ದೇಶ ಮೆಚ್ಚುವ ರೈತನ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಡಿದ ಮಾತಿಗೆ ನಾವೆಲ್ಲರೂ ಭೇಷ್ ಎನ್ನಲೇಬೇಕು !

0
124

ಇಂದು ನಾಡಿನೆಲ್ಲೆಡೆ ರೈತ ದಿನಾಚರಣೆಯ ಸಂಭ್ರಮ. ರೈತ ಸುರಿಸುವ ನಮಗೆ ಅನ್ನ ನೀಡುವ ಇವರನ್ನು ಗೌರವಿಸುವ ವಿಶಿಷ್ವವಾದ ಈ ಸು ದಿನ ಭಾರತದ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮ ದಿನ. ಯಾವುದೇ ನೈಸರ್ಗಿಕ ವಿಕೋಪ, ದಲ್ಲಾಳಿಗಳ ವಂಚನೆ, ಮೋಸದ ಮಧ್ಯೆಯೂ ತಾನು ಕಷ್ಟಪಟ್ಟು, ಎಲ್ಲರಿಗೂ ಅನ್ನ ನೀಡುತ್ತಿರುವ ರೈತರನ್ನು ನಾವೆಲ್ಲರೂ ಗೌರವಿಸಲೇ ಬೇಕು. ಇದಕ್ಕೆ ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅನ್ನದಾತನ ಬಗ್ಗೆ ಬರೆದುಕೊಂಡಿದ್ದಾರೆ.

 

 

ನಮ್ಮ ನಡುವೆ ಇರುವ ಬಲಿಷ್ಠ ರೈತರಿಂದ ಸದೃಢ ದೇಶ ನಿರ್ಮಾಣವಾಗುತ್ತದೆ. ರೈತರು ಚೆನ್ನಾಗಿದ್ದರೆ ಮಾತ್ರ ನಮ್ಮ ಹೊಟ್ಟೆಗೆ ಕೂಳು ಸಿಗುತ್ತದೆ. ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೆ ಸದಾ ನನ್ನ ಸಲಾಂ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ.

ಈ ಎಲ್ಲಾ ಬರವಣಿಗೆಗೂ ಮೂಲ ಕಾರಣ, ದರ್ಶನ್ ತಾವು ಕೂಡ ರೈತ. ಮೈಸೂರಿನ ಫಾರ್ಮ್ಹೌಸ್ನಲ್ಲಿ ಅವರು ಹಸು ಹಾಲು ಕರೆಯುವುದು ಎಲ್ಲರಿಗೂ ತಿಳಿದ ವಿಚಾರವೇ ಸರಿ. ಅಲ್ಲದೇ ಅವರು ಪ್ರಾಣಿ ಪ್ರಿಯರೂ ಹೌದು. ತಮ್ಮ ಫಾರ್ಮ್ ಗೌಸ್ ನಲ್ಲಿ ಹಲವಾರು ಜಾತಿಯ ಕುದುರೆ, ಹಸು, ಎಮ್ಮೆ ಮುಂತಾದ ಪ್ರಾಣಿಗಳನ್ನು ಅವರು ಸಾಕುತ್ತಿದ್ದಾರೆ.

 

 

ರೈತರಿಗೆ ಸಂಬಂಧಪಟ್ಟ ಕುರಿತಂತೆ ಅವರ ಸಿನಿಮಾದಲ್ಲಿ ಹಲವು ಡೈಲಾಗ್ಗಳು ಇವೆ. ಈ ಹಿಂದೆ ತೆರೆಕಂಡ ‘ಯಜಮಾನ’ ಸಿನಿಮಾದಲ್ಲಿ ಮಧ್ಯವರ್ತಿಗಳನ್ನು ದೂರವಿಟ್ಟು, ರೈತರು ಬೆಳೆದ ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗಬೇಕು ಎಂಬ ಸಂದೇಶವಿದ್ದನ್ನು ಸಹ ನಾವು ಇಲ್ಲಿ ನೆನಪಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here