ದರ್ಶನ-ಬೆಳಗೆರೆ‌-ದುನಿಯಾ ವಿಜಿ‌ ಇತ್ಯಾದಿ

0
259

ಕಳೆದ ವಾರ ಬೈಗುಳಗಳ ಸುರಿಮಳೆ. ಪ್ರಖ್ಯಾತ ಬರಹಗಾರ, ಹಾಯ್ ಜನಕ ರವಿ ಬೆಳಗೆರೆ YouTube ನಲ್ಲಿ ತಮ್ಮ ಕೋಪ ಮತ್ತು ಸಲಹೆಗಳನ್ನು ತೋಡಿಕೊಂಡಿದ್ದಾರೆ.
ಜನಪ್ರಿಯತೆಯ ಸೂತ್ರ ಇರುವುದೇ ಈ ಹೊಗಳಿಕೆ ಮತ್ತು ತೆಗಳಿಕೆಗಳಲ್ಲಿ.

ಅದೂ ತುಂಬಾ ಹೆಸರು ಮಾಡಿದ‌ ಸೆಲಿಬ್ರಿಟಿಗಳ‌ ವಿರೋಧವಾಗಿ ಉಸಿರೆತ್ತಿದರೆ ಸಾಕು ವಿಷಯ ವೈರಲ್‌ ಆಗಿ ಬಿಡುತ್ತೆ.
ಸದಾ ಏನಾದರೊಂದು ಕೆಟ್ಟದ್ದನ್ನು ಹುಡುಕುವ ನೆಗೆಟಿವ್ ಮನಸ್ಥಿತಿಗೆ ಈ ವೈರಲ್ ಮುದ ನೀಡುತ್ತೆ.
ಅದೇ ಹೊಗಳಿಕೆಯಾಗಿದ್ದರೆ ನಿಧಾನ ಪಸರಿಸುತ್ತದೆ.

ಅಕ್ಷರ ಮತ್ತು ಧ್ವನಿ ಮೂಲಕ ಅಪಾರ ಖ್ಯಾತಿ, ಹಣ ಮತ್ತು ಏನೆಲ್ಲಾ ಗಳಿಸಿದ ಕನ್ನಡಿಗರ ಹೆಮ್ಮೆ ರವಿ ಬೆಳಗೆರೆ.

ಅಪಾರ ಪ್ರಖ್ಯಾತಿ ಗಳಿಸಿದ ರವಿಯಂತಹ ಕಾಳಜಿ ಇರೋರು ಬೇರೆಯವರಿಗೆ ಸಲಹೆ ನೀಡಿ, ಸೂಕ್ತ ಮಾರ್ಗದರ್ಶನ ಮಾಡಿ‌ ಸರಿದಾರಿಗೆ ತರುವುದು ಕೂಡ ಪತ್ರಿಕಾ ಧರ್ಮ ಎಂದು ನಂಬಿದ್ದಾರೆ, ಅದರಲ್ಲಿ ಒಳ್ಳೆಯ ಉದ್ದೇಶ ಇರಬಹುದು ಕೂಡ.

ಹೆಮ್ಮರವಾಗಿ ಬೆಳೆದ ಬೆಳಗೆರೆ ತುಂಬ ಆಕರ್ಷಕವಾಗಿ, ಮತ್ತು ಹರಿತವಾಗಿ ಮಾತನಾಡುತ್ತಾರೆ, ಅದನ್ನು ಅವರ ಫ್ಯಾನ್ ಗಳು ಇಷ್ಟಪಡುತ್ತಾರೆ.

ಅದೇ ವರಸೆ ಇಟ್ಟುಕೊಂಡು ಬೆಳಗೆರೆ ಪ್ರಖ್ಯಾತಿಯ ಉನ್ನತ ಶಿಖರದಲ್ಲಿ ಇರುವ ಸ್ಟಾರ್ #ಡಿ.ಬಾಸ್ ಉರ್ಫ್ #ದರ್ಶನ ಅವರ ವೈಯಕ್ತಿಕ ಬದುಕಿನ ಬಗ್ಗೆ ಕೆಣಕಿದ್ದಾರೆ. ಹಿಂದೆ ಈ ಗಲಾಟೆಯಲ್ಲಿ ದರ್ಶನ ಅಪಖ್ಯಾತಿ ಗಳಿಸಿದರೂ ಅದನ್ನು ಕೇರ್ ಮಾಡದ ಅಭಿಮಾನಿಗಳು ಅವರ ಸಿನೆಮಾಗಳನ್ನು ಗೆಲ್ಲಿಸುತ್ತಲೇ ಇದ್ದಾರೆ.

ಇದರರ್ಥ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋನ ವೈಯಕ್ತಿಕ ಬದುಕು ಅವರಿಗೆ ಲೆಕ್ಕಕ್ಕೆ ಇಲ್ಲ ಅಂದ ಹಾಗಾಯಿತು.
ಅವರ ಕುಟುಂಬದ ಗಲಾಟೆ ಬೀದಿ ರಂಪವಾದ ಮೇಲೂ ಅವರ ಸಿನೆಮಾಗಳು ಗೆಲ್ಲುತ್ತಲೇ ಇವೆ.

ಪ್ರತಿಯೊಬ್ಬ ವ್ಯಕ್ತಿಗೂ ಖಾಸಗಿ ಮತ್ತು ಪ್ರೊಫೆಷನಲ್‌ ಮುಖ ಇರುತ್ತವೆ.

ನಾವು ಕೇವಲ ಅವರ ವೃತ್ತಿ ಬದುಕನ್ನು ಮಾತ್ರ ಆರಾಧಿಸಬೇಕು. ಆದರೆ ಪ್ರತಿಯೊಬ್ಬ ಸ್ಟಾರುಗಳ ವೈಯಕ್ತಿಕ ಬದುಕಿನ ಬಗ್ಗೆ ಕುತೂಹಲ ಇರುವುದು ಮತ್ತು ಅದನ್ನು ತಿಳಿದುಕೊಳ್ಳುವ ಹಂಬಲವೂ ಅಷ್ಟೇ ಸಹಜ.
ಖಾಸಗಿ ಜೀವನ ಸರಿ ಇರದಿದ್ದರೆ ಅವರು ತಮ್ಮ ವೃತ್ತಿ ಜೀವನದಲ್ಲಿ ಸೋತು ಹೋಗಬಹುದು ಎಂಬ ತರ್ಕ ಮಾತ್ರ ಅಸಮಂಜಸ.

ಅದ್ಭುತ ನಟ, ಪರಿಪೂರ್ಣ ಕ್ರೀಡಾಪಟು, ನುರಿತ ರಾಜಕೀಯ ನೇತಾರ, ಕ್ರಿಯಾಶೀಲ ಬರಹಗಾರ ಹೀಗೆ ವಿವಿಧ ಕ್ಷೇತ್ರದ ಜನಪ್ರಿಯರು ಸದಾ ಆರಾಧಿಸಲ್ಪುಡುತ್ತಾರೆ.
ಇವರ ಆರಾಧಕರು ಟೀಕೆಗಳನ್ನು ಸಹಿಸದೇ ಪ್ರತಿಭಟನೆಗೆ ಇಳಿಯುವುದು ಕೂಡ ವೈರಲ್ !

ರವಿ ಬೆಳಗೆರೆ ತಮ್ಮ YouTube ನಲ್ಲಿ ಅಂತಹ ಪ್ರಯೋಗದ‌ ಮೂಲಕ ಸುದ್ದಿಯಾಗಿದ್ದಾರೆ.
ಉದ್ದೇಶ ಏನೇ ಇರಲಿ ನಂತರದ ಬೆಳವಣಿಗೆ ಅಸಹ್ಯ ಮತ್ತು ಅಪಾಯಕಾರಿ.

ದರ್ಶನ ಮೌನಕ್ಕೆ ಶರಣಾಗಿದ್ದರೆ #ದುನಿಯಾ ವಿಜಿ ಕೆರಳಿ ಕೆಂಡವಾಗಿ ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ. ರವಿ ಬೆಳಗೆರೆ ಅವರ ವೈಯಕ್ತಿಕ ಬದುಕಿನ ಕುರಿತು ಹಗುರವಾಗಿ ಮಾತನಾಡಿರುವುದು ಅಸಹಜವೇನಲ್ಲ.

ಪ್ರತಿಯೊಬ್ಬ ವ್ಯಕ್ತಿ ಸಾಧನೆ ಶಿಖರವೇರಿದ ಮೇಲೆ ಅಪಾರ ಹಣ ಮತ್ತು ಹೆಸರು ಗಳಿಸುತ್ತಾನೆ. ಅಗತ್ಯಕ್ಕೆ ಮೀರಿದ ಹಣ ಶೇಖರಣೆ ಆದ ಕೂಡಲೇ ಹೆಣ್ಣು-ಹೊನ್ನು-ಮಣ್ಣು ಅವನ ಸುತ್ತಲೂ ಸುಳಿದಾಡಲಾರಂಭಿಸುತ್ತವೆ.

ಇನ್ನು ಅದರ ಜೊತೆಗೆ ಯೌವನ ಮದ ಕೂಡಿದರೆ ಕತೆ ಮುಗಿದೇ ಹೋಗುತ್ತದೆ. ಕೊಂಚ ಎಚ್ಚರ ತಪ್ಪಿದರೆ ಸಾಕು ಸಾವಿರಾರು ಕತೆಗಳು ಹುಟ್ಟಿ ಕೊಳ್ಳುತ್ತವೆ. ಅದರಲ್ಲೂ ಸಿನೆಮಾ ಹೀರೋಗಳಿಗೆ ಅಂಟಿಕೊಳ್ಳುವ ಹೆಣ್ಣಿನ ಕತೆಗಳಿಗೆ ಮಹತ್ವ ಕೊಟ್ಟು ಮಾತನಾಡುವುದು ಸಮರ್ಥನೀಯ ಅಲ್ಲ.

ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮನೆಗೆ ಕಲ್ಲು ಹೊಡೆಯುವ ಉದ್ದೇಶ ಯಾವುದೇ ಸಾಧನೆ ಮತ್ತು ಉದ್ಧಾರಕ್ಕಾಗಿ ಅಲ್ಲ, Just for the sake of popularity and to increase the TRP.
ಅವರವರ ಆಟ ಹೊಡೆದಾಟ ಅವರಿಗೆ ಮಾತ್ರ ಲಾಭ, ನಮಗಂತೂ ಅಲ್ಲ.

ಇದು TRP ದುನಿಯಾ ಇಲ್ಲಿ ದುಡಕೊಂಡವನೇ‌ ಜಾಣ!

ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here