ಮಾಲ್ಗುಡಿ ಡೇಸ್ ಶೋ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕಿಶೋರ್ ಮೂಡಬಿದ್ರೆ ನಿರ್ದೇಶನದ ವಿಜಯ್ ರಾಘವೇಂದ್ರ ನಾಯಕನಾಗಿರುವ ‘ಮಾಲ್ಗುಡಿ ಡೇಸ್’ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಈ ಹಿಂದೆ ನವರಸ ನಾಯಕ’ ಜಗ್ಗೇಶ್ ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೊಳಿಸಿದ್ದರು. ಅದು ಸಖತ್ ಸುದ್ದಿ ಮಾಡಿತ್ತು ಕೂಡ.
ಅಲ್ಲದೇ ಇಂತಹ ಹೊಸ ಚಿತ್ರಕ್ಕೆ ನಟ ವಿಜಯ್ ರಾಘವೇಂದ್ರ ಅವರು ಪ್ರಯೋಗಾತ್ಮಕ ಚಿತ್ರದ ಭಾಗವಾಗುವ ಮೂಲಕ ಗಾಂಧಿನಗರದ ಪ್ರಶಂಸೆಗೆ ಪಾತ್ರವಾಗಿದ್ದರು. ಕಳೆದ ವಾರ ಬಿಡುಗಡೆಗೊಂಡ ಮತ್ತೊಂದು ಪೋಸ್ಟರ್ ಕೂಡ ಸಿನಿಪ್ರಿಯರ ಮನಸ್ಸು ಸೆಳೆದಿದೆ. ಇದು ಚಿತ್ರ ಯಾವಾಗ ತೆರೆ ಕಾಣಲಿದೆ ಎಂಬ ಚರ್ಚೆಯನ್ನು ಹುಟ್ಟು ಹಾಕಿದೆ.
ಡಿಸೆಂಬರ್ ಮತ್ತು ಜನವರಿಯ ಮೊದಲ ವಾರದಲ್ಲಿ ತೆರೆ ಕಾಣುತ್ತಿರುವ ಕನ್ನಡ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಮಾಲ್ಗುಡಿ ಡೇಸ್ ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದ್ದು ಚಿತ್ರದ ಮೇಲೆ ಜನರ ನಿರೀಕ್ಷೆಯೂ ಹೆಚ್ಚಿದೆ. ಹಾಗಾಗಿ, ಜನವರಿಯ ಅಂತ್ಯಕ್ಕೆ ಥಿಯೇಟರ್ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ. ಜನವರಿ ಮೊದಲ ವಾರದಿಂದಲೇ ಪ್ರಚಾರ ಆರಂಭಿಸಲು ನಿರ್ಧರಿಸಿದೆ.
ಮೂವಿಯಲ್ಲಿ ವಿಜಯ್ ರಾಘವೇಂದ್ರ ಅವರು ಚಿತ್ರದಲ್ಲಿ 75 ವರ್ಷದ ಮುದುಕನಾಗಿ ಕಾಣಿಸಿಕೊಂಡಿದ್ದಾರೆ. ‘
ಸಾಫ್ಟ್ವೇರ್ ಉದ್ಯೋಗಿ ಗ್ರೀಷ್ಮಾ ಶ್ರೀಧರ್ ಈ ಸಿನಿಮಾದ ನಾಯಕಿ. ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ಅವರು ಕಾಣಿಸಿಕೊಂಡಿದ್ದಾರಂತೆ. ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದಾರೆ.