ದಿನ ಭವಿಷ್ಯ ಆಗಸ್ಟ್ ೨೩ ೨೦೧೯

0
656

ಮೇಷ– ಸ್ವಲ್ಪ ,ಕೋಪ, ಸಿಟ್ಟು, ಅಳುಮುಂಜಿ. ತುಂಬಾ ಕೋಪವಿದ್ದರೆ ಏನಾದರೂ ಒಂದು ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗೃತ. ನಾನು, ನಂದೇ ಎಂಬ ಅಹಂಕಾರ, ಗರ್ವ ಬೇಡ ಅದನ್ನು ತ್ಯಜಿಸಿಬಿಡಿ ಶುಭವಾಗಲಿದೆ.

ವೃಷಭ– ಇಂದು ಮನಸ್ಸಿಗೆ ಏನೋ ತಲ್ಲಣ, ದಾಂಪತ್ಯ ಜೀವನದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಲಿದೆ. ವ್ಯವಹಾರ ವಿಷಯದಲ್ಲೂ ಏನೋ ಒಂದು ತಳಮಳ. ಪಾಲುದಾರಿಕೆ ವ್ಯವಹಾರದಲ್ಲಿ ಬೆಂಕಿ ಸ್ಪರ್ಶಿಸುವಂತ ಸನ್ನಿವೇಶಗಳು ಎದುರಾಗಲಿವೆ ಜಾಗೃತ.

ಮಿಥುನ– ಸರ್ಕಾರಿ ವ್ಯವಹಾರಗಳಲ್ಲಿ ಅದ್ಭುತ ಪ್ರಗತಿ ಕಾಣುವಂತ ದಿನ ಚೆನ್ನಾಗಿದೆ. ಇಂದು ನೀವು ಅಂದುಕೊಂಡಂತ ಕೆಲಸ, ಕಾರ್ಯಗಳು ಕೈಗೂಡುತ್ತದೆ ಯೋಚಿಸಬೇಡಿ ಶುಭವಾಗಲಿದೆ.

ಕಟಕ– ಇಂದು ಪದವಿ ದೊರೆಯುವಂಥ ದಿನ. ಪದವಿ ನಂದೇ, ಎಲ್ಲವೂ ನನ್ನದೇ ಎಂಬ ಗರ್ವ ನಿಮ್ಮಲ್ಲಿ ಇಟ್ಟುಕೊಳ್ಳಬೇಡಿ. ಆದಷ್ಟು ಇಂದು ಭಗವತಿಯನ್ನು ಜ್ಞಾನ ಮಾಡಿ ಒಳ್ಳೆಯದಾಗಲಿದೆ.

ಸಿಂಹ– ಅಧಿಕಾರ, ಅದೃಷ್ಟ, ಸರ್ಕಾರಿ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ, ಅದ್ಭುತವಾಗಿದೆ ನಿಮ್ಮ ದಿನ. ಭಗವಂತ ನಿಮಗೆ ಅಧಿಕಾರ ಕೊಟ್ಟಾಗ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಬಹಳ ಒಳ್ಳೆಯದಾಗಲಿದೆ ಶುಭವಾಗಲಿ.

ಕನ್ಯಾ– ಇಂದು ನಿಮ್ಮ ದಿನ ಚೆನ್ನಾಗಿದೆ. ತಲೆನೋವು, ಮೈ, ಕೈ- ನೋವು ಅಂತ ಸಮಸ್ಯೆಗಳು ಸ್ವಲ್ಪ ಉಲ್ಬಣವಾಗಲಿದೆ ಜಾಗೃತ. ಮನಸ್ಸಿಗೆ ಏನೋ ತಳಮಳ ಉಂಟಾಗಲಿದೆ, ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಡಲಿದೆ. ಹಿರಿಯರ ಹೆಸರಿನಲ್ಲಿ ಶಿವನ ಬಳಿ ಅರ್ಚನೆ ಮಾಡಿಸಿ ಒಳ್ಳೆಯದಾಗಲಿದೆ.

ತುಲಾ– ಇಂದು ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಯೋಚಿಸಿ ಹೆಜ್ಜೆ ಇಡುವುದು ಸೂಕ್ತ. ನಿಮ್ಮ ಶ್ರಮಕ್ಕೆ ತಕ್ಕಂತೆ ಫಲ ಸಿಗಲಿದೆ. ನೀವು ಮಾಡಿದ ಕರ್ಮದ ಫಲವನ್ನು ನೀವು ಅನುಭವಿಸಲೇಬೇಕಾಗಿದೆ ಶುಭವಾಗಲಿ.

ವೃಶ್ಚಿಕ-ನಿಮ್ಮ ಕೆಲಸ, ಕಾರ್ಯವನ್ನು ನಿಮ್ಮ ಮನಸ್ಸಿನಿಂದ ಮಾಡಿದರೆ ನೀವು ಗೆಲ್ಲುವುದು ಕಟ್ಟಿಟ್ಟಬುತ್ತಿ. ಇದರಿಂದ ನಿಮಗೊಂದು ಶುಭಯೋಗ ಕಾಣಲಿದೆ ಒಳ್ಳೆಯದಾಗಲಿ.

ಧನಸ್ಸು– ಇಂದು ಪ್ರಮೋಷನ್, ಇಂಕ್ರಿಮೆಂಟ್, ಉದ್ಯೋಗದಲ್ಲಿ ಒಂದು ಸ್ಥಾನ ಬದಲಾವಣೆ ಚಿಂತೆ ಮಾಡುತ್ತಿದ್ದರೆ, ಅದ್ಭುತ ಪ್ರಗತಿ ಕಾಣುತ್ತೀರಿ. ಒಂದು ಯಶಸ್ಸನ್ನು ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ಮಕರ– ಉದ್ಯೋಗದಲ್ಲಿ ಒಂದು ಅಪಘಾತ ನಿಮ್ಮನ್ನು ಕಾಡಲಿದೆ ಜಾಗೃತೆ. ವ್ಯವಹಾರದಲ್ಲಿ ಆದಷ್ಟು ಯೋಚಿಸಿ ಮಾಡುವುದು ಒಳ್ಳೆಯದು ಧೈರ್ಯದಿಂದ ಹೆಜ್ಜೆ ಇಡಿ ಶುಭವಾಗಲಿದೆ.

ಕುಂಭ– ಇಂದು ನೀವು ಅಂದುಕೊಂಡಂತ ಕೆಲಸ, ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಯಾರೊಬ್ಬರೂ ನಿಮ್ಮನ್ನು ಅವಮಾನಿಸಿದರೆ ಅವರಿಗೆ ಏನೂ ತಿರುಗಿ ಮಾತನಾಡಬೇಡಿ, ಅವರೇ ಗುರುಗಳು ಎಂದು ಅವರಷ್ಟಕ್ಕೆ ಬಿಟ್ಟು ಬಿಡಿ. ಯಾರ ಜೊತೆಯೂ ಹೆಚ್ಚು ವಾದ ಮಾಡಬೇಡಿ ನಿಮ್ಮಷ್ಟಕ್ಕೆ ಸುಮ್ಮನಿದ್ದುಬಿಡಿ ಒಳ್ಳೆಯದಾಗಲಿದೆ.

ಮೀನ– ಇಂದು ನಿಮ್ಮ ಬಾಯಿಗೆ ಬೀಗ ಹಾಕಿಕೊಳ್ಳಲೇಬೇಕು ಅಂತ ಪರಿಸ್ಥಿತಿ ಎದುರಾಗಲಿದೆ. ಹೆಚ್ಚಾಗಿ ಪೊಸಿಷನ್ ಹೊಂದಿರುವವರು ಮಾತ್ರ ಇಂದು ಯಾರ ಮೇಲಾದರೂ ದಂಡಯಾತ್ರೆ ಮಾಡಿಬಿಡುತ್ತೀರಿ ಜಾಗೃತ. ಮನೆಯಿಂದ ಹೊರ ಹೋಗುವ ಮುನ್ನ ಒಂದು ಚಮಚ ಜೇನು ತುಪ್ಪ ಸೇವಿಸಿ ಹೋಗಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here