ದಿನ ಭವಿಷ್ಯ ಆಗಸ್ಟ್ ೨೧ ೨೦‍೧೯

0
2570

ಮೇಷ– ಮನಸ್ಸಿಗೆ ಒಂದು ಮಟ್ಟಿಗೆ ತಳಮಳ ಉಂಟಾಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಿಸಲಿದೆ ಜಾಗೃತ. ಕೆಟ್ಟ ಕನಸು, ಏನೂ ಆಗಲಿದೆ. ಏನೋ ಆಗುತ್ತೆ ಎಂಬ ಭೀತಿ ನಿಮ್ಮನ್ನು ಕಾಡಲಿದೆ. ಓಂ ನಮೋ ನಾರಾಯಣಾಯ ನಮಃ ಎಂದು ೨೧ ಬಾರಿ ಜಪ ಮಾಡಿಕೊಳ್ಳಿ ಶುಭವಾಗಲಿದೆ.

ವೃಷಭ-ಇಂದು ಏನೋ ಒಂದು ರೀತಿ ತಲ್ಲಣ! ಮನೆ ಕಾರ್ಯ, ಕುಟುಂಬ ಕಾರ್ಯ, ದೂರ ಸ್ಥಳದ ಕೆಲಸಗಳಿಗೆ ಖರ್ಚು ಹೆಚ್ಚಾಗಲಿದೆ. ಇಂದು ಬೆಳಗ್ಗೆ ಎದ್ದ ತಕ್ಷಣ ವಿಷ್ಣು ಸಹಸ್ರನಾಮ ಪಠನೆ ಮಾಡಿ ಬಹಳ ಒಳ್ಳೆಯದಾಗಲಿದೆ.

ಮಿಥುನ– ಇಂದು ಯಾವ ತೊಂದರೆಯೂ ಇಲ್ಲ. ದಿಢೀರ್ ಪ್ರಯಾಣ, ಸಂಗಾತಿ ಜೊತೆ ಹೊರಗೆ ಹೋಗುವಂತಹ ಸನ್ನಿವೇಶಗಳು ಎದುರಾಗಲಿವೆ. ಆನಂದದಾಯಕವಾದ ದಿನವೇ ನಿಮಗೆ ದೊರೆಯಲಿದೆ ಒಳ್ಳೆಯದಾಗಲಿ.

ಕಟಕ– ಪರಸ್ಥಳ, ಪರ ಊರು, ವ್ಯವಹಾರ,ವ್ಯಾಪಾರ ಅದರಲ್ಲೂ ಮೆಡಿಕಲ್ ಲೈನ್ನಲ್ಲಿ ಇರುವವರಿಗೆ ಪರಿಶ್ರಮದಿಂದ ಉತ್ತಮ ಲಾಭವನ್ನು ನೋಡುವಂತಹ ದಿನ. ತೊಳಲಾಟ ಇದ್ದರೂ ಕೂಡ ನಿಭಾಯಿಸಿಕೊಂಡು ಹೋಗುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ಸಿಂಹ– ಇಂದು ಮನಸ್ಸಿಗೇನೋ ಭೀತಿ. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ವೈರಲ್ ಫೀವರ್ ಕಾಡಲಿದೆ ಜಾಗೃತ. ಮನೆಯಲ್ಲಿ ಕೃಷ್ಣ ವಿಗ್ರಹಕ್ಕೆ ಆರಾಧನೆ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ಕನ್ಯಾ– ಸ್ವಲ್ಪ ದಿನದ ಆರಂಭ ನಿಧಾನವಾದರೂ, ಅಂತ್ಯಕ್ಕೆ ಅದ್ಭುತವಾಗಿರಲಿದೆ. ಶಾಪಿಂಗ್ ಹೋಗುವುದು, ಒಂದು ಶುಭ ಸುದ್ದಿಯನ್ನು ಕೇಳುವಂಥ ದಿನ ಚೆನ್ನಾಗಿದೆ. ಇಂದು ಇನ್ನೊಬ್ಬರಿಗೆ ದಾನ ಮಾಡುತ್ತೀರಿ ಶುಭವಾಗಲಿದೆ.

ತುಲಾ– ಕೊಡುವುದು ತೆಗೆದುಕೊಳ್ಳುವ ವಿಚಾರದಲ್ಲಿ ಅಲ್ಪ ಲಾಭ,ಅಲ್ಪ ನಷ್ಟ ಎರಡನ್ನೂ ನೋಡುತ್ತೀರಿ. ಬೇವು-ಬೆಲ್ಲವನ್ನು ಸವಿಯುವ ದಿನ ನೋಡುತ್ತೀರಿ. ಬೆನ್ನು, ಮಂಡಿ, ಸೊಂಟ ನೋವು ಅಂತ ಸ್ವಲ್ಪ ಬಳಲುತ್ತೀರಿ ಜಾಗೃತ. ಆದರೆ ಇಂದು ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಎಂದು ಜಪ ಮಾಡಿಕೊಳ್ಳಿ ಶುಭವಾಗಲಿದೆ.

ವೃಶ್ಚಿಕ– ಇನ್ನು ಇಂದು ಏನೋ ಉಳಿ ಸುದ್ದಿ ನಿಮಗೆ ಕೇಳಲಿದೆ. ಇಂದು ಜೈ ಜೈ ವಿಠ್ಠಲಾ ಎಂದು ಜಪ ಮಾಡಿಕೊಳ್ಳಿ ಒಳ್ಳೆಯದಾಗಲಿದೆ. ಹತ್ತಿರದಲ್ಲಿ ವೇಣುಗೋಪಾಲ ಸ್ವಾಮಿಯ ಸನ್ನಿಧಿ ಇದ್ದರೆ, ಸಣ್ಣ ಕನಕಾಂಬರ ಮಾಲೆಯನ್ನು ಸಮರ್ಪಿಸಿ ಅದನ್ನು ಮನೆಯಲ್ಲಿ ತಂದು ಇಟ್ಟುಕೊಳ್ಳಿ ಬಹಳ ಒಳ್ಳೆಯದಾಗಲಿದೆ.

ಧನಸ್ಸು-ಸ್ತ್ರೀ ವಿಚಾರವಾಗಿ, ಮನೆಯ ವಿಚಾರವಾಗಿ, ಹಣಕಾಸು ವಿಚಾರ, ಸ್ವಂತ ಉದ್ಯೋಗ,ಸ್ವಂತ ವ್ಯಾಪಾರ, ಒಪ್ಪ ಓರಣ, ಆರ್ಕಿಟೆಕ್ಟ್ ಇಂಥ ಉದ್ಯೋಗ,ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಒಂದು ಒತ್ತಡ ಛಾಯೆ ಎದುರಾಗಲಿದೆ ಜಾಗೃತ. ಇಂದು ಯಾರಾದರೂ ಐದು ಜನ ಮುತ್ತೈದೆಯರಿಗೆ ಹಣ್ಣು ಹಂಪಲು ಏನಾದರೂ ಕೊಡಿ ಒಳ್ಳೆಯದಾಗಲಿದೆ.

ಮಕರ– ಇಂದು ನಿಮ್ಮ ದಿನ ಚೆನ್ನಾಗಿದೆ. ನಿಮಗೆ ಯಾವುದೇ ತೊಂದರೆಯೂ ಇಲ್ಲ! ಸ್ವಲ್ಪ ಪ್ರಯಾಣದಲ್ಲಿ ಬಳಲಿಕೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಸ್ವಲ್ಪ ನಿಮ್ಮ ಚಟಗಳನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಯಾರ ಮಾತಿಗೂ ದಾಸರಾಗಬೇಡಿ ಒಳ್ಳೆಯದಾಗಲಿ.

ಕುಂಭ-ಧರ್ಮಬದ್ಧವಾಗಿ ಯಾವ ಕೆಲಸವನ್ನು ಮಾಡುತ್ತೀರಿ. ಅದರಲ್ಲಿ ಪರಿಪೂರ್ಣ ಲಾಭವನ್ನು ನೋಡುತ್ತೀರಿ. ದೇವಸ್ಥಾನ ಕಾರ್ಯ, ದಾನ ಕಾರ್ಯ, ಯಾರಿಗೋ ನೆರಳು ಕೊಡಬೇಕು ಎಂಬ ವೈರಾಗ್ಯ ಭಾವ ನಿಮ್ಮಲಿದೆ. ನಿಮ್ಮ ಧರ್ಮ ಇವತ್ತಲ್ಲ ಅಂದರು ನಾಳೆ ಕಾಪಾಡೆ ಕಾಪಾಡುತ್ತದೆ ಶುಭವಾಗಲಿ.

ಮೀನ– ಇಂದು ಮನಸ್ಸಿಗೆ ಏನೋ ತಳಮಳ ಉಂಟಾಗಲಿದೆ. ಅರ್ಧ ತಲೆನೋವು, ಸೊಂಟ ನೋವು, ಕಿಡ್ನಿ ನೋವು ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದೀರಿ. ಆ ಸಮಸ್ಯೆಗಳು ಇಂದು ಇನ್ನಷ್ಟು ಉಲ್ಬಣವಾಗಲಿದೆ ಜಾಗ್ರತ ವಹಿಸಿ. ವಿಠ್ಠಲ ವಿಠ್ಠಲ ಪಾಂಡುರಂಗ ವಿಠ್ಠಲ ಎಂಬ ಜಪವನ್ನು ಒಂದು ಹತ್ತು ನಿಮಿಷ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here