ದಿನ ಭವಿಷ್ಯ 31 ಆಗಸ್ಟ್ 2019

0
1272

ಷಷ್ಠಗ್ರಹ ಕೂಟದ ಪ್ರಭಾವ ಇಂದು ಕುಂಭ ರಾಶಿಯವರಿಗೆ ಹೇಗಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿಯವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ.
ಕುಂಭ ರಾಶಿಯವರಿಗೆ ಇಂದು ತೊಳಲಾಟ ಹೆಚ್ಚು ಉಂಟಾಗಲಿದೆ. ಇಂದು ಏನು ಮಾತನಾಡಲಿಕ್ಕೆ ಹೋಗಬೇಡಿ, ಯಾವ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಅದರಲ್ಲೂ ರಾಜಕೀಯದಲ್ಲಿ ಇದ್ದೀರಿ. ತುಂಬ ದೊಡ್ಡ ಅಧಿಕಾರದಲ್ಲಿ ಇದ್ದರೆ, ದೊಡ್ಡ ಎಂಟರ್ಟೈನ್ಮೆಂಟ್, ಆಟೋ ಮೊಬೈಲ್ ಇಂಡಸ್ಟ್ರಿ, ಲ್ಯಾಂಡ್ ಡೆವಲಪರ್ಸ್, ಥಿಯೇಟರ್, ಕ್ಲಬ್ ,ರೆಸ್ಟೋರೆಂಟ್ ,ಐಎಎಸ್ ಆಫೀಸರ್ ದಿಢೀರ್ ಬದಲಾವಣೆ ಜೊತೆಗಾರರ ಸ್ಥಾನ ಬದಲಾವಣೆ, ನಿಮ್ಮ ಜೊತೆಯಲ್ಲಿದ್ದವರೆ ಕೈಬಿಟ್ಟು ಹೋಗುತ್ತಾರೆ.ಅಂತ ಪರಿಸ್ಥಿತಿ ಎದುರಾಗಲಿದೆ. ಭೂಮಿ ವಿಚಾರದಲ್ಲಿ, ಪಾಲುದಾರಿಕೆ ವಿಚಾರದಲ್ಲಿ , ಬಹುದೊಡ್ಡ ಲ್ಯಾಂಡ್ಗಳು, ದೊಡ್ಡ ಹೂಡಿಕೆ ವಿಚಾರದಲ್ಲಿ, ಮಕ್ಕಳ ವಿಚಾರದಲ್ಲಿ ಒಂದು ನೋವಿದೆ. ಚಿಕ್ಕ ಮಕ್ಕಳು, ವಾಹನ ವಿಚಾರಗಳಲ್ಲಿ ಒಂದು ಸಂಕಷ್ಟವನ್ನು ನೋಡುವಂಥ ಪರಿಸ್ಥಿತಿ ಎದುರಾಗಲಿದೆ. ಯಾವುದೊ ಸರ್ಪ ಪೂಜೆ ಅರ್ಧದಲ್ಲೇ ನಿಂತು ಹೋಗಿದೆ. ಯಾವುದೊ ಸರ್ಪ ಕ್ಷೇತ್ರದಲ್ಲಿ ಸಂಕಲ್ಪದಲ್ಲೊಂದು ವಿಘ್ನವಿದೆ. ವಿಚಿತ್ರವಾದ ಘಟನೆಗಳನ್ನು ನೋಡುತ್ತಿದ್ದೀರಿ ಅದರ ಬಗ್ಗೆ ಯೋಚನೆ ಮಾಡಿ. ನವೆಂಬರ್ ೦೫ ರವರೆಗೂ ನಿಮ್ಮ ಮಾತು ಯೋಚನೆಗಳಲ್ಲಿ ಜಾಗೃತರಾಗಿ ಹೆಜ್ಜೆ ಇಡಬೇಕು. ವಿಘ್ನ, ವಿಳಂಬ ಭೂಮಿ ಕಾರ್ಯದಲ್ಲಿ ತೊಂದರೆ ಉಂಟಾಗಬಹುದು. ಅನೇಕರಲ್ಲಿ ಕೇಳಿ ವಿಚಾರಿಸಿ ಅಂತರ ಹೆಜ್ಜೆ ಇಡುವುದು ಬಹಳ ಒಳ್ಳೆಯದು.

ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ – ಕೊಡುವ, ತೆಗೆದುಕೊಳ್ಳುವ ವಿಚಾರದಲ್ಲಿ, ಸಂಗಾತಿ ವಿಚಾರದಲ್ಲಿ ವಿಶೇಷ. ಹೆಂಡತಿಯ ಮನೆಯವರ ಜೊತೆ, ಗಂಡನ ಮನೆಯವರ ಜೊತೆ ಸೇರಿಕೊಂಡು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಅದ್ಭುತ ಪ್ರಗತಿ ನೋಡುವಂತಹ ದಿನ ಚೆನ್ನಾಗಿದೆ. ವಾರಾಂತ್ಯ ಬೇರೆ, ಮನೆಯಲ್ಲಿ ಸಂಭ್ರಮದ ಛಾಯೆ ಮೂಡಿದೆ. ಅತಿಥಿಗಳ ಆಗಮನ, ಹಬ್ಬದ ವಾತಾವರಣ ಸಡಗರ ತುಂಬಿ ತುಳುಕಾಡುತ್ತಿದೆ ಒಳ್ಳೆಯದಾಗಲಿ.

ವೃಷಭ-ವಾಹನ ಯೋಗ, ಭೂಮಿ ಯೋಗ, ಮನೆ ಯೋಗ, ಗೌರಿ- ಗಣೇಶ ಹಬ್ಬ ಇಂದೇ ನಿಮಗೆ ಆರಂಭ ಅಂಥ ಸಂಭ್ರಮವನ್ನು ಕಾಣುತ್ತೀರಿ. ಮನೆಯಲ್ಲಿ ಸ್ತ್ರೀ ಆಗಮನ, ಮನೆಯಲ್ಲಿ ತುಂಬಾ ದಿನದ ನಂತರ ಮಕ್ಕಳ ಮದುವೆ ಕಾರ್ಯ, ಮುಂಜಿ ಕಾರ್ಯಗಳನ್ನು ನೋಡತಕ್ಕಂತ ಶುಭ ದಿನವಾಗಲಿದೆ.

ಮಿಥುನ– ಸ್ತ್ರೀ ವಿಚಾರದಲ್ಲಿ ಸಂತಸ ತುಂಬಾ ದಿನಗಳ ನಂತರ ಸಂಗಾತಿ ವಿಚಾರದಲ್ಲಿ ಅನುರಾಗ ಭಾವ ಮೂಡಲಿದೆ. ಸಂಗಾತಿಯೊಡನೆ ಉಪಾಹಾರ ಸೇವಿಸುವಂತಹ ಸಂಭ್ರಮ ನಿಮ್ಮದಾಗಲಿದೆ. ಮನೆಗೆ ಅತಿಥಿಗಳು, ಹತ್ತಿರದ ಸ್ನೇಹಿತರನ್ನು ಭೇಟಿಯಾಗುವ ಸನ್ನಿವೇಶಗಳು ಎದುರಾಗಲಿವೆ ಒಳ್ಳೆಯದಾಗಲಿ.

ಕಟಕ-ಹಬ್ಬದ ಸಡಗರ, ಖರ್ಚು ಹೆಚ್ಚಾಗಲಿದೆ. ಗೌರಿ ಹಬ್ಬ ಗೌರಿ ಬಾಗಿನ ಕೊಡಬೇಕು ಎಂಬ ಸಂಕಲ್ಪ ನಿಮ್ಮಲ್ಲಿದೆ. ಗೌರಿ ಹಬ್ಬದ ಪ್ರಯುಕ್ತ ಒಂದು ಐದು ಜನಕ್ಕೆ ಗೌರಿ ಬಾಗಿನವನ್ನು ನೀಡಿ ಒಳ್ಳೆಯದು. ಅಥವಾ ಐದು ಜನ ಮುತ್ತೈದೆಯರಿಗೆ ಒಂದು ತಾಂಬೂಲವನ್ನಾದರೂ ನೀಡಿ. ಒಳ್ಳೆಯ ದಿನ, ಖುಷಿಯ ದಿನ, ಸಂಭ್ರಮದ ದಿನ, ತುಂಟತನದ ದಿನ, ಅಲಂಕಾರಿಕ ದಿನ ಚೆನ್ನಾಗಿದೆ ಶುಭವಾಗಲಿ.

ಸಿಂಹ– ಇಂದು ನೀವು ತುಂಟತನದ ಪರಮಾವಧಿಗೆ ಮುಂದಿರುತ್ತೀರ. ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವಂಥ ಭಾವ. ಬೆಳ್ಳಿ, ಮನೆಗೊಂದು ವಸ್ತ್ರ, ಮಕ್ಕಳ ವಿಚಾರಗಳಲ್ಲಿ ಹೆಚ್ಚು ಖರ್ಚು ಉಂಟಾಗಲಿದೆ. ಶುಭ ಕಾರ್ಯಗಳಿಗೆ ಹೆಚ್ಚು ಖರ್ಚಾಗಲಿದೆ ಒಳ್ಳೆಯದಾಗಲಿ.

ಕನ್ಯಾ– ಕನ್ಯಾ ರಾಶಿಯವರು ಅಂದರೆ ಕಣ್ಣು ಹೊಡೆಯುವ ರಾಶಿ ಎಂದೇ ಅರ್ಥ. ಲಕ್ಷ್ಮೀಯ ಪೂರ್ವ ಕೃಪಾಕಟಾಕ್ಷ ನಿಮ್ಮ ಮೇಲೆ ಇದೆ ಹೆದರಬೇಡಿ. ಕುಟುಂಬ ವಿಚಾರದಲ್ಲಿ ಸ್ವಲ್ಪ ಯೋಚನೆ ಮಾಡುತ್ತೀರಿ. ಕುಟುಂಬಕ್ಕೋಸ್ಕರ ನೀವು ದುಡಿಯಿರಿ, ಹಬ್ಬವನ್ನು ಖುಷಿಯಿಂದ ಸಂಭ್ರಮಾಚರಣೆಯಿಂದ ಆಚರಿಸಿ ಒಳ್ಳೆಯದಾಗಲಿದೆ.

ತುಲಾ– ಇಂದು ನೀವು ಮುಟ್ಟಿದ್ದೆಲ್ಲ ಬಂಗಾರವೆ. ಹಾಲು, ಬೆಣ್ಣೆ, ತುಪ್ಪ, ಟೂರ್‌ ಟ್ರಾವೆಲ್ಸ್, ಆರ್ಕಿಟೆಕ್ಟ್, ಇಂಜಿನಿಯರ್, ಹಣ್ಣು ಮಾರಾಟ ,ಮೇಕಪ್ ವಸ್ತುಗಳ ಮಾರಾಟಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಪೂರ್ಣ ಪ್ರಭಾವದ ಪ್ರಗತಿ ನೋಡುತ್ತೀರಿ ಶುಭವಾಗಲಿದೆ.

ವೃಶ್ಚಿಕ– ಬಂಗಾರ ಖರೀದಿಸುವ ಯೋಗ, ವಾಹನ ಖರೀದಿಸುವ ಯೋಗ, ಗೌರಿ ಹಬ್ಬದ ಪ್ರಯುಕ್ತ ಒಂದು ಶುಭ ಸುದ್ದಿಯೊಂದನ್ನು ಕೇಳುವ ಪ್ರಸಂಗಗಳು ಎದುರಾಗಲಿವೆ. ಇಂದು ಪೂರ್ಣ ಸಂಕೇತ ನಿಮಗೆ ದೊರೆಯಲಿದೆ ಶುಭವಾಗಲಿ.

ಧನಸ್ಸು– ಸ್ತ್ರೀ ಮೂಲಕ ಮಾಡುತ್ತಿರುವ ವ್ಯವಹಾರ, ವ್ಯಾಪಾರದಲ್ಲಿ ಅದ್ಭುತ ಪ್ರಗತಿ ಕಾಣುವಂತ ದಿನ. ಕಲಾವಿದರಾಗಿದ್ದರೆ ವಿಶೇಷ ರಾಜಯೋಗವನ್ನು ನೋಡುತ್ತೀರಿ. ಕೆಲವು ಕಲಾವಿದರಿಗೆ ಅಪಮಾನ ಪ್ರಸಂಗಗಳು ಹುಡುಕಿಕೊಂಡು ಬರಲಿವೆ. ಡೈರೆಕ್ಟರ್, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವವರಿಗೆ ಸ್ವಲ್ಪ ಎಡರು ತೊಡರುಗಳು ಉಂಟಾಗಲಿದೆ ಜಾಗೃತ.

ಮಕರ– ಖರ್ಚಿನ ದಿನ. ಹಬ್ಬದ ಸಡಗರ, ವಸ್ತ್ರಗಳನ್ನು ಖರೀದಿ ಮಾಡಬೇಕು. ಮನೆಯವರ ಜೊತೆ ಶಾಪಿಂಗ್ ಹೋಗಬೇಕು ಸುತ್ತಾಟ, ಓಡಾಟ, ಪಾರ್ಟಿ ಫಂಕ್ಷನ್ ಸ್ನೇಹಿತರೊಂದಿಗೆ ಒಡನಾಟ, ಸ್ನೇಹಿತರೊಂದಿಗೆ ದೂರ ಪ್ರಯಾಣ ಮಾಡಬೇಕೆಂಬ ಆಸೆ, ಶುಭ ಸುದ್ದಿಯನ್ನು ನೋಡುತ್ತೀರಿ ಚೆನ್ನಾಗಿದೆ.

ಕುಂಭ– ತುಂಟತನದ ಪರಮಾವಧಿ. ಏನೋ ಒಂದು ಖುಷಿ ಸಂಭ್ರಮ, ಸಡಗರ ಗೌರಿ ಹಬ್ಬ ಇಂದೇ ನಿಮಗೆ ಬಂದುಬಿಟ್ಟಿದೆ ತುಂಬ ಖುಷಿ ಸಡಗರವನ್ನು ಆಚರಿಸುತ್ತೀರಿ. ಹಿಂದೆ ಗೌರಿ ಹಬ್ಬದ ಪ್ರಯುಕ್ತ ಎಲ್ಲವನ್ನೂ ಖರೀದಿ ಮಾಡುವುದು, ವಸ್ತ್ಖ ,ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಮಾಡುವುದು ಇಂಥ ಖುಷಿಯ ವಾತಾವರಣದಲ್ಲಿ ಇರುತ್ತೀರಿ. ಪುಟ್ಟ ಗೋಪೂಜೆಯನ್ನು ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ಮೀನ– ಸ್ತ್ರೀ ವಿಚಾರವಾಗಿ, ಮನೆಯ ವಿಚಾರವಾಗಿ ಒಂದು ರೀತಿಯ ಹಬ್ಬ, ಸಂಭವ ನಡೆಯುವುದುಂಟು. ಹಬ್ಬದ ವಿಚಾರದಲ್ಲಿ ಎಲ್ಲೋ ಒಂದು ತೊಳಲಾಟ ಯಾವುದೋ ಒಂದು ಸೂತಕ ಅಪ್ಪಳಿಸುವುದುಂಟು ಜಾಗರೂಕತೆ. ಗೌರಿ ಯಾವ ಕಾರಣಕ್ಕೂ ಮೈಲಿಗೆ ಆಗಬಾರದು ಹಾಗೆ ನೋಡಿಕೊಳ್ಳಿ ಎಚ್ಚರಿಕೆ ವಹಿಸಿ ಕೆಲಸ ಮಾಡಿ. ಯಾರೋ ಇಂದು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡುತ್ತಾರೆ ಅವರು ಮಾಡಿದ್ದು ಅವರಿಗೆ ತಟ್ಟುತ್ತದೆ ಯೋಚಿಸಬೇಡಿ ಶುಭವಾಗಲಿದೆ.

LEAVE A REPLY

Please enter your comment!
Please enter your name here