ಷಷ್ಠಗ್ರಹ ಕೂಟದ ಪ್ರಭಾವ ಈ ದಿನ ಮಕರ ರಾಶಿಯವರಿಗೆ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ.
ಮಕರ ರಾಶಿಯವರಿಗೆ ಇಂದು ವಿಚಿತ್ರ ಬದಲಾವಣೆಗಳು ಉಂಟಾಗಲಿದೆ. ಅರೆಸ್ಟ್ ವಾರೆಂಟ್ ಏನೋ ಒಂದು ದೊಡ್ಡ ಮಟ್ಟದಲ್ಲಿ ಕಳೆದುಕೊಳ್ಳುತ್ತೀರಿ ಅಥವಾ ಪಡೆದುಕೊಳ್ಳುತ್ತೀರಿ ಇಂಥ ಸಂಗತಿಗಳು ಉಂಟಾಗಲಿದೆ. ಭೂಮಿ, ಮನೆ, ಆಳು- ಕಾಳು, ವ್ಯವಹಾರ,ಕಲಾವಿದರಾಗಿದ್ದಿರಿ, ಹಣ ಹೂಡಿಕೆ ಮಾಡಬೇಕು, ಟ್ರಾವೆಲ್ ಟೂರ್ಸ್,ಮೊಬೈಲ್, ಬಟ್ಟೆ, ಗಾರ್ಮೆಂಟ್ಸ್, ವಿಮಾನಯಾನ ಇಂಥ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಾಕಷ್ಟು ಗಂಭೀರ ಪರಿಸ್ಥಿತಿಗಳು ಎದುರಾಗಲಿದೆ ಜಾಗೃತ. ನೀವು ತೆಗೆದುಕೊಳ್ಳುವ ಒಂದು ಬಹುದೊಡ್ಡ ನಿರ್ಧಾರಗಳಲ್ಲಿ ಎಡವಟ್ಟು ಆಗಲಿದೆ. ದೊಡ್ಡ ಹೋಟೆಲ್ ಉದ್ಯಮಿ ಆಗಿದ್ದಿರಿ ಸಾಕಷ್ಟು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ. ಭೂಮಿ, ರಕ್ಷಣಾ ಇಲಾಖೆ, ಪೊಲೀಸ್ ಇಲಾಖೆ, ಗೃಹ ಇಲಾಖೆ ಇಂಥ ದೊಡ್ಡ ಅಧಿಕ್ಕಾರ ವರ್ಗದಲ್ಲಿ ಇರುವವರಿಗೆ ಅರೆಸ್ಟ್ ಗ್ಯಾರಂಟಿ, ಜೈಲುಪಾಲು ಗ್ಯಾರಂಟಿ. ಮನೆಯಲ್ಲಿ ಹೆಚ್ಚು ಬಂಗಾರಗಳನ್ನು ಇಡಬೇಡಿ ಜಾಗೃತರಾಗಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಸ್ವಲ್ಪ ಮಕ್ಕಳು, ಮನೆ, ಹಬ್ಬ ಹರಿದಿನ, ಪೂಜೆ ಅದಕ್ಕೆ ತಯಾರಿ, ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸ್ವಲ್ಪ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಯಾವ ತೊಂದರೆಯೂ ಇಲ್ಲ ಒಳ್ಳೆಯ ಕಾರ್ಯಕ್ಕಾಗಿ ಖರ್ಚು ಮಾಡುತ್ತಿದ್ದೀರಿ ಯೋಚಿಸಬೇಡಿ ಶುಭವಾಗಲಿದೆ.
ವೃಷಭ -ತಾಯಿಯ ಆರೋಗ್ಯ, ತಂದೆಯ ಆರೋಗ್ಯ,ಅಣ್ಣನ ಆರೋಗ್ಯ, ತಂಗಿ ಆರೋಗ್ಯ, ಸಂಗಾತಿಯ ಆರೋಗ್ಯ ಅವರ ವಿಚಾರದಲ್ಲಿ ಒಂದು ದೊಡ್ಡ ತೊಳಲಾಟ ಉಂಟಾಗಲಿದ್ದು, ದಿನದ ಅಂತ್ಯಕ್ಕೆ ಒಂದು ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ವಾಹನ ಯೋಗ ಉಂಟು, ಹಣ ತೆಗೆದುಕೊಳ್ಳುವುದು, ಭೂಮಿ ತೆಗೆದುಕೊಳ್ಳುವುದು, ಬಂಗಾರ ತೆಗೆದುಕೊಳ್ಳುವ ಸುಯೋಗ ಇದೇ ಶುಭವಾಗಲಿ.
ಮಿಥುನ– ನಿಮ್ಮವರೆ, ಹತ್ತಿರದವರಿಂದಲೇ ಒಂದು ಜಟಾಪಟಿ ಉಂಟಾಗಲಿದೆ. ಒಗ್ಗಟ್ಟು ಕುಟುಂಬ ಅಲ್ಲೊಂದು ಹುಳಿ ಹಿಂಡತಕ್ಕಂತೆ ಪ್ರಸಂಗಗಳು ಎದುರಾಗಲಿವೆ ಜಾಗೃತ. ಆದರೆ ಭಗವಂತ ನಿಮ್ಮ ಕೈ ಹಿಡಿಯುತ್ತಾನೆ ಯೋಚಿಸಬೇಡಿ ಶುಭವಾಗಲಿದೆ.
ಕಟಕ– ಕುಟುಂಬದಲ್ಲೊಂದು ಅಲ್ಲೋಲ-ಕಲ್ಲೋಲ ಸನ್ನಿವೇಶಗಳು ಉಂಟಾಗಲಿದೆ. ಮೊದಲಿನಿಂದಲೂ ಗಣೇಶ ಕೂರಿಸುವ ಕಾರ್ಯ ಮಾಡಿಕೊಂಡು ಬಂದಿದ್ದರೆ ಆಚಾರ್ಯರನ್ನು ಕೇಳಿ ಮುಂದುವರಿಸಿ ಇಲ್ಲವಾದರೆ ಮಾಡಬೇಡಿ. ಆದರೆ ಇಂದು ಎಲ್ಲೋ ಹಣವನ್ನು ಖರ್ಚು ಮಾಡುವ ಬದಲು ಅತಿವೃಷ್ಟಿಯಿಂದ ಬಳಲುತ್ತಿರುವವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣವನ್ನು ನೀಡಿ ಸಹಾಯ ಮಾಡಿ ಒಳ್ಳೆಯದಾಗಲಿದೆ.

ಸಿಂಹ– ದಿನದ ಆರಂಭ ಸ್ವಲ್ಪ ತಳಮಳ, ಒದ್ದಾಟ ಆದರೂ ನಿಮ್ಮ ತಯಾರಿಯಲ್ಲಿ ಹಿರಿಯರ ಆಗಮನ, ಆಕಸ್ಮಿಕ ದೈವ ದರ್ಶನ, ಗುರು ದರ್ಶನ, ಯಾವುದೋ ಒಂದು ಶುಭ ಕಾರ್ಯದ ಸುದ್ದಿ ನಿಮಗೆ ಕೇಳುತ್ತದೆ. ಒಂದು ಒಳ್ಳೆಯ ಮಾತು ನಿಮ್ಮ ಕಿವಿಗೆ ಬೀಳುತ್ತದೆ ಯಾವ ತೊಂದರೆಯೂ ಇಲ್ಲ ಶುಭವಾಗಲಿದೆ.
ಕನ್ಯಾ– ಹಬ್ಬದ ಸಡಗರ, ಸಂಭ್ರಮ, ಅನ್ನೋ ಒಂದು ತಳಮಳ ಗಾಬರಿ ಉಂಟಾಗಲಿದೆ. ಅಕ್ಕನ ಕುಟುಂಬ, ಅಣ್ಣನ ಕುಟುಂಬ ವಿಚಾರದಲ್ಲಿ ಒಂದು ಲೋಪ. ಅಕ್ಕನ ಮನೆ, ತಂಗಿಯ ಮನೆ ವಿಚಾರದಲ್ಲಿ ಒಂದು ನೋವಿದೆ ಆದರು ನಿಮ್ಮ ಕರ್ತವ್ಯ ನೀವು ಮಾಡಿ ಒಳ್ಳೆಯದಾಗಲಿದೆ.
ತುಲಾ– ದಿನದಾರಂಭ ಸ್ವಲ್ಪ ವೈರಾಗ್ಯವಾದರೂ ದಿನ ಅಂತ್ಯಕ್ಕೆ ಒಂದು ಖುಷಿ ದೊರೆಯಲಿದೆ. ನಾಳೆ ಹಬ್ಬ ಎಂಬ ಖುಷಿ, ಸಡಗರ ನಿಮಗೆ ತುಂಬಿ ತುಳುಕುತ್ತಿರುತ್ತದೆ. ಆದರೂ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು ಶುಭವಾಗಲಿ.

ವೃಶ್ಚಿಕ– ವ್ಯವಹಾರ, ವ್ಯಾಪಾರದಲ್ಲಿ ಚೆನ್ನಾಗಿದೆ ಯಾವ ತೊಂದರೆಯೂ ಇಲ್ಲ.ಸಾಂಕ್ರಾಮಿಕ ವಿಚಾರದಲ್ಲಿ ಒಂದು ತೊಳಲಾಟ, ಒದ್ದಾಟ ಉಂಟಾಗಲಿದೆ. ಹಳೆಯ ಘಟನೆ ಯಾವುದೋ ಒಂದು, ಎಲ್ಲೋ ಮಾತನಾಡಿರುವುದನ್ನು ನಿಮ್ಮ ತಲೆಗೆ ಹುಳ ಬಿಟ್ಟುಕೊಂಡು ಒದ್ದಾಡುವ ಪರಿಸ್ಥಿತಿ ನೀವೇ ತಂದಿಟ್ಟು ಕೊಳ್ಳುತ್ತೀರಿ ಜಾಗೃತ.
ಧನಸ್ಸು-ಪರವಾಗಿಲ್ಲ ನಿಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಿ. ತಂದೆ ಆರೋಗ್ಯ, ತಾಯಿ ಆರೋಗ್ಯ, ಮನೆಯ ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ತಲ್ಲಣ ಉಂಟಾಗಲಿದೆ. ಸ್ತ್ರೀಯರ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿ ಶುಭವಾಗಲಿ.
ಮಕರ-ತುಂಬಾ ದೊಡ್ಡ ರಿಸ್ಕ್ ತೆಗೆದುಕೊಳ್ಳಬೇಡಿ. ಯಾವುದೋ ಬಿಸಿನೆಸ್ ಇನ್ವೆಸ್ಟ್ ಮಾಡಬೇಕೆಂಬ ಯೋಚನೆ ಇಟ್ಟುಕೊಂಡಿದ್ದೀರಿ ಜಾಗೃತ. ದೂರ ಪ್ರಯಾಣ, ಮಾತಿನಲ್ಲಿ ಚಂಚಲತೆ, ದಿಢೀರ್ ನಿರ್ಧಾರ ಕೈಗೊಂಡು ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗೃತ ಶುಭವಾಗಲಿ.

ಕುಂಭ-ಭಗವಾಧ್ಯಾನ, ದೈವವೇ ಸತ್ಯ ಎಂಬುದನ್ನು ನಂಬಿಕೊಂಡು ಹೆಜ್ಜೆ ಇಡಿ. ಸಮಯ ಮೀರಿದ ಮೇಲೆ ಯೋಚನೆ ಮಾಡಿ ಏನೂ ಪ್ರಯೋಜನವಿಲ್ಲ ಇರುವ ಸಮಯ, ಇರುವ ಕ್ಷಣದಲ್ಲಿ ಯೋಚನೆ ಮಾಡಿ ಹೆಜ್ಜೆ ಇಡಿ. ಹಲವರಲ್ಲಿ ವಿಚಾರಿಸಿ ಯೋಚನೆ ಮಾಡಿ ದಿಟ್ಟ ಹೆಜ್ಜೆ ಇಡಿ ಒಳ್ಳೆಯದಾಗಲಿದೆ.
ಮೀನ– ಪರವಾಗಿಲ್ಲ. ಮನೆಯಲ್ಲಿ ತುಂಬಾ ದಿನಗಳ ನಂತರ ಶುಭ ಛಾಯೆ ಮೂಡಲಿದೆ. ಖರ್ಚು ಮಾಡಬೇಕೆಂಬ ಯೋಚನೆ ಮಾಡುತ್ತೀರಿ. ಅಧಿಕಾರ ಸ್ಥಾನ ನಿಮ್ಮದಾಗಲಿದೆ ಯೋಚಿಸಬೇಡಿ. ಗಣಪತಿ ಅನುಷ್ಠಾನ ಪೂಜೆ ಮಾಡಿ ಒಳ್ಳೆಯದಾಗಲಿದೆ.