ದಿನ ಭವಿಷ್ಯ 25 ಆಗಸ್ಟ್ 2019

0
875

ಕನ್ಯಾ ರಾಶಿಗೆ ಒಂದು ಆಪತ್ತು ಉಂಟು.!
ಸಂಗಾತಿ ಕುಟುಂಬ ವಿಚಾರದಲ್ಲಿ ಒಂದು ಸಣ್ಣ ಪೆಟ್ಟೂ ಉಂಟು. ಇಂದು ದಿಢೀರ್ ದಿಢೀರ್ ಬದಲಾವಣೆ ಉಂಟಾಗುತ್ತದೆ. ದಿಢೀರ್ ಯೋಚನೆ, ದಿಢೀರ್ ಓಡಾಟ, ದಿಢೀರ್ ಸುತ್ತಾಟ, ದಿಢೀರ್ ಆಸ್ಪತ್ರೆ ವಾಸ, ದಿಢೀರ್ ಪ್ರಯಾಣ ಭೂಮಿ ತೆಗೆದುಕೊಳ್ಳುತ್ತೀರಿ. ಅದರಲ್ಲಿ ಏನೋ ಒಂದು ಸಮಸ್ಯೆ ಕಾಡಲಿದೆ. ಇಂಥ ಸಮಸ್ಯೆಗಳು ಇಂದು ನಿಮಗೆ ತುಂಬಾ ಕಾಡಲಿದೆ. ಹೊಟ್ಟೆ ಭಾಗದಲ್ಲಿ ಉಷ್ಣತೆ ಸಮಸ್ಯೆ ಹೆಚ್ಚು ಕಾಡಲಿದೆ ಉಷ್ಣ ವಿಪರೀತ, ತುಂಟತನ ವಿಪರೀತ, ಅಲಂಕಾರ, ಆಕಸ್ಮಿಕ ಭೂಮಿ ಯೋಗ ತುಂಬಾ ಕೆಟ್ಟದ್ದು ಉಂಟು, ತುಂಬಾ ಒಳ್ಳೆಯದು ಉಂಟು ಜಾಗರೂಕತೆ. ಯಾರೋ ಹತ್ತಿರದಿಂದ ವ್ಯವಹಾರಕ್ಕೆ ಪೆಟ್ಟು ಬೀಳಲಿದೆ ಹೆಚ್ಚು ಜಾಗ್ರತ ವಹಿಸಿ. ವಿಪರೀತ ದುಡ್ಡು ಖರ್ಚಾಗಲಿದೆ. ಆದರೂ ಒಳ್ಳೆಯ ಕೆಲಸಕ್ಕೆ ಖರ್ಚಾಗುವುದೂ ಒಂದು ರೀತಿಯ ಶುಭ ಸುದ್ದಿ ಅಂದೆ ಹೇಳಬಹುದು.ಆದಷ್ಟು ರಂಗನಾಥನ ದರ್ಶನ ಮಾಡಿ, ಕುಕ್ಕೆ ಸುಬ್ರಹ್ಮಣ್ಯ ದರ್ಶನ ಮಾಡಿ, ಬಹಳ ಒಳ್ಳೆಯ ಪ್ರತಿಫಲ ನಿಮ್ಮನ್ನು ಆವರಿಸಲಿದೆ ಒಳ್ಳೆಯದಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಎಲೆಕ್ಟ್ರಾನಿಕ್, ಇಂಟೀರಿಯರ್ಸ್, ಅಲಂಕಾರಿಕ ವಸ್ತುಗಳು, ಕೆತ್ತನೆ ಕೆಲಸಗಳು, ಆರ್ಟಿಸ್ಟ್ ಕೆಲಸ, ಕಾರ್ಯಗಳು ಇಂಥ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಅದ್ಭುತ ಪ್ರಗತಿ ನೋಡುವಂಥ ದಿನ ಶುಭವಾಗಲಿ.

ವೃಷಭ– ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಪೈಲ್ಸ್, ಫಿಸ್ತುಲಾ ಏನೋ ಒಂದು ಸಮಸ್ಯೆ ಕಾಡಲಿದೆ. ಇಂದು ಯಾರೊಬ್ಬರ ಜೊತೆ ಜಗಳ, ನೋವು ಅಂತ ಸನ್ನಿವೇಶಗಳು ನಿಮಗೆ ಎದುರಾಗಲಿದೆ ಬಹಳ ಎಚ್ಚರಿಕೆ. ಆದರೆ ಇಂದು ಸುಬ್ರಹ್ಮಣ್ಯ ದೇವಾಲಯಕ್ಕೆ ಒಂದು ಬೊಗಸೆ ತೊಗರಿಬೇಳೆ, ಒಂದು ಪುಟ್ಟ ಕೊಬ್ಬರಿ ಬೆಲ್ಲ ಇಷ್ಟನ್ನು ಅರ್ಪಿಸಿ ಒಳ್ಳೆಯದಾಗಲಿದೆ.

ಮಿಥುನ– ಒಡಹುಟ್ಟಿದವರ ಜೊತೆ ಹತ್ತಿರ ಹತ್ತಿರದವರ ಜೊತೆ, ವಾದಕ್ಕೆ ಇಳಿಯಬೇಡಿ. ಹೃದಯಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆ ಎದುರಾಗಲಿದೆ ಜಾಗೃತ. ವ್ಯವಹಾರ ಭೂಮಿಯ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಲಿದೆ. ನರಸಿಂಹನ ಆರಾಧನೆ ಮಾಡಿಕೊಳ್ಳಿ ಶುಭವಾಗಲಿದೆ.

ಕಟಕ– ಭೂಮಿ, ಮನೆ, ವಾಹನ, ಆಭರಣ, ಬಂಗಾರ, ಶುಭ ಕಾರ್ಯ ಭಾನುವಾರದ ಪರಿಪೂರ್ಣ ಸಂಭ್ರಮಾಚರಣೆಯನ್ನು ನೋಡುತ್ತೀರಿ ಚೆನ್ನಾಗಿದೆ, ಯಾವ ತೊಂದರೆಯೂ ಇಲ್ಲ. ಆದರೆ ಸಂಗಾತಿಯ ವಿಚಾರದಲ್ಲಿ ಏನೋ ಒಂದು ಸಮಸ್ಯೆ ಎದುರಾಗಲಿದೆ. ನಿಮ್ಮ ಆತ್ಮೀಯರನ್ನು ಭೇಟಿ ಮಾಡುವಂತ ಪ್ರಸಂಗಗಳು ಎದುರಾಗಲಿದೆ ಒಳ್ಳೆಯದಾಗಲಿ.

ಸಿಂಹ– ನಿಮ್ಮ ದಿನ ಚೆನ್ನಾಗಿದೆ. ಉದ್ಯೋಗದಲ್ಲಿ ಒಂದು ಪ್ರಮೋಷನ್,ಪ್ರಗತಿ ಕಾಣುತ್ತೀರಿ. ಉದ್ಯೋಗದ ವಿಚಾರದಲ್ಲಿ ಮನಸ್ಸಿನಲ್ಲೇನೋ ತಳಮಳ ಕಾಡುತ್ತಿದೆ. ಶ್ರೀನಿವಾಸರಿಗೆ ಅಥವಾ ಪದ್ಮಾವತಿಗೆ ಸನ್ನಿಧಿಗೆ ಇಂದು ಭೇಟಿ ನೀಡಿ ಒಳ್ಳೆಯದಾಗಲಿದೆ.

ಕನ್ಯಾ– ಒಡಹುಟ್ಟಿದವರ ವಿಚಾರದಲ್ಲಿ ಒಂದು ಖರ್ಚು, ಒಡಹುಟ್ಟಿದವರ ಜೊತೆ ಒಂದು ತೊಂದರೆ ತೊಳಲಾಟ ಉಂಟಾಗಲಿದೆ ಜಾಗ್ರತ. ಕುಟುಂಬದವರ ಹೆಸರಿನಲ್ಲಿ ನಾಗರಕಟ್ಟೆಗೆ ಒಂದು ಪುಟ್ಟ ಗಂಧ ಅಭಿಷೇಕ ಮಾಡಿಸಿ, ಬರುವ ಆಪತ್ತನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಸ್ವಲ್ಪ ತಡೆಯಬಹುದು ಶುಭವಾಗಲಿ.

ತುಲಾ– ಭೂಮಿ ಕಳೆದುಕೊಳ್ಳುವುದು, ಮನೆ ಕಳೆದುಕೊಳ್ಳುವುದು, ಅವಮಾನ, ಅಪಮಾನ, ಯಾವುದು ದುರ್ವಾರ್ತೆ, ಪ್ರಯಾಣ ಭೀತಿ, ಪ್ರಯಾಣದಲ್ಲಿ ನಷ್ಟ, ವಾಹನ ನಷ್ಟ, ಸಂಗಾತಿ ವಿಚಾರದಲ್ಲಿ ಕಲಹ ಏನೋ ಒಂದು ದೊಡ್ಡ ತೊಂದರೆಯನ್ನು ನೋಡುತ್ತೀರಿ. ಆದಷ್ಟು ಇಂದು ಮನೆಯನ್ನು ಬಿಟ್ಟು ಕದಲಬೇಡಿ. ಎಲ್ಲಾದರೂ ಶ್ರೀನಿವಾಸ ಕಲ್ಯಾಣ ಮಾಡುತ್ತಿದ್ದರೆ ಕುಟುಂಬದವರ ಸಮೇತ ನೀವು ಭೇಟಿ ನೀಡಿ ಪೂಜೆಯನ್ನು ಮಾಡಿಸಿಕೊಂಡು ಬನ್ನಿ ಶುಭವಾಗಲಿದೆ.

ವೃಶ್ಚಿಕ– ನಿಮ್ಮ ಬಹುದಿನಗಳ ಕನಸು, ಬಹುದಿನದ ಆತ್ಮೀಯರು ನಿಮ್ಮೊಂದಿಗೆ ಸೇರುವಂತ ಸಮಯ. ಪ್ರೀತಿ ಪಾತ್ರರ ದರ್ಶನ ಪಡೆಯುವ ಯೋಗ ನಿಮ್ಮದಾಗಲಿದೆ. ಅತಿ ಹೆಚ್ಚು ನರಸಿಂಹರ ದರ್ಶನ, ಸುಬ್ರಹ್ಮಣ್ಯರ ಆಲಯಕ್ಕೆ ಭೇಟಿ ನೀಡಿ ಬರುವುದು ಬಹಳ ಲಾಭದಾಯಕ ಶುಭವಾಗಲಿದೆ.

ಧನಸ್ಸು– ನೀವು ಮುಟ್ಟಿದ್ದೆಲ್ಲ ಬಂಗಾರ. ಕಲಾವಿದರು, ಕ್ರೀಡಾಪಟುಗಳು,ಬಾಡಿ ಬಿಲ್ಡಿಂಗ್ ,ರಕ್ಷಣಾ ಇಲಾಖೆ, ಇಂಜಿನಿಯರಿಂಗ್ ಇಂಥ ಉದ್ಯೋಗದಲ್ಲಿ ಇರುವವರಿಗೆ ಒಂದು ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ಎಕ್ಸ್ಪೋರ್ಟ್-ಇಂಪೋರ್ಟ್ ಇಂಥ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ಅದ್ಭುತ ಪ್ರಗತಿ ಕಾಣುವಂತ ದಿನ ಚೆನ್ನಾಗಿದೆ.

ಮಕರ– ಇಂದು ಗ್ಯಾರಂಟಿ ಯಾರ ಮೇಲಾದರೂ ಕಲಹ, ಕದನ, ಮನೆಯಲ್ಲಿ ಯಾವುದಾದರೂ ಸಮಸ್ಯೆ ಉಂಟಾಗುವುದು ಖಚಿತವಾಗಿದೆ. ಹೊಡೆದಾಟ ಬಡಿದಾಟ ಇಂಥ ಸಮಸ್ಯೆಗಳು ಹೆಚ್ಚಾಗಿ ಕಾಡಲಿದೆ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿವುದು ಒಳ್ಳೆಯದು. ಇಂದು ದುರ್ಗಮ್ಮನ ಆಶೀರ್ವಾದ ಪಡೆದುಕೊಳ್ಳಿ ಒಳ್ಳೆಯದಾಗಲಿದೆ.

ಕುಂಭ– ತುಂಬಾ ಧಗಧಗ ಎಂದು ಉರಿಯುತ್ತಿರುತ್ತೀರ. ಮಾಡಬೇಕು, ಮುಗಿಸಬೇಕು ಎಂಬ ಆತುರದಲ್ಲಿ ಇರುತ್ತೀರಿ. ಭೂಮಿ ವಿಚಾರದಲ್ಲಿ ಒಂದು ತೊಳಲಾಟ, ತೊಡಕುಂಟಾಗಲಿದೆ. ದೈವಾನುಗ್ರಹ ನಿಮ್ಮ ಮೇಲೆ ಇರುವುದರಿಂದ, ನಿಮ್ಮ ಕೆಲಸಗಳಲ್ಲಿ ಬರುವ ತೊಂದರೆಗಳನ್ನು ಸುಗಮವಾಗಿಸಲು ಸಹಕಾರಿಯಾಗಲಿದೆ. ಆದಷ್ಟು ಮನಸ್ಸಿನಲ್ಲಿ ಓಂ ದುರ್ಗೆಯ ನಮಃ ಎಂದು ಪ್ರಾರ್ಥನೆ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ಮೀನ-ಮಾಡುವ ಕೆಲಸ, ಕಾರ್ಯ, ವ್ಯವಹಾರಗಳಲ್ಲಿ ಅದ್ಭುತ ಪ್ರಗತಿ ನೋಡುತ್ತೀರಿ. ಇನ್ನೊಬ್ಬರಿಂದ ಪ್ರೇರಿತ ಆಗುತ್ತೀರಿ, ನಿಮ್ಮ ಕೆಲಸ ಕಾರ್ಯಗಳಲ್ಲಿ ಅದನ್ನು ಅಳವಡಿಸಿಕೊಳ್ಳುತ್ತೀರಿ. ಕಾಳಿ, ಭದ್ರಕಾಳಿ, ಅಣ್ಣಮ್ಮ, ಗಂಗಮ್ಮ ತಾಯಿಯ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here