ರಾಜ್ಯ ರಾಜಕೀಯದಲ್ಲಿ ‘ಟ್ರಬಲ್ ಶೂಟರ್’ ಎಂದೇ ಗುರುತಿಸಿಕೊಂಡಿದ್ದ ಡಿ.ಕೆ. ಶಿವಕುಮಾರ್ ಇದೀಗ ಇಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಹೊತ್ತಿನಲ್ಲೇ ಡಿಕೆಶಿಗೆ ಇಡಿ ಸಂಕಷ್ಟ ಆರಂಭವಾಗಿದ್ದು, ರಾಜಕೀಯವಾಗಿ ಡಿ.ಕೆ. ಶಿವಕುಮಾರ್’ಗೆ ಭಾರೀ ಹಿನ್ನಡೆ ಉಂಟುಮಾಡಿದೆ.

ಇನ್ನು ಇಡಿ ಸಮನ್ಸ್ಗೆ ತಲೆಕೆಡಿಸಿಕೊಂಡಿರೋ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ನ್ನು ಸಮಾಧಾನ ಮಾಡಲು ಅಥವಾ ನೈತಿಕ ಸ್ಥೈರ್ಯ ತುಂಬಲು ಯಾವೊಬ್ಬ ಕಾಂಗ್ರೆಸ್ ನಾಯಕರು ಮನೆಗೆ ಬಂದಿಲ್ಲ. ರಾಜ್ಯ ಕಾಂಗ್ರೆಸ್ ಈ ಪ್ರಕರಣದಲ್ಲಿ ಅಂತರ ಕಾಯ್ದುಕೊಂಡಿದೆ. ಆದರೆ ಡಿಕೆಶಿ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು, ರಾಜಕೀಯವಾಗಿ ನಿಮಗೆ ಬೆಂಬಲವಾಗಿ ನಾವು ನಿಲ್ಲುತ್ತೇವೆ ಎಂಬ ಭರವಸೆಯನ್ನು ದೇವೇಗೌಡರು ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರು ಕೈಬಿಟ್ಟರು ದೇವೇಗೌಡರು ಮಾತ್ರ ಡಿಕೆಶಿ ಬೆನ್ನಿಗೆ ನಿಂತಿರುವುದು ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ. ಈ ಹಿಂದೆ ಮೈತ್ರಿ ಸರ್ಕಾರದ ಉಳಿವಿಗಾಗಿ ಶ್ರಮಿಸಿದ್ದ ಡಿಕೆಶಿ ಬೆನ್ನಿಗೆ ನಿಲ್ಲಲು ದೇವೇಗೌಡರು ಮುಂದಾಗಿದ್ದಾರೆ.