ಒಕ್ಕಲಿಗ ಸಮುದಾಯವನ್ನು ತುಳಿಯಲೆತ್ನಿಸಿದ ಪರಿಣಾಮ ಸಿದ್ದು ಚಾಮುಂಡೇಶ್ವರಿಯಲ್ಲಿ ಸೋಲುಂಡರು..!

0
993

ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ಎರಡು ಪಕ್ಷಗಳ ನಾಯಕರ ನಡುವೆ ಬಹಿರಂಗ ಸಮರ ಆರಂಭವಾಗಿದೆ. ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೆಗೌಡರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ನೇರವಾಗಿ ವಾಗ್ದಾಳಿ ನಡೆಸಿದ್ದು, ಅನೇಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಸುವರ್ಣ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಕೆಲ ಘಟನೆಗಳನ್ನು ಪ್ರಸ್ತಾಪಿಸಿರುವ ದೇವೇಗೌಡರು, “ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ, ಆದ್ರು ಹೈಕಮಾಂಡ್ ಮಾತಿಗೆ ಕಟ್ಟು ಬಿದ್ದು ಒಪ್ಪಿಕೊಂಡಿದ್ದರು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನನಗೆ ಇಷ್ಟವಿರಲಿಲ್ಲ. ಅವರಿಗೆ ಅದಾಗಲೇ ಎರಡು ಆಪರೇಷನ್ ಆಗಿರುವುದರಿಂದ ಆರೋಗ್ಯದ ಕಾರಣದಿಂದ ನಾನು ಹಿಂದೆ ಸರಿದಿದ್ದೆ, ಆದ್ರೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಒತ್ತಾಯ ಪೂರ್ವಕವಾಗಿ ನನ್ನನ್ನು ಒಪ್ಪಿಸಿದರು. ಆದರೆ ಮುಂದಿನ ದಿನಗಳಲ್ಲಿ ಸಂಪುಟ ರಚನೆ, ಖಾತೆ ಹಂಚಿಕೆ ಸೇರಿದಂತೆ ಎಲ್ಲದರಲ್ಲೂ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿದರ ಪರಿಣಾಮ ಆಡಳಿತ ನಡೆಸಲು ಕಷ್ಟವಾಯಿತು ಎಂದು ದೇವೇಗೌಡರು ಸಿದ್ದು ವಿರುದ್ಧ ಗುಡುಗಿದ್ದಾರೆ.

ಇನ್ನು ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರು ತಮ್ಮ ಸ್ವಂತ ಬಲದಿಂದ ಗೆದ್ದಿಲ್ಲ. ಬದಲಾಗಿ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಒಕ್ಕಲಿಗ ಸಮುದಾಯವನ್ನು ತುಳಿಯಲೆತ್ನಿಸಿದ ಪರಿಣಾಮವಾಗಿ, ಇಡೀ ಸಮುದಾಯವೇ ಅವರ ವಿರುದ್ದ ತಿರುಗಿ ಬಿದ್ದು ಅವರನ್ನು ಸೋಲಿಸಿತು. ಇನ್ನು ತುಮಕೂರಿನಲ್ಲಿ ನನ್ನ ಸೋಲಿಗೂ ಸಿದ್ದರಾಮಯ್ಯ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಅವರ ಆಪ್ತರನ್ನು ನನ್ನ ವಿರುದ್ದ ಎತ್ತಿಕಟ್ಟಿ ಕೆಲಸ ಮಾಡಿಸಿದ್ರು ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here