ದೇವೇಗೌಡರ ಮಾಸ್ಟರ್ ಪ್ಲಾನ್ , ಹುಣಸೂರು ಅಖಾಡಕ್ಕೆ ಪ್ರಜ್ವಲ್ ರೇವಣ್ಣ….

0
160

ಜೆಡಿಎಸ್ ಪಕ್ಷದಲ್ಲಿ ಹೊಸ ಬೆಳವಣಿಗೆಯೊಂದು ನಡೆಯುತ್ತಿದ್ದು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲು ಹೆಚ್ ಡಿ ದೇವೇಗೌಡರು ಮುಂದಾಗಿದ್ದಾರೆ ಎನ್ನುವ ವಿಷಯವೊಂದು ಬಾರಿ ಚರ್ಚೆಗೆ ಕಾರಣವಾಗಿದೆ.
ಅನರ್ಹ ಶಾಸಕರಾದ ಹೆಚ್.ವಿಶ್ವನಾಥ್ ರವರಿಗೆ ಚಕ್ ನೀಡಲು ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್ ಡಿ ದೇವೇಗೌಡರು ರಣತಂತ್ರ ರೂಪಿಸಿದ್ದು, ರಾಜ್ಯ ರಾಜಕೀಯಕ್ಕೆ ತಮ್ಮ ಮೊಮ್ಮಗ ಹಾಗೂ ಹಾಸನದ ಪ್ರಸ್ತುತ ಸಂಸದರು ಆಗಿರುವ ಪ್ರಜ್ವಲ್ ರೇವಣ್ಣ ನವರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿದೆ. 

ಕಾರ್ಯಕರ್ತರು ಹಾಗೂ ಮುಖಂಡರ ಒತ್ತಡಕ್ಕೆ ಮಣಿದು ಉಪಚುನಾವಣೆಗೆ ದೇವೇಗೌಡರು ಹೊಸ ನಿರ್ಧಾರ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಹುಣಸೂರು ಕ್ಷೇತ್ರದ ಉಪ ಚುನಾವಣೆಗೆ ಪ್ರಜ್ವಲ್ ರವರು ನಿಂತು ಜಯಗಳಿಸಿದರೆ ಹಾಸನ ಲೋಕಸಭಾ ಕ್ಷೇತ್ರ ಖಾಲಿಯಾಗಲಿದ್ದು, ಇಲ್ಲಿಂದ ದೇವೇಗೌಡರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ . ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ನವರು ಹುಣಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಲು ಬಹಸಿದ್ದರು ಆದರೆ, ಹೆಚ್ ಡಿ ಕುಮಾರಸ್ವಾಮಿ ರವರ ನಿರ್ಣಯದ ಮೇರೆಗೆ ಹೆಚ್.ವಿಶ್ವನಾಥ್ ರವರನ್ನು ಹುಣಸೂರು ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಮಾಡಿ ಜೆಡಿಎಸ್ ಪಕ್ಷವು ಜಯ ಸಾಧಿಸಿತ್ತು. ಆದರೆ ವಿಶ್ವನಾಥ್ ಅತೃಪ್ತರಾಗಿ ರಾಜೀನಾಮೆ ನೀಡಿ ಹೊರ ನಡೆದಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮೇರೆಗೆ ಅವರನ್ನು ಸಭಾಧ್ಯಕ್ಷರು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದು ಜೆಡಿಎಸ್ ಪಕ್ಷವು ಸಹ ಅವರನ್ನು ಉಚ್ಛಾಟನೆ ಮಾಡಿದೆ. 

ಈ ನಿಟ್ಟಿನಲ್ಲಿ ಮುಂದೆ ಬರುವ ಉಪಚುನಾವಣೆಗೆ ಹಿಂದಿನಿಂದಲೂ ಕೂಡ ರಾಜ್ಯ ರಾಜಕಾರಣದಲ್ಲಿ ಒಲವು ಹೊಂದಿದ್ದ ಪ್ರಜ್ವಲ್ ರೇವಣ್ಣರನ್ನು ಹುಣಸೂರು ಕ್ಷೇತ್ರದಿಂದ ನಿಲ್ಲಿಸಲು ತಯಾರಿ ನಡೆದಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here