ದಿನ ಭವಿಷ್ಯ 29 ಆಗಸ್ಟ್ 2019

0
885

ಧನಸ್ಸು ರಾಶಿಯವರಿಗೆ ಷಷ್ಠ ಗ್ರಹದ ಪರಿಣಾಮ ಹೇಗಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ.
ನಿಮಗೆ ಯೋಗಕಾರಕ ಸೂರ್ಯ ದೇವ. ಗ್ಯಾರಂಟಿ ನೀವೇನಾದರೂ ಅಧಿಕಾರಿಯಾಗಿದ್ದರೆ, ನಿಮಗೆ ಗ್ರಹಣ ಏರಲಿದ್ದಾನೆ. ತುಂಬಾ ದೊಡ್ಡ ದೊರೆಯ ಸ್ಥಾನವನ್ನು ಅಲಂಕರಿಸಿರುವ ವ್ಯಕ್ತಿಗಳ ಮೇಲೆ ಎಲ್ಲರ ದೃಷ್ಟಿ ಹೆಚ್ಚಿರುತ್ತದೆ. ಭಗವಂತ ನಿಮಗೆ ಒಳ್ಳೆಯದು ಮಾಡಿದ್ದಾನೆ. ನಿಮಗೆ ಅಧಿಕಾರ ಕೊಟ್ಟಿದ್ದಾನೆ ಎಂದರೆ ಅದನ್ನು ಉಪಯೋಗಿಸಿ ಇನ್ನೊಬ್ಬರಿಗೆ ಸಹಾಯವಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕು. ಅದರ ಬದಲು ಇನ್ನೊಬ್ಬರಿಗೆ ತೊಂದರೆಯನ್ನು ನೀಡಬಾರದು. ಅಹಂಕಾರದಲ್ಲಿ ಮೆರೆಯಬಾರದು. ಧನಸ್ಸು ರಾಶಿಯವರು ಇನ್ನೊಬ್ಬರಿಗೆ ಯಾವುದೋ ಸಮಯದಲ್ಲಿ ಕಾಲೆಳೆದಿದ್ದೀರ ಇಂದು ಅದೆಲ್ಲ ನಿಮಗೆ ಕಾಡಲಿದೆ ಜಾಗೃತ. ಅಧಿಕಾರ ಸ್ಥಾನ, ದೊರೆ ಸ್ಥಾನ ಪಡೆದಿದ್ದರೆ ನಿಮಗೆ ಇಂದು ಒಂದು ಕುತ್ತು ಎದುರಾಗಲಿದೆ, ಮುಳ್ಳಿನ ಕಿರೀಟವಾಗಿ ನಿಮ್ಮ ಮೇಲೆ ಕಾಡಲಿದೆ ಎಚ್ಚರಿಕೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಮನೆಯವರು, ಕುಟುಂಬದವರು, ತಾಯಿಯವರ ಆರೋಗ್ಯ, ಹಣಕಾಸು, ಲೆಕ್ಕಾಚಾರ ಇವುಗಳ ವಿಚಾರದಲ್ಲಿ ಸ್ವಲ್ಪ ತೊಳಲಾಟ ಉಂಟಾಗುತ್ತದೆ. ಮಕ್ಕಳ ವಿಚಾರದಲ್ಲಿ ಒಂದು ರೀತಿ ಎಡವುತ್ತೀರಿ ಜಾಗೃತ. ಆದಷ್ಟು ಇಂದು ಸುಬ್ರಹ್ಮಣ್ಯ ದೇವಾಲಯಕ್ಕೆ ಒಂದು ೧/೪ ಕೇಜಿ ಬೆಲ್ಲವನ್ನು ಅರ್ಪಿಸಿ ಒಳ್ಳೆಯದಾಗಲಿದೆ.

ವೃಷಭ-ಪರವಾಗಿಲ್ಲ, ಬುದ್ಧಿ, ಮೇದಸ್ಸು, ಯುಕ್ತಿ, ಶಕ್ತಿ ಎಲ್ಲವನ್ನೂ ಉಪಯೋಗಿಸಿ ಮಾಡುವಂಥ ಕೆಲಸದಿಂದ ಅದ್ಭುತ ಪ್ರಗತಿಯನ್ನು ನೋಡುತ್ತೀರಿ. ಕಡೇ ಹಂತದಲ್ಲಿ ಒಂದು ರೀತಿಯ ಕೈಜಾರಿ ಎಡವಟ್ಟು ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಲಿದೆ ಜಾಗೃತ. ಶ್ರೀರಾಮ್ ಜೈರಾಮ್ ಎಂದು ಭಗವಂತನ ನಾಮವನ್ನು ಜಪಿಸಿ ಒಳ್ಳೆಯದಾಗಲಿದೆ.

ಮಿಥುನ– ಇಂದು ನಿಮ್ಮ ದಿನ ಪರವಾಗಿಲ್ಲ. ಆರೋಗ್ಯ, ಕೆಲಸ, ಕಾರ್ಯಗಳಲ್ಲಿ ಒಂದು ರೀತಿಯ ಚೇತರಿಕೆ ತೃಪ್ತಿದಾಯಕವಾಗಿರಲಿದೆ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಆಗಬಹುದು ತೊಂದರೆ ಇರಬಹುದು. ಯಾವುದಕ್ಕೂ ವೈದ್ಯರನ್ನು ಒಮ್ಮೆ ಭೇಟಿ ಮಾಡಿ ಒಳ್ಳೆಯದಾಗಲಿದೆ.

ಕಟಕ– ನೀವು ನೆಮ್ಮದಿಯಾಗಿರುವುದಿಲ್ಲ, ಇನ್ನೊಬ್ಬರನ್ನು ನೆಮ್ಮದಿಯಾಗಿರಲು ಬಿಡುವುದಿಲ್ಲ. ಈ ರೀತಿಯ ಪ್ರಸಂಗಗಳನ್ನು ನೀವು ಮಾಡುತ್ತೀರಿ. ಹತ್ತಿರದಲ್ಲಿ ನಾಗರಕಟ್ಟೆ ಇದ್ದರೆ ಗಂಧಾಭಿಷೇಕ ಮಾಡಿಸಿ, ಮಾಡಿದ ತೀರ್ಥವನ್ನು ಸೇವನೆ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ಸಿಂಹ– ಅದಲು- ಬದಲು ಯಾವ ಕೆಲಸ ಮಾಡಬೇಕು ಅದನ್ನು ಬಿಟ್ಟು ಬೇರೆ ಎಲ್ಲ ಮಾಡುತ್ತಿದ್ದೀರಿ. ಇದರಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ಗಮ್ಯವೂ ಹೀಗೆ ಇರಲಿದೆ. ಎಲ್ಲವೂ ಉಲ್ಟಾ-ಪಲ್ಟಾ ಮಾಡಲಿದ್ದೀರಿ. ಮನೆಯಲ್ಲಿ ಬಾಲಾಜಿಗೆ ಒಂದು ಸಣ್ಣ ಅರ್ಚನೆ, ಸಂಕಲ್ಪ ಪೂಜೆಯನ್ನು ಮಾಡಿ ಒಳ್ಳೆಯದಾಗಲಿದೆ.

ಕನ್ಯಾ– ಬರುತ್ತೆ ಆದರೆ ಎಲ್ಲೋ ತ್ಯಾಗ, ದಾನ ಮಾಡುವ ಬುದ್ಧಿ ನಿಮಗೆ ಇರಲಿದೆ. ಹೌದು, ಸರ್ಕಾರಿ ಕೆಲಸದಲ್ಲಿ ತೊಳಲಾಟ ಹೆಚ್ಚಾಗುತ್ತದೆ ಜಾಗೃತ. ಯಾವ ಸಮಸ್ಯೆ ಬಂದರೂ ಅದರಿಂದ ಒಳ್ಳೆಯದಾಗಲಿದೆ. ಚಿಕ್ಕ, ಸಣ್ಣಪುಟ್ಟ ತೊಂದರೆಗಳಿಗೆ ಹೆದರಬೇಡಿ ಧೈರ್ಯದಿಂದ ಮುನ್ನುಗ್ಗಿ ಶುಭವಾಗಲಿದೆ.

ತುಲಾ– ಪರವಾಗಿಲ್ಲ. ಇಂದು ನಿಮ್ಮ ದಿನ ಚೆನ್ನಾಗಿದೆ. ಕಸ್ಟಮರ್ ಸರ್ವೀಸ್, ಟೆಕ್ನಿಕಲ್ ಲೈನ್, ಲಾಯರ್, ಅಡ್ವೈಸರ್, ಕಮಿಷನರ್, ಮಾತಿನ ಮೂಲಕ ವ್ಯವಹಾರ, ಧಾರ್ಮಿಕ ಕೆಲಸಗಳು, ಪುರೋಹಿತರು ಈ ತರಹದ ಕೆಲಸ, ಕಾರ್ಯಗಳನ್ನು ಮಾಡುವ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವ ಒಳ್ಳೆಯ ಅನುಕೂಲವಾಗುವಂತ ದಿನ ಶುಭವಾಗಲಿದೆ.

ವೃಶ್ಚಿಕ– ವ್ಯವಹಾರ ವಿಚಾರಗಳಲ್ಲಿ ಯಾವುದೋ ಗಾಯ ಮಾಡಿಕೊಳ್ಳುತ್ತೀರಿ. ನೀವು ಇನ್ನೊಬ್ಬರಿಗೆ ಗಾಯ ಮಾಡುತ್ತೀರಿ ಅಥವಾ ನಿಮಗೆ ನೀವೇ ಗಾಯ ಮಾಡಿಕೊಳ್ಳುತ್ತೀರಿ. ಇಂತಹ ಪರಿಸ್ಥಿತಿ ನಿಮಗೆ ಎದುರಾಗಲಿದೆ. ಪೈಲ್ಸ್, ಪಿಸ್ತೂಲ ,ಮೋಷನ್, ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ನಿಮಗೆ ಕಾಡಲಿದೆ ಜಾಗೃತ. ಹೆಚ್ಚು ಮಡಿಕೆಯ ನೀರನ್ನು ಕುಡಿಯಿರಿ ಬಹಳ ಒಳ್ಳೆಯದಾಗಲಿದೆ.

ಧನಸ್ಸು– ಸ್ವಲ್ಪ ವ್ಯವಹಾರಗಳಲ್ಲಿ ಶಾರ್ಟ್ ಕಟ್ ನೋಡುತ್ತೀರಿ. ಸ್ವಲ್ಪ ಸಮಯದಲ್ಲಿ ಹೆಚ್ಚು ಹಣವನ್ನು ದುಡಿಯಬೇಕು ಎಂಬ ಅಡ್ಡದಾರಿ ಯೋಚನೆ ಮಾಡುತ್ತೀರಿ ಅದು ಒಳ್ಳೆಯದಲ್ಲ. ಅಡ್ಡದಾರಿ ಸಂಪಾದನೆ ಮಾಡಿದವರು ಇಂದು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ನೀವು ಗಮನಿಸಬೇಕಾಗಿದೆ. ನ್ಯಾಯ ಮಾರ್ಗವನ್ನು ಅನುಸರಿಸಿ ಒಳ್ಳೆಯದಾಗಲಿದೆ.

ಮಕರ– ಪರವಾಗಿಲ್ಲ. ಚಾಕುಚಕ್ಯತೆ ,ಬುದ್ಧಿಶಕ್ತಿ ,ಮೇಧಾ ಶಕ್ತಿ, ಉಪಯೋಗಿಸಿ ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲಿ ಅದ್ಭುತ ಪ್ರಗತಿ ಕಾಣುತ್ತೀರಿ. ನೀವೆಷ್ಟು ಶ್ರಮ ಪಟ್ಟಿದ್ದೀರಿ ಅದಕ್ಕೆ ತಕ್ಕಂತಹ ಪ್ರತಿಫಲ ನಿಮಗೆ ದೊರೆಯಲಿದೆ ಶುಭವಾಗಲಿ.

ಕುಂಭ-ಟೆಕ್ನಿಕಲ್ ಲೈನ್, ಅಡ್ವಟೈಸಿಂಗ್ ಏಜೆಂಟ್, ಇವೆಂಟ್ ಏಜೆನ್ಸಿ, ಮಾರ್ಕೆಟಿಂಗ್ ಸೇಲ್ಸ್ ಇಂಥ ಒಂದು ವ್ಯವಹಾರ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ಒಂದು ಪ್ರಗತಿ ಕಾಣುವಂತಹ ದಿನ ಚೆನ್ನಾಗಿದೆ.

ಮೀನ– ಇಂದು ನೀವು ತೀರ ಲೆಕ್ಕಾಚಾರ ಮಾಡುತ್ತೀರಿ. ತುಂಬಾ ಖರ್ಚು ಅಂತ ಯೋಚಿಸುತ್ತೀರಿ,ಮನೆಯವರಿಗೆ ಕುಟುಂಬಕ್ಕೋಸ್ಕರ, ಮಕ್ಕಳಿಗೋಸ್ಕರ, ಹಬ್ಬಕ್ಕೋ ಸ್ಕರ, ಖರ್ಚು ಮಾಡುತ್ತೀರಿ. ನೀವು ಮಾಡುತ್ತಿರುವ ಖರ್ಚು ಒಳ್ಳೆಯ ಕೆಲಸಕ್ಕಾಗಿ ಮಾಡುತ್ತಿದ್ದೀರಿ, ಯಾವ ಯೋಚನೆಯೂ ಬೇಡ ಶುಭವಾಗಲಿದೆ.

LEAVE A REPLY

Please enter your comment!
Please enter your name here