ಈ ಪ್ರಾಚೀನ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ಇಲ್ಲ…!

0
261

ಭೂಮಿಯ ಮೇಲಿನ ಪುರಾತನ ಪಟ್ಟಣದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಭಾರತದ ಸಾವಿರಾರು ವರ್ಷಗಳಿಂದ ರೂಪಾಂತರವಾಗುತ್ತಾ ಇಂದಿನ ರೂಪದಲ್ಲಿ ಮೇಲೆದ್ದಿದೆ. ಈ ರಾಷ್ಟ್ರದ ಪ್ರಾಚೀನ ಪಟ್ಟಣವೊಂದರಲ್ಲಿ ಈಗ ಪಲ್ಲಟದ ಸಮಯ ಶುರುವಾಗಿದೆ.

ಕಾಶಿ, ವಾರಣಾಸಿ ಮತ್ತು ಬನಾರಸ್ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಪ್ರಾಚೀನ ಪಟ್ಟಣ ಇಲ್ಲಿನ ಅಧಿಪತಿ ಸರ್ವ ವಂದಿತ ಕಾಶಿ ವಿಶ್ವನಾಥ. ಪಂಡಿತರ ಪ್ರಕಾರ ಐದು ಸಾವಿರಕ್ಕೂ ಹಳೆಯ ಪಟ್ಟಣವಾಗಿರುವ ಕಾಶಿ ಇಂದಿಗೂ ಕೋಟ್ಯಂತರ ಆಸ್ತಿಕರಿಗೆ ಮತ್ತು ನಿರ್ಭಾವುಕರಿಗೆ ಪರಮ ಸ್ಥಳ.

ವಾರಣಾಸಿ ಭಾರತದ ಪವಿತ್ರ ಕ್ಷೇತ್ರಗಳಲ್ಲಿ ಒಂದು ಗಂಗಾನದಿಯ ತಟದಲ್ಲಿ ವಿಶ್ವನಾಥ ಇಲ್ಲಿ ನೆಲೆಸಿದ್ದಾನೆ. ಸಹಸ್ರ ವರ್ಷಗಳಿಂದ ಜನರು ಇಲ್ಲಿಗೆ ಯಾತ್ರೆ ಕೈಗೊಳ್ಳುವುದು ನಡದೇ ಇದೆ. ಪ್ರಾಚೀನ ದೇವಲಾಯ ಸಣ್ಣ ಓಣಿಗಳಂತ ರಸ್ತೆಗಳು ರಸ್ತೆಯಲ್ಲಿ ಸದಾ ಸಂಚರಿಸುವ ಲಕ್ಷೋಪಲಕ್ಷ ಹೆಜ್ಜೆಗಳ ಸದ್ದು ಇಲ್ಲಿ ಹರಿಶ್ಚಂದ್ರ ಹಚ್ಚಿದ ಅಗ್ನಿಯಂತೆ ಕಡಿಮೆಯಾಗಿಲ್ಲ.

ಕಾಶಿಗೆ ಬಂದಮೇಲೆ ಗಂಗಾನದಿಯಲ್ಲಿ ಪುಣ್ಯಸ್ನಾನ, ಕಾಶಿ ವಿಶ್ವನಾಥನ ದರ್ಶನ ಗಂಗಾರತಿ ನೋಡದೆ ಇದ್ದರೆ ಯಾತ್ರೆ ಅಪೂರ್ಣ. ಮಳೆಗಾಲದ ಅಂಚಿನಲ್ಲಿನ ಶ್ರಾವಣ ಮಾಸದಲ್ಲಿ ಇಲ್ಲಿಗೆ ಭಕ್ತರ ಪ್ರವಾಹವೇ ಬರುತ್ತದೆ. ಇದಕ್ಕಾಗಿ ಕಾಶಿವಿಶ್ವನಾಥ ಮಂದಿರದಲ್ಲಿ ಶತಮಾನಗಳಿಂದ ಚಾಲ್ತಿಯಲ್ಲಿದ್ದ ಆಚರಣೆಯೊಂದು ಈಗ ಹೊಸರೂಪ ಪಡೆದಿದೆ.

ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿಯೊಳಗೆ ಭಕ್ತರ ಪ್ರವೇಶ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಭಕ್ತರು ಗರ್ಭಗುಡಿಯ ಬಾಗಿಲಿನಿಂದ ಮಾತ್ರವೇ ಗಂಗಾಭಿಷೇಕ ಮಾಡಲು ಅವಕಾಶ ನೀಡಲಾಗಿದೆ. ಶ್ರಾವಣ ಮಾಸದ ಭಕ್ತರ ನಿಯಂತ್ರಣಕ್ಕೆ ಸುಗಮ ದರ್ಶನಕ್ಕೆ ಮಾಡಿದ್ದ ಈ ಬದಲಾವಣೆ ಶಾಶ್ವತಗೊಳಿಸಲು ಕಾಶಿವಿಶ್ವನಾಥ ಮಂದಿರದ ಆಡಳಿತ ಮಂಡಳಿ ನಿರ್ಧರಿಸಿದೆ.

ಕಾಶಿ ವಿಶ್ವನಾಥ ಮಂದಿರದ ಗರ್ಭಗುಡಿಗೆ ನಾಲ್ಕು ದ್ವಾರಗಳಿವೆ. ಭಕ್ತರ ಪ್ರವೇಶ ಮತ್ತು ನಿರ್ಗಮನಕ್ಕೆ ಎರಡು ದ್ವಾರಗಳನ್ನು ಮಾತ್ರ ಬಳಸುತ್ತಾರೆ. ಇದರಿಂದ ದೇವಸ್ಥಾನಕ್ಕೆ ಜನಸಂದಣಿ ಹೆಚ್ಚಾಗಿದೆ, ಇದನ್ನು ಅರಿತ ಆಡಳಿತ ಮಂಡಳಿ ನಾಲ್ಕು ಬಾಗಿಲ ಮೂಲಕವೇ ಪವಿತ್ರ ಅಘ್ರ್ಯವನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಹೊಸ ಕ್ರಮದಿಂದ ಹೆಚ್ಚಿನ ಭಕ್ತರು ಕಡಿಮೆ ಸಮಯದಲ್ಲೇ ದರ್ಶನ ಪಡೆಯಲು ಸಹಕಾರಿಯಾಗಿದೆ.

ದಕ್ಷಿಣ ಭಾರತದಲ್ಲಿ ಅತ್ಯಂತ ವಿರಳವಾಗಿರುವ ಭಕ್ತರ ಗರ್ಭಗುಡಿ ಪ್ರವೇಶ ಉತ್ತರ ಭಾರತದ ದೇಗುಲದಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಈಗ ಇಲ್ಲಿಯೂ ಬದಲಾವಣೆ ಶುರುವಾಗಿದೆ, ಇದರಿಂದ ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗುವುದಿಲ್ಲ ಅನ್ನೋದು ಕಾಶಿ ವಿಶ್ವನಾಥ ಮಂದಿರದ ಆಡಳಿತ ಮಂಡಳಿ ವಿಶ್ವಾಸ.

LEAVE A REPLY

Please enter your comment!
Please enter your name here