ತನ್ನ ಪತ್ನಿಗೆ ಸ್ನೇಹಿತರ ಜೊತೆಗೂ ಮಲಗು ಎಂದ ವಿಕೃತ ಪತಿ!

0
347

ನವದೆಹಲಿಯಲ್ಲಿ ಪತಿಯೊಬ್ಬ ತನ್ನ ಹೆಂಡತಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು, ತನ್ನ ಸ್ನೇಹಿತರ ಜೊತೆಗೂ ಮಲಗು ಇಲ್ಲಾವಾದರೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಬಿಟ್ಟು, ವೈರಲ್ ಮಾಡುತ್ತೇನೆ ಎಂದು ಹೆದರಿಸಿದ್ದಾನೆ.

ದೆಹಲಿಯ ಗೀತಾ ಕಾಲೋನಿಯ ನಿವಾಸಿಯಾದ ಅತುಲ್ ಅಗರ್ವಾಲ್ ತನ್ನ ಹೆಂಡತಿ ಜೊತೆಗಿನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಟ್ಟುಕೊಂಡು, ತನ್ನ ಮಾತು ಕೇಳಬೇಕು ಎಂದು ಮಾನಸಿಕ ಒತ್ತಡ ನೀಡಿ, ಮನೆಗೆ ಸ್ನೇಹಿತರನ್ನು ಕರೆದುಕೊಂಡು ಬಂದು ಅವರೊಟ್ಟಿಗೂ ಮಲಗು ಇಲ್ಲವಾದರೆ ಈ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡುತ್ತೇನೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇನೆ ಎಂದು ಬ್ಲಾಕ್‍ಮೇಲ್ ಮಾಡುತ್ತಿದ್ದನಂತೆ

ಇದನ್ನು ಸಹಿಸಲಾರದ ಹೆಂಡತಿ ತನ್ನ ಪತಿಯ ಮೇಲೆ ದೂರು ನೀಡಿದ್ದಾಳೆ. ದೂರಿನಲ್ಲಿ ` ಜನವರಿ ತಿಂಗಳಲ್ಲಿ ಅತುಲ್ ಮನೆಗೆ ಕಂಠ ಪೂರ್ತಿ ಕುಡಿದು ಬಂದು ಜಗಳ ಮಾಡಿದ್ದನು. ಅವನ ಜೊತೆಯಲ್ಲಿ ಸ್ನೇಹಿತ ಸಂಜಯ್ ಕೌಶಿಕ್ ನನ್ನು ಕರೆದುಕೊಂಡು ಬಂದಿದ್ದ, ನನಗೆ ಅವನ ಜೊತೆ ಸೆಕ್ಸ್ ಮಾಡು ಎಂದು ಒತ್ತಾಯಿಸಿದ. ನಾನು ನಿರಾಕರಿಸಿದೆ, ಆದರೆ ಸಿಟ್ಟಿಗೆದ್ದ ಅತುಲ್ ನನಗೆ ಜೋರಾಗಿ ಹೊಡೆದು,ಚಿತ್ರಹಿಂಸೆ ನೀಡಿ ಸ್ನೇಹಿತನೊಂದಿಗೆ ರೂಂ ನಲ್ಲಿ ಕೂಡಿ ಹಾಕಿದ. ಅಲ್ಲಿ ಸಂಜಯ್ ಕೌಶಿಕ್ ನನ್ನನ್ನು ಅತ್ಯಾಚಾರ ಮಾಡಿದ್ದಾನೆ’ ಎಂದು ದೂರು ದಾಖಲಿಸಿದ್ದಾಳೆ.

ಇಷ್ಟುಮಾತ್ರವಲ್ಲದೆ ಸಂಜಯ್ ಮನೆಯಿಂದ ಹೋದ ಮೇಲೆ ಇನ್ನೊಬ್ಬ ಸ್ನೇಹಿತ ಪುಷ್ಪೇಂದ್ರ ಮಿಶ್ರಾನನ್ನು ಕರೆತಂದನು. ಆತನ ಜೊತೆಯಲ್ಲೂ ಸಹ ಮಲಗೂ ಎಂದು ಚಿತ್ರಹಿಂಸೆ ನೀಡಿದನು,ಆಗಲೂ ನಾನು ನಿರಾಕರಿಸಿದೆ ಆದರೆ ಪುಷ್ಪೇಂದ್ರ ನನ್ನ ಮೇಲೆ ಅತ್ಯಾಚಾರ ಎಸಗಿ ಮನೆಯಿಂದ ಹೋದ. ನಂತರ ಅತುಲ್ ಕೂಡ ಲೈಂಗಿಕ ಕ್ರಿಯೆಯಲ್ಲಿ ಬಳಸಿಕೊಂಡು ಹಿಂಸೆ,ದೌರ್ಜನ್ಯ ಎಸಗಿದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಆ ಮಹಿಳೆ, ಪತಿ ಹಾಗೂ ಅವನ ಇಬ್ಬರ ಸ್ನೇಹಿತರ ವಿರುದ್ಧ ದೂರು ನೀಡಿದ್ದು, ಪೋಲಿಸರು ಆರೋಪಿಗಳ ವಿರುದ್ಧ ಐಸಿಸಿ ಸೆಕ್ಷನ್ 376/377/34 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

LEAVE A REPLY

Please enter your comment!
Please enter your name here