‘ಯಾಕಣ್ಣ’, ಧ್ವನಿಯನ್ನು ಬಳಸಿಕೊಂಡ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ “!

0
128

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದ ವಿಡಿಯೋ ‘ಯಾಕಣ್ಣ’. ಏನಿದು ಯಾಕಣ್ಣ? ಎಂದು ಎಲ್ಲರಿಗೂ ಪ್ರಶ್ನೆ ಕಾಡಬಹುದು.. ಆದರೆ ಇದರ ಹಿಂದೆ ದೊಡ್ಡ ಕಥೆಯೇ ಇದೆ.. ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ ಮಹಿಳೆಯೊಬ್ಬಳು ನಡೆಸಿದ ಅನುಚಿತ ವರ್ತನೆಯನ್ನು ನೋಡಿದ ಟ್ರಾಲ್ ಪೇಜ್ಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಮಾಡಿದ್ದರು..ಹಾಗೂ ಅಸಭ್ಯವಾಗಿ ಶೀರ್ಷಿಕೆ ನೀಡುವ ಮೂಲಕ ತಲುಪುವ ರೀತಿ ಮಾಡಿದ್ದರು .. ಇಷ್ಟು ಮಾತ್ರವಲ್ಲದೆ ಆ ಮಹಿಳೆ ಹೇಳಿದ್ದ ಯಾಕಣ್ಣ ಮತ್ತು ಬೋಳನಹಳ್ಳಿ ಎಂಬ ಧ್ವನಿಯನ್ನು ಟಿಕ್ ಟಾಕ್ ಪ್ರಿಯರು ಟಿಕ್ ಟಾಕ್ ಗು ಸಹ ಬಳಸಿಕೊಂಡಿದ್ದರು !
ಆ ಮಹಿಳೆ ಯಾರು? ಎಲ್ಲಿದ್ದಾಳೆ ಎಂದು ಯಾರಿಗೂ ಸಹ ತಿಳಿದಿರಲಿಲ್ಲ .. ಆದರೆ ಈ ವಿಡಿಯೊ ಮಾತ್ರ ಎಲ್ಲಾ ಪೇಜ್ಗಳಲ್ಲೂ ರಾರಾಜಿಸುತ್ತಿತ್ತು ..

ಇದಾದ ಸುಮಾರು ತಿಂಗಳುಗಳ ಬಳಿಕ ಆ ಮಹಿಳೆ ಮತ್ತೆ ಕಾಣಿಸಿಕೊಂಡಿದ್ದಳು.. ಒಬ್ಬ ವ್ಯಕ್ತಿಯ ಬಳಿ ಹೋಗಿ ಯಾಕೆ ನನಗೆ ಇಷ್ಟು ಅವಮಾನ ಮಾಡುತ್ತಿದ್ದಾರೆ? ನಾನು ಮಾಡಿರುವ ದೊಡ್ಡ ತಪ್ಪಾದರೂ ಏನು ? ರಸ್ತೆಯಲ್ಲಿ ಓಡಾಡುವುದಕ್ಕೂ ಬಿಡುತ್ತಿಲ್ಲ.. ಇವತ್ತೇ ವಿಷ ಅಥವಾ ನೇಣು ಹಾಕಿಕೊಂಡು ಸಾಯುತ್ತೇನೆ ಎಂದು ಅಳುತ್ತಾ ತನ್ನ ನೋವನ್ನು ವ್ಯಕ್ತಪಡಿಸಿದ್ದಳು.. ಅವಳು ಹೇಳಿದ ಸಂಭಾಷಣೆಯನ್ನು ಆ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದ.. ಇದನ್ನು ನೋಡಿದ ನೆಟ್ಟಿಗರು ಹಾಗೂ ಟ್ರಾಲ್ ಪೇಜ್ ನವರು ಟ್ರಾಲ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು ..

ಆ ಮಹಿಳೆ ಮಾತನಾಡಿದ ಒಂದೊಂದು ಮಾತು ಮನ ಕಲಕುವಂತೆ ಇತ್ತು ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್ ಮಾಡುವುದನ್ನು ನಿಲ್ಲಿಸಿದ್ದಾರೆ ..

ಆದರೆ , ಜೀ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ಎರಡರ ರಿಯಾಲಿಟಿ ಶೋನಲ್ಲಿ “ಯಾಕಣ್ಣ”, ಎಂದು ಹೇಳುವ ಆ ಮಹಿಳೆಯ ಧ್ವನಿ ಬಳಸಿ ಮತ್ತೆ ಆ ವಿಡಿಯೊವನ್ನು ನೆನಪು ಮಾಡುವಂತೆ ಮಾಡಿದ್ದಾರೆ ..

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಕ್ಷಿತಾ, ವಿಜಯ ರಾಘವೇಂದ್ರ, ಅರ್ಜುನ್ ಜನ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ..

ಭಾನುವಾರ ನಡೆದ ಸಂಚಿಕೆಯಲ್ಲಿ ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ್ ಹಾಗೂ ಸಿಂಚು ರವರು ತಮ್ಮ ಡ್ಯಾನ್ಸ್ ಪರ್ಫಾರ್ಮೆನ್ಸ್ನಲ್ಲಿ, ಯಾಕಣ್ಣ ಧ್ವನಿಯನ್ನು ಬಳಸಿದ್ದರು .. ಡ್ಯಾನ್ಸ್ ಪರ್ಫಾರ್ಮೆನ್ಸ್ ಏನೋ ಚೆನ್ನಾಗಿಯೇ ಇತ್ತು.. ಆದರೆ ತಮ್ಮ ಬೇಳೆ ಬೇಯಿಸಿ ಕೊಳ್ಳುವುದಕ್ಕೆ ಒಬ್ಬರ ಭಾವನೆ ಮತ್ತು ಜೀವನದಲ್ಲಿ ಆಟವಾಡುವುದು ಎಷ್ಟರ ಮಟ್ಟಿಗೆ ಸರಿ ?

ಸ್ವಲ್ಪ ದಿನಗಳ ಹಿಂದೆಯಷ್ಟೇ ಆ ಮಹಿಳೆ ನಾನು ಸಾಯುತ್ತೇನೆ ಎಂದು ಗೋಳಾಡಿದ್ದಳು. ಇದನ್ನು ಲೆಕ್ಕಿಸದೆ ಜನರನ್ನು ನಗಿಸಲು ಆ ಮಹಿಳೆ ಧ್ವನಿ ಬಳಸಿಕೊಂಡಿರುವುದು ಯಾವ ರೀತಿಯಲ್ಲಿ ಸರಿ?
ಇನ್ನು ಈ ರಿಯಾಲಿಟಿ ಶೋವನ್ನು ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ನೋಡುತ್ತಾರೆ.. ಇಂತಹ ಕಾರ್ಯಕ್ರಮದಲ್ಲಿ ಈ ವೀಡಿಯೋದ ಧ್ವನಿ ಬಳಸಿರುವುದು ಎಷ್ಟರ ಮಟ್ಟಿಗೆ ಸರಿ ? ಇದರಿಂದ ವೀಕ್ಷಕರಿಗೆ ಯಾವ ರೀತಿಯ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಂಬುದು ವೀಕ್ಷಕರ ನಿರ್ಧರಿಸಬೇಕು

LEAVE A REPLY

Please enter your comment!
Please enter your name here