ಈ ವಿಷಯಕ್ಕೆ ದಾಸ ದರ್ಶನ್ ಚಿರ ಋಣಿ ಎಂದು ತಿಳಿಸಿದ್ದಾರೆ !

0
263

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದಾಸ ದರ್ಶನ್ ರನ್ನು ಕಂಡರೆ ಅಭಿಮಾನಿಗಳಿಗೆ ಬಹಳ ಪ್ರೀತಿ. ಅದರಂತೆ ದರ್ಶನ್ ಸಹ ತಮ್ಮ ಅಭಿಮಾನಿ ಮತ್ತು ಸ್ನೇಹಿತರನ್ನು ಅಷ್ಟೇ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾರೆ.

 

 

ಈ ಮಧ್ಯೆ ಕಳೆದ ವರ್ಷ ಅವರು ನಟಿಸಿರುವ ಯಾವ ಸಿನಿಮಾವು ಸಹ ತೆರೆಯ ಮೇಲೆ ಬಂದಿರಲಿಲ್ಲ. ಆದರೆ ಈ ವರ್ಷ ಒಂದರ ಹಿಂದೆ ಒಂದರಂತೆ ಬ್ಯಾಕ್ ಮೂರು ಸಿನಿಮಾಗಳು ರಿಲೀಸ್ ಆಗಲಿದೆ.ಈ ಹಿಂದೆ ದರ್ಶನ್ ನಟನೆಯ ‘ಯಜಮಾನ’ ನಂತರ ‘ಕುರುಕ್ಷೇತ್ರ’ ಚಿತ್ರಗಳು ತೆರೆ ಕಂಡು ಶತದಿನವನ್ನು ಪೂರೈಸುವುದರೊಂದಿಗೆ ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿತ್ತು. ಇದೀಗ ‘ಒಡೆಯ’ ತೆರೆ ಕಂಡಿದ್ದು, ಪ್ರೇಕ್ಷಕರ ಮನ ಸೆಳೆಯುತ್ತಿದೆ.

ಈ ವರ್ಷ ಮೂರು ಸಿನಿಮಾಗಳು ತೆರೆ ಕಂಡಿದ್ದಕ್ಕೆ ಮತ್ತು ಜನರು ನೋಡಿ ಆಶೀರ್ವಾದ ಮಾಡಿದ್ದಕ್ಕೆ ಸ್ವತಃ ದರ್ಶನ್ ಟ್ವೀಟ್ ಮಾಡಿ ತಮ್ಮ ಅಭಿಮಾನಿಗಳಿಗೆ ಹೀಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಈ ವರ್ಷ ಬಿಡುಗಡೆಯಾದ 3 ಚಿತ್ರಗಳಿಗೂ ನೀವು ತೋರಿರುವ ಪ್ರೀತಿ-ಅಭಿಮಾನಕ್ಕೆ ಧನ್ಯವಾದಗಳು ಮನೆಮಂದಿಯೆಲ್ಲರ ಜೊತೆಗೆ ಬಂದು ಆಶೀರ್ವದಿಸುತ್ತಿರುವ ಪ್ರೇಕ್ಷಕ ಸಮೂಹಕ್ಕೆ, ಶುಭ ಕೋರಿದ ನನ್ನ ಎಲ್ಲಾ ಸೆಲೆಬ್ರಿಟಿಗಳು, ಸ್ನೇಹಿತರಿಗೂ ಸದಾ ಚಿರಋಣಿ. ನಿಮ್ಮ ದಾಸ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here