ದರ್ಶನ್​ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ಗಳಿಸಿದೆಷ್ಟು ಕೋಟಿ ಗೊತ್ತಾ..?

0
419

ಚಾಲೆಂಜಿಂಗ್ ಸ್ಟಾರ್ ದರ್ಶನ್​ 50ನೇ ಸಿನಿಮಾ ಮುನಿರತ್ನ ಕುರುಕ್ಷೇತ್ರ ಹೊಸ ದಾಖಲೆ ಬರೆದಿದೆ. ಮೊದಲ ವಾರದಲ್ಲೇ 35 ಕೋಟಿ ರೂ ಕಲೆಕ್ಷನ್ ಮಾಡಿದ್ದ ಕುರುಕ್ಷೇತ್ರ ಮೂರು ವಾರದಲ್ಲಿಯೇ ನೂರು ಕೋಟಿ ಕ್ಲಬ್​ಗೆ ಸೇರಿದೆ. ಹೀಗಾಗಿ 100 ಕೋಟಿ ಎಂದು ಬರೆದಿರೋ ಕೇಕ್​ನ್ನ ದರ್ಶನ್ ಕತ್ತರಿಸಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಅಂದಹಾಗೇ ನಿರ್ಮಾಪಕ ಮುನಿರತ್ನ ನಿರ್ಮಾಣದ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದುರ್ಯೋಧನನನಾಗಿ ಅಬ್ಬರಿಸಿದ್ರೆ, ನಿಖಿಲ್​ ಅಭಿಮನ್ಯು ಪಾತ್ರಾಧಾರಿಯಾಗಿ ಬಣ್ಣ ಹಚ್ಚಿದ್ರೆ, ರವಿಚಂದ್ರನ್​ ಕೃಷ್ಣನಾಗಿ, ಅರ್ಜುನ್ ಸರ್ಜಾ ಕರ್ಣನಾಗಿ ಕಾಣಿಸಿಕೊಂಡಿದ್ರು. ಇನ್ನು, ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ಈ ಬಹುಕೋಟಿ ವೆಚ್ಚದ ಚಿತ್ರಕ್ಕೆ ನಾಗಣ್ಣ ನಿರ್ದೇಶನ ಮಾಡಿದ್ದಾರೆ.

LEAVE A REPLY

Please enter your comment!
Please enter your name here