ದಿನ ಭವಿಷ್ಯ ಆಗಸ್ಟ್ ೧೫ ೨೦೧೯

0
179

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ, ಅದ್ಭುತವಾಗಿರುವಂತಹ ದಿನ. ವಿಶೇಷವಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಅದ್ಭುತ ಪ್ರಗತಿ ನೋಡುವಂಥ ದಿನ ಶುಭವಾಗಲಿದೆ.

ವೃಷಭ– ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ವ್ಯವಹಾರದಲ್ಲಿ ಸ್ವಲ್ಪ ತೊಡಕು ಉಂಟಾಗಲಿದೆ. ಸಂಗಾತಿಯ ಸಹಕಾರ ನಿಮಗೆ ದೊರೆಯಲಿದೆ ಶುಭವಾಗಲಿ.

ಮಿಥುನ-ಸ್ವಲ್ಪ ಸಹೋದರಿ ವಿಷಯದಲ್ಲಿ ತೊಳಲಾಟ ಉಂಟಾಗಲಿದೆ. ಹೆಂಡತಿ ಅಕ್ಕ, ತಂಗಿ ಅಥವಾ ಗಂಡನ ಅಕ್ಕ, ತಂಗಿ ವಿಚಾರದಲ್ಲಿ ಏನೋ ತಳಮಳ, ಹಣಕಾಸು ವಿಚಾರಗಳಲ್ಲಿ ಸ್ವಲ್ಪ ತೊಡಕು ಉಂಟಾಗಲಿದೆ ಜಾಗೃತ.

ಕಟಕ– ಪರವಾಗಿಲ್ಲ ಇಂದು ನಿಮ್ಮ ದಿನ ಚೆನ್ನಾಗಿದೆ. ಅತಿಥಿಗಳ ಆಗಮನ, ಪ್ರೀತಿ ಪಾತ್ರರನ್ನು ಭೇಟಿಯಾಗುವಂತ ದಿನ ಶುಭವಾಗಲಿದೆ.

ಸಿಂಹ- ಶಾಪಿಂಗ್, ಸುತ್ತಾಟ, ಓಡಾಟ ಈ ಖುಷಿಯ ದಿನ ನಿಮ್ಮದಾಗಲಿದೆ. ಅನೇಕ ಸಂಘ ಸಂಸ್ಥೆಗಳಿವೆ, ಆ ಮೂಲಕ ಯಾರಿಗಾದರೂ ಇಂದು ದಾನ ಮಾಡಿ ಒಳ್ಳೆಯದಾಗಲಿದೆ.

ಕನ್ಯಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಹಾಲು, ಬೆಣ್ಣೆ, ತುಪ್ಪ, ಮನೆಯಲ್ಲಿ ವಿಶೇಷವಾದ ಭೋಜನ ಕೂಟ ಏರ್ಪಾಡಾಗಲಿದೆ.ನೀವು ಅಂದುಕೊಂಡಂತಹ ಕೆಲಸ ಕಾರ್ಯಗಳಲ್ಲಿ ಅದ್ಭುತ ಪ್ರಗತಿ ನೋಡುತ್ತೀರಿ ಶುಭವಾಗಲಿದೆ.

ತುಲಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಉದ್ಯೋಗದ ವಿಚಾರದಲ್ಲಿ ಅತಿ ಶೀಘ್ರದಲ್ಲಿ ಒಂದು ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಯೋಚನೆ ಮಾಡುತ್ತಿದ್ದೀರಿ, ಅದರಲ್ಲಿ ಅಭಿವೃದ್ಧಿ ಹೊಂದ್ದುತೀರಿ ಶುಭವಾಗಲಿದೆ.

ವೃಶ್ಚಿಕ– ಸ್ವಂತ ನಿರ್ಧಾರ,ಸ್ವಂತ ಕಾರ್ಯ, ಸ್ವಂತ ವ್ಯವಹಾರದಲ್ಲಿ ವಿಶೇಷ ಪ್ರಗತಿ ಕಾಣತಕ್ಕಂತ ದಿನ. ಆತ್ಮೀಯರು, ಆತ್ಮೀಯರೊಡನೆ ಸುತ್ತಾಟ, ಓಡಾಟ ಇವೆಲ್ಲವನ್ನೂ ನೋಡಕ್ಕಂತ ಅದ್ಭುತವಾದ ದಿನ ಶುಭವಾಗಲಿದೆ.

ಧನಸ್ಸು– ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಕೆಲಸ, ಕಾರ್ಯಗಳ ಬಗ್ಗೆ ಹೆಚ್ಚು ಶ್ರಮ ಪಟ್ಟು ಮಾಡುವುದು ಉತ್ತಮ. ಹಣವನ್ನು ವ್ಯಯ ಮಾಡುವ ಬದಲು ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ಸಹಾಯ ಮಾಡಿ ಒಳ್ಳೆಯದಾಗಲಿದೆ.

ಮಕರ– ಇಂದು ನಿಮ್ಮ ದಿನ ಚೆನ್ನಾಗಿದೆ. ತುಂಬಾ ದಿನಗಳ ನಂತರ, ನಿಮ್ಮ ಆರೋಗ್ಯದಲ್ಲಿ ಚೇತರಿಕೆ, ಕುಟುಂಬದಲ್ಲಿ ಬದಲಾವಣೆ ವ್ಯವಹಾರದಲ್ಲಿ ಉತ್ತಮ ಪ್ರಗತಿ ನೋಡುವಂಥ ದಿನ.

ಕುಂಭ -ಅದ್ಭುತವಾದ ದಿನ ನಿಮ್ಮದಾಗಲಿದೆ. ಸ್ವಲ್ಪ ವೈರಾಗ್ಯದ ಕಡೆ ಹೆಚ್ಚು ಚಿಂತೆ, ಪ್ರಯಾಣದಲ್ಲಿ ಬಳಲಿಕೆ, ವ್ಯವಹಾರದಲ್ಲಿ ತೊಡಕು ಉಂಟಾಗಲಿದೆ. ಆದರೂ ನಿಭಾಯಿಸಿಕೊಂಡು ಹೋಗುವಂಥ ದಿನ ಶುಭವಾಗಲಿದೆ.

ಮೀನ– ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ಮನಸ್ಸಲ್ಲಿ ತೊಡಕುಂಟಾಗಿದೆ, ಪ್ರಯಾಣದಲ್ಲಿ ಹೆಚ್ಚು ಜಾಗ್ರತೆ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

LEAVE A REPLY

Please enter your comment!
Please enter your name here