ದರ್ಶನ್‍ ಸಿನಿಮಾದಲ್ಲಿ ಪಾತ್ರ ಸಿಕ್ಕಿರುವುದು ಖುಷಿಯಿದೆ

0
137

ಒಬ್ಬ ನಟನಾಗಿ ರಾಜಕೀಯ ಮತ್ತು ಸಿನಿಮಾ ಎರಡನ್ನು ಸಮಾನವಾಗಿ ತೆಗೆದುಕೊಂಡು ಹೋಗುವುದು ಕಷ್ಟವಿದೆ. ರಾಜಕಾರಣಿಗೆ ದಿನದಲ್ಲಿ 24 ಗಂಟೆ ದುಡಿದರೂ ಸಾಕಾಗುವುದಿಲ್ಲ. ನಮ್ಮ ಮನೆಯಲ್ಲಿ ಪಕ್ಷದ ವರಿಷ್ಠರ ಚಟುವಟಿಕೆಗಳನ್ನು ನೋಡಿದರೆ ಅರ್ಥವಾಗುತ್ತದೆ. ಆದರೆ ಸಿನಿಮಾ ಎಂಬುದು ನನ್ನ ಪ್ಯಾಷನ್. ನನ್ನ ಪ್ಯಾಷನ್‍ ನನ್ನಲ್ಲೇ ಸತ್ತು ಹೋಗಿದ ದಿನ ನಾನು ಚಿತ್ರರಂಗವನ್ನು ಬಿಟ್ಟುಬಿಡುತ್ತೇನೆ. ಆದರೆ ಅಲ್ಲಿವರೆಗೂ ಸಿನಿಮಾ ಕೆಲಸವನ್ನು ಮುಂದುವರೆಸುತ್ತೇನೆ ಎಂದು ನಿಖಿಲ್‍ ಕುಮಾರಸ್ವಾಮಿ ಹೇಳಿದರು.

ನಾನಿಲ್ಲಿ ಕಲಾವಿದನಾಗಿ ಅಷ್ಟೇ ಇದ್ದೇನೆ. ಅದರ ಬದಲಾಗಿ ಒಬ್ಬ ರಾಜಕಾರಣಿಯ ಮಗನಾಗಿ ನಿಂತಿಲ್ಲ. ಆದರೆ ಎಲ್ಲೋ ಒಂದು ಕಡೆ ನನ್ನನ್ನು ರಾಜಕಾರಣಿಯ ಮಗನಾಗಿ ಬಿಂಬಿಸಿದರೆ ಕಲಾವಿದನಾಗಿ ನನಗೂ ಬೇಜಾರಾಯಿತು. ಎಲ್ಲಾ ಕಲಾವಿದರ ರೀತಿಯಲ್ಲಿ ನಾನು ಕೂಡ ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮವಾದ ಸಿನಿಮಾ ಕೊಡಬೇಕೆಂಬ ಭಾವನೆಯನ್ನು ಮಾತ್ರವೇ ಇಟ್ಟುಕೊಂಡಿದ್ದೇನೆ. ಇದೇ ಉದ್ದೇಶವನ್ನು ಇಟ್ಟುಕೊಂಡು ನಾನು ಇದುವರೆಗೂ ಚಿತ್ರಗಳಲ್ಲಿ ನಟಿಸಿದ್ದೇನೆ. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ನನಗೆ ಒಳ್ಳೆಯ ಸ್ಥಾನಮಾನ ಸಿಕ್ಕದರೆ ಅದು ನನ್ನ ರಾಜಕೀಯ ಜೀವನಕ್ಕೆ ಅನುಕೂಲವಾಗುತ್ತದೆ ಎಂಬುದರಲ್ಲಿ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ಮತ್ತು ರಾಜಕೀಯ ಎರಡೂ ಬೇರೆ ಬೇರೆ. ನನ್ನ ಪ್ಯಾಷನ್‍ ಇರುವ ತನಕ ಸಿನಿಮಾ ಕ್ಷೇತ್ರದಲ್ಲಿ ನಾನಿರುತ್ತೇನೆ. ದರ್ಶನ್‍ ಅವರ 50ನೇ ಸಿನಿಮಾದಲ್ಲಿ ಅವರ ಜೊತೆ ನಟಿಸಲು ನನಗೊಂದು ಅವಕಾಶ ಸಿಕ್ಕರುವುದಕ್ಕೆ ನನಗೂ ಖುಷಿಯಿದೆ. ದರ್ಶನ್‍ ಅವರು ಒಬ್ಬ ಕನ್ನಡ ಚಿತ್ರರಂಗದಲ್ಲಿ ಹಿರಿಯ ಕಲಾವಿದರು. ಈ ಕ್ಷೇತ್ರದಲ್ಲಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.

ನಾನು ವೈಯಕ್ತಿಕವಾಗಿ ಅವರ ಜೊತೆಗೆ ಸಂಪರ್ಕವಿಲ್ಲ. ಆದರೆ ಈ ಚಿತ್ರದಲ್ಲಿ ಮಾತ್ರ ಬೇರೆ ಬೇರೆ ಬಣಗಳಲ್ಲಿ ಗುರುತಿಸಿಕೊಂಡು ನಟಿಸಿದ್ದೇವೆ. ಆದರೆ ಒಬ್ಬ ಹಿರಿಯ ಕಲಾವಿದರಿಗೆ ಎಷ್ಟು ಗೌರವ ಕೊಡಬೇಕೋ ಅದನ್ನು ಕೊಡುತ್ತೇನೆ. ಅದರ ಹೊರತಾಗಿ ನಾನು ವೈಯಕ್ತಿಕವಾಗಿ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಹಾಗೆ ಸಂಪರ್ಕ ಇಟ್ಟುಕೊಳ್ಳುವುದು ನಮಗೆ ಬಿಟ್ಟ ವಿಚಾರ. ಸಂಬಂಧಗಳಿಗೆ ಎಷ್ಟು ಬೆಲೆ ಕೊಡಬೇಕೋ ಅಷ್ಟು ಬೆಲೆಯನ್ನು ನೀಡುತ್ತೇನೆ ಅದರಲ್ಲಿ ಎರಡು ಮಾತಿಲ್ಲ. ಕಾರಣಾಂತರಗಳಿಂದ ನಾನು ಕಳೆದ ಬಾರಿ ಚಿತ್ರದ ಪ್ರಚಾರ ಕಾರ್ಯಕ್ಕೆ ಬರಲಾಗಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ನಾನು ಭಾಗವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here