ಶೈನ್ ಅವರ ಬಗ್ಗೆ ಪ್ರತಿಕ್ರಿಯಿಸಿರುವ ದೀಪಿಕಾ ದಾಸ್ ಅವರ ತಾಯಿ!

0
433

ಬಿಗ್ ಬಾಸ್ ಕನ್ನಡ ಸೀಸನ್ ಏಳರ ಆವೃತ್ತಿ ಈಗಾಗಲೇ ಹತ್ತನೇ ವಾರದ ಸಮೀಪದಲ್ಲಿದೆ. ಕಳೆದ ಸೀಸನ್ ಗಿಂತ ಈ ಸೀಸನ್ ನಲ್ಲಿ ಮನೆಯ ಸದಸ್ಯರು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಕರುನಾಡ ಜನರ ಮನೆಮಾತಾಗಿದ್ದಾರೆ !ಎಂದಿನಂತೆ ಪ್ರತಿ ಸೀಸನ್ ನಲ್ಲೂ ಮನೆಯ ಸದಸ್ಯರ ನಡುವೆ ಪ್ರೇಮ ಕಹಾನಿಗಳು ನಡೆಯುತ್ತಿದ್ದವು ಅಂತೆಯೇ ಈ ಸೀಸನ್ ನಲ್ಲಿ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಅವರ ಪ್ರೀತಿಯ ವಿಚಾರ ನೋಡುಗರಿಗೆ ಖುಷಿ ತಂದಿದೆ.

 

 

ದೀಪಿಕಾ ದಾಸ್ ಅವರು ಅದ್ಭುತ ಸ್ಪರ್ಧಿಯಾಗಿ ದಿನದಿಂದ ದಿನಕ್ಕೆ ಜನಮನ್ನಣೆ ಪಡೆದುಕೊಳ್ಳುತ್ತಿದ್ದಾರೆ ಅವರು ಆಟವಾಡುವ ಪರಿಯನ್ನು ನೋಡಿದರೆ ಫೈನಲ್ ಕಂಟೆಸ್ಟೆಂಟ್ ಆಗಿರುವುದರಲ್ಲಿ ಡೌಟೇ ಇಲ್ಲ. ದೀಪಿಕಾ ಅವರ ಬಿಗ್ ಬಾಸ್ ಜರ್ನಿಯನ್ನು ಕುರಿತು ಅವರ ತಾಯಿ ಒಂದು ಸಂದರ್ಶನದಲ್ಲಿ ಮಾತನಾಡಿದ್ದು ತಮ್ಮ ಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಶೈನ್ ಅವರ ಬಗ್ಗೆ ಕೆಲವೊಂದು ಪ್ರತಿಕ್ರಿಯೆಯನ್ನು ಸಹಿತ ನೀಡಿದ್ದಾರೆ.

 

ದೀಪಿಕಾ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋದ ಮೇಲೆ ಒಂದೆರಡು ವಾರವಷ್ಟೇ ಇದ್ದು ವಾಪಸ್ ಆಗುತ್ತಾಳೆ ಎಂದುಕೊಂಡಿದ್ದೇ ಆದರೆ ಅವಳು ಸ್ಪರ್ಧಿಸುತ್ತಿರುವ ಪರಿಯನ್ನು ಕುಳಿತರೆ ಅವಳು ಫಿನಾಲೆ ಕಂಟೆಸ್ಟೆಂಟ್ ಆದರೂ ಅಚ್ಚರಿ ಪಡುವಂತಿಲ್ಲ ಎಂದು ಹೇಳಿದ್ದಾರೆ..

 

 

ಇನ್ನು ಬಿಗ್ ಬಾಸ್ ಮನೆಯಲ್ಲಿ ಶೈನ್ ಹಾಗೂ ದೀಪಿಕಾ ಅವರ ಜೋಡಿಯ ಬಗ್ಗೆ ಕುರಿತು ಮಾತನಾಡಿದ ಅವರು ಇದೆಲ್ಲ ಬಿಗ್ ಬಾಸ್ ಮನೆಯೊಳಗೆ ಮಾತ್ರ ಸೀಮಿತ ಅವರು ಹೊರಗೆ ಬಂದ ಮೇಲೆ ಸರಿಹೋಗುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ, ಮತ್ತು ತನ್ನ ಮಗಳು ದಿನದಿಂದ ದಿನಕ್ಕೆ ಸ್ಟ್ರಾಂಗ್ ಆಗುತ್ತಿರುವುದನ್ನು ಕುರಿತು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

 

 

ಮನೆಯ ಸದಸ್ಯರಲ್ಲಿ ಪ್ರತಾಪ್, ಪ್ರಿಯಾಂಕ, ಚಂದನ ಮತ್ತು ಶೈನ್ ನನ್ನ ನೆಚ್ಚಿನ ಕಂಟೆಸ್ಟೆಂಟ್ ಎಂದು ಹೇಳಿರುವ ದೀಪಿಕಾಳ ತಾಯಿ ಶೈನ್ ಸ್ಪರ್ಧಿಯಾಗಿ ಮಾತ್ರ ನನ್ನ ನೆಚ್ಚಿನ ವ್ಯಕ್ತಿ ಎಂದು ಹೇಳಿದ್ದಾರೆ ಮತ್ತು ಇವರಿಬ್ಬರ ಜೋಡಿಯನ್ನು ಕುರಿತು ಹೆಚ್ಚಾಗಿ ಆಲೋಚಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ !

LEAVE A REPLY

Please enter your comment!
Please enter your name here