ದಸರಾ ಹಬ್ಬದ ಉಡುಗೊರೆಯಾಗಿ ರೈಲ್ವೆ ಸಿಬ್ಬಂದಿಗೆ ಕೇಂದ್ರ ಸರ್ಕಾರ ಕೊಟ್ಟ ‘ಬೋನಸ್’ ಎಷ್ಟು ಗೊತ್ತಾ..?

0
248

ಇಂದು ನವದೆಹಲಿಯಲ್ಲಿ ನೆಡದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಕಾಶ್ ಜವಡೇಕರ್ ಮಧ್ಯಾಹ್ನ 3 ಗಂಟೆಗೆ ಎಲ್ಲ ಮಾಧ್ಯಮದವರನ್ನು ಸೇರಲು ಮುಂಚಿತವಾಗಿಯೇ ತಿಳಿಸಿದ್ದರು. ಅದರಂತೆಯೇ ಇಂದು ಮಾತನಾಡಿದ ಅವರು ಭಾರತದ ಅರ್ಥಿಕತೆಗೆ ಸಂಬಂಧಪಟ್ಟ ಆನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅರ್ಥಿಕತೆಯ ವಿಚಾರ ಕುರಿತು ಅರ್‍ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಮೂರು ಹಂತಗಳಲ್ಲಿ ದೇಶದ ಅರ್ಥಿಕತೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಮತ್ತು ಹೆಚ್ಚಿನ ಕ್ರಮಗಳನ್ನು ತರುವ ಸಾಧ್ಯತೆ ಇದೆ ಎಂದು ಸೂಚಿಸಿದ್ದರು.

ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿರುವ ಪಿಐಬಿ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆದ ಪತ್ರಿಕಾಗೋಷ್ಟಿಯ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಸೂಕ್ತವಾದ ಕ್ರಮಗಳನ್ನು ತೆಗೆದುಕೊಂಡು, ಅನೇಕ ವಿಷಯಗಳನ್ನು ಸುಧಾರಿಸಬೇಕಾಗಿದೆ ಎಂದು ಹೇಳಿದರು. ಇ-ಸಿಗರೇಟ್ ನಿಷೇಧವನ್ನು ಮಾಡುವುದರ ಬಗ್ಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇ-ಸಿಗರೇಟ್‍ಗೆ ಸಂಬಂಧಿಸಿದ ಯಾವ ಉತ್ಪಾದನೆ, ರಫ್ತು, ಮಾರಾಟ, ಸಂಗ್ರಹಣೆ, ಜಾಹಿರಾತುಗಳು ಸೇರಿದಂತೆ ಎಲ್ಲವೂ ನಿಷೇಧಿಸಲಾಗಿದೆ ಎಂದು ತಿಳಿಸಿದರು. ಇದರ ಜೊತೆಗೆ 11 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕಳೆದ ಅರು ವರ್ಷಗಳಿಂದ ಬೋನಸ್ ಬರುತ್ತಿತ್ತು.

ಆದೇ ರೀತಿ ಈ ವರ್ಷವೂ ಕೂಡ ಆದರೆ ಸ್ವಲ್ಪ ಬದಲಾವಣೆಯೊಂದಿಗೆ 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಿರುವುದು ರೈಲ್ವೆ ಉದ್ಯೋಗಿಗಳಿಗೆ ಸಿಹಿ ನೀಡಿದಂತಾಗಿದೆ ಎಂದೇ ಹೇಳಬಹುದು.

LEAVE A REPLY

Please enter your comment!
Please enter your name here