ದಿನ ಭವಿಷ್ಯ ೨೨ ಆಗಸ್ಟ್ ೨೦೧೯

0
541

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ಮನೆ, ಮನೆಯವರ ವಿಚಾರ, ಹೂಡಿಕೆಯ ಬಗ್ಗೆ ,ಉಳಿತಾಯದ ಬಗ್ಗೆ ತೀರ ಯೋಚನೆ ಮಾಡುತ್ತಿದ್ದೀರಿ. ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ಕೆಲಸದತ್ತ ಹೊರಡಿ ಶುಭವಾಗಲಿದೆ.

ವೃಷಭ– ಇಂದು ಬೇವು- ಬೆಲ್ಲ ಎರಡೂ ನಿಮಗೆ ದೊರೆಯಲಿದೆ. ಕಷ್ಟವೂ ನಿಮ್ಮ ಜೊತೆಯಿದೆ, ಸುಖವೂ ನಿಮ್ಮ ಜೊತೆ ಇದೆ. ಎರಡರ ಮಿಶ್ರ ಫಲವನ್ನು ಇಂದು ನೀವು ನೋಡುತ್ತೀರಿ.

ಮಿಥುನ– ಬೇವು- ಬೆಲ್ಲ ಉಂಟು, ಅದನ್ನು ಮೀರಿಸಿಕೊಂಡು ಹೋಗುವಂತ ಶಕ್ತಿ ನಿಮ್ಮಲ್ಲಿದೆ. ನೀವು ಕಳೆದುಕೊಂಡಿದ್ದನ್ನು ಮರಳಿ ಪಡೆಯುವಂತ ದಿನ ಶುಭವಾಗಲಿದೆ.

ಕಟಕ– ಸ್ತ್ರೀ ವಿಚಾರ,ಮನೆ ವಿಚಾರ, ಒಡವೆ ಕಳೆದುಕೊಂಡಿರುವ ವಿಚಾರಕ್ಕೆ, ಬಂಗಾರ,ಬಟ್ಟೆ, ಹೂವು ಇಂಥ ವಿವಾದದಲ್ಲಿ ಇರುವವರಿಗೆ ಒಂದು ಚೂರು ಪ್ರಯತ್ನದಿಂದ ಲಾಭವನ್ನು ನೋಡುವಂಥ ದಿನ ಶುಭವಾಗಲಿ.

ಸಿಂಹ– ಇತ್ತ ತುಂಟತನವೂ ಇಲ್ಲ, ವೈರಾಗ್ಯವೂ ಇಲ್ಲ.. ಮನಸ್ಸಿನಲ್ಲಿ ಏನೋ ವೈರಾಗ್ಯ ಭಾವ ಹೆಚ್ಚು ಕಾಡಲಿದೆ. ಮನೆಯಲ್ಲಿ ಅಕ್ಕ ತಂಗಿಯರಿಗೆ ಒಂದಿಷ್ಟು ಬಳೆಯನ್ನು ಕೊಡಿಸಿ ಬಹಳ ಒಳ್ಳೆಯದಾಗಲಿದೆ.

ಕನ್ಯಾ– ಇಂದು ತುಂಬಾ ಉತ್ಸಾಹದಿಂದ ಇರುತ್ತೀರಿ. ನಿಮ್ಮ ಮಾತು, ನಿಮ್ಮ ಕೆಲಸ, ನಿಮ್ಮ ಆರ್ಭಟ ಎಲ್ಲವೂ ಆಶ್ಚರ್ಯವಾಗಿರಲಿದೆ. ವ್ಯವಹಾರದಲ್ಲಿ ಇಂದು ಅದ್ಭುತ ಪ್ರಗತಿ ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ತುಲಾ– ಬಟ್ಟೆ ವ್ಯಾಪಾರ, ಹಣ್ಣಿನ ವ್ಯಾಪಾರ, ಜ್ಯೂಸ್ ವ್ಯಾಪಾರ, ತರಕಾರಿ ವ್ಯಾಪಾರ, ಅಲಂಕಾರಿಕ ವಸ್ತು ವ್ಯಾಪಾರ, ಕೇಶಾಲಂಕಾರ, ಬ್ಯೂಟಿ ಪಾರ್ಲರ್,ಕಟಿಂಗ್ ಶಾಪ್ ಇಂಥ ವ್ಯವಹಾರ ಮಾಡುತ್ತಿರುವವರಿಗೆ ಅಧಿಕ ಹಣಕಾಸನ್ನು ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ವೃಶ್ಚಿಕ -ಯಾಕೋ ಇವತ್ತು ತುಂಬಾ ಮನಸ್ಸಿಗೆ ವೈರಾಗ್ಯ ಭಾವ. ವೈರಾಗ್ಯದಲ್ಲಿ ಇರುವವರು ಇಂದು ಬಹಳ ಮಿಂಚಬೇಕು ಎಂಬ ಆಸೆಯಲ್ಲಿ ಇರುತ್ತೀರಿ. ಸಂಗಾತಿಯ ಜೊತೆ ಯಾವುದೋ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಮನೆಯಿಂದ ಹೊರ ಹೋಗುವ ಮುನ್ನ ದೃಷ್ಟಿಯನ್ನು ತೆಗೆಸಿಕೊಂಡು ಹೋಗಿ ಬಹಳ ಒಳ್ಳೆಯದು ಶುಭವಾಗಲಿ.

ಧನಸ್ಸು– ಇಂದು ನೀವು ಕೃಷ್ಣ ಭಗವಂತನ ವಿಚಾರವನ್ನು ಅನುಸರಿಸುತ್ತೀರಿ. ಹೌದು, ನಿಮ್ಮ ಮಾತಿನಲ್ಲಿ ಬಹಳ ತುಂಟತನವಿರುತ್ತದೆ. ಕೆಲಸಕ್ಕೆ ಹೋಗಬೇಕಾದರೂ ನಿಮ್ಮದೆ ಅಧಿಕಾರ, ಹೊರಗಿನಿಂದ ಬರುವಾಗಲೂ ನಿಮ್ಮದೆ ಅಧಿಕಾರ ಶುಭವಾಗಲಿದೆ.

ಮಕರ– ನೀವಿಂದು ನೋಡುವಂಥ ಆನಂದ, ಉಲ್ಲಾಸ, ಸಂತೋಷಕ್ಕೆ ಕೊನೆಯೇ ಇಲ್ಲ. ವಾದ್ಯಕ್ಕೆ, ಹಾಡಿಗೆ, ಕಲಾವಿದರಿಗೆ ಸಂಬಂಧಿಸಿದಂತೆ. ಟ್ರಾವೆಲ್ಸ್, ಬಂಗಾರ, ಬೆಳ್ಳಿ ವ್ಯಾಪಾರ, ವ್ಯವಹಾರಗಳಿಗೆ ಪರಿಶ್ರಮವಾದರೂ ಲಾಭ ನೋಡುವಂತ ದಿನ ಶುಭವಾಗಲಿದೆ.

ಕುಂಭ– ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ. ಹೆಂಡತಿ ಸಂಗಾತಿ ವಿಚಾರದಲ್ಲಿ ಸ್ವಲ್ಪ ತೊಂದರೆ ಕಿರಿಕಿರಿ ಉಂಟಾಗಲಿದೆ. ಇಂದು ಯಾಕೋ ತುಂಬಾ ಉತ್ಸಾಹದಲ್ಲಿರುತ್ತೀರಿ ಒಳ್ಳೆಯದು ಶುಭವಾಗಲಿ.

ಮೀನ– ನಿಮ್ಮ ಮನೆಗೆ ಗ್ಯಾರಂಟಿ ಇಂದು ಪಾತ್ರೆ, ಸೀರೆ, ಎಲೆಕ್ಟ್ರಾನಿಕ್ ಐಟಂ ಏನಾದ್ರೂ ಒಂದು ವಿಶೇಷ ವಸ್ತು ಹುಡುಕಿಕೊಂಡು ಬರುವಂತ ಸುದ್ದಿ ಖಂಡಿತವಾಗಿಯೂ ದೊರೆಯಲಿದೆ. ಮನೆಯಲ್ಲಿ ಒಂದು ಸಂಭ್ರಮ ಉಂಟಾಗಲಿದೆ, ಅದಕ್ಕಾಗಿ ಖರ್ಚು ಹೆಚ್ಚಾಗಲಿದೆ. ಮಿಕ್ಕಂತೆ ಯಾವ ತೊಂದರೆಯೂ ಇಲ್ಲ ಧೈರ್ಯವಾಗಿ ಮುನ್ನುಗ್ಗಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here