ಮಹಾರಾಷ್ಟ್ರದ ದಲಿತ ನಾಯಕನಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ..?!

0
98

ರಾಹುಲ್ ಗಾಂದಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಯಾರಾಗಲಿದ್ದಾರೆ ಕಾಂಗ್ರೆಸ್ ಅಧಿಪತಿ ಎಂಬ ಚರ್ಚೆ ಆರಂಭವಾಗಿತ್ತು. ಇದಕ್ಕೆ ಉತ್ತರ ಸಿಗುವ ಕಾಲ ಸನಿಹವಾಗಿದೆ. ಕಾಂಗ್ರೆಸ್‍ಗೆ ಹೊಸ ಸಾರಥಿ ಆಯ್ಕೆ ಬಹುತೇಕ ಕೊನೆ ಹಂತಕ್ಕೆ ತಲುಪಿದೆ. ಸಾಕಷ್ಟು ಅಳೆದು ತೂಗಿ ಮಹಾರಾಷ್ಟ್ರದ ದಲಿತ ನಾಯಕನೋರ್ವರಿಗೆ ಕೈ ಅಧ್ಯಕ್ಷ ಪಟ್ಟ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.

ಹೌದು, ಕಾಂಗ್ರೆಸ್ ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಎ.ಕೆ.ಆಯಂಟನಿ, ಅಹಮದ್ ಪಟೇಲ್, ಕೆ.ಸಿ. ವೇಣುಗೋಪಾಲ್ ಹೊಸ ಅಧ್ಯಕ್ಷರ ಆಯ್ಕೆ ಸೋನಿಯಾ ಗಾಂಧಿಯೊಂದಿಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಸುದಿರ್ಘ ಚರ್ಚೆಯ ಬಳಿಕೆ ಮಹಾರಾಷ್ಟ್ರದ ದಲಿತ ನಾಯಕ ಮುಕುಲ್ ವಾಸ್ನಿಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗೋದು ಖಚಿತ ಎನ್ನಲಾಗಿದೆ. ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮುಕುಲ್ ವಾಸ್ನಿಕ್ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

ಇನ್ನು ಹೊಸ ಅಧ್ಯಕ್ಷರ ಆಯ್ಕೆಯ ಮೂಲಕ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಕಾಂಗ್ರೆಸ್‍ನ ಉನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ. 59 ವರ್ಷದ ಮುಕುಲ್ ವಾಸ್ನಿಕ್, ಮಾಜಿ ಸಚಿವ ಹಾಗೂ ರಾಜಕೀಯದಲ್ಲಿ ಅನುಭವಿಯಾಗಿದ್ದು, ದಲಿತ ನಾಯಕರಾಗಿದ್ದಾರೆ. ಸ್ಥಳೀಯ ಚುನಾವಣೆಗಳ ವೇಳೆಗೆ ಕಾಂಗ್ರೆಸ್ ಸಾರಥಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here