ಡಿಡಿ 1 ಜೊತೆ ಆಡಿ ಬೆಳೆದವರ ಕಾಲ ಹೇಗಿತ್ತು ಗೊತ್ತಾ?

0
253

ಡಿಡಿ 1, ದೂರದರ್ಶನ ಅಥವಾ ಈಗಿನ ಚಂದನ ವಾಹಿನಿ ಎಂದರೆ ಇಂದಿನ ಯುವಪೀಳಿಗೆಗಳಿಗೆ ಗೊತ್ತೆ ಇರುವುದಿಲ್ಲ. ನಿಮಗೆ ಗೊತ್ತಿರಲಿ ಇದು ಯಾವ ಟಿ ಆರ್ ಪಿ ಗಾಗಿಯೂ ಹೋರಾಟ ಮಾಡಿಲ್ಲ,ಮಾಡೋದು ಇಲ್ಲ. ಇಲ್ಲಿ Exclusive,ಬಿಗ್ ಬ್ರೇಕಿಂಗ್ ತಾಪತ್ರಯವೂ ಇಲ್ಲ.

1980 ಮತ್ತು 90 ರ ದಶಕದಲ್ಲಿ ಜನಿಸಿದವರ ಬಾಲ್ಯಕ್ಕೂ ಮತ್ತು ದೂರದರ್ಶನಕ್ಕೂ ವಿಪರಿತವಾದ ಹತ್ತಿರದ ಸಂಬಂಧವಿದೆ. 90 ರ ದಶಕದವರಂತು ಇದನ್ನು ಅನುಭವಿಸಿರುತ್ತಾರೆ. ಊರಿಗೆ ಇರುತ್ತಿದ್ದಿದೆ ಒಂದು ಟಿವಿ, ಅಂಟೇನಾ ಮೂಲಕ ಮನೆಗೆ ಬರುವ ಒಂದೇ ಒಂದು ಚಾನಲ್, ಸ್ವಲ್ಪ ಹೊತ್ತು ಮಾತ್ರ ಕನ್ನಡ ಇನ್ನ್ ಉಳಿದ ಸಮಯವೆಲ್ಲ ಹಿಂದಿ, ತೋರಿಸುತ್ತಿದ್ದಿದ್ದು ಹದಿನೈದೇ ನಿಮಿಷದ ವಾರ್ತೆಗಳು ಆದರೆ ಅದರಲ್ಲಿ ಸಮಗ್ರ ಸುದ್ದಿಗಳನ್ನು ಕಟ್ಟಿ ಕೊಡುವ ತಾಕತ್ತಿತ್ತು. ಪ್ರತೀ ಭಾನುವಾರ ಮಧ್ಯಾಹ್ನಕ್ಕೊಂದು ಕನ್ನಡ ಸಿನಿಮಾ, ರಾಮಾಯಣ ಮತ್ತು ಮಹಾಭಾರತ ಧಾರವಾಹಿಗಳ ಅನಾವರಣ.

ಹೀಗೆ ಅಂದಿನ ದೂರದರ್ಶನದ ಜೊತೆ ಬೆಳೆದು ಬಂದವರ ನೆನಪೇ ಮಧುರ. 1995 ರ ನಂತರ ಖಾಸಗಿ ವಾಹಿನಿಗಳ ಹಾವಳಿ ಶುರುವಾಯಿತು ಹಾಗೆಯೆ ಒಂದೊಂದೆ ಕಂಪನಿಗಳು ಕಾಲಿಟ್ಟವು. ಜನರಿಗೆ ಚಾನಲ್ ಆಯ್ಕೆ ಸ್ವಾತಂತ್ರ್ಯ ಸಿಕ್ಕಿತು. ಇನ್ನು ದೂರದರ್ಶನದ ಜಾಗದಲ್ಲಿ 24*7 ನ್ಯೂಸ್ ಚಾನಲ್‍ಗಳು ಕಾಣಿಸಿಕೊಂಡವು. ಸಾಕಷ್ಟು ಮನರಂಜನಾ ಚಾನಲ್‍ಗಳು ಹುಟ್ಟಿಕೊಂಡವು. ಹೊಸಬರ ಹೊಸಬಗೆಯ ಧಾರಾವಾಹಿಯ ಯುಗವೇ ಪ್ರಾರಂಭವಾಯಿತು. ಇದೆಲ್ಲದರ ಪರಿಣಾಮ ಜನರು ಅವರವರ ಆಯ್ಕೆಯಂತೆ ಚಾನಲ್ ಬದಲಾಯಿಸತೊಡಗಿದರು

ಇಂದು ಜನ ದೂರದರ್ಶನ ನೋಡುವುದೇ ಇಲ್ಲ ಎಂದಲ್ಲ. ಸೆಲೆಕ್ಟೆಡ್ ವೀವರ್ಸ್ ಈಗಾಲೂ ಇದ್ದಾರೆ. ಟಿ ಆರ್ ಪಿ ರೇಟಿಂಗ್ ಪಟ್ಟಿಯಲ್ಲಿ ಅವರದ್ದೇ ಆದ ಸ್ಥಾನ ಇದೆ. ಚಿತ್ರಮಂಜರಿಯ ಅಭಿಮಾನಿಗಳು ಇಂದಿಗೂ ಇದ್ದಾರೆ. ದೂರದರ್ಶನ ಅರವತ್ತು ವರ್ಷ ಪೂರ್ಣಗೂಳಿಸಿದೆ ಇದರ ನೆನಿಪಿಗೆ ನವದೆಹಲಿಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಭಾಗವಹಿಸಿದ್ದು,ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಮನಸೂರೆಗೂಂಡಿವೆ

LEAVE A REPLY

Please enter your comment!
Please enter your name here