ರವಿಶಂಕರ್‍ಗೂ ಬಿತ್ತಂತೆ ಗೂಸ : ರವಿ ಬೆಳಗೆರೆ ಹೇಳಿಕೆ

0
303

ಮತ್ತೇ ಚಾಲೆಂಜಿಗ್ ಸ್ಟಾರ್ ದರ್ಶ್‍ನ್‍ರವರು ತಮ್ಮ ಹೆಂಡತಿಯ ಮೇಲೆ ಹಲ್ಲೇ ಮಾಡಿದ್ದಾರೆಂದು ಹಿರಿಯ ಪತ್ರಕರ್ತ ರವಿಬೆಳಗೆರೆ ಹೇಳಿದ್ದಾರೆ.
ಇತ್ತೀಚಿಗೆ ಪತ್ರಕರ್ತ ರವಿ ಬೆಳೆಗರೆ ಅವರು ಯೂಟ್ಯೂಬ್ ಚಾನಲ್‍ನಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಮತ್ತೆ ಜನರನ್ನು ತಮ್ಮ ಮಾತಿನಿಂದ ಸೆಳೆಯಲು ಮುಂದಾಗಿದ್ದಾರೆ. ಹೌದು, `ಬೆಳ್ ಬೆಳಗ್ಗೆ ಬೆಳಗೆರೆ’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಈಗಾಗಲೇ ಭಾಗ-10 ಮುಗಿದ್ದಿದ್ದು, ಭಾಗ-11ರ ಸಂಚಿಕೆಯಲ್ಲಿ ತುಂಬ ಪ್ರೀತಿಯಿಂದ ಹೇಳುತ್ತೇನೆ.. ಹೀಗಾಡಬಾರದು ದರ್ಶನ್ ಎಂಬ ವಿಶೇಷ ಸಂಚಿಕೆಯನ್ನು ಮಾಡಿದ್ದಾರೆ. ಈ ಸಂಚಿಕೆಯಲ್ಲಿ ದರ್ಶನ್ ಅವರ ವೈಯಕ್ತಿಕ ಜೀವನದ ಬಗ್ಗೆ ಕುರಿತು ಮಾತನಾಡಿದ್ದಾರೆ.

ದರ್ಶನ್‍ರವರನ್ನು ತರಾಟೆಗೆ ತೆಗೆದುಕೊಂಡಿರುವ ರವಿಬೆಳಗೆರೆ, ಮೊದಲಿಗೆ ಕಾರ್ಯಕ್ರಮದ ಪ್ರಾರಂಭದಲ್ಲಿ ದರ್ಶನ್‍ರವರ ನಟನೆ ಹಾಗೂ ಸಿನಿಮಾದ ಬಗ್ಗೆ ಹೊಗಳಿದ್ದಾರೆ. ತದನಂತರ ಮಾತನಾಡಿರುವ ರವಿ ಬೆಳಗೆರೆ,ದರ್ಶನ್ ಒಬ್ಬ ಒಳ್ಳೆಯ ನಟ,ಆದರೆ ಯಾಕೆ ಇವನಿಗೆ ಹೆಂಡ್ತಿಗೆ ಹೊಡೆಯೊ ಚಟ ಇದೆ, ಕಳೆದ ಬಾರಿ ತನ್ನ ಹೆಂಡತಿಯ ಕೈಯನ್ನು ಕಾರ್ ಡೋರ್‍ಗೆ ಇಟ್ಟು ಡೋರ್‍ನ ರಪರಪ ಅಂತ ಹಾಕಿ ಕೈ ಮುರೆದುಹಾಕಿ ಜೈಲಿಗೆ ಹೋಗಿ ಬಂದ, ಆದರು ಬುದ್ದಿ ಬಂದಿಲ್ಲ. ಬರಬರಾದ ಕಾಲದಲ್ಲಿ ಬರಬರಾದ ರೀತಿಯಲ್ಲಿ ಬರಬರಾದ ದುಡ್ಡು ಬಂದರೆ ಹೀಗೆ ಆಗುತ್ತದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ..

ಇತ್ತಿಚಿಗಷ್ಟೇ ವರಮಹಾಲಕ್ಷ್ಮಿ ಹಬ್ಬದ ದಿನ ದರ್ಶನ್ ತಮ್ಮ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದಕ್ಕೆ ಸಾಕ್ಷೀ ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಜಯಲಕ್ಷ್ಮಿದರ್ಶನ್ ಅಂತ ಇಟ್ಟುಕೊಂಡಿದ್ದ ಹೆಸರನ್ನ ಬದಲಾಯಿಸಿ ಬರೀ ವಿಜಯಲಕ್ಷ್ಮಿ ಅಂತ ಮಾಡಿಕೊಂಡಿದ್ದರು.. ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು! ಆದರೆ ಈಗ ರವಿಬೆಳಗೆರೆಯವರು ಹೇಳುತ್ತಿರುವ ಪ್ರಕಾರ ಇತ್ತೀಚಿಗೆ ದರ್ಶನ್‍ರವರು ಕುಡಿದು ಬಂದು ಅಪಾರ್ಟ್‍ಮೆಂಟ್‍ನಲ್ಲಿದ್ದ ತನ್ನ ಹೆಂಡತಿ ವಿಜಯಲಕ್ಷ್ಷಿ ಮೇಲೆ ಹಲ್ಲೇ ನಡೆಸಿದ್ದಾರೆ, ಮತ್ತು ದರ್ಶನ್‍ರವರ ಜೊತೆ ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ ಇದ್ದರಂತೆ.. ದರ್ಶನ್ ಹಲ್ಲೆ ಮಾಡುತಿದ್ದನ್ನು ತಪ್ಪಿಸಲು ರವಿಶಂಕರ್ ಹೋದರಂತೆ,ಆದರೆ ದರ್ಶನ್ ರವಿಶಂಕರ್ ಅವರಿಗೂ ಗೂಸ ಕೊಟ್ಟಿದ್ದಾರಂತೆ..

ರವಿಬೆಳಗೆರೆಯವರು ಹೇಳಿರುವ ಪ್ರಕಾರ ದರ್ಶನ್ ಯಾಕೆ ಹೊಡೆದಿದ್ದಾರೆಂದರೆ, ದರ್ಶನ್ ಮದುವೆಯಾದ ಸಮಯದಲ್ಲಿ ವಿಜಯಲಕ್ಷ್ಮಿ ಹೆಸರಿನಲ್ಲಿ ಕೋಟ್ಯಂತರ ಆಸ್ತಿ ಬರೆದುಕೊಟ್ಟಿದ್ದಾರಂತೆ! ಇದನ್ನು ಈಗ ವಾಪಸ್ ಕೊಡು ಎಂದು ಒತ್ತಾಯಿಸಿದ್ದಾರಂತೆ. ಆದರೆ ವಿಜಯಲಕ್ಷ್ಮಿ ಕೊಡುವುದಲ್ಲ ಎಂದಿದಕ್ಕೆ ಗಲಾಟೆ ನಡೆದಿದೆ ಎಂದು ಹೇಳಿದ್ದಾರೆ..

ಅಲ್ಲದೆ ದರ್ಶನ್‍ರವರ ವೈವಾಹಿಕ ಜೀವನದ ಬಗ್ಗೆನು ಮಾತನಾಡಿದ್ದಾರೆ.. ಹೆಂಡತಿ ಇರುವಾಗ ದರ್ಶನ್ ಪವಿತ್ರಗೌಡ ಜೊತೆಯಲ್ಲಿದ್ದಾರೆ,ಜೊತೆಯಲ್ಲಿದ್ದರು ಪರವಾಗಿಲ್ಲ ಆದರೆ ಹೆಂಡತಿಗೆ ಹೊಡೆಯುವುದು ಯಾವ ಮಟ್ಟಿಗೆ ಸರಿ ಎಂಬುದು ರವಿ ಬೆಳಗೆರೆಯವರ ಆಕ್ರೋಶ.

LEAVE A REPLY

Please enter your comment!
Please enter your name here