ಹಣ್ಣು ತರಕಾರಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅನೇಕ ವಿಟಮಿನ್ ಮಿನರಲ್ಸ್ ನಂಥ ಪೋಷಕಾಂಶಗಳು ಲಭಿಸುತ್ತದೆ ಎಂಬುದನ್ನು ನಾವು ಹೆಚ್ಚು ಹಾಗೂ ಸಾಮಾನ್ಯವಾಗಿ ತಿಳಿದಿರುತ್ತೇವೆ ಹಣ್ಣಿನ ತಾಜಾ ರಸ ಹಣ್ಣಿನ ಸೇವನೆ ತರಕಾರಿ ಸೇವೆಗಳನ್ನು ದೇಹದ ಉತ್ತಮ ಆರೋಗ್ಯಕ್ಕೆ ಸಾಕಷ್ಟು ಸಹಕರಿಸುತ್ತಿದೆ ಅದೇ ರೀತಿಯಲ್ಲಿ ಖರ್ಜೂರ ಸೇವನೆ ಕೂಡ ದೇಹದ ಆರೋಗ್ಯವನ್ನು ಸ್ಥಿರವಾಗಿರಲು ಹಲವು ಮಾರ್ಗದಲ್ಲಿ ಉಪಯುಕ್ತ ಖರ್ಜೂರ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ. ಖರ್ಜೂರ ಸೇವನೆಯಿಂದ ದೇಹಕ್ಕೆ ಸಿಗುವ ಪೋಷಕಾಂಶಗಳು ಇಲ್ಲಿ ತಿಳಿಸಲಾಗಿದೆ ಅನುಸರಿಸಿ,
೧. ಖರ್ಜೂರದಲ್ಲಿ ಕ್ಯಾಲೋರಿ ಅಂಶ ಹೆಚ್ಚಿರುವ ಕಾರಣ ದಿನನಿತ್ಯ ಖರ್ಜೂರ ಸೇವನೆ ಬಹು ಉಪಯುಕ್ತ.
೨. ಖರ್ಜೂರದಲ್ಲಿ ಕ್ಯಾಲೋರೀಸ್, ವಿಟಮಿನ್ಸ್, ಮಿನರಲ್ಸ್, ಫೈಬರ್ ಅಂಶ ಸಾಕಷ್ಟು ಪ್ರಮಾಣದಲ್ಲಿ ಇದೆ.
೩.ಖರ್ಜೂರ ಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳ ಪ್ರಮಾಣ ಹೆಚ್ಚಿರುವ ಕಾರಣ ದೇಹದಲ್ಲಿ ಉಂಟಾಗುವ ಹಲವು ರೋಗಗಳನ್ನು ಮುಕ್ತಗೊಳಿಸುವಲ್ಲಿ ಸಹಕಾರಿ.
೪.ಬುದ್ಧಿಶಕ್ತಿಯನ್ನು ಚುರುಕುಗೊಳಿಸುವಲ್ಲಿ ಖರ್ಜೂರ ಸದಾ ಮುಂದು, ಮಕ್ಕಳಿಗೆ ನಿತ್ಯವೂ ಖರ್ಜೂರ ಸೇವನೆಯನ್ನು ರೂಢಿಸಿದರೆ ಅವರ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ.
೫.ಖರ್ಜೂರದಲ್ಲಿ ಮಿನರಲ್ಸ್ ಹಾಗೂ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಕಾರಣ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ.
೬. ಡಯೆಟ್ ಮಾಡುವವರು ಖರ್ಜೂರವನ್ನು ನಿಮ್ಮ ನಿತ್ಯದ ಡಯಟ್ ಪಟ್ಟಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.