ಪುನೀತ್ ರಾಜಕುಮಾರ್ ಗೆ ಟಾಂಗ್ ಕೊಟ್ಟ ಡಿ ಬಾಸ್

0
493

ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಾರುಗಳೆಂದರೆ ತುಂಬಾ ಇಷ್ಟ ಅವರ ಬಳಿ ಹಲವಾರು ಕಾರುಗಳಿವೆ, ಆದರೆ ಡಿ ಬಾಸ್ ಹೊಸ ಹೊಸ ಕಾರುಗಳನ್ನು ಪರ್ಚೇಸ್ ಮಾಡ್ತಾನೇ ಇರ್ತಾರೆ. ಡಿ ಬಾಸ್ ಗೆ ಪ್ರಾಣಿ ಪಕ್ಷಿಗಳ ಮೇಲೆ ಇರುವ ಪ್ರೀತಿ ಎಂಥದ್ದು ಎಂದು ಇಡೀ ಕರ್ನಾಟಕಕ್ಕೆ ಗೊತ್ತು! ಮನುಷ್ಯರಷ್ಟೇ ಪ್ರಾಣಿಗಳನ್ನು ಪ್ರೀತಿಸುತ್ತಾರೆ ನಮ್ಮ ಡಿ ಬಾಸ್. ಇವರ ಬಳಿ ಹಲವಾರು ಪ್ರಾಣಿ ಮತ್ತು ಪಕ್ಷಿಗಳಿವೆ . ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಡಿ ಬಾಸ್ ಕಾರುಗಳ ಮೇಲೆ ಕೂಡ ಹೆಚ್ಚು ಕ್ರೇಜ್ ಅನ್ನು ಹೊಂದಿದ್ದಾರೆ.

ಇತ್ತೀಚೆಗಷ್ಟೆ ಡಿ ಬಾಸ್ ಹೊಸ ಲ್ಯಾಂಬೋರ್ಗಿನಿ ಕಾರನ್ನು ತೆಗೆದುಕೊಂಡಿದ್ದರು. ಈ ವಿಷಯ ಬಾರಿ ಚರ್ಚೆಗೆ ಗುರಿಯಾಗಿದೆ. ಯಾಕೆಂದರೆ , ದರ್ಶನ್ ಲ್ಯಾಂಬೋರ್ಗಿನಿ ಕಾರ್ ತೆಗೆದುಕೊಂಡ ನಂತರ ಪುನೀತ್ ಕೂಡ ಈ ಕಾರನ್ನು ತೆಗೆದುಕೊಂಡಿದ್ದರು. ಈಗ ದರ್ಶನ್ ಮೂರು ವರೆ ಕೋಟಿಯ ಹೊಸ ಲ್ಯಾಂಬೋರ್ಗಿನಿ ಕಾರು ತೆಗೆದುಕೊಂಡಿದ್ದಾರೆ. ಇದೇ ರೀತಿ ಕಾರನ್ನು ಪುನೀತ್ ರಾಜಕುಮಾರ್ ಸ್ವಲ್ಪ ದಿನಗಳ ಮುಂಚೆಯಷ್ಟೇ ಖರೀದಿ ಮಾಡಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅದೇ ರೀತಿ ಕಾರನ್ನು ಮೂರುವರೆ ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ.

ಮೊದಲು ಡಿ ಬಾಸ್ ಲ್ಯಾಂಬೋರ್ಗಿನಿ ಕಾರ್ ಅನ್ನು ಖರೀದಿ ಮಾಡಿದಾಗ ಅದೇ ರೀತಿ ಪುನೀತ್ ಕೂಡ ಖರೀದಿ ಮಾಡಿ ದರ್ಶನ್ ಗೆ ಟಾಂಗ್ ಕೊಟ್ಟಿದ್ದರು. ಈಗ ಡಿ ಬಾಸ್ ಪುನೀತ್ ಹತ್ರ ಇರುವ ರೀತಿ ಕಾರನ್ನು ತೆಗೆದುಕೊಂಡು ಪುನೀತ್ ಗೆ ಟಾಂಗ್ ಕೊಟ್ಟಿದ್ದಾರೆ. ಡಿ ಬಾಸ್ ಹತ್ತಿರ ಅಷ್ಟೊಂದು ಕಾರುಗಳಿವೆ ಈಗ ಈ ಲ್ಯಾಂಬೋರ್ಗಿನಿ ಕಾರು ಕೂಡ ಹೊಸದಾಗಿ ಅತಿಥಿಯಾಗಿ ಇವರ ಮನೆಗೆ ಕಾಲಿಟ್ಟಿದೆ. ಇವರು ಮಾಡಬೇಕೆಂದುಕೊಂಡ ಕೆಲಸ ಪಕ್ಕ ಮಾಡಿ ಮುಗಿಸುತ್ತಾರೆ.

ಇವರು ಕಾರ್ ತೆಗೆದುಕೊಂಡಿದ್ದು ಯಾರಿಗೆ ಟಾಂಗ್ ಕೊಡಬೇಕೆಂದು ಗೊತ್ತಿಲ್ಲ ಆದರೆ, ಅಭಿಮಾನಿಗಳು ಇದು ಪುನೀತ್ ಟಾಂಗ್ ಕೊಡಲು ಎಂದು ತಿಳಿದುಕೊಂಡಿದ್ದಾರೆ. ಪುನೀತ್ ,ದರ್ಶನ್ ಚೆನ್ನಾಗೆ ಇದ್ದಾರೆ ಆದರೆ, ಈ ಕಾರುಗಳ ಕೊಳ್ಳುವಿಕೆ ಶುರುವಾಗಿದಾಗಿಂದ ಇವರಿಬ್ಬರ ನಡುವೆ ಕೋಲ್ಡ್ ವಾರ್ ಶುರುವಾಗಿದೆ ಎಂಬುದು ಅಭಿಮಾನಿಗಳ ಅನಿಸಿಕೆ.

LEAVE A REPLY

Please enter your comment!
Please enter your name here