ದಿನ ಭವಿಷ್ಯ 05 ಸೆಪ್ಟೆಂಬರ್ 2019

0
508

ಇಂದು ‘ಸರ್ವಪಲ್ಲಿ ರಾಧಾಕೃಷ್ಣನ್’ ಅವರ ಹುಟ್ಟುಹಬ್ಬದ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಅವರ ಶಿಷ್ಯರು, ಗುರುಗಳೇ ನಿಮ್ಮ ಹುಟ್ಟು ಹಬ್ಬವನ್ನು ನಾವು ಸದಾ ಆಚರಿಸಬೇಕು ಎಂದಾಗ ಈ ದಿನವನ್ನು ನನ್ನ ಹೆಸರಿನ ದಿನವಾಗಿ ಆಚರಿಸುವ ಬದಲು ‘ಶಿಕ್ಷಕರ ದಿನಾಚರಣೆಯ’ನ್ನಾಗಿ ಆಚರಿಸಿ ಅಂತ ಹೇಳುತ್ತಾರೆ. ರಾಧಾಕೃಷ್ಣ ಅವರು ಪರೀಕ್ಷೆಗೆ ಫೀಸ್ ಕಟ್ಟಲು ಕಷ್ಟಪಟ್ಟು ಹಣವನ್ನು ಸಂಗ್ರಹಿಸಿಕೊಂಡು ಶಾಲೆಗೆ ಹೋಗುತ್ತಿರುತ್ತಾರೆ. ಆಗ ಒಬ್ಬ ಕಳ್ಳ ಅವರನ್ನು ಹಿಂಬಾಲಿಸಿಕೊಂಡು ದುಡ್ಡನ್ನು ಕಿತ್ತುಕೊಂಡು ಹೋಗುತ್ತಾನೆ. ಇತ್ತ ಹಣವನ್ನು ಕಳೆದುಕೊಂಡ ಸರ್ವಪ್ಪಲ್ಲಿ ರಾಧಕೃಷ್ಣನ್ ಅವರು ದುಃಖದಲ್ಲಿ ಯೋಚನೆ ಮಾಡುತ್ತಾರೆ.! ಶಾಲೆಗೆ ಹೇಗೆ ಹೋಗುವುದು. ಫೀಸ್ ಕಟ್ಟಿಲ್ಲ, ಪರೀಕ್ಷೆಯನ್ನು ಹೇಗೆ ಬರೆಯುವುದು ಎಂಬ ಆಲೋಚನೆಯಲ್ಲಿದ್ದರು. ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿದ್ದರು. ಅವರ ಪ್ರೀತಿಯ ಶಿಕ್ಷಕರು ಒಬ್ಬರು ಅವರನ್ನು ಗಮನಿಸಿ ಎಲ್ಲರೂ ಫೀಸ್ ಕಟ್ಟಿದ್ದಾರೆ. ಆದರೆ ರಾಧಾಕೃಷ್ಣನ್ ಯಾಕ್ ಕಟ್ಟಿಲ್ಲ ಎಂಬುದು ಅವರಿಗೆ ತಿಳಿಯುತ್ತದೆ. ಫೀಸ್ ಕಟ್ಟಲಿಲ್ಲ ಎಂದರೆ ರಾಧಾಕೃಷ್ಣನ್ ಅವರನ್ನು ಪರೀಕ್ಷೆಗೆ ಕೂರಿಸುವುದಿಲ್ಲ ಎಂಬುದು ಅವರಿಗೆ ತಿಳಿಯುತ್ತದೆ. ಆಗ ಅವರೇ ತಮ್ಮ ಸ್ವಂತ ದುಡ್ಡನ್ನು ಅವರ ಫೀಸ್ ಆಗಿ ಕಟ್ಟುತ್ತಾರೆ. ಕಟ್ಟಿ ರಾಧಾಕೃಷ್ಣನ್ ಅವರ ಮನೆಗೆ ಬಂದು ಧೈರ್ಯವಾಗಿ ಹೇಳಿ ನಾನಿದ್ದೇನೆ, ನೀನು ತುಂಬ ಬುದ್ಧಿವಂತ ಇಷ್ಟು ಸಣ್ಣ ಪುಟ್ಟ ಪೆಟ್ಟುಗಳಿಗೆ ಕುಗ್ಗಬಾರದು ಪರೀಕ್ಷೆಗೆ ಸಿದ್ಧನಾಗಿ ಬಾ ಎಲ್ಲ ಒಳ್ಳೆಯದೇ ಆಗುತ್ತದೆ ಎಂದಾಗ ಸರ್ವಪಲ್ಲಿ ರಾಧಾಕೃಷ್ಣ ಅವರು ಮನಸ್ಸಿನಲ್ಲಿ ಅವರ ಶಿಕ್ಷಕರ ಸಹಾಯವನ್ನು ನೆನೆದು ಧೈರ್ಯವಾಗಿ ಶಾಲೆಗೆ ಬಂದು ಪರೀಕ್ಷೆಯಲ್ಲಿ ಸಿದ್ಧರಾಗಿ ಪರೀಕ್ಷೆಯನ್ನು ಬರೆಯುತ್ತಾರೆ. ಶಿಕ್ಷಕರ ಮಾತಿಗೆ ಗಂಭೀರವಾಗಿ ಆಲಿಸಿಕೊಂಡು ಅವರು ಮಾಡಿದ ಸಹಾಯದಿಂದ ಇಂದು ಸರ್ವಪಲ್ಲಿ ರಾಧಕೃಷ್ಣನ್ ಅವರು ದೊಡ್ಡ ತತ್ತ್ವಜ್ಞಾನಿ, ರಾಷ್ಟ್ರಪತಿ ಆಗಿ ನಮಗೆ ದೊರೆತರು. ಇನ್ನು ನಮಗೆ ಮತ್ತೋರ್ವ ಬುದ್ಧ, ಒಬ್ಬ ಗೂಗಲ್ ಎಂದೇ ಹೇಳಬಹುದು. ಅಷ್ಟು ಜ್ಞಾನ ಅವರಲ್ಲಿತ್ತು. ಶಿಕ್ಷಕರ ದಿನಾಚರಣೆಯನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ನೆನಪಿಗೆ ಇಂದು ಆಚರಿಸುತ್ತಾರೆ. ಅವರು ಹುಟ್ಟಿರುವ ಈ ನಾಡಿನಲ್ಲಿ ನಾವು ಜನ್ಮ ಪಡೆದಿರುವುದು ನಮ್ಮ ಪುಣ್ಯ ಎಂದು ತಿಳಿದು ಮುನ್ನುಗ್ಗಬೇಕು, ಅಂಥ ಮೇಧಾವಿ ನಮ್ಮ ಮುಂದೆಯೇ ಇದ್ದಾರೆ ಎಂದು ಭಾವಿಸಿ ಇಂದಿನ ಕೆಲಸವನ್ನು ಆರಂಭಿಸಿ ಒಳ್ಳೆಯದಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಬಹುದೊಡ್ಡ ಲಾಭಗಳನ್ನು ನೋಡುತ್ತೀರಿ. ಮುಂದಿನ ಹೂಡಿಕೆಯ ಬಗ್ಗೆ ಈಗಲೇ ತೀರ ಯೋಚನೆ ಮಾಡುತ್ತಿದ್ದೀರಿ, ಅದರಲ್ಲಿ ಖಂಡಿತ ಒಂದು ಲಾಭವನ್ನು ನೋಡುತ್ತೀರಿ ಯೋಚಿಸಬೇಡಿ ಶುಭವಾಗಲಿದೆ.

ವೃಷಭ– ಇಂದು ಸಣ್ಣ ಸಣ್ಣ ವಿಷಯಕ್ಕೆ ತೀರಾ ಆತಂಕ ಪಡುತ್ತೀರಿ. ಪರಿಶ್ರಮ ಜಾಸ್ತಿ ಅಂತ ಯೋಚನೆ ಮಾಡುತ್ತಿದ್ದೀರಿ. ಇಂಥ ಒಂದು ತೊಳಲಾಟ ಭಾವದಲ್ಲಿ ಇದ್ದೀರಿ ಜಾಗರೂಕತೆ. ಸುರಕ್ಷತೆ ನೋಡಿಕೊಂಡು ಹೋಗುವಲ್ಲಿ ಎಡವುತ್ತೀರಿ, ಅಪರಿಚಿತ ವ್ಯಕ್ತಿಯ ಬಳಿ ಹೂಡಿಕೆ ಮಾಡಿ ಮೋಸ ಹೋಗುತ್ತೀರಿ ಜಾಗರೂಕತೆ.

ಮಿಥುನ– ಬುದ್ಧಿಶಕ್ತಿ ಉಪಯೋಗಿಸಿ ಮಾಡುವಂಥ ಕೆಲಸ ಕಾರ್ಯಗಳಲ್ಲಿ ಚಾರ್ಟೆಡ್ ಅಕೌಂಟ್ ,ಇಂಜಿನಿಯರ್, ಅಡ್ವೈಸರ್, ಲಾಯರ್, ಅದ್ಭುತವಾದ ಪ್ರಗತಿಕಾಣ ತಕ್ಕಂತ ದಿನ ಚೆನ್ನಾಗಿದೆ. ಹೆಚ್ಚು ಗಲಿಬಿಲಿಯಾಗಿ ಒದ್ದಾಡುತ್ತೀರಿ.! ಒಂದು ರೀತಿ ನಿಮಗೆ ಹಾಗೆ ಎಚ್ಚರಿಕೆ ವಹಿಸಿ ಶುಭವಾಗಲಿದೆ.

ಕಟಕ– ಅಪಾರ ಬುದ್ಧಿ ಇರಬಾರದು ಸರ್ವನಾಶ ಆಗುವುದಂತೂ ಖಂಡಿತ. ಬಹಳ ಎಚ್ಚರಿಕೆಯಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಲಾಭಕ್ಕೋಸ್ಕರ ಬೇರೆ ಬೇರೆ ಕೈ ಸುಟ್ಟುಕೊಳ್ಳುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೀರಿ ಜಾಗರೂಕತೆ.

ಸಿಂಹ– ಇಂದು ನಿಮ್ಮ ದಿನ ಚೆನ್ನಾಗಿದೆ. ಟೆಕ್ನಿಕಲ್ ಲೈನ್ ನಲ್ಲಿ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೀರ. ವಿಶೇಷವಾಗಿ ಮಾತಿಗೆ ಸಂಬಂಧಿಸಿದ ಕೆಲಸಗಳಲ್ಲಿ ವೃತ್ತಿ ಪರ ನಿಂತುಕೊಂಡು ಕೆಲಸ ಮಾಡುತ್ತಿದ್ದರೆ, ಅದ್ಭುತವಾದ ಪ್ರಗತಿ ಕಾಣತಕ್ಕಂತ ದಿನ ಚೆನ್ನಾಗಿದೆ ಶುಭವಾಗಲಿ.

ಕನ್ಯಾ– ರೈತರು ಸ್ವಲ್ಪ ಜಾಗರೂಕತೆ. ಇಂದು ನಿಮ್ಮ ತಲೆಯನ್ನು ಯಾರಾದರೂ ಕೆಡಿಸುತ್ತಾರೆ. ಮುಂದಾಲೋಚನೆ ಇಟ್ಟುಕೊಂಡು ಕೆಲಸ ಮಾಡಿ. ನಿಮ್ಮ ಯೋಚನೆಯಲ್ಲಿ ಒಂದು ದೃಢ ನಿರ್ಧಾರ ತೆಗೆದುಕೊಂಡು ಹೆಜ್ಜೆ ಇಡುವುದು ಒಳ್ಳೆಯದು ಶುಭವಾಗಲಿದೆ.

ತುಲಾ– ಅಡ್ವೈಸರ್, ಲೆಕ್ಕಿಗರು, ಅಕೌಂಟೆಂಟ್, ಸೇಲ್ಸ್ ಮನ್, ಮಾರ್ಕೆಟಿಂಗ್, ಹೋಮ,ಯಜ್ಞಾ,ಹವನ, ಪುರೋಹಿತರಾಗಿ ಕೆಲಸ, ಕಾರ್ಯಗಳನ್ನು ಮಾಡುತ್ತಿದ್ದೀರಿ. ಅದ್ಭುತ ಪ್ರಗತಿ ಕಾಣುವ ದಿನ ಶುಭವಾಗಲಿದೆ.

ವೃಶ್ಚಿಕ -ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ. ಗುರುವಿನ ಪೂರ್ಣ ಕೃಪಾಕಟಾಕ್ಷ ನಿಮ್ಮ ಮೇಲಿದೆ. ಗುರು ನಿಮ್ಮ ಜೊತೆ ಇದ್ದಾನೆ, ಆದರೆ ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಇಲ್ಲ. ಏನಾಗುತ್ತೋ ಏನು ಮಾಡ್ತೀನಿ ಎಂಬ ಯೋಚನೆ ನಿಮ್ಮಲ್ಲಿದೆ. ಆದದ್ದೆಲ್ಲ ಒಳ್ಳೆಯದಕ್ಕೆ ಎಂಬುದನ್ನು ಯೋಚಿಸಿ ಕೆಲಸ ಮಾಡಿ. ಹಣಕಾಸು ವ್ಯವಹಾರದಲ್ಲಿ ಏನೋ ಒಂದು ಶುಭ ಸುದ್ದಿಯೊಂದನ್ನು ಕೇಳುವಿರಿ ಶುಭವಾಗಲಿದೆ.

ಧನಸ್ಸು– ಶಾರ್ಟ್ ಕಟ್ ಹಣ ಒಳ್ಳೆಯದಲ್ಲ ಎಚ್ಚರಿಕೆ. ಅಡ್ಡದಾರಿ ಸಂಪಾದನೆ ನಿಮಗೆ ಒಳ್ಳೆಯದಲ್ಲ! ನಿಮ್ಮ ಕೆಲಸ ಕಾರ್ಯಗಳಿಗೆ ತೊಡಕು ಉಂಟು ಮಾಡುವಲ್ಲಿ ಸಹಕಾರಿ ಅಷ್ಟೇ. ನಿಮ್ಮ ಆಲೋಚನಾ ಪದ್ಧತಿಯನ್ನು ಸರಿಪಡಿಸಿಕೊಳ್ಳಿ ಜಾಗೃತೆ ವಹಿಸಿ ಎಚ್ಚರಿಕೆ ಒಳ್ಳೆಯದಾಗಲಿ.

ಮಕರ– ಬುದ್ಧಿ ಉಪಯೋಗಿಸಿ ಮಾಡುವ ಕೆಲಸ ಕಾರ್ಯಗಳಲ್ಲಿ, ವ್ಯವಹಾರಗಳಲ್ಲಿ ಅದು ತಾಂತ್ರಿಕ, ರಿಸರ್ಚ್ ವಿಭಾಗ, ಸೈಂಟಿಸ್ಟ್ ಮಾಡುತ್ತಿದ್ದರೆ ಅನುಕೂಲ ಸಿಂಧು ನಿಮಗೆ ದೊರೆಯಲಿದೆ ಯೋಚಿಸಬೇಡಿ. ಪರಸ್ಥಳ, ಪರದೇಶಗಳ ವ್ಯವಹಾರಗಳಲ್ಲಿ ಸ್ವಲ್ಪ ತೊಳಲಾಟ ಎದುರಾಗಲಿದೆ ತೊಂದರೆಯಿಲ್ಲ ನಿಭಾಯಿಸಿಕೊಂಡು ಹೋಗುತ್ತೀರಿ ಶುಭವಾಗಲಿದೆ.

ಕುಂಭ– ಇಂದು ನಿಮಗೆ ಸ್ವಲ್ಪ ಆತುರ ಜಾಸ್ತಿ, ಮುಂದಾಲೋಚನೆ ಇಟ್ಟು ಕೆಲಸ ಮಾಡುತ್ತಿದ್ದೀರಿ ಅದು ಒಳ್ಳೆಯದು. ಯಾರೂ ನಿಮ್ಮ ಬಳಿ ಬಂದು ನಿಮ್ಮ ತಲೆಯನ್ನು ಕೆಡಿಸಿ ಆ ಕೆಲಸ ಮಾಡೋಣ, ಈ ಕೆಲಸ ಮಾಡುವುದು ಒಳ್ಳೆಯದು ಎಂದು ನಿಮ್ಮ ತಲೆ ಕೆಡಿಸುತ್ತಾರೆ ಜಾಗೃತ. ಎಕ್ಸ್ಪೋರ್ಟ್ ಇಂಪೋರ್ಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದೀರಿ ಅನುಕೂಲ ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ಮೀನ– ನಿಮಗೂ ಇಂದು ಅದ್ಭುತವಾದಂತಹ ದಿನ. ರಿಸ್ಕ್ ತೆಗೆದುಕೊಳ್ಳದೆ ಆರಾಮವಾಗಿ ಕೆಲಸವನ್ನು ನಿಭಾಯಿಸುತ್ತೀರಿ. ಆದರೂ ಹೆಚ್ಚು ಶ್ರಮಪಟ್ಟಷ್ಟೂ ನಿಮಗೆ ಒಳ್ಳೆಯದೇ ಆಗುತ್ತದೆ. ನಿಧಾನವಾಗಿ ಯೋಚಿಸಿ ಕೆಲಸವನ್ನು ಮಾಡಿ ದುಡುಕಬೇಡಿ ಒಳ್ಳೆಯದಾಗಲಿ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

LEAVE A REPLY

Please enter your comment!
Please enter your name here