ದಿನ ಭವಿಷ್ಯ 04 ಸೆಪ್ಟೆಂಬರ್ 2019

0
806

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ. ಸ್ವಲ್ಪ ಹಣಕಾಸು, ಕುಟುಂಬ ವ್ಯವಹಾರಗಳಲ್ಲಿ ತೊಳಲಾಟವನ್ನು ನೋಡುತ್ತೀರಿ. ಅದರಿಂದ ಹೊರ ಬರುವುದು ಉಂಟು ಯೋಚಿಸಬೇಡಿ. ಗಾಬರಿ ಪಡಬೇಡಿ ಇರುವ ನೋವು, ಸಮಸ್ಯೆವೆಲ್ಲ ದೂರವಾಗುತ್ತದೆ ನಗು ನಗುತ್ತಾ ಇರಿ ಶುಭವಾಗಲಿದೆ.

ವೃಷಭ– ಸ್ವಲ್ಪ ಹಣ ಕಾಸು, ಸಣ್ಣ ಸಣ್ಣ ವಿಚಾರಗಳೇ ನಿಮಗೆ ದೊಡ್ಡದಾಗಿ ಕಾಡುವುದು. ಏನೊ ಆಗುತ್ತದೆ ಎಂಬ ಚಿಂತೆ ಅದರ ಬಗ್ಗೆ ಯೋಚಿಸಬೇಡಿ. ಎಲ್ಲ ಭಗವಂತನ ಕೃಪೆಯಿಂದಲೇ ಆಗುವುದು. ಸಣ್ಣಪುಟ್ಟ ಸಮಸ್ಯೆಗಳಿಗೆ ಗಾಬರಿಯಾಗಬೇಡಿ, ಬೇಸರವಾಗಬೇಡಿ ಒಳ್ಳೆಯದಾಗಲಿದೆ.

ಮಿಥುನ– ಮಾಡುತ್ತಿರುವ ಕೆಲಸ, ಕಾರ್ಯಗಳಲ್ಲಿ ವಿಶೇಷ ಪ್ರಗತಿ ನೋಡುತ್ತೀರಿ. ಬ್ಯಾಂಕಿಂಗ್ ವ್ಯವಸ್ಥೆ, ಹಣಕಾಸು ಲೇವಾದೇವಿಯಲ್ಲಿ ಸಣ್ಣಪುಟ್ಟ ತೊಂದರೆ, ನಿಮ್ಮದೇ ಬಡ್ಡಿ ವ್ಯವಹಾರ, ಕಾರ್ಪೊರೇಟ್ ಫಿನಾನ್ಸ್ ಇಂಥ ಸೆಕ್ಟರ್ ಗಳಲ್ಲಿ ಕೆಲಸ ಮಾಡುತ್ತಿದ್ದೀರಿ, ಮಾತಿಗೆ ಸಂಬಂಧಿಸಿದ ಹುದ್ದೆ ಕೆಲಸದಲ್ಲಿದ್ದೀರಿ ಅನುಕೂಲಕರವಾದಂತಹ ದಿನ ಚೆನ್ನಾಗಿದೆ. ಯಾವುದೋ ಅಪಮಾನ ಒಂದು ನಿಮ್ಮ ಮೈಮೇಲೆ ಏರಲಿದೆ ಜಾಗರೂಕತೆ.

ಕಟಕ-ಇಂದು ನಿಮ್ಮ ದಿನ ಚೆನ್ನಾಗಿದೆ. ಮನೆಯಲ್ಲಿ ಮಕ್ಕಳ ಬಗ್ಗೆ ಮಕ್ಕಳ ಅಭಿವೃದ್ಧಿ ಬಗ್ಗೆ, ಮಕ್ಕಳ ಕಾರ್ಯದ ಬಗ್ಗೆ, ಕೆಲಸದ ಬಗ್ಗೆ, ಸ್ವಲ್ಪ ಹಣಕಾಸಿನ ತೊಂದರೆಗಳು ಕೋರ್ಟು ಕಚೇರಿಗಳ ವಿಚಾರದ ಬಗ್ಗೆ ತಲೆಕೆಡಿಸಿಕೊಂಡಿದ್ದೀರ ಯೋಚಿಸಬೇಡಿ. ಮನೆಗೆ ಅತಿಥಿಗಳು ಆಗಮನವಾಗುವುದು, ಆತ್ಮೀಯರು ಆಗಮಿಸಲಿದ್ದು, ಸ್ವಲ್ಪ ಖರ್ಚು ವೆಚ್ಚ ಹೆಚ್ಚಾಗಲಿದೆ ಯೋಚಿಸಬೇಡಿ ಒಳ್ಳೆಯದಾಗಲಿದೆ.

ಸಿಂಹ– ಸ್ವಲ್ಪ ಯಾವುದೋ ಸಣ್ಣ ಪುಟ್ಟ ವ್ಯವಹಾರಗಳಲ್ಲಿ ತೊಂದರೆಯಿದೆ. ಉದ್ಯೋಗದಲ್ಲೇ ಬದಲಾವಣೆ, ವ್ಯವಹಾರದಲ್ಲೇ ಬದಲಾವಣೆ, ಇನ್ವೆಸ್ಟ್ ಮೆಂಟ್ ಈ ರೀತಿಯ ಒಂದು ತಳಮಳದಲ್ಲಿ ಇಂದು ನೀವು ತೊಡಗಿಸಿಕೊಂಡಿದ್ದೀರಿ. ಯಾವ ರೀತಿಯ ಗಾಬರಿ ಪಡುವ ಅವಶ್ಯಕತೆ ಇಲ್ಲ ನಿಮ್ಮ ದಿನ ಚೆನ್ನಾಗಿದೆ ಶುಭವಾಗಲಿ.

ಕನ್ಯಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಅದ್ಭುತವಾದ ದಿನ, ಟೆಕ್ನಿಕಲ್, ಟೆಕ್ನಿಷಿಯನ್ ಕೆಲಸ ಮಾಡುತ್ತಿದ್ದೀರಿ. ಸ್ವಂತ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಅನುಕೂಲಕರವಾದಂತಹ ದಿನ ಚೆನ್ನಾಗಿದೆ.

ತುಲಾ– ಇಂದು ನಿಮ್ಮ ಹತ್ತಿರದವರಿದಲೆ, ಕುಟುಂಬದವರಿಂದ ಹಾಗೂ ಗೊತ್ತಿಲ್ಲದ ವ್ಯಕ್ತಿಗಳಿಂದ ನಿಮ್ಮ ಮನಸ್ಸಿಗೆ ನೋವು ಬೇಸರ ಉಂಟಾಗಲಿದೆ ಜಾಗೃತ. ನಮ್ಮವರ ಮಾತನ್ನು ಕೇಳಬೇಕು ಯಾಕೆಂದರೆ ಅವರ ಮಾತಿನಲ್ಲಿ ಒಂದರ್ಥ ಇರಲಿದೆ, ಇಂದು ಯಾವುದೋ ಒಂದು ತೊಳಲಾಟಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಿ ಯೋಚಿಸಬೇಡಿ ಧೈರ್ಯದಿಂದ ಹೆಜ್ಜೆ ಇಡಿ ಒಳ್ಳೆಯದಾಗಲಿ.

ವೃಶ್ಚಿಕ– ಇಂದು ನಿಮ್ಮ ದಿನ ಚೆನ್ನಾಗಿದೆ. ವೃತ್ತಿಗೆ ಸಂಬಂಧಿಸಿದಂತೆ ಒಂದು ಬಹುದೊಡ್ಡ ಬದಲಾವಣೆಯನ್ನು ಕಾಣತಕ್ಕಂಥ ದಿನವಾಗಿರಲಿದೆ. ವ್ಯವಹಾರ, ವ್ಯಾಪಾರ ನಿಮಿತ್ತ, ಕುಟುಂಬ ನಿಮಿತ್ತ ಏನೋ ಆಲೋಚನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೀರಿ ಒಳ್ಳೆಯದಾಗಲಿದೆ. ಸ್ವಲ್ಪ ಗಲಿಬಿಲಿ ಉಂಟಾಗಲಿದೆ ಜಾಗೃತ ಶುಭವಾಗಲಿ.

ಧನಸ್ಸು– ಏನೋ ಮರೆತು ಹೋಗುತ್ತೀರಿ. ಬಹಳ ಅವಶ್ಯಕತೆ, ಅವಶ್ಯ ವಸ್ತುವನ್ನು ಕಳೆದುಕೊಳ್ಳುತ್ತೀರಿ. ಮರೆತು ಹೋಗುತ್ತೀರಿ ಬಹಳ ಜಾಗೃತ ವಹಿಸಿ. ನಿಮಗೆ ಗೊತ್ತಿಲ್ಲದೆ ನಿಮ್ಮ ಕೆಲಸದಲ್ಲಿ ವಿಘ್ನ ಉಂಟಾಗಲಿದೆ. ದೇವಿ ಅಥವಾ ವಿನಾಯಕನ ದರ್ಶನ ಪಡೆದುಕೊಳ್ಳಿ, ಗಣಪತಿ ಮಂತ್ರವನ್ನು ಜಪ ಮಾಡಿಕೊಳ್ಳಿ ದಾರಿ ಸಿಗಲಿದೆ ಶುಭವಾಗಲಿ.

ಮಕರ -ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ! ಸಾರ್ವಜನಿಕ ಹಣಕಾಸು ಇಲಾಖೆ, ಕೋಪರೇಟೀವ್ ಬ್ಯಾಂಕ್ ಗಳಲ್ಲಿ ಕೆಲಸ ಮಾಡುತ್ತಿರುವವರು ಸ್ವಲ್ಪ ಜಾಗರೂಕತೆಯಿಂದ ಇರಿ. ಬಹುದೊಡ್ಡ ಸಾಲವೊಂದು ನಿಮ್ಮ ಮೇಲೆ ಅಪ್ಪಳಿಸಲಿದೆ ಜಾಗರೂಕತೆ.

ಕುಂಭ– ಕೈಗಾರಿಕೆಗೆ ಸಂಬಂಧಿಸಿದಂತ ಉದ್ಯಮದ ವರ್ಗದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಾಲ್ಕು ಜನರ ಬಳಿ ಕೇಳಿ ಮುನ್ನಡೆಯುವುದು ಒಳ್ಳೆಯದು. ಬಹುದೊಡ್ಡ ವಿಶೇಷ ಕಾರ್ಯ, ವರ್ಗ, ವ್ಯವಹಾರ, ಟ್ರಾವೆಲ್, ಸ್ಟೋರ್ಸ್, ವೆಹಿಕಲ್, ಹಾಸ್ಪಿಟಲ್ ಇಂಥ ಏನೋ ಒಂದು ದೊಡ್ಡ ಕೆಲಸ ಕಾರ್ಯಗಳಲ್ಲಿ ದೊಡ್ಡ ಪ್ರಬಲ ಉಂಟಾಗಲಿದೆ ಶುಭವಾಗಲಿ.

ಮೀನ– ಇಂದು ಯಾವ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ. ಸ್ವಲ್ಪ ಗಲಿಬಿಲಿ ಉಂಟಾಗುವ ಪರಿಸ್ಥಿತಿ ನಿಮ್ಮದು. ಕೈಸಾಲ ಮಾಡಿಕೊಂಡಿದ್ದೀರ, ಅದರ ಬಗ್ಗೆ ಯೋಚನೆ ಮಾಡುತ್ತಿದ್ದೀರಿ ಯೋಚಿಸಬೇಡಿ. ಒಳ್ಳೆಯ ಕಾರ್ಯಕ್ಕೆ ಸಾಲ ಮಾಡಿಕೊಂಡಿದ್ದೀರಿ ಒಳ್ಳೆಯದಾಗಲಿದೆ. ತಪ್ಪದೇ ಇಂದು ಯಾರಾದರೂ ಮಂಗಳಮುಖಿ ಸಿಕ್ಕರೆ ಅವರಿಗೆ ಹಣ್ಣು, ಸಿಹಿ, ತಾಂಬೂಲ ನೀಡಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here