ದೇವಾಲಯ ಎಂದರೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳ ..
ಹಂಪಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಒಂದು ಸ್ಥಳ..
ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.. ಹಂಪಿಯ ಮೊದಲನೆ ಹೆಸರು ‘ಪಂಪ’ ಎಂದಿತ್ತು. ಅಂದರೆ ತುಂಗಭದ್ರಾ ನದಿ ಎಂದರ್ಥ !
ಇನ್ನು ಹಂಪಿಯಲ್ಲಿ ಅನೇಕ ದೇವಾಲಯ ಹಾಗೂ ಸ್ಮಾರಕಗಳನ್ನು ನೋಡಬಹುದು.. ವಿರೂಪಾಕ್ಷ ದೇವಾಲಯ, ಹಜಾರರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು,ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ,ಉಗ್ರ ನರಸಿಂಹ, ಕಮಲ್ ಮಹಲ್, ಬಡವಿ ಲಿಂಗ , ಆನೆ ಲಾಮಾ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದು !
ಐತಿಹಾಸಿಕ ಪ್ರಸಿದ್ಧಿ ಹಂಪಿಯಲ್ಲಿರುವ ಬಡವಿ ಲಿಂಗ ದೇವಸ್ಥಾನ ನೋಡಿದ್ದೀರಾ ??!!
ಬಡವಿಲಿಂಗ ದೇವಸ್ಥಾನ, ಹಂಪಿ ವೈಭವಯುತ ವಿಜಯನಗರ ಸಾಮ್ರಾಜ್ಯವಿದ್ದ ಹಂಪಿಯಲ್ಲಿ ಈ ದೊಡ್ಡ ಶಿವಲಿಂಗವಿರುವ ಈ ಪುಟ್ಟ ದೇವಸ್ಥಾನವನ್ನು ಕಾಣಬಹುದು. 9 ಅಡಿಯ ದೇವಸ್ಥಾನವಾಗಿದ್ದು, ಹಂಪಿಯ ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ.ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೄತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ.
ಇದು ಸಹ ಹಂಪಿಯಲ್ಲಿ ನೋಡಬೇಕಾದ ಪುಣ್ಯ ಸ್ತಳ