ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಮಜೆಸ್ಟಿಕ್’ ಸಿನಿಮಾಗೂ ಮುನ್ನ ಒಂದೆರಡು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರೂ, ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಮೆಜೆಸ್ಟಿಕ್ ಸಿನಿಮಾ. ನಂತರ ಜರುಗಿದ್ದು ಮಾತ್ರ ಇತಿಹಾಸ. ಇದೀಗ ದರ್ಶನ್ ಎಲ್ಲರ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್.
ದರ್ಶನ್ ಹುಟ್ಟಿ, ಬೆಳೆದದ್ದು ಮೈಸೂರಿನಲ್ಲಿ. ಸಿನಿಮಾಗೆ ಬಂದ ನಂತರ ಫುಲ್ ಬ್ಯುಸಿ ಆದ ದರ್ಶನ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಜೊತೆಗೆ ಸ್ಕೂಲ್ನಲ್ಲಿ ಓದಿದ ಸಹಪಾಠಿಗಳನ್ನು ಭೇಟಿ ಮಾಡಲು ಅವರು ಆಸೆಪಟ್ಟಿದ್ದಾರಂತೆ. ಅದಕ್ಕಾಗಿ ಅವರು ತಮ್ಮ ಸ್ಕೂಲ್ಮೆಟ್ಗಳಿಗೆ ಒಂದು ಪಾರ್ಟಿ ಆಯೋಜಿಸಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಜನವರಿ 18 ರಂದು ಮೈಸೂರು ಹೊರವಲಯದ ರೆಸಾರ್ಟನಲ್ಲಿ ದರ್ಶನ್ ತಮ್ಮ ಸ್ನೇಹಿತರಿಗಾಗಿ ಈ ಪಾರ್ಟಿ ಅರೇಂಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕಾಗಿ ಒಂದು ಡೊಡ್ಡ ಪಾರ್ಟಿ ಹಾಲ್ ಬುಕ್ ಮಾಡಿದ್ದಾರಂತೆ. ಈ ಪಾರ್ಟಿ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲವಾದರೂ ದರ್ಶನ್ ಓದಿದ ಮೈಸೂರಿನ ಟೆರಿಷಿಯನ್ ಸ್ಕೂಲ್ನ ಸುಮಾರು 70ಕ್ಕೂ ಹೆಚ್ಚು ಸ್ಕೂಲ್ಮೆಟ್ಗಳು ಈ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ದರ್ಶನ್ ಆಪ್ತ ಮೂಲಗಳು ತಿಳಿಸಿವೆ.