ದಿನ ಭವಿಷ್ಯ 01 ಸೆಪ್ಟೆಂಬರ್ 2019

0
1042

ಷಷ್ಟಗ್ರಹ ಪ್ರಭಾವ ಯಾವ ಯಾವ ರಾಶಿಯ ಮೇಲೆ ಇದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲೂ ತಿಳಿಸಿಕೊಟ್ಟಿದ್ದಾರೆ. ಸಿಂಹ ರಾಶಿಗೆ ಆರೋಗ್ಯದ ವಿಚಾರದಲ್ಲೊಂದು ಬಿರುಗಾಳಿ ಏಳಲಿದೆ ಜಾಗೃತ. ಸ್ತ್ರೀ ವಿಚಾರ ಯಾವುದೋ ಭೂಮಿ ವಿಚಾರದಲ್ಲೊಂದು ಪೆಟ್ಟು, ಸರ್ಕಾರಿ ಕೆಲಸ, ಸರ್ಕಾರಿ ಟೆಂಡರ್, ಸರ್ಕಾರಿ ಹೋಟೆಲ್, ವ್ಯವಹಾರಗಳಲ್ಲಿ ಪೆಟ್ಟು ತಿನ್ನುತ್ತೀರಿ. ಆಟೋ ಮೊಬೈಲ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರು ಜಾಗರೂಕತೆ. ಸೊಂಟ ನೋವು, ಮಂಡಿ ನೋವು, ಕುತ್ತಿಗೆ ನೋವು, ಕಿಡ್ನಿ ಸಮಸ್ಯೆ, ಕಿಡ್ನಿ ಸ್ಟೋನ್, ಕ್ಯಾನ್ಸರ್ ಈ ತರಹದ ಸಮಸ್ಯೆ ನಿಮಗೆ ಅಥವಾ ನಿಮ್ಮ ಕುಟುಂಬದವರಲ್ಲಿ ಇದ್ದರೆ ಹೆಚ್ಚು ಜಾಗರೂಕತೆ. ಆದರೂ ಗುರು ದೃಷ್ಟಿ ನಿಮ್ಮ ಮೇಲೆ ಇರುವುದರಿಂದ ಮನೆಯಲ್ಲಿ ಕಳ್ಳತನ, ಪಾಲುದಾರಿಕೆ,ಹಣಕಾಸು ವಿಚಾರದಲ್ಲಿ ಒಂದು ಮೋಸ ಉಂಟಾಗುವ ಸಾಧ್ಯತೆಗಳು ಹೆಚ್ಚಿದೆ. ಆದರೂ ಭಗವಂತನ ಕೃಪೆ ನಿಮ್ಮ ಮೇಲೆ ಇರಲಿದೆ, ನಿಮ್ಮ ಜಾಗರೂಕತೆ ನಿಮ್ಮಲ್ಲಿ ಇರಲಿ.ಗೊತ್ತೋ ಗೊತ್ತಿಲ್ಲದೆಯೋ ಸ್ತ್ರೀ ವಿಚಾರದಿಂದ ಒಂದು ಅಪಮಾನ, ಅವಮಾನ ಉಂಟಾಗಲಿದೆ. ಆದಷ್ಟು ಇಂದು ದುರ್ಗಾ ಮಾತೆಯ ಜಪ ಮಾಡಿಕೊಳ್ಳಿ,ದುರ್ಗಾ ಆರಾಧನೆ ಮಾಡಿಕೊಳ್ಳಿ. ಒಂದಷ್ಟು ಮಂಗಳವಾರ ದಿನ ಬೆಲ್ಲದ ದೀಪವನ್ನು ಹಚ್ಚಿ ಬನ್ನಿ ,ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ ತುಳಸಿ ಅರ್ಚನೆ ಮಾಡಿಸಿ ಒಳ್ಳೆಯದಾಗಲಿದೆ. ವಯಸ್ಸಾದವರು, ವೃದ್ಧರು, ಅನಾಥಾಶ್ರಮಕ್ಕೆ ಹೋಗಿ ಊಟ, ಉಪಚಾರ ಮಾಡಿಸಿ ಅವರಿಂದ ಆಶೀರ್ವಾದ ಪಡೆದುಕೊಳ್ಳಿ ಬಹಳ ಒಳ್ಳೆಯದಾಗಲಿದೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಭಾನುವಾರ ಮನೆಯವರೊಂದಿಗೆ, ಕುಟುಂಬದವರೊಂದಿಗೆ ಕಾಲಕ್ಷೇಪ ಮಾಡುವ ಪರಿಸ್ಥಿತಿ. ಯಾವುದೋ ದೊಡ್ಡ ಜವಾಬ್ದಾರಿ ಸಿಗಲಿದೆ. ಖುಷಿಯ ದಿನ ಯೋಚಿಸಬೇಡಿ ಶುಭವಾಗಲಿದೆ.

ವೃಷಭ– ಸರಕಾರಿ ಮಟ್ಟದ ತುಂಬ ದೊಡ್ಡ ಜವಾಬ್ದಾರಿಯ ತೊಳಲಾಟ,ನಿಮ್ಮ ಕೈಯಲ್ಲಿ ನಿಭಾಯಿಸಲು ಆಗುವುದಿಲ್ಲ. ಆರೋಗ್ಯದಲ್ಲಿ ತುಸು ಏರುಪೇರು ಉಂಟಾಗಿದ್ದು, ವಾಹನ ಪ್ರಯಾಣದಲ್ಲಿ ಸ್ವಲ್ಪ ಜಾಗರೂಕತೆ. ಯಾರಿಗೂ ಹಣವನ್ನು ನೀಡಲು ಹೋಗಬೇಡಿ, ದೊಡ್ಡ ಸಂಕಷ್ಟಕ್ಕೆ ನೀವೇ ಸಿಲುಕುತ್ತೀರಿ ಎಚ್ಚರ.

ಮಿಥುನ– ಪರವಾಗಿಲ್ಲ, ಸಾಮಾಜಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ವ್ಯಾವಹಾರಿಕ ಸಮಸ್ಯೆ, ಸರ್ಕಾರ ಸಮಸ್ಯೆ, ಅಧಿಕಾರಿ ಸಮಸ್ಯೆಯಿಂದ ಬಳಲುತ್ತಿದ್ದರೆ ವಿಶ್ರಾಂತಿ ಪಡೆಯುವ ದಿನವಾಗಿರಲಿದೆ. ಸ್ವಲ್ಪ ಹೃದಯಕ್ಕೆ ಸಂಬಂಧಿಸಿದಂತೆ, ಕಿಡ್ನಿ ,ಯೂರಿನರಿ, ಲಿವರ್ ಸಮಸ್ಯೆ ಇಂಥ ಸಮಸ್ಯೆಯಿಂದ ಬಳಲುತ್ತಿದ್ದರೆ ಸಮಸ್ಯೆ ಉಲ್ಬಣಿಸಬಹುದು ಜಾಗೃತ.

ಕಟಕ– ಎಲ್ಲೋ ಒಂದು ವಿಘ್ನ, ತೊಡಕು, ಜಗಳ ಯಾರೋ ಸ್ತ್ರೀ ಇಲ್ಲ ತಂಗಿ, ಅಕ್ಕ ಇಂಥವರ ವಿಚಾರಗಳಲ್ಲಿ ಉಂಟಾಗುವ ಗಡುಸಾದ ಮಾತು ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತದೆ. ನಿಮ್ಮ ಕರ್ತವ್ಯವನ್ನು ನಿಭಾಯಿಸಿ ಕೊಂಡು ಹೋಗಿ ಶುಭವಾಗಲಿದೆ.

ಸಿಂಹ– ಪರವಾಗಿಲ್ಲ. ಇಂದು ನಿಮಗೆ ಸೋಮವಾರದ ರೀತಿಯೇ ಇರುತ್ತದೆ. ಮನೆಯವರ ಜವಾಬ್ದಾರಿ, ವ್ಯವಹಾರದ ಜವಾಬ್ದಾರಿಯನ್ನು ಚಾಚೂ ತಪ್ಪದೇ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗತಕ್ಕಂತ ದಿನ ಚೆನ್ನಾಗಿದೆ. ಗತ್ತು, ಗರ್ವ ಇಂದು ಒಂದು ರೀತಿಯ ಉತ್ಸಾಹದಲ್ಲಿ ಇರುತ್ತೀರಿ ಶುಭವಾಗಲಿದೆ.

ಕನ್ಯಾ– ಇಂದು ಯಾಕೋ ಸಿಡಿ ಸಿಡಿ ಎಂದು ಇರುತ್ತೀರಿ. ಮನಸ್ಸಿಗೆ ಏನೋ ಗಾಬರಿ, ತಂದೆ ಸಮಾನರಾದ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಖರ್ಚು ಮಾಡುತ್ತೀರಿ. ಹಬ್ಬದ ದಿನ ಅಲ್ಲವೇ ಸ್ವಲ್ಪ ಖರ್ಚು ವೆಚ್ಚ ಆಗಲಿದೆ ಯೋಚಿಸಬೇಡಿ ಶುಭವಾಗಲಿದೆ.

ತುಲಾ– ಜವಾಬ್ದಾರಿಯ ತಲೆನೋವು, ಹಣಕಾಸಿನ ವಿಚಾರದಲ್ಲಿ, ಒಡಹುಟ್ಟಿದವರ ವಿಚಾರದಲ್ಲಿ ತಲೆ ನೋವು, ಭೂಮಿ ವಿಚಾರದಲ್ಲಿ ತೀರಾ ತಲೆ ಕೆಡಿಸಿಕೊಳ್ಳುತ್ತೀರಿ. ಯೋಚಿಸಬೇಡಿ ಒಳ್ಳೆಯದಾಗಲಿದೆ.

ವೃಶ್ಚಿಕ– ಆಸ್ತಿ ,ಅಂತಸ್ತು ಪ್ರಾಪ್ತಿಯಾಗಲಿದೆ. ಸಾಮಾನ್ಯವಾಗಿದ್ದರೂ ಕೂಡ ಇಂದು ನಿಮ್ಮದು ಸಿಂಹ ಘರ್ಜನೆ. ಏನೋ ಒಂದು ಶಕ್ತಿ ನಿಮ್ಮಲ್ಲಿದೆ, ಆತ್ಮಶುದ್ಧಿ, ಆತ್ಮಕಾರಕ, ಬಂಗಾರ ಅಂತ ಹೇಳುತ್ತೀವಿ. ಗೌರಿ ಹಬ್ಬದ ಪೂರ್ಣ ಸಂಕೇತ ನಿಮ್ಮ ಮೇಲೆ ಇರಲಿದೆ ಶುಭವಾಗಲಿ.

ಧನಸ್ಸು– ವ್ಯವಹಾರ ನಿಮಿತ್ತ, ವ್ಯಾಪಾರ ನಿಮಿತ್ತ ಒಂದು ಶುಭ ಸುದ್ದಿ ಕೇಳುತ್ತೀರಿ. ತಂದೆಯಿಂದ ಸಹಕಾರ ಸಿಗಲಿದೆ. ಆರೋಗ್ಯದಲ್ಲಿ ಒಂದು ಏರುಪೇರು. ತಂದೆ ಸಮಾನರಾದ ಚಿಕ್ಕಪ್ಪ, ದೊಡ್ಡಪ್ಪ ಅವರ ಆರೋಗ್ಯದಲ್ಲಿ ಒಂದು ಸಮಸ್ಯೆ ಕಾಡಲಿದೆ ಜಾಗೃತ.

ಮಕರ– ಕೆಲಸದ ವಿರುದ್ಧವಾಗಿ ಹೋಗುವುದು, ಯಾವುದೋ ಒಂದು ತಲೆನೋವು ನಿಮಗೆ ಕಾಡಲಿದೆ. ಗ್ಯಾರಂಟಿ ಇಂದು ಮೈಗ್ರೇನ್, ಉಷ್ಣ ಬಾಧೆ, ಮೂಗಿನಲ್ಲಿ ರಕ್ತ ಸೋರಿಕೆ, ಎಡಗಣ್ಣಿನಲ್ಲಿ ಒಂದು ಸಮಸ್ಯೆ, ಕಣ್ಣಿನ ಸಮಸ್ಯೆ, ತಲೆಗೆ ಸಂಬಂಧಿಸಿದ ಕಾಯಿಲೆಗಳು ಉಲ್ಬಣಿಸುವುದು ನಿಶ್ಚಿತ ಎಚ್ಚರಿಕೆ ವಹಿಸಿ ಶುಭವಾಗಲಿದೆ.

ಕುಂಭ– ತುಂಬಾ ಹಠವಾದಿ, ನಾನು ಹೇಳಿದ್ದೇ ಸರಿ, ನಾನು ಮಾಡಿದ್ದೇ ಸರಿ ಅನ್ನುವಂಥ ಮಾತು. ನಾನು ಹೇಳಿದ್ದೇ ಸರಿ ಏನುತ್ತಿರಿ. ಇನ್ನೊಬ್ಬರ ಮಾತಿಗೆ ನೀವು ಬೆಲೆ ಕೊಡುವುದಿಲ್ಲ, ಇಂಥ ಪರಿಸ್ಥಿತಿಯನ್ನು ಇಂದು ನೋಡುತ್ತೀರಿ. ಇನ್ನೊಬ್ಬರ ಬಳಿ ಕ್ಷಮೆ ಕೇಳುವುದರಲ್ಲಿ ನೀವೇನು ಚಿಕ್ಕವರಾಗುವುದಿಲ್ಲ ಒಂದು ಚಿಕ್ಕ ಕ್ಷಮೆ ಕೇಳಿ ಒಳ್ಳೆಯದಾಗಲಿದೆ.

ಮೀನ– ಹೊಟ್ಟೆ ಸಮಸ್ಯೆ, ಅಲ್ಸರ್, ಅಪೆಂಡಿಕ್ಸ್, ಅಸಿಡಿಟಿ ಪ್ರಾಬ್ಲಂ ,ಪಿತ್ತ ಜನಕ ಸಮಸ್ಯೆ ,ಸೋರಿಯಾಸೀಸ್, ಚರ್ಮ ಸಮಸ್ಯೆ, ಉದ್ವೇಗಕ್ಕೊಳಗಾಗಿ ಯಾರ ಮೇಲಾದರೂ ಜಗಳಕ್ಕೆ ಹೋಗುತ್ತೀರಿ. ಆದಷ್ಟು ಸ್ವಲ್ಪ ಜೇನನ್ನು ಸೇವಿಸಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here