ತೆಲುಗು ಖ್ಯಾತ ಹಾಸ್ಯನಟ ಅಲಿ ಅವರ ತಾಯಿ ಜೈತುನ್ ಬೀಬಿ ಇಂದು ಬೆಳಗಿನ ಜಾವ ರಾಜಮುಂಡ್ರಿಯಲ್ಲಿ ನಿಧನರಾಗಿದ್ದಾರೆ. ಜೈತುನ್ ಬೀಬಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಕೆಲವು ದಿನಗಳಿಂದ ತಮ್ಮ ಸೋದರಿ ನಿವಾಸದಲ್ಲಿ ತಂಗಿದ್ದರು.
ಶೂಟಿಂಗ್ಗಾಗಿ ಅಲಿ ಜಾರ್ಖಂಡ್ನ ರಾಂಚಿಗೆ ತೆರಳಿದ್ದು ಸುದ್ದಿ ತಿಳಿಯುತ್ತಿದ್ದಂತೆ ಶೂಟಿಂಗ್ ಕ್ಯಾನ್ಸಲ್ ಮಾಡಿ ಹೈದರಾಬಾದ್ಗೆ ಆಗಮಿಸಿದ್ದಾರೆ. ಅಲಿ ಕುಟುಂಬ ವರ್ಗ ಜೈತುನ್ ಬೀಬಿ ಅವರ ಮೃತದೇಹವನ್ನು ರಾಜಮುಂಡ್ರಿಯಿಂದ ಹೈದರಾಬಾದ್ಗೆ ತಂದು ಸಂಜೆ ಮುಸ್ಲಿಂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಚಿತ್ರರಂಗದ ಇನ್ನಿತರರು ಜೈತುನ್ ಬೀಬಿ ಅಂತಿಮ ದರ್ಶನ ಪಡೆದಿದ್ದಾರೆ.
ಅಲಿ ತಮ್ಮ ತಂದೆ-ತಾಯಿಗಳನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ತಂದೆ ನಿಧನರಾದಾಗಿನಿಂದ ಇಲ್ಲಿವರೆಗೂ ಅವರ ಹೆಸರಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅಲಿ ಬಡಕುಟುಂಬದಲ್ಲಿ ಹುಟ್ಟಿ ಬೆಳೆದವರು. ತಂದೆ ಟೈಲರಿಂಗ್ ಕೆಲಸ ಮಾಡಿಕೊಂಡೇ ಮಕ್ಕಳನ್ನು ಸಾಕಿದರು. ಬಡತನದಲ್ಲಿದ್ದರೂ ನನ್ನ ತಂದೆ -ತಾಯಿ ನನಗೆ ವಿದ್ಯಾಭ್ಯಾಸ ನೀಡಿದ್ದಾರೆ. ನಾನು ಇಂದು ಏನಾದರೂ ಸಾಧಿಸಿದ್ದರೆ ಅದಕ್ಕೆ ನನ್ನ ತಂದೆ ತಾಯಿ ಕಾರಣ ಎಂದು ಆಗ್ಗಾಗ್ಗೆ ಹೇಳುತ್ತಿರುತ್ತಾರೆ.