‘ಯಾವುದೇ ತನಿಖೆಗೂ ದೇವೇಗೌಡರ ಮಕ್ಕಳು ಹೆದರಲ್ಲ’ : ಎಚ್.ಡಿ.ರೇವಣ್ಣ ಚಾಲೆಂಜ್..!

0
788

ದ್ವೇಷದ ರಾಜಕೀಯ ಮಾಡಲ್ಲ ಎಂದವರು ಇಂದು ಏನು ಮಾಡುತ್ತಿದ್ದಾರೆ. ನಾವು ಎಲ್ಲೂ ಓಡಿ ಹೋಗಲ್ಲಾ‌..ರಾಜಕೀಯ ‌ನಿಂತ‌ ನೀರಲ್ಲ ಕುಮಾರಸ್ವಾಮಿಗೆ ಹೆಗಲು ಕೊಟ್ಟು ಹೋರಾಟ ಮಾಡುವೆ… ಯಾವುದೇ ತನಿಖೆಗು ದೇವೇಗೌಡರ ಮಕ್ಕಳು ಹೆದರೊಲ್ಲ ಎಂದು ಮಾಜಿ‌ ಸಚಿವ ಎಚ್ .ಡಿ.ರೇವಣ್ಣ ಗುಟುರು ಹಾಕಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು ಸಿಬಿಐ ತನಿಖೆಗೆ ಆದೇಶ ನೀಡುವ ಮೂಲಕ ಅವರೇ ದ್ವೇಷದ ರಾಜಕೀಯ ಶುರು ಮಾಡಿದ್ದಾರೆ ಇದು ಮುಂದಿನ ದಿನದಲ್ಲಿ ಜೆಡಿಎಸ್ ಪಕ್ಷಕ್ಕೆ ವರವಾಗಲಿದೆ‌.

ಜೆಡಿಎಸ್ ಮುಗಿಸಲು ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಟಾರ್ಗೆಟ್ ಮಾಡಿವೇ‌‌ ; ಅವರು ಏನೇ ಮಾಡಲಿ ನಾವು ಅದನ್ನು ಸಮರ್ಥವಾಗಿ ಎದುರಿಸಲು ಸಿದ್ದ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಗಿದ ಅದ್ಯಾಯವಾಗಿದೆ ಎಂದರು. ಯಡಿಯೂರಪ್ಪ ಅವರಿಗೆ ನೈತಿಕತೆ ಇದ್ದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಹಗರಣಗಳನ್ನು ತನಿಖೆಗೆ ಒಳಪಡಿಸಲಿ ಎಂದು ಸವಾಲು ಹಾಕಿದರು‌.

Deve Gowda

ಎಚ್.ವಿಶ್ವನಾಥ್ ಯಡಿಯೂರಪ್ಪ ಅವರ ಋಣ ತೀರಿಸಲು ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ವಿಶ್ವನಾಥ್ ಅವರ ಅಳಿಯನಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಉನ್ನತ ಸ್ಥಾನವನ್ನು ಯಡಿಯೂರಪ್ಪ ಅವರು ದಯಪಾಲಿಸಿದ್ದಾರೆ ಆದ್ದರಿಂದ ಕುಮಾರಸ್ವಾಮಿ ಹಾಗೂ ನಮ್ಮ‌ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಕೆ.ಆರ್.ಪೇಟೆ ಶಾಸಕರಿಗೆ ಅವರ ಕ್ಷೇತ್ರದ ಅಭಿವೃದ್ಧಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನೂರಾರು ಕೋಟಿ ಬಿಡುಗಡೆ ಮಾಡಿದರು ಇಂದು ಅವರೇ ನಮಗೆ ಮೋಸ ಮಾಡಿದ್ದಾರೆ‌ ಅವರಿಗೆ ಕಾಲವೇ ಉತ್ತರಿಸಲಿದೆ ಎಂದು ನುಡಿದರು.

ರಾಜ್ಯದಲ್ಲಿ ಬಾರೀ ಮಳೆ‌ ಕಾರಣ ಮನೆ ಆಸ್ತಿ ಪಾಸ್ತಿ ಹಾನಿಯಾಗಿದ್ದು ಸಾವಿರಾರು ಕೋಟಿ ನಷ್ಟ ಸಂಬಂಧಿಸಿದೆ. ಜಿಲ್ಲೆಯಲ್ಲಿ ಸುಮಾರು 250 ಕೋಟಿ ನಷ್ಟ ಸಂಬಂಧಿಸಿದ ಎಂದು ಅಂದಾಜಿಸಲಾಗಿದೆ ರಾಜ್ಯ ಸರ್ಕಾರ ಇದುವರೆಗೆ ಜಿಲ್ಲೆಗೆ 10 ಕೋಟಿ ಬಿಡುಗಡೆ‌ಮಾಡಿದೆ . ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ‌ ಪರಿಹಾರದ ಹಣ ನಿರೀಕ್ಷಿಸದೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಮಾಡಬೇಕು ಮುಂದಿನ ಕೆಲ ದಿನಗಳಲ್ಲಿ ಹುಬ್ಬಳ್ಳಿ ,ಧಾರವಾಡ ಬೆಳಗಾವಿ ಜಿಲ್ಲೆಯ ನೆರೆ ಹಾವಳಿ‌ ಪ್ರದೇಶಕ್ಕೆ ಭೇಟಿ ನೀಡುವುದಾಗಿ ರೇವಣ್ಣ ತಿಳಿಸಿದರು.

-ಶಿವಮೊಗ್ಗಕ್ಕೆ 2000 ಕೋಟಿ ಹಣವಿದೆ;

ನರೆ ಹಾವಳಿ ಪರಿಹಾರಕ್ಕೆ ಹಣ ಬಿಡುಗಡೆ ಮಾಡದ ಯಡಿಯೂರಪ್ಪ ಅವರು ತಮ್ಮ ಸ್ವಕ್ಷೇತ್ರಕ್ಕೆ ಆಗಸ್ಟ್ ‌3 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕೆರೆ ನೀರು ತುಂಬಿಸುವ ಕಾಮಗಾರಿ, ಸಣ್ಣ ನೀರಾವರಿ ಯೋಜನೆ‌ ಸೇರಿದಂತೆ ರೈಲ್ವೆ ಹಾಗೂ ವಿಮಾನ ನಿಲ್ದಾಣ ಕಾಮಗಾರಿಗೆ ಸಾವಿರಾರು ಕೋಟಿ ಮಂಜೂರು ಮಾಡಿದ್ದಾರೆ .

ಶಿವಮೊಗ್ಗ- ಶಿಕಾರಿಪುರ ರೈಲು ಮಾರ್ಗ ಕಾಮಗಾರಿಗೆ 950 ಕೋಟಿ ಹಾಗೂ ವಿಮಾನ ನಿಲ್ದಾಣ ಕಾಮಗಾರಿಗೆ 550 ಕೋಟಿ ರೂ ಮಂಜೂರು ಮಾಡಿಸಿದ್ದಾರೆ‌. ಇಷ್ಟೊಂದು ಹಣವನ್ನು ಇನ್ನು ಮಂತ್ರಿಮಂಡಲ ರಚಿಸದೆ ಮಾಡಿ‌ ಮುಗಿಸಿದ್ದಾರೆ

ಆದರೆ ಉತ್ತರ ಕರ್ನಾಟಕ ಭಾಗದ ಹಾಗೂ ನೆರೆ ಹಾವಳಿ ಜಿಲ್ಲೆಯಲ್ಲಿನ‌ ಜನರ ಗೋಳು ಸಿಎಂ ಅವರಿಗೆ ಕಾಣಿಸುತ್ತಿಲ್ಲಾ‌ ..ದೆಹಲಿಗೆ ಕೇವಲ‌ ತಮ್ಮ ಜಿಲ್ಲೆಯ ಅಭಿವೃದ್ಧಿ ಮಾಡಿಸಲು ಯಡಿಯೂರಪ್ಪ ಹೋಗಿ ಬರುತ್ತಿದ್ದಾರೆ ಎಂದು ಗಂಭೀರ ಆರೋಪ‌ ಮಾಡಿದರು. ಈ ವೇಳೆ ಶ್ರವಣಬೆಳಗೋಳ ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ ಇದ್ದರು.

LEAVE A REPLY

Please enter your comment!
Please enter your name here