ಕೇರಳದಲ್ಲಿ ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ ೪೨ಕ್ಕೆ ಏರಿಕೆ.!

0
178

ದೇವರ ನಾಡು ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ ೪೨ಕ್ಕೆ ಏರಿದೆ. ಜಲಪ್ರಳಯದ ರೌದ್ರಾವತಾರಕ್ಕೆ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅವರಿಗಾಗಿ ಒಂದು ಲಕ್ಷ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ.

ಪ್ರವಾಹದಲ್ಲಿ ಸಿಲುಕಿದ್ದ ಒಂದು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಕಲ್ಲಿಕೋಟೆ ಮತ್ತು ಮಲಾಪುರಂ ಜಿಲ್ಲೆಗಳಲ್ಲಿ ೨೨ ಜನರು ಸಾವನ್ನಪ್ಪಿದ್ದಾರೆ. ಮಳೆ ಸಂಬಂಧ ಘಟನೆಗಳಲ್ಲಿ ವಯನಾಡಿನಲ್ಲಿ ೯ ಮಂದಿ ಅಸುನೀಗಿದ್ದಾರೆ ಎಂದು ಅಧಿಕಾರಿಗಳು ಅಂಕಿ ಅಂಶ ನೀಡಿದ್ದಾರೆ.
ರಾಜ್ಯಾದ್ಯಾಂತ ೯೮೮ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ೧,೦೭,೬೯೯ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ವಯನಾಡಿನಲ್ಲಿ ಪ್ರವಾಹದ ಅಬ್ಬರದಿಂದಾಗಿ ಅಪಾರ ಹಾನಿ ಸಂಭವಿಸಿದೆ. ಮನೆ, ಮಠ ಕಳೆದುಕೊಂಡಿರುವ ೨೪,೯೯೦ ಜನರು ಪರಿಹಾರ ಶಿಬಿರದಲ್ಲಿ ಆಸರೆ ಪಡೆದಿದ್ದಾರೆ.

ವಯನಾಡು ಮತ್ತು ಮಲಾಪುರಂ ಜಿಲ್ಲೆಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಭೀತಿ ಎದುರಾಗಿದೆ. ಭಾರೀ ಮಳೆಯಿಂದಾಗಿ ರದ್ದುಗೊಳಿಸಲಾಗಿರುವ ಪರಿಹಾರ ಕಾಂiiವನ್ನು ಇಂದು ಮತ್ತೆ ಆರಂಭಿಸಲಾಗಿದೆ. ವಯನಾಡಿನಲ್ಲಿ ಭಾರೀ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಪರಿಹಾರ ಕಾಂiiಕ್ಕೆ ತೀವರ ಅಡ್ಡಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಯನಾಡಿನ ಮೆಪಾಡಿಯ ಪುತುಮುಲಾ ಗ್ರಾಮದ ಕಾಫಿ ತೋಟದಲ್ಲಿ ಸಿಲುಕಿದ್ದ ಒಂದು ಸಾವಿರ ಜನರನ್ನು ರಕ್ಷಿಸಲಾಗಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಕೆಲವು ಮನೆಗಳು, ಮಸೀದಿಗಳು, ದೇವಾಲಯಗಳು ಮಣ್ಣುಪಾಲಾಗಿವೆ.
ಇದುವರೆಗೆ ೭ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಂದು ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ವಯನಾಡು ಉಪ ವಿಭಾಗಾಧಿಕಾರಿ ಎನ್.ಎಸ್.ಕೆ ಉಮೇಶ್ ತಿಳಿಸಿದ್ದಾರೆ. ಈ ಪ್ರದೇಶ ಅತ್ಯಂತ ಅಪಾಯಕಾರಿಯಾಗಿದ್ದು, ಇನ್ನು ೧೫ ಮಂದಿ ನಾಪತ್ತೆಯಾಗಿದ್ದಾರೆ. ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಪರಿಹಾರ ಕಾರ್ಯವನ್ನು ಚುರುಕುಗೊಳಿಸಿದೆ.

ಬನಸುರಾಸಾಗರ್ ಅಣೆಕಟ್ಟು ಭರ್ತಿಯಾಗಿದ್ದು ಯಾವುದೇ ಕ್ಷಣದಲ್ಲೂ ಅಣೆಕಟ್ಟಯಿಂದ ನೀರು ಹೊರ ಬಿಡುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಮಲಾಪುರಂ, ಕಣ್ಣೂರು, ಇಡುಕ್ಕಿ, ತ್ರಿಸ್ಸೂರ್ ಸೇರಿದಂದೆ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾನವಾಗಿದೆ. ಭಾರೀ ಗಾತ್ರದ ಮರಳು ರೈಲ್ವೆ ಹಳಿಯ ಮೇಲೆ ಉರುಳಿ ಬಿದ್ದಿರುವುದರಿಂದ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ.

LEAVE A REPLY

Please enter your comment!
Please enter your name here