“ಯಶ್ ಹೆಸರು ಹೇಳಿಕೊಂಡು ಚಿತ್ರರಂಗಕ್ಕೆ ಬಂದಿಲ್ಲ” : ದೊಡ್ಡ ರಹಸ್ಯವನ್ನು ಬಿಚ್ಚಿಟ್ಟ ದೀಪಿಕಾ ದಾಸ್ !

0
961

ಒಂದು ತುಂಬು ಕುಟುಂಬ ಅಂದ ಮೇಲೆ ಮನಸ್ಥಾಪಗಳು ಜಗಳಗಳು ಬರುವುದು ಸಹಜ. ಕೈ ಬೆರಳುಗಳು ಒಂದೇ ಸಮವಾಗಿ ಇರುಲು ಸಾಧ್ಯವೇ ? ಹಾಗೆಯೇ ಎಲ್ಲರ ಮನಸ್ಸು ಒಂದೇ ರೀತಿಯಲ್ಲಿ ಯೋಚನೆ ಮಾಡಲು ಸಾಧ್ಯವೇ ಇಲ್ಲ.. ಒಬ್ಬೊಬ್ಬರ ಯೋಚನೆ ಒಂದೊಂದು ರೀತಿಯಲ್ಲಿರುತ್ತದೆ. ಆದರೆ ಯೋಜನೆ ಮತ್ತು ಮನಸ್ಥಿತಿಯನ್ನು ಅನುಸರಿಸಿಕೊಂಡು ಜೀವನ ಸಾಗಿಸಿದರೇ ಕುಟುಂಬ ಗೆಲ್ಲುತ್ತದೆ.. ಜಗಳಗಳು ಬಂದರೂ ಅದನ್ನು ಸರಿಯಾಗಿ ತೂಗಿ ಮುಂದೆ ಸಾಗಬಹುದು..ಅದೆಷ್ಟೋ ಜನರಿಗೆ ಗೊತ್ತಿರುವುದಿಲ್ಲ ಯಶ್ ಮತ್ತು ದೀಪಿಕಾ ದಾಸ್ ಅವರು ಒಂದೇ ಕುಟುಂಬಕ್ಕೆ ಸೇರಿದವರು ಎಂಬುದು. ಆದರೆ ಇವರ ಮಧ್ಯೆ ಯಾವುದಾದರೂ ಮನಸ್ಥಾಪಗಳಿದೆಯೇ? ಯಾಕೆ ಒಬ್ಬೊಬ್ಬರನ್ನೊಬ್ಬರು ಒಂದೇ ಕುಟುಂಬ ಎಂದು ಹೇಳಿಕೊಳ್ಳುವುದಿಲ್ಲ?

 

 

ಅಸಲಿಗೆ ಇವರ ಮಧ್ಯೆ ಏನು ನಡೀತಿದೆ ?ಈ ರೀತಿಯ ಹಲವು ಗೊಂದಲಗಳು ಮನಸ್ಸಿನಲ್ಲಿ ಹರಿಯುವುದು ಸಹಜ. ಇದೀಗ ದೊಡ್ಡದೊಂದು ರಹಸ್ಯವನ್ನು ಬಿಚ್ಚಿಟ್ಟಿರುವ ದೀಪಿಕಾ ದಾಸ್ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ. ಈ ಬಾರಿ ಖ್ಯಾತ ಸೆಲೆಬ್ರಿಟಿಗಳನ್ನು ಒಳಗೊಂಡಿರುವ ದಕ್ಷಿಣ ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಅವರ ಜೀವನದಲ್ಲಿ ನಡೆದ ಕೆಲವು ಸೀಕ್ರೆಟ್ಸ್ ಗಳನ್ನು ತೆರೆದಿಟ್ಟಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಅನಾರೋಗ್ಯದ ಕಾರಣದಿಂದ ಒಂದೇ ವಾರಕ್ಕೆ ಮನೆಯಿಂದ ಆಚೆಗೆ ಬಂದರು.. ಆದರೆ ಇವರ ಎಂಟ್ರಿಗೆ ಇಡೀ ಮಾಧ್ಯಮ ಲೋಕದಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು.

 

 

ಕೇವಲ ಒಂದು ವಾರ ಮಾತ್ರ ಮನೆಯಲ್ಲಿ ನೆಲೆಸಿದ್ದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಂತೆಯೇ ಗೌರಿ ಶಂಕರ್ ಅವರ ಸಾವಿನ ರಹಸ್ಯವನ್ನು ಬಿಚ್ಚಿಟ್ಟು ನೋಡುಗರಿಗೆ ಶಾಕ್ ನೀಡಿದ್ದರು. ನಂತರ ಹಿರಿಯ ಕಲಾವಿದ ಜೈ ಜಗದೀಶ್ ಅವರು ಶಂಕರ್ ನಾಗ್ ಮತ್ತು ತನ್ನ ಹೆಂಡತಿಯ ಬಗ್ಗೆ ಕೆಲವೊಂದು ಸೀಕ್ರೆಟ್ಸ್ ಗಳನ್ನು ಹೇಳಿ ಭಾವುಕರನ್ನಾಗಿ ಮಾಡಿದ್ದರು.. ಇದೀಗ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರುವ ಹಾಟ್ ಬ್ಯೂಟಿ ದೀಪಿಕಾ ದಾಸ್ ಅವರು, ಯಶ್ ಮತ್ತು ರಾಧಿಕಾ ಪಂಡಿತ್ ಬಗೆಗಿನ ಕೆಲವೊಂದು ಸೀಕ್ರೆಟ್ಸ್ ಗಳನ್ನು ಬಿಚ್ಚಿಟ್ಟಿದ್ದಾರೆ. ಸದ್ಯದ ಕನ್ನಡ ಚಿತ್ರರಂಗದಲ್ಲಿ ಓಡುತ್ತಿರುವ ಕುದುರೆ ಎಂದರೆ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಚಿತ್ರದ ನಂತರ ಕನ್ನಡಕ್ಕೆ ದೊಡ್ಡದೊಂದು ಹೆಮ್ಮೆಯನ್ನು ತಂದು ಅಂತಾರಾಷ್ಟ್ರೀಯ ನಟನಾಗಿ ಖ್ಯಾತರಾಗಿದ್ದಾರೆ.

 

 

ಚಂದನವನದ ಮೋಸ್ಟ್ ಫೇವರಿಟ್ ಕಪಲ್ಸ್ ಅಂದರೆ ಯಶ್ ಮತ್ತು ರಾಧಿಕಾ ಪಂಡಿತ್. ಅಭಿಮಾನಿಗಳಿಗೆ ಈ ಜೋಡಿಯನ್ನು ನೋಡಿದರೆ ಅದೆಂಥದೋ ಒಂದು ಖುಷಿ ಸಂತೋಷ ಅಂತಾನೇ ಹೇಳಬಹುದು. ನಟ ಯಶ್ ಚಂದನವನಕ್ಕೆ ಪಾದಾರ್ಪಣೆ ಮಾಡಿ ದಶಕಗಳು ಕಳೆದಿದೆ. ಅಂತೆಯೇ ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಚಿತ್ರರಂಗಕ್ಕೆ ಪರಿಚಯವಾಗಿ ವರ್ಷಗಳು ಉರುಳಿದೆ. ಆದರೆ ಎಂದಿಗೂ ನಟ ಯಶ್ ದೀಪಿಕಾ ನನ್ನ ತಂಗಿ ಎಂದು ಹೇಳಿಕೊಂಡಿಲ್ಲ. ಅಂತೆಯೇ ದೀಪಿಕಾ ದಾಸ್ ಕೂಡ ಯಶ್ ನಮ್ಮ ದೊಡ್ಡಮ್ಮನ ಮಗ ಎಂದು ಯಾವ ಮಾಧ್ಯಮದಲ್ಲೂ ಹೇಳಿಕೊಂಡಿಲ್ಲ. ಹಾಗೆಯೇ ಇವರಿಬ್ಬರು ಅಣ್ಣ ತಂಗಿ ಎಂಬುದು ಅದೆಷ್ಟೋ ಪ್ರೇಕ್ಷಕರಿಗೆ ಗೊತ್ತೇ ಇಲ್ಲ.! ಹೀಗೆ ವರ್ಷಾನು ವರ್ಷಗಳಿಂದ ಮುಚ್ಚಿಟ್ಟುಕೊಂಡು ಬಂದಂತಹ ಈ ರಹಸ್ಯ ಇದೀಗ ಬಿಗ್ ಬಾಸ್ ಮನೆಯಲ್ಲಿ ತೆರೆಯಲಾಗಿದೆ.

 

 

ಹೌದು, ನಟಿ ದೀಪಿಕಾ ದಾಸ್ ತನ್ನ ಅಣ್ಣಾ ಯಶ್ ಮತ್ತು ಅತ್ತಿಗೆ ರಾಧಿಕಾ ಪಂಡಿತ್ ಬಗ್ಗೆ ಮಾತನಾಡಿದ್ದು ಇವರ ನಡುವಿನ ದೊಡ್ಡದೊಂದು ರಹಸ್ಯವನ್ನು ಆಚೆ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ ದೀಪಿಕಾ ದಾಸ್ ನನಗೆ ಚಿತ್ರರಂಗಕ್ಕೆ ಬರುವ ಯಾವ ಆಸೆ ಮತ್ತು ಆಲೋಚನೆಯೂ ಇರಲಿಲ್ಲ..ಆದರೆ ನನ್ನ ಅಣ್ಣ ಚಿತ್ರರಂಗದಲ್ಲಿ ಇರುವುದನ್ನು ನೋಡಿದ ನನ್ನ ತಾಯಿ, ನನ್ನ ಮಗಳು ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕು ಖ್ಯಾತರಾಗಬೇಕು ಎಂಬ ಮಹದಾಸೆ ಹೊಂದಿದ್ದರು.

 

 

ಅಂತೆಯೇ ನನ್ನ ತಾಯಿಯ ಆಸೆಯಂತೆ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಒಂದು ರೀತಿಯಲ್ಲಿ ಯೋಚಿಸುವುದಾದರೆ ಯಶ್ ಅವರಿಂದಲೇ ನಾನು ಚಿತ್ರರಂಗಕ್ಕೆ ಬಂದಿದ್ದು, ಆದರೆ ಎಂದೂ ನಾನು ಯಶ್ ಅವರ ಹೆಸರನ್ನು ಹೇಳಿಕೊಂಡು ಚಿತ್ರರಂಗಕ್ಕೆ ಬಂದಿಲ್ಲ. ಹೆಸರಿಟ್ಟುಕೊಂಡು ಬಂದಿದ್ದರೆ, ಇಂಡಸ್ಟ್ರಿಯಲ್ಲಿ ಹೆಚ್ಚು ದಿನಗಳ ಕಾಲ ಉಳಿಯಲು ಸಾದ್ಯವಿಲ್ಲ. ಇಲ್ಲಿ ಹೆಸರು ಮಾಡಬೇಕೆಂದರೆ ಟ್ಯಾಲೆಂಟ್ ಮತ್ತು ಕಠಿಣ ಶ್ರಮ ಇರಬೇಕು ಎಂದು ಹೇಳಿದ್ದಾರೆ.

 

 

ನಾನು ಅವರ ಚಿಕ್ಕಮ್ಮ ಮಗಳು ಅವರ ತಂಗಿ, ಆದರೆ ಎಂದು ನಾನು ಅವರ ಹೆಸರನ್ನು ಬಳಸಿಕೊಂಡಿಲ್ಲ ಮತ್ತು ನಾನು ಯಶ್ ತಂಗಿಯೆಂದು ಎಷ್ಟೋ ಜನಕ್ಕೆ ಗೊತ್ತೇ ಇಲ್ಲ.. ನನ್ನ ಕಡೆಯಿಂದ ಏನಾಗುತ್ತದೆ, ನಾನು ಏನು ಮಾಡಬಹುದು ಚಿತ್ರರಂಗದಲ್ಲಿ ಎಂಬುದನ್ನು ಮಾತ್ರ ತಲೆ ಕೆಡಿಸಿಕೊಳ್ಳುತ್ತಿದ್ದೇನೆ..ನಾನು ಅವರ ಹೆಸರನ್ನು ಎಲ್ಲೂ ಬಳಸಿಕೊಳ್ಳುವುದಿಲ್ಲ, ನಾನೇನಾದರೂ ಸಾಧನೆ ಮಾಡಿ ಯಶ್ ಅವರಿಗೆ ಸಮರ್ಪಿಸಬೇಕು ಎಂಬುದು ನನ್ನ ಆಸೆ..ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ. ದೀಪಿಕಾ ದಾಸ್ ಅವರ ಅಭಿನಯವನ್ನು ವೀಕ್ಷಿಸಿದ ಯಶ್ ಅವರು ಬಹಳ ಚೆನ್ನಾಗಿ ನಟಿಸುತ್ತಿದ್ದೀಯಾ ಒಳ್ಳೆಯದಾಗಲಿ ಎಂದು ಸಲಹೆ ನೀಡಿದ್ದಾರಂತೆ.

 

 

ಇನ್ನು ತನ್ನ ಅತ್ತಿಗೆ ಬಗ್ಗೆ ಮಾತನಾಡಿದ ದೀಪಿಕಾ, ಯಶ್ ಮತ್ತು ರಾಧಿಕಾ ಅವರ ಜೋಡಿ ಬಹಳ ಚೆನ್ನಾಗಿದೆ, ಆದರೆ ನಾನಿನ್ನೂ ರಾಧಿಕಾ ಅವರನ್ನು ಪರ್ಸನಲ್ ಮೀಟ್ ಆಗಿ ಮಾತನಾಡಿಲ್ಲ. ಬಿಗ್ ಬಾಸ್ ಮುಗಿದ ನಂತರ ಮಾತನಾಡಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.. ಚಿತ್ರರಂಗದಲ್ಲಿ ಅಪ್ಪ, ಅಣ್ಣ, ತಮ್ಮಂದಿರ ಹೆಸರನ್ನು ಬಳಸಿಕೊಂಡು ಮೇಲೆ ಬರೋಣ ಎಂಬ ಮಂದಿಯೇ ತುಂಬಿರುವ ಈ ಕಾಲದಲ್ಲಿ ತನ್ನ ಸ್ವಂತ ಕಾಲ ಮೇಲೆ ನಿಂತು, ಕಠಿಣ ಶ್ರಮದಿಂದ ಮೇಲೆ ಬರಬೇಕೆಂಬ ಆಸೆಯನ್ನು ಹೊಂದಿರುವ ದೀಪಿಕಾ ದಾಸ್ ಅವರಿಗೆ ಹೃದಯ ತುಂಬಿ ಹಾರೈಸೋಣ.

LEAVE A REPLY

Please enter your comment!
Please enter your name here