ದಿನ ಭವಿಷ್ಯ 26 ಆಗಸ್ಟ್ 2019

0
655

ಇಂದು ಏಕಾದಶಿ ಉಪವಾಸ ಇರುವುದೇ ಈ ದಿನದ ಮಹತ್ವ. ಕಲಿಯುಗದಲ್ಲಿ ದೇವರ ಧ್ಯಾನಕ್ಕಿಂತ ಹೆಚ್ಚಾಗಿ, ನೀವು ಮಾಡುವ ಕೆಲಸ ಕಾರ್ಯದ ಮೇಲೆ ಹೆಚ್ಚು ಗಮನ ಇರಲಿ. ಉಪವಾಸ ಮಾಡಲಿಕೆ ಆಗದವರು, ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುವವರು, ಒಂದು ಫಲ ತಾಂಬೂಲವನ್ನು ಸೇವನೆ ಮಾಡುವುದು ಒಳ್ಳೆಯದು. ಇಂದು ಕನ್ಯಾ ರಾಶಿಯವರ ಫಲ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಿ,
ಮನೆಯ ಒಡಹುಟ್ಟಿದವರಿಗೊಂದು ಬೆಂಕಿ ಬೀಳುವ ಅವಘಡ ಸಂಭವಿಸಲಿದೆ. ಬೆಂಕಿ, ವಸ್ತ್ರ, ಆಭರಣ, ಬಂಗಾರ, ವಾಹನ, ಅವಘಡ, ಭೂಮಿ ಇವುಗಳ ಪ್ರಭಾವ ಹೆಚ್ಚು ಇರುತ್ತದೆ. ಸರ್ಕಾರಿ ವ್ಯವಹಾರ ಇದೆ, ಅಂಥ ವ್ಯವಹಾರ ಇದೆ ಎಂದು ನಿಮ್ಮ ಬಳಿ ಹಣಕ್ಕಿಳುವವರು ಹೆಚ್ಚಿರುತ್ತಾರೆ ಅವರ ಬಗ್ಗೆ ಜಾಗ್ರತ ಇರಲಿ. ಭೂಮಿಯ ವಿಚಾರ, ಮನೆಯ ವಿಚಾರ, ಅಣ್ಣ- ತಮ್ಮಂದಿರ ವಿಚಾರ, ಕುಟುಂಬ ವಿಚಾರದಲ್ಲಿ ಇಂದು ಏನೋ ತಲ್ಲಣ ಉಂಟಾಗಲಿದೆ. ಸ್ತ್ರೀಯರು ಅವರಿಗೆ ಆರೋಗ್ಯ ಕೆಡುತ್ತದೆ ಪುರುಷರಿಗೆ ಅಧಿಕಾರ ಹೋಗಲಿದೆ. ದಾಂಪತ್ಯ ಜೀವನದ ಅನುರಾಗದಲ್ಲಿ ಒಂದು ಅಪಶ್ರುತಿ ಕೇಳಿ ಬರುವ ಸಾಧ್ಯತೆ ಹೆಚ್ಚಿದೆ. ಲಕ್ಷ್ಮೀ ನರಸಿಂಹನಿಗೆ ವಿಶೇಷವಾಗಿ ಒಂದು ಅಭಿಷೇಕ,ಅರ್ಚನೆ, ಅಲಂಕಾರ ಮಾಡಿಸಿ. ಮುಖ್ಯ ನಿರ್ಧಾರಗಳನ್ನು ಕೂಡಲೇ ತೆಗೆದುಕೊಳ್ಳಬೇಡಿ, ಯೋಚನೆ ಮಾಡಿ ಹೆಜ್ಜೆ ಇಡಿ. ನಿತ್ಯ, ೪೮ ದಿನಗಳ ಕಾಲ ಶಿವನಿಗೆ ಅರ್ಚನೆ ಮಾಡಿಸಿ ಒಳ್ಳೆಯದಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ,

ಮೇಷ– ಏನೊ ಒಡಹುಟ್ಟಿದವರ ವಿಚಾರ ಬಗ್ಗೆ ಒಂದು ತಲ್ಲಣ ಉಂಟಾಗಲಿದೆ. ಮನೆಯ ಜವಾಬ್ದಾರಿ ನೀವು ತೆಗೆದುಕೊಳ್ಳುವುದು, ಅಲ್ಲೊಂದು ಗಲಾಟೆ, ಬೇಸರ, ಗಲಿಬಿಲಿ ಉಂಟಾಗುತ್ತದೆ. ಇಂದು ವೆಂಕಟೇಶ್ವರನ ದರ್ಶನ ಮಾಡಿ ಒಳ್ಳೆಯದಾಗಲಿದೆ.

ವೃಷಭ– ಇಂದು ಗುರುದರ್ಶನ, ಗುರುಪೂಜಾ, ಗುರು ಅರ್ಚನಾ, ಗುರುಗಳಿಗೊಂದು ಸೇವೆ ಮಾಡಿ ಬಹಳ ಒಳ್ಳೆಯದಾಗಲಿದೆ ಶುಭವಾಗಲಿ.

ಮಿಥುನ– ಇಂದು ನಿಮ್ಮ ಪರಿಸ್ಥಿತಿ ನೀರಿನಲ್ಲಿ ಮುಳುಗಿದ ಪಕ್ಷಿಯ ಸ್ಥಿತಿಯಂತೆ. ಇಂದು ಏನನ್ನೊ ಕಳೆದುಕೊಂಡು, ಪರದಾಡುವಂತಹ ಪರಿಸ್ಥಿತಿ ನಿಮಗೆ ಎದುರಾಗಲಿದೆ. ಆದಷ್ಟು ಎಲ್ಲಿಯಾದರೂ ಸತ್ಯನಾರಾಯಣ ದೇವಸ್ಥಾನವಿದ್ದರೆ, ವಿಶೇಷ ಸೇವೆ ಮಾಡಿ ಒಳ್ಳೆಯದಾಗಲಿದೆ.

ಕಟಕ– ವಾಮಾಚಾರ, ತಂತ್ರ, ಉದ್ಯೋಗದಲ್ಲಿ ,ವ್ಯವಹಾರದಲ್ಲಿ, ಒಂದು ಎಡವಟ್ಟು ಉಂಟಾಗಲಿದೆ. ಮನೆಯ ವಾತಾವರಣದಲ್ಲಿ ಒಂದು ತೊಳಲಾಟ. ನಾವು ನೀತಿ, ನಿಜಾಯಿತಿಯಿಂದ ಕೆಲಸ ಮಾಡುವುದು ಬಹಳ ಒಳ್ಳೆಯದು. ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ ಶುಭವಾಗಲಿ.

ಸಿಂಹ– ಇಂದು ನೀವು ವಾಮ ಮಾರ್ಗದಲ್ಲಿ ಯೋಚಿಸುತ್ತೀರಿ. ಸುಳ್ಳು ಹೇಳುವುದು, ಮೋಸ ಮಾಡುವುದು ಇಂಥ ಯಾವುದೋ ಒಂದು ಭಾವಕ್ಕೆ ನೀವು ಇಂದು ಒಳಗಾಗುತ್ತೀರಿ ಬಹಳ ಜಾಗ್ರತ. ನಾವು ಶ್ರಮ ಪಟ್ಟಿದ್ದೆ ನಮಗೆ ಉಳಿಯುವುದು ಕಷ್ಟ, ಅಂಥದ್ದರಲ್ಲಿ ಇನ್ನೊಬ್ಬರದ್ದನು ಕಿತ್ತು ತಿನ್ನುವುದು ಬೇಡ ಒಳ್ಳೆಯದಲ್ಲ ಶುಭವಾಗಲಿ.

ಕನ್ಯಾ– ಇಂದು ನಿಮ್ಮ ದಿನ ಪರವಾಗಿಲ್ಲ. ಯಾವುದೋ ಗುರುದರ್ಶನ, ದೈವದರ್ಶನ, ಯಾಕೋ ಗುರುಗಳ ಬಗ್ಗೆ ಯೋಚನೆ ಮಾಡುತ್ತೀರಿ. ದಿಢೀರ್ ಉದ್ಯೋಗದಲ್ಲಿ ಒಂದು ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ಗುರುಗಳ ಪಾದಪೂಜೆ ಮಾಡಿ ಬಹಳ ಒಳ್ಳೆಯದಾಗಲಿದೆ.

ತುಲಾ– ಇಂದು ನಿಮಗೆ ಒಳ್ಳೆಯದೇ ಆಗುತ್ತದೆ. ಸರ್ಪ್ರೈಸ್ ಸುದ್ದಿಯೊಂದನ್ನು ಕೇಳುತ್ತೀರಿ. ಆದರೆ ಯಾವುದೋ ಒಂದು ಕಾಗದ ಪತ್ರದ ಕಗ್ಗಂಟು,ಹಣಕಾಸಿನ ಕಗ್ಗಂಟು, ಮೆಡಿಕಲ್ ಖರ್ಚು ಒಂದು ಹುಡುಕಿಕೊಂಡು ಬರುತ್ತದೆ ಜಾಗೃತ. ಯಾವುದೋ ವ್ಯವಹಾರದಲ್ಲಿ ನಿಮಗೊಂದು ತೊಂದರೆ ಕಾಡಲಿದೆ. ಆದರೆ ಇಂದು ದುರ್ಗಾದೇವಿ, ಕಾಳಿಕಾಂಬಾ ಸನ್ನಿಧಿಗೆ ಭೇಟಿ ನೀಡಿ ತೀರ್ಥ ಸೇವನೆ ಮಾಡಿಕೊಂಡು ಬನ್ನಿ ಶುಭವಾಗಲಿದೆ.

ವೃಶ್ಚಿಕ– ಆರೋಗ್ಯದಲ್ಲಿ ಸ್ವಲ್ಪ ಹಿನ್ನಡೆ, ಹಣಕಾಸಿನ ವಿಚಾರದಲ್ಲಿ ಒಂದು ತೊಳಲಾಟ ಎದುರಾಗಲಿದೆ. ಕೋರ್ಟ್ ಸಮಸ್ಯೆ,ಸಣ್ಣ ವಿಚಾರವನ್ನು ದೊಡ್ಡ ಮಟ್ಟಿಗೆ ಯೋಚನೆ ಮಾಡುತ್ತಿದ್ದೀರಿ. ಇಂದು ದುರ್ಗಾ ಆರಾಧನೆ ಮಾಡಿ ಬಹಳ ಒಳ್ಳೆಯದಾಗಲಿದೆ.

ಧನಸ್ಸು– ಇಂದು ನಿಮ್ಮ ದಿನ ಪರವಾಗಿಲ್ಲ ಚೆನ್ನಾಗಿದೆ. ಕೊಡುವುದು, ತೆಗೆದುಕೊಳ್ಳುವುದು ಇಂಥ ವ್ಯವಹಾರದಲ್ಲಿ ಲಾಭವನ್ನು ನೋಡುತ್ತೀರಿ. ತುಂಬಾ ಲಾಭದ ದುರಾಸೆಗೆ ಒಳಗಾಗುತ್ತೀರಿ ಅದರ ಬಗ್ಗೆ ಜಾಗ್ರತೆ ವಹಿಸಿ.

ಮಕರ– ಇಂದು ನಿಮ್ಮ ದಿನ ಚೆನ್ನಾಗಿದೆ. ಹಣಕಾಸು ವ್ಯವಹಾರದ ಸಮಸ್ಯೆ ಉಲ್ಬಣವಾಗಲಿದೆ. ಉದ್ಯೋಗದಲ್ಲೊಂದು ಸಮಸ್ಯೆ, ಮನಸ್ಸಿನಲ್ಲಿ ದೊಡ್ಡ ತೊಳಲಾಟ ಉಂಟಾಗಿದೆ. ವಿನಾಯಕನಿಗೆ ಒಂದು ಅರ್ಚನೆ ಮಾಡಿಸಿ ಸಣ್ಣ ತಿಲಕ ಇಟ್ಟುಕೊಂಡು ಹೋಗಿ ಶುಭವಾಗಲಿದೆ.

ಕುಂಭ– ದೈವ ಚಿಂತನ, ದಾನಚಿಂತೆ,ಎನ್ ಜಿಒ, ಟ್ರಸ್ಟ್, ದೇವಸ್ಥಾನ ಆಚಾರ್ಯರು, ಪೂಜಾರಿ ಹೋಮಹವನ, ಯಜ್ಞಯಾಗ, ಧರ್ಮಸಂಸ್ಥೆ, ಎಜುಕೇಶನ್ ಸಂಸ್ಥೆ, ಇಂಥವುಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಅದ್ಭುತವಾದ ಪ್ರಗತಿ ನೋಡುತ್ತೀರಿ. ಈ ಹೆಸರು, ಕೀರ್ತಿ,ಗೌರವ, ಸನ್ಮಾನ ಹುಡುಕಿಕೊಂಡು ಬರುತ್ತದೆ ಶುಭವಾಗಲಿ.

ಮೀನ– ಇಂದು ನಿಮಗೆ ಉಲ್ಬಣವಾಗುವ ಸಮಸ್ಯೆಗೆ ರೆಸ್ಟ್ ಪಡೆಯುವುದಕ್ಕೂ ಯಾವುದೇ ಸಮಯವೂ ಇಲ್ಲದೆ ಇರುವ ಘಟನೆಗಳು ಉಂಟಾಗಲಿದೆ. ಮನೆಯಲ್ಲೊಂದು ಪುಟ್ಟದಾಗಿ ಧೂಪ, ದೀಪ, ಗಂಧ ಆರತಿಯನ್ನು ಮಾಡಿಸಿ ಶುಭವಾಗಲಿದೆ.

LEAVE A REPLY

Please enter your comment!
Please enter your name here