ ಚಂದ್ರಶೇಕರ್ ರವರು ಫಿಲ್ಮ್ ಚೇಂಬರ್ ನಲ್ಲಿ ದೂರನ್ನು ದಾಖಲಿಸಿದ್ದಾರೆ ಆದರೆ ವಿಚಾರಣೆಯ ಸಂದರ್ಭದಲ್ಲಿ ಯಾಕೆ ಗೈರಾಗುತಿದ್ದಾರೆ? ಎಂಬುವ ಪ್ರಶ್ನೆಗಳು ಫಿಲ್ಮ್ ಚೇಂಬರ್ ನಲ್ಲಿ ಉದ್ಭವವಾಗುತ್ತಿದೆ! ‘ಹೀಗೊಂದು ದಿನ’ ಚಿತ್ರದ ನಿರ್ಮಾಕರು ನನಗೆ ಮೋಸವನ್ನ ಮಾಡಿದ್ದಾರೆ, ಎರಡು ಲಕ್ಷ ರೂ, ಪೇಮೆಂಟ್ ಕೊಟ್ಟಿಲ್ಲ ಎಂದು ಸುಮಾರು ದಿನಗಳಿಂದ ಸಿಂಧು ಲೋಕನಾಥ್ ಆರೋಪ ಮಾಡುತ್ತಿದ್ದರು,ಆದರೆ ಈ ಬಾರಿ ಸಿಡಿದೆದ್ದ ಸಿಂಧು ಕೋರ್ಟ್ ಮೋರೆ ಹೋಗಿದ್ದಾರೆ.

ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ, ಆದರೆ ವಿಚಾರಣೆಗೆ ನಿರ್ಮಾಪಕರು ಬರುತ್ತಿಲ್ಲವಂತೆ. ಆದರೆ ಫಿಲ್ಮ್ ಚೇಂಬರ್ ನಲ್ಲಿ ಸ್ವತಃ ಚಂದ್ರಶೇಕರ್ ಅವರೆ ದೂರನ್ನ ದಾಖಲಿಸಿದ್ದಾರೆ,ಹಾಗದರೆ ಚಂದ್ರಶೇಕರ್ ರವರು ವಿಚಾರಣೆಗೆ ಬರಬಹುದಿತ್ತು,ತಮ್ಮ ವಾದವನ್ನು ಈ ಸಂದರ್ಭದಲ್ಲಿ ಮಂಡಿಸಬಹುದ್ದಿತ್ತು,ತಮ್ಮದು ಯಾವುದೇ ತಪ್ಪಿಲ್ಲವೆಂದರೆ ಫಿಲ್ಮ್ ಚೇಂಬರ್ ನಲ್ಲಿ ಅಧ್ಯಕ್ಷರ ಮುಂದೆ ಸರಿ-ತಪ್ಪುಗಳನ್ನು ಮಂಡಿಸಬಹುದಿತ್ತು.. ಅಥವಾ ಕೋರ್ಟ್‍ಗೆ ಹಾಜರಾಗಬಹುದಿತ್ತು,ಎರಡಕ್ಕು ಸಹ ಅವರು ಯಾಕೆ ಗೈರಾಗುತ್ತಿದ್ದಾರೆ? ಎಂಬುದು ಸಿಂಧು ಲೋಕನಾಥ್ ಅವರ ಧೋರಣೆಯಾಗಿದೆ!

ಇನ್ನು ಈ ಸಿನಿಮಾ ಜನವರಿಯಲ್ಲಿಯೇ ಬಿಡುಗಡೆಯಾಗಬೇಕಿತ್ತು,ನಿರ್ಮಾಪಕರು, ನಟಿ ಸಿಂಧು ಲೋಕನಾಥ್ ಅವರಿಗೆ ಕೊಡಬೇಕಿದ್ದ 2 ಲಕ್ಷ ಹಣವನ್ನ ಉಳಿಸಿಕೊಂಡಿದ್ದರಂತೆ,ಸಿನಿಮಾ ಬಿಡುಗಡೆಯಾದ ನಂತರ ನಿಮಗೆ ಪೇಮೆಂಟ್ ಮಾಡುತ್ತೇನೆ, ನಾನು ಕೆಲವು ತೊಂದರೆಗಳಲ್ಲಿದ್ದೇನೆ ,ಎಂದು ಚಂದ್ರಶೇಕರ್ ಹೇಳಿದ್ದರಂತೆ,ತದನಂತರ ಸಿನಿಮಾ ಬಿಡುಗಡೆಯಾದ ಮೇಲೆ 2 ಲಕ್ಷ ಚೆಕ್ ಅನ್ನು ಸಿಂಧು ಲೋಕನಾಥ್ ಅವರಿಗೆ ಕೊಡುತ್ತಾರೆ.ಆದರೆ ಆ ಚೆಕ್‍ಗೆ ಯಾವದೇ ಡೇಟ್ ಅನ್ನು ಹಾಕಿರಲಿಲ್ಲ. 2 ತಿಂಗಳು ಕಾದರೂ, ಸಿಂಧು ಅವರಿಗೆ ಯಾವುದೇ ಹಣ ಬರುವುದಲ್ಲವಂತೆ.ಇದರಿಂದ ಬೇಸತ್ತ ಸಿಂಧು ಚೆಕ್ ಅನ್ನು ಬ್ಯಾಂಕಗೆ ಹಾಕಿದ್ದಾರೆ.. ಆದರೆ ಚೆಕ್ ಬೌನ್ಸ್ ಆಗಿದೆ! ಇದಾದ ಮೇಲೂ ಮೂರ್‍ನಾಲ್ಕು ಸಲ ನಿರ್ಮಾಕರನ್ನು ಕೇಳಿದ್ದಾರೆ. ಆದರೆ ಸರಿಯಾಗಿ ಚಂದ್ರಶೇಕರ್ ಪ್ರತಿಕ್ರಿಯಿಸಿಲ್ಲ.. ಆದುದರಿಂದ ಕೋರ್ಟ್‍ನಲ್ಲಿ ಚೆಕ್ ಬೌನ್ಸ್ ಕೇಸ್ ಹಾಕಲಾಗಿದೆಯಂತೆ.. ಆದರೆ ಚಂದ್ರಶೇಕರ್ ಅವರು ನಾನು ಎಲ್ಲಾ ಹಣವನ್ನು ನೀಡಿದ್ದೇನೆ, ಕೇವಲ ಇನ್ನು 20 ಸಾವಿರ ಮಾತ್ರ ಕೊಡಬೇಕು ಎಂದು ಫಿಲ್ಮ್ ಚೇಂಬರ್ ನಲ್ಲಿ ದೂರನ್ನು ಸಲ್ಲಿಸಿದ್ದಾರೆ.. ಇದರಲ್ಲಿ ಯಾರು ಯಾರಿಗೆ ಮೋಸ ಮಾಡುತ್ತಿದ್ದಾರೆ ಎಂಬುದು ಕೋರ್ಟ್ ನಿರ್ಧರಿಸಬೇಕಿದೆ..

LEAVE A REPLY

Please enter your comment!
Please enter your name here