ದಿನ ಭವಿಷ್ಯ 14 ಸೆಪ್ಟೆಂಬರ್ 2019

0
195

ಶ್ರೀ ರವಿಶಂಕರ್ ಗುರೂಜಿ ಅವರು ಭಾನುವಾರ ಹುಟ್ಟಿದ ವ್ಯಕ್ತಿಗಳ ಸಾಧಕ ಹಾಗೂ ಬಾದಕ ಬಗ್ಗೆ ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಯಾಕೋ ಕುಟುಂಬ ಜೀವನದಲ್ಲೊಂದು ಕುಟುಕು ಇರಲಿದೆ. ಒಂದು ಸೂರ್ಯ ಪ್ರಭಾವ ಖಂಡಿತ ಇರಲಿದೆ. ಭಾನುವಾರ ಹುಟ್ಟಿದ ವ್ಯಕ್ತಿಗಳ ಜೀವನದಲ್ಲಿ ಸೂರ್ಯನ ಪ್ರಭಾವ ಇರಲಿದೆ. ಆದರೆ ಎಡರು ತೊಡರುಗಳನ್ನು ನೀವು ಎದುರಿಸಿಕೊಂಡು ಸರಿಯಾದ ಹಾದಿಯಲ್ಲಿ ಮುನ್ನುಗ್ಗಿ ಹೆಜ್ಜೆ ಇಟ್ಟರೆ ಖಂಡಿತ ಗೆಲುವು ನಿಮ್ಮದೇ ಎರಡನೇ ಮಾತೇ ಇಲ್ಲ!. ನಿಮ್ಮ ಕುಟುಂಬ ಜೀವನವನ್ನು ಆದಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ! ಎಲ್ಲೋ ಯಾರೋ ನಿಮ್ಮನ್ನು ಹೊಗಳಿ ನಿಮ್ಮ ಜೀವನದಲ್ಲೊಂದು ಸಣ್ಣ ಅಪಶ್ರುತಿ ಗಾಳಿ ಹೆಚ್ಚಾಗಲಿದೆ. ನಿಮ್ಮ ವೈಯಕ್ತಿಕ, ವೃತ್ತಿ ಜೀವನ, ವ್ಯವಹಾರದ ಜೀವನ ಕಡೆ ಹೆಚ್ಚು ಗಮನ ಕೊಟ್ಟು, ಮನೆಯ ಜೀವನದ ಬಗ್ಗೆ ಯೋಚನೆಯನ್ನು ಬಿಟ್ಟಿದ್ದೀರಿ. ದೊಡ್ಡ ತಪ್ಪನ್ನು ಮಾಡುತ್ತಿದ್ದೀರಿ! ಕುಟುಂಬದ ಕಡೆ ಹೆಚ್ಚು ಗಮನವನ್ನು ನೀಡಿ. ಮನೆಯಲ್ಲೊಂದು ಅಪಶ್ರುತಿ ಕೇಳಿ ಬರುವ ಸನ್ನಿವೇಶಗಳು, ಸೂಚನೆಗಳು ಹೆಚ್ಚಿದೆ ಜಾಗೃತ. ಸ್ವಲ್ಪ ಕುಟುಂಬ ಜೀವನವನ್ನು ಸರಿಪಡಿಸಿಕೊಂಡರೆ ನೀವೊಂದು ಅದ್ಭುತ ಕಾಯವೇ. ನಿಮಗೆ ಯಾರಾದರೂ ನೋವು ಮಾಡಿದರೆ ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ನಿಮ್ಮೊಂದಿಗೆ ಇಟ್ಟುಕೊಂಡು ನೀವು ಅನುಭವಿಸುತ್ತೀರಿ ಅದು ಭಾನುವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆ ಎಂದೇ ಹೇಳಬಹುದು. ನಿಮಗೆ ಯಶಸ್ಸಿದೆ ಆದರೆ ಕುಟುಂಬದ ಕಡೆ ಹೆಚ್ಚು ಗಮನ ನೀಡಿ ಶುಭವಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ! ಜ್ಞಾನ ಸಿದ್ಧಿ ಎಲ್ಲವನ್ನೂ ಉಪಯೋಗಿಸಿ ಧರ್ಮಬದ್ಧವಾಗಿ, ನ್ಯಾಯಬದ್ಧವಾಗಿ ಕೆಲಸ ಮಾಡಿದರೆ ಪೂರ್ಣ ಫಲವನ್ನು ನೋಡುತ್ತೀರಿ ಶುಭವಾಗಲಿದೆ.

ವೃಷಭ– ಎಜುಕೇಷನ್, ಟೀಚರ್ ,ಅಡ್ವೈಸರ್, ಜಡ್ಜ್, ಲಾಯರ್ ಆಗಿದ್ದೀರಿ ಸ್ವಲ್ಪ ತಳಮಳ ಉಂಟಾಗಲಿದೆ. ಉದ್ಯೋಗ ನಿಮಿತ್ತ, ಕುಟುಂಬ ನಿಮಿತ್ತ ಸಾಲಬಾಧೆ ಇದರಿಂದ ಸ್ವಲ್ಪ ಹೆಚ್ಚು ತಳಮಳ ಉಂಟಾಗಲಿದೆ. ಇಂದು ಯಾರಾದರೂ ಆಚಾರ್ಯರಿಗೆ ಸಿಹಿ, ಹಣ್ಣು ತಾಂಬೂಲವನ್ನು ನೀಡಿ ಒಳ್ಳೆಯದಾಗಲಿದೆ.

ಮಿಥುನ– ಬ್ಯಾಂಕಿಂಗ್ ,ಟ್ರಾವೆಲ್ಸ್ ,ಕಸ್ಟಮರ್ ಸರ್ವೀಸ್, ಸೇಲ್ಸ್, ಮಾರ್ಕೆಟಿಂಗ್ ಇಂಥ ವಿಭಾಗಗಳಲ್ಲಿ ಕೆಲಸ, ಕಾರ್ಯ ಮಾಡುತ್ತಿರುವವರಿಗೆ ವಿಶೇಷ ಪ್ರಗತಿ ನೋಡುವಂಥ ದಿನ. ವಾಹನ, ಬಂಗಾರ ,ಬೆಳ್ಳಿ ಇಂಥ ಒಂದು ವ್ಯಾಪಾರ ಮಾಡುತ್ತಿರುವವರಿಗೆ ವಿಶೇಷ ಪ್ರಗತಿ ನೋಡುವಂಥ ದಿನ ಚೆನ್ನಾಗಿದೆ.

ಕಟಕ– ಇಂದು ನಿಮ್ಮ ದಿನ ಚೆನ್ನಾಗಿದೆ. ಮನೆಯ ಜವಾಬ್ದಾರಿ, ಕುಟುಂಬ ಜವಾಬ್ದಾರಿ ಹೇಗೆ ನಿಭಾಯಿಸುವುದು ಎಂಬ ಆತಂಕ ನಿಮ್ಮಲ್ಲಿ ಕಾಡುತ್ತಿದೆ. ಆದರೂ ಸ್ವಲ್ಪ ಚಾಕುಚಕ್ಯತೆಯಿಂದ ನಿಮ್ಮ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುತ್ತೀರಿ ಯಾವ ಯೋಚನೆ ಇಲ್ಲ ಶುಭವಾಗಲಿದೆ.

ಸಿಂಹ– ನಾನು ಕಷ್ಟ ಪಡುತ್ತಿದ್ದೇನೆ ಆದರೆ ನನಗೆ ಯಾವ ಫಲವೂ ಇಲ್ಲವಲ್ಲ ಎಂಬ ಯೋಚನೆಯಲ್ಲಿದ್ದೀರಿ. ಬ್ಯಾಂಕಿಂಗ್, ಕೋ ಆಪರೇಟಿವ್ ಸೊಸೈಟಿ ಒಂದು ಜಂಜಾಟದಲ್ಲಿ ತೊಡಗಿಸಿಕೊಂಡಿದ್ದೇನೆ ಖಂಡಿತ ಒಂದು ತೊಳಲಾಟ ಎದುರಾಗಲಿದೆ. ಆದರೆ ಕೃಷಿಕರಿಗೆ ಒಂದು ಬಂಪರ್ ಸುದ್ದಿ ಇವತ್ತು ಕಾದಿದೆ. ನಿಮ್ಮ ಬೆಳೆಯಲ್ಲಿ ಒಂದು ಲಾಭವನ್ನು ನೋಡುವಂಥ ದಿನ ಚೆನ್ನಾಗಿದೆ.

ಕನ್ಯಾ– ದಿನದ ಆರಂಭ ಸ್ವಲ್ಪ ತೊಳಲಾಟವಿದ್ದರೂ, ಕುಟುಂಬ, ಆರೋಗ್ಯ, ಲೇವಾದೇವಿ ಸಮಸ್ಯೆ ಇದ್ದರೂ ಮಧ್ಯಾಹ್ನದ ವೇಳೆ ಒಂದು ಶುಭ ಸುದ್ದಿಯೊಂದನ್ನು ಕೇಳುತ್ತೀರಿ ಚೆನ್ನಾಗಿದೆ. ಮೇಕಪ್ ಆರ್ಟಿಸ್ಟ್, ವಸ್ತ್ರ, ವ್ಯಾಪಾರ ಬೆಳ್ಳಿ ,ಬಂಗಾರ ವ್ಯಾಪಾರ ಮಾಡುತ್ತಿರುವವರಿಗೆ ವಿಶೇಷ ಪ್ರಗತಿ ಕಾಣತಕ್ಕಂಥ ದಿನ ಶುಭವಾಗಲಿದೆ.

ತುಲಾ– ಬ್ಯಾಂಕಿಂಗ್, ಲೇವಾದೇವಿ, ಮಾತುಗಾರಿಕೆ, ಕಲಾವಿದರು, ಹಾಡುಗಾರರು, ಶಿಕ್ಷಕರು ಈ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಪರಿಶ್ರಮದಿಂದ ಉತ್ತಮ ಲಾಭವನ್ನು ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ವೃಶ್ಚಿಕ -ವ್ಯವಹಾರಗಳಲ್ಲಿ ಒಂದು ತೊಳಲಾಟ. ಹಣಕಾಸಿನ ವಿಚಾರದಲ್ಲಿ ಒಂದು ತೊಂದರೆ ಎದುರಾಗಲಿದೆ. ಮಕ್ಕಳ ವಿಚಾರದಲ್ಲಿ ತೀರಾ ಯೋಚನೆ ಮಾಡುತ್ತಿದ್ದೀರಿ, ಕುಟುಂಬ ಅಭಿವೃದ್ಧಿಗೋಸ್ಕರ ತೀರಾ ಯೋಚನೆ ಮಾಡುತ್ತಿದ್ದೀರಿ ಒಳ್ಳೆಯದಾಗಲಿದೆ.

ಧನಸ್ಸು– ಸ್ವಲ್ಪ ಜಾಗರೂಕತೆ ಟೆಕ್ನಿಕಲ್ ಲೈನ್, ರಿಸರ್ಚ್ ಲ್ಯಾಬ್, ಟೆಕ್ನಿಷಿಯನ್, ಮೆಡಿಕಲ್ ಡಿಪಾರ್ಟ್ಮೆಂಟ್ ಇಂಥ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಒಂದು ತೊಳಲಾಟ ಎದುರಾಗಲಿದೆ. ಇಂದು ಗಲಿಬಿಲಿಯಿಂದ ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗೃೂಕತೆ.

ಮಕರ – ಇಂದು ನಿಮ್ಮ ದಿನ ಚೆನ್ನಾಗಿದೆ. ಮೆಡಿಕಲ್ ಲೈನ್, ಬ್ಯಾಂಕಿಂಗ್, ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಉತ್ತಮ ಪ್ರಗತಿ ನೋಡ ತಕ್ಕಂತ ದಿನ ಚೆನ್ನಾಗಿದೆ. ಬುದ್ಧಿ ಉಪಯೋಗಿಸಿ ಹೂಡಿಕೆ ಮಾಡಿದ್ದಲ್ಲಿ, ಅದ್ಭುತ ಲಾಭವನ್ನು ನೋಡುತ್ತೀರಿ ಒಳ್ಳೆಯದಾಗಲಿದೆ.

ಕುಂಭ– ಎಲ್ಲರಿಗೂ ಉತ್ತೇಜನ ಮಾಡುತ್ತೀರಿ ಆದರೆ ನೀವೇ ಯಾವುದೋ ಸಮಸ್ಯೆಗೆ ಸಿಲುಕಿಕೊಂಡಿದ್ದೀರಿ. ವಿಪರೀತ ರಾಜಯೋಗ ನಿಮಗೆ ಇದೆ. ಆಗದ ಕೆಲಸಗಳಲ್ಲಿ ಗೆಲುವು ನೋಡುತ್ತೀರಿ. ಕೆಲವು ನಿಮ್ಮನ್ನು ಕಾಡಲಿದೆ, ಕೋರ್ಟ್ ಸಮಸ್ಯೆ, ಹಣಕಾಸು ಸಮಸ್ಯೆ, ಭೂಮಿ ಸಮಸ್ಯೆಯಲ್ಲಿ ಒಂದು ತೊಳಲಾಟ ಉಂಟಾಗಲಿದೆ. ಹಾಗೂ ಯಶಸ್ಸನ್ನು ನೋಡುತ್ತೀರಿ ಅದು ನಿಶ್ಚಿತ ಶುಭವಾಗಲಿ.

ಮೀನ– ವೃತ್ತಿ ಸಂಬಂಧಿತವಾಗಿ, ಮಕ್ಕಳಿಗೆ ಸಂಬಂಧಿತವಾಗಿ, ಹಣಕಾಸಿಗೆ ಸಂಬಂಧಿತವಾಗಿ ಏನೋ ಒಂದು ತೊಳಲಾಟ ಗಾಬರಿ ಕಾಡಲಿದೆ. ಏನಾಗಲಿದೆಯೋ ಕೆಲಸದಲ್ಲಿ, ಎಡವಟ್ಟು ಆಗಬಹುದ? ಎಂಬ ಯೋಚನೆ ಮಾಡುತ್ತಿದ್ದೀರ.!ನಿಭಾಯಿಸಿಕೊಂಡು ಹೋಗ ತಕ್ಕಂತ ದಿನ ಚೆನ್ನಾಗಿದೆ ಶುಭವಾಗಲಿ.

LEAVE A REPLY

Please enter your comment!
Please enter your name here