ದಿನ ಭವಿಷ್ಯ 12 ಸೆಪ್ಟೆಂಬರ್ 2019

0
469

ಭಾನುವಾರ ಹುಟ್ಟಿದ ವ್ಯಕ್ತಿಗಳು ಹಿಡಿದಿದ್ದನ್ನು ಬಿಡುವುದಿಲ್ಲ. ಯಾವ ರಂಗದಲ್ಲಿ ಇದ್ದರೂ ಕೂಡ ಸಾಧಿಸಿಕೊಳ್ಳುವ ತಾಕತ್ತು ನಿಮ್ಮಲ್ಲಿದೆ. ಕಲಾ ಮಾಧ್ಯಮ ನಿಮಗೆ ಬೇಗ ಒಲಿಯುತ್ತೆ ಯಾಕೆಂದರೆ ನಿಮ್ಮದು ನೇರ ನುಡಿ. ಬುದ್ಧಿಶಕ್ತಿ ,ಮೇಧಾಶಕ್ತಿ ಅಪರಿಮಿತ ನಿಮ್ಮದು. ನೇರವಾಗಿ ಉನ್ನತ ಸ್ಥಾನ ಯಾವ ಕೆಲಸವನ್ನು ಮಾಡಬೇಕು ಅಂದುಕೊಂಡರೆ ಅದನ್ನು ಮಾಡಿ ಮುಗಿಸುವಷ್ಟು ತಾಕತ್ತು ನಿಮ್ಮಲ್ಲಿದೆ. ಎಷ್ಟೇ ಕಷ್ಟ ಬಂದರೂ ಅದರಿಂದ ಪುಟಿದೇಳುವ ಛಲ ನಿಮ್ಮಲ್ಲಿರಲಿದೆ. ನೀವು ಏನು ಮಾಡಬ‍ಾರದು ಅಂದರೆ ಅದನ್ನು ಮಾಡುವುದಿಲ್ಲ! ಮಾಡಬೇಕೆಂಬ ಹಠ ಹಿಡಿದುಕೊಂಡರೆ ಖಂಡಿತ ಅದನ್ನು ಸಾಧಿಸುತ್ತೀರಿ. ಇದಿಷ್ಟು ಭಾನುವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳು ಮತ್ತಷ್ಟು ವಿಶೇಷತೆಗಳನ್ನು ಶ್ರೀ ರವಿಶಂಕರ್ ಗುರೂಜಿಯವರು ಮುಂದಿನ ಸಂಚಿಕೆಯಲ್ಲಿ ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮಗೆ ಅದ್ಭುತವಾದಂತಹ ದಿನ. ವಾಹನ, ಭೂಮಿ, ಎಲೆಕ್ಟ್ರಿಸಿಟಿ, ಆಟೊಮೊಬೈಲ್, ಕೃಷಿಕರು, ರೈತಾಪಿ ಜನ, ದವಸ ಧಾನ್ಯ ವ್ಯಾಪಾರಿಗಳು ,ರೇಷ್ಮೆ ಬೆಳೆ ಇಂಥ ವ್ಯವಹಾರಗಳನ್ನು ತೊಡಗಿಸಿಕೊಂಡಿರುವವರಿಗೆ ಅದ್ಭುತ ಪ್ರಗತಿ ಕಾಣತಕ್ಕಂತ ದಿನ ಚೆನ್ನಾಗಿದೆ.

ವೃಷಭ– ಇಂದು ಸ್ವಲ್ಪ ಸಿಡಿಸಿಡಿ ಎನ್ನುತ್ತೀರಿ ಆದರೆ ನಿಭಾಯಿಸಿಕೊಂಡು ಹೋಗುತ್ತೀರಿ. ಕಲಾವಿದರು, ಬಟ್ಟೆ ವ್ಯಾಪಾರಿ, ಮೇಕಪ್, ಟೂರ್ ಟ್ರಾವೆಲ್ಸ್, ಬಂಗಾರ ವ್ಯಾಪಾರಿಗಳು ಅಂತ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೆ ವಿಶೇಷ ಪ್ರಗತಿ ಕಾರತಕ್ಕಂತ ದಿನ ಚೆನ್ನಾಗಿದೆ ಶುಭವಾಗಲಿ.

ಮಿಥುನ– ಸ್ವಲ್ಪ ಬೇವು -ಬೆಲ್ಲ ಎರಡು ಮಿಶ್ರಣ ಗೊಂಡಿರುವ ಪರಿಸ್ಥಿತಿಗಳು. ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ಇಂದು ಸ್ವಲ್ಪ ಮನಸ್ಸಿನಲ್ಲಿ ತೊಳಲಾಟ ಉಂಟಾಗಲಿದೆ. ದುಡುಕು ಸ್ವಭಾವ, ಸಂಗಾತಿ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟು ಜಾಗರೂಕತೆ.

ಕಟಕ– ಭೂಮಿ, ಮನೆ, ಜಾಗ ತೆಗೆದುಕೊಳ್ಳಬೇಕು. ವ್ಯವಹಾರ ಮಾಡಬೇಕು ಯಾವುದೋ ದೊಡ್ಡ ವ್ಯವಹಾರಗಳಿಗೆ ಓಡಾಡುತ್ತಿದ್ದೀರಿ ಯೋಚಿಸಬೇಡಿ ಧೈರ್ಯವಾಗಿ ಹೆಜ್ಜೆ ಇಡಿ ಅದ್ಭುತ ಪ್ರಗತಿ ನೋಡುವಂಥ ದಿನ. ಯಾವ ತೊಂದರೆ ಇಲ್ಲ. ‘ಧೈರ್ಯ ಸರ್ವತ್ರ ಸಾಧನಂ’ ಧೈರ್ಯವೇ ನಿಮಗೆ ಯಶಸ್ಸು ತೋರಿಸಲಿದೆ ಶುಭವಾಗಲಿದೆ.

ಸಿಂಹ– ನೀವು ಮುಟ್ಟಿದ್ದೆಲ್ಲವೂ ಬಂಗಾರವೇ! ವ್ಯವಹಾರ ನಿಮಿತ್ತ, ಉದ್ಯೋಗ ನಿಮಿತ್ತ, ಕುಟುಂಬ ನಿಮಿತ್ತ, ಹೆಸರು, ಕೀರ್ತಿ, ಪ್ರತಿಷ್ಠೆ ಪಡೆಯತಕ್ಕಂತ ದಿನವಾಗಿರಲಿದೆ. ಮನೆ, ಹಣ ವಿಚಾರದಲ್ಲಿ ಸ್ವಲ್ಪ ಇರಿಸು ಮುರಿಸು ಉಂಟಾಗಲಿದೆ ಜಾಗೃತ.

ಕನ್ಯಾ -ಬೇವು ಬೆಲ್ಲ ಎರಡು ನಿಮಗೆ ಇಂದು ದೊರೆಯಲಿದೆ. ಯಾವುದೋ ಒಂದು ಲೆಕ್ಕಾಚಾರವಾಗಿ ಎಷ್ಟೇ ನಿಯಮಬದ್ಧವಾಗಿ ಕೆಲಸ ಮಾಡಿದರೂ ಕೂಡ ಖರ್ಚು ವೆಚ್ಚ ಹೆಚ್ಚಾಗಲಿದೆ. ಮನೆಯವರ ವಿಚಾರ, ವಸ್ತ್ರ ವಿಚಾರ, ಆಭರಣ, ಓಡಾಟ, ಸುತ್ತಾಟ ಇಂಥ ಪರಿಸ್ಥಿತಿಗಳು ಎದುರಾಗಲಿದೆ ಶುಭವಾಗಲಿ.

ತುಲಾ– ಜಾಗ ತೆಗೆದುಕೊಳ್ಳಬೇಕು, ಗಾಡಿ ತೆಗೆದುಕೊಳ್ಳಬೇಕು, ಮನೆ ಖರೀದಿ ಮಾಡಬೇಕು, ಉದ್ಯೋಗದ ಬಗ್ಗೆ ಯೋಚನೆ ಮಾಡುತ್ತಿದ್ದೀರಿ. ಇಂದು ಮಧ್ಯಾಹ್ನದ ವೇಳೆಗೆ ಒಂದು ಶುಭ ಸುದ್ದಿಯೊಂದನ್ನು ಕೇಳುತ್ತೀರಿ ಪ್ರಗತಿ ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ವೃಶ್ಚಿಕ -ಆತ್ಮೀಯರೊಬ್ಬರನ್ನು ಭೇಟಿ ಮಾಡುವುದು, ಆತ್ಮೀಯರೊಂದಿಗೆ ಸೇರಿ ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ, ಸಂಗಾತಿಯೊಡನೆ ಸೇರಿ ಮಾಡುತ್ತಿರುವ ಕೆಲಸಗಳಲ್ಲಿ ವಿಶೇಷ ಪ್ರಗತಿ ಕಾಣುತಕ್ಕಂತ ಅದ್ಭುತವಾದಂತಹ ದಿನ ಚೆನ್ನಾಗಿದೆ. ಭೂಮಿ ಕಾರ್ಯಗಳಲ್ಲಿ ವಿಶೇಷ ಲಾಭವನ್ನು ನೋಡುತ್ತೀರಿ ಒಳ್ಳೆಯದಾಗಲಿದೆ.

ಧನಸ್ಸು– ಇಂದು ಏನೋ ಒಂದು ರೀತಿಯ ಶಕ್ತಿ ನಿಮ್ಮಲ್ಲಿ ಕಾಡಲಿದೆ. ತುಂಟತನ, ಬಟ್ಟೆ ತೆಗೆದುಕೊಳ್ಳಬೇಕು,ಶಾಪಿಂಗ್, ಸುತ್ತಾಟ, ಓಡಾಟ, ವಾಹನ ಖರೀದಿ ಮಾಡಬೇಕು, ಭೂಮಿಯನ್ನು ಖರೀದಿ ಮಾಡಬೇಕು ಎಂಬ ಯೋಚನೆ ಮಾಡುತ್ತಿದ್ದೀರಿ ಖಂಡಿತ ಯಶಸ್ಸನ್ನು ನೋಡುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ಮಕರ– ಗಂಡ-ಹೆಂಡತಿ ಜಗಳ ಗ್ಯಾರಂಟಿ. ನಿಮ್ಮ ಸಂಗಾತಿಯೊಡನೆ ಒಂದು ಜಗಳ ಉಂಟಾಗಲಿದೆ. ಹೆಂಡತಿಯ ಕುಟುಂಬದೊಡನೆ ಅಥವಾ ಗಂಡನ ಕುಟುಂಬದೊಡನೆ ಜಗಳವಾಗುವುದು ಇಂಥ ಸನ್ನಿವೇಶಗಳು ಎದುರಾಗಲಿವೆ. ಆದರೆ ಹನುಮನಿಗೆ ಬೆಣ್ಣೆಯ ಲೇಪನವನ್ನು ಅರ್ಪಿಸಿ ಸಮಾಧಾನವಾಗಲಿದೆ.

ಕುಂಭ– ಯುದ್ಧ ಮಾಡದೇ ಗೆಲುವಿಲ್ಲ ನೆನಪಿಟ್ಟುಕೊಳ್ಳಿ. ನಾವು ಸೋಲುತ್ತೇವೆ ಎಂದು ನಿರ್ಧಾರ ಮಾಡುವವರೆಗೂ ಯಾರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಆದರೆ ನಾವು ಯಾವ ಸಿದ್ಧತೆಗಳನ್ನು ಮಾಡಿಕೊಳ್ಳುವುದಿಲ್ಲ. ಕೆಲಸ ಮಾಡುವ ಮುನ್ನ ಯೋಚಿಸಿ ಹೆಜ್ಜೆ ಇಡುವುದು ಬಹಳ ಒಳ್ಳೆಯದು. ಮನೆ ಕಟ್ಟುವುದು, ಬಿಸಿನೆಸ್ ಮಾಡುವುದು, ವಾಹನ ಖರೀದಿ ಮಾಡುವುದು ಇಂಥ ದೊಡ್ಡ ಯೋಜನೆಗಳನ್ನು ರಚಿಸುತ್ತಿದ್ದೀರ. ಆದರೆ ಒಂದು ಹತ್ತು ಜನರ ಬಳಿ ಕೇಳಿ ವಿಚಾರಿಸಿ ಕೆಲಸದಲ್ಲಿ ಹೆಜ್ಜೆ ಇಡುವುದು ಒಳ್ಳೆಯದು ಶುಭವಾಗಲಿದೆ.

ಮೀನ -ಪರಿಪೂರ್ಣ ಬಲ. ವ್ಯವಹಾರ ನಿಮಿತ್ತ, ಉದ್ಯೋಗ ನಿಮಿತ್ತ ಅದರಲ್ಲೂ ಕೃಷಿಕರಾಗಿದ್ದರೆ, ದವಸ ಧಾನ್ಯ ಬೆಳೆ ಇಟ್ಟಿದ್ದರೆ, ಮಾರಾಟ ಮಾಡುತ್ತಿದ್ದರೆ ತುಂಬಾ ವಿಶೇಷ ಪ್ರಗತಿ ಕಾಣುವಂತ ದಿನ. ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್ ,ಮಷಿನರಿ ಇಂಜಿನಿಯರ್, ರಕ್ಷಣಾ ಇಲಾಖೆ, ಪೋಲೀಸ್ ಇಲಾಖೆ ಅದ್ಭುತವಾದಂತಹ ಪ್ರಗತಿ ಕಾಣತಕ್ಕಂತ ದಿನ ಒಳ್ಳೆಯದಾಗಲಿದೆ

LEAVE A REPLY

Please enter your comment!
Please enter your name here