ದಿನ ಭವಿಷ್ಯ 11 ಸೆಪ್ಟೆಂಬರ್ 2019

0
314

ಭಾನುವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಶ್ರೀ ರವಿಶಂಕರ್ ಗುರೂಜಿ ಅವರು ತಿಳಿಸಿಕೊಡುತ್ತಿದ್ದರು. ಇಂದಿನ ಸಂಚಿಕೆಯಲ್ಲೂ ಕೂಡ ಅದನ್ನು ಮುಂದುವರಿಸಿದ್ದಾರೆ. ಹಿಡಿದ ಕಾರ್ಯವನ್ನು ಮುಗಿಸುವವರೆಗೂ ಬಿಡುವುದಿಲ್ಲ ಒಂದು ರೀತಿ ಅದು ಮೂರ್ಖತ್ವದ ಪರಿತಿಯಾಗಿರಲಿದೆ ನಿಮಗೆ. ನಾನು ಹೋಗುವುದು ಇದೇ ಹಾದಿ ಯಾರೋ ಹೇಳಿದ ಮಾತನ್ನು ನಾನು ಕೇಳುವುದಿಲ್ಲ ಎಂಬ ಗರ್ವ ಸ್ವಭಾವ ನಿಮ್ಮದಾಗಿರಲಿದೆ. ನೀವು ಯಾರ ಮಾತಿಗೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ನಿಮ್ಮದೇ ಹಠ ಒಂದೇ ಶೈಲಿ ಆದಷ್ಟು ಇನ್ನೊಬ್ಬರ ಮಾತನ್ನು ಕೇಳಿ ಸಮಯ ತೆಗೆದುಕೊಂಡು, ಆಲೋಚಿಸಿ ಹೆಜ್ಜೆ ಇಡುವುದು ಬಹಳ ಒಳ್ಳೆಯದು. ಭಾನುವಾರ ಹುಟ್ಟಿದ ವ್ಯಕ್ತಿಗಳು ಒಂದು ರೀತಿಯ ಹುಚ್ಚುತನ! ತಾವು ಮಾಡಿದ್ದೇ ಸರಿ ನಮ್ಮದೇ ನಿಯಮ ಹಿಡಿದ ಹಟವನ್ನು ಬಿಡುವುದಿಲ್ಲ ಸ್ವಲ್ಪ ಒಂದು ಹತ್ತು ಜನರ ಬಳಿ ಕೇಳಿ, ಆಲೋಚಿಸಿ, ಚಿಂತಿಸಿ ದಿಟ್ಟ ಹೆಜ್ಜೆ ಇಡುವುದು ಬಹಳ ಒಳ್ಳೆಯದು. ನಿಮ್ಮಲ್ಲಿರುವ ಹುಂಬುತನ, ಯಾವ ರಂಗದಲ್ಲಿ ಹೆಜ್ಜೆ ಇಟ್ಟರೆ ಒಳ್ಳೆಯದು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಹಾಲು, ಬೆಣ್ಣೆ ,ತುಪ್ಪ, ಮೊಸರು, ಮಜ್ಜಿಗೆ,ಟ್ರಾವೆಲ್ ಸ್ಟೋರ್ಸ್ ,ಎಂಟರ್ಟೈನ್ಮೆಂಟ್, ಸಂಗೀತಗಾರರು, ಕಲಾವಿದರು ಇಂಥ ಹುದ್ದೆಯಲ್ಲಿ ಇರುವವರಿಗೆ ಅದ್ಭುತ ಪ್ರಗತಿ ನೋಡುವಂತಹ ದಿನ ಚೆನ್ನಾಗಿದೆ ಶುಭವಾಗಲಿ.

ವೃಷಭ– ಇಂದು ನಿಮಗೆ ಸ್ವಲ್ಪ ತೊಳಲಾಟ ಉಂಟಾಗಲಿದೆ. ಮಾಡುವ ಕೆಲಸ, ಕಾರ್ಯ, ಕುಟುಂಬ ವಿಚಾರದಲ್ಲಿ ಸ್ವಲ್ಪ ಖರ್ಚಿನ ಭಾವ ಹೆಚ್ಚಾಗಲಿದೆ. ಆದರೆ ಇಂದು ಹನುಮನ ಆಲಯಕ್ಕೆ ಭೇಟಿ ನೀಡಿ ವೀಳ್ಯದೆಲೆ ಅಥವಾ ಐದು ಚಿಪ್ ಬಾಳೆಹಣ್ಣನ್ನು ಅರ್ಪಿಸಿ ಒಳ್ಳೆಯದಾಗಲಿದೆ.

ಮಿಥುನ– ಇಂದು ನಿಮ್ಮ ದಿನಗಳಲ್ಲಿ ಸ್ವಲ್ಪ ತಳಮಳ ಉಂಟಾಗಲಿದೆ. ನಿಮ್ಮ ಚಾಕು ಚಕ್ಯತೆ, ಬುದ್ಧಿವಂತಿಕೆಯಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ಅದ್ಭುತ ಪ್ರಗತಿ ಕಾಣತಕ್ಕಂತ ದಿನ. ಸೇಲ್ಸ್ ಮಾರ್ಕೆಟಿಂಗ್, ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ಅಭಿವೃದ್ಧಿ ಕಾಣುವಂತ ದಿನ ತೊಂದರೆ ಇಲ್ಲ ಚೆನ್ನಾಗಿದೆ.

ಕಟಕ– ಪರಿಶ್ರಮದ ದಿನ ಯಾವ ತೊಂದರೆಯೂ ಇಲ್ಲ ಯೋಚಿಸಬೇಡಿ. ಚಂದ್ರನ ದೃಷ್ಟಿ ನೇರವಾಗಿ ನಿಮ್ಮ ಮೇಲೆ ಇದೆ. ಆತಂಕ ಪಡಬೇಡಿ ಬರುವಂಥ ಆಪತ್ತು ಸಮಸ್ಯೆ ಏನೇ ಬಂದರೂ ಕೂಡ ಅದನ್ನು ನಿಭಾಯಿಸಿಕೊಂಡು ಹೋಗುತ್ತೀರಿ. ಭೂ ಸಂಬಂಧಿ ವ್ಯವಹಾರದಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಲಿದೆ. ಆದಷ್ಟು ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳಿ ಅವರ ಜೊತೆ ಮಧುರವಾದ ಬಾಂಧವ್ಯವನ್ನು ಇಟ್ಟುಕೊಳ್ಳಿ ಒಳ್ಳೆಯದಾಗಲಿದೆ.

ಸಿಂಹ– ಇದು ಪರಮಾವಧಿ ದಿನವಾಗಿರಲಿದೆ. ಬುದ್ಧಿಶಕ್ತಿ, ಮೇಧಾಶಕ್ತಿ, ಉಪಯೋಗಿಸಿ ಮಾಡತಕ್ಕಂತಹ ಕೆಲಸ, ಕಾರ್ಯಗಳಲ್ಲಿ ಅದ್ಭುತ ಏಳಿಗೆಯನ್ನು ಕಾಣುತ್ತೀರಿ. ಪರ ಊರು, ಪರಸ್ಥಳಗಳಲ್ಲಿ ಮಾಡುತ್ತಿರುವ ವ್ಯವಹಾರಗಳಲ್ಲಿ ಸ್ವಲ್ಪ ಪರಿಶ್ರಮ ಹೆಚ್ಚಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಆದಷ್ಟು ಹೊರಗಡೆ ತಿನ್ನುವುದನ್ನು ಕಡಿಮೆ ಮಾಡಿ ಜಾಗರೂಕತೆ ಶುಭವಾಗಲಿ.

ಕನ್ಯಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಆದರೆ ಯಾಕೋ ಮನಸ್ಸಿನಲ್ಲಿ ಗಲಿಬಿಲಿ ಪರಿಸ್ಥಿತಿ ಉಂಟಾಗಲಿದೆ. ನೀವು ಹೇಗಿದ್ದರೂ ಈ ಕ್ಷಣ ನಿಲ್ಲುವುದಿಲ್ಲ. ಈ ದಿನ ನಿಲ್ಲುವುದಿಲ್ಲ! ಎಲ್ಲವೂ ನಮ್ಮನ್ನು ಬಿಟ್ಟು ಹೊರಟು ಹೋಗುತ್ತದೆ. ಹಾಗಾಗಿ ಯಾವ ಚಿಂತನೆಯೂ ಬೇಡ ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಗಮನ ನೀಡಿ ಗೆಲುವು ನಿಮ್ಮದು ಒಳ್ಳೆಯದಾಗಲಿದೆ.

ತುಲಾ– ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲೊಂದು ಏರುಪೇರು ಉಂಟು. ಯಾವುದಕ್ಕೆ ಮಾಡಬೇಕು ಅದಕ್ಕೆ ನಿರ್ಧಾರ ಮಾಡುವುದಿಲ್ಲ, ಯಾವುದಕ್ಕೆ ಮಾಡಬಾರದು ಅದಕ್ಕೆ ಮಾಡುತ್ತೀರಿ. ಅನಂತರ ಆ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳುತ್ತೀರಿ ಉದ್ಯೋಗ ನಿಮಿತ್ತ ಪರಿಶ್ರಮದ ದಿನವಾಗಿರಲಿದೆ ಶುಭವಾಗಲಿ.

ವೃಶ್ಚಿಕ-ಗುರು ದೃಷ್ಟಿ ನಿಮ್ಮ ಮೇಲೆ ಇರುವುದರಿಂದ ಉದ್ಯೋಗ, ವ್ಯವಹಾರ, ಹಣಕಾಸು, ಲೆಕ್ಕಾಚಾರ, ವ್ಯವಹಾರದಲ್ಲಿ ಬಹುದೊಡ್ಡ ಲಾಭವನ್ನು ಕಾಣ ತಕ್ಕಂತ ದಿನವಾಗಿರಲಿದೆ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ ಹೆದರಬೇಡಿ ಧೈರ್ಯದಿಂದ ಮುನ್ನುಗ್ಗಿ ಶುಭವಾಗಲಿದೆ.

ಧನಸ್ಸು– ಉದ್ಯೋಗ ,ಕುಟುಂಬ, ಆರೋಗ್ಯ ಇದರಲ್ಲಿ ಯಾವುದಾದರೂ ಒಂದರಲ್ಲಿ ತಳಮಳ ಉಂಟಾಗಲಿದೆ. ಇಂದು ನಿಮ್ಮಆತ್ಮವಿಶ್ವಾಸ ಕುಂದುವಂತೆ ಆಗಲಿದೆ. ತಪ್ಪದೇ ಗುರುಶಾಂತಿ ಮಾಡಿಕೊಳ್ಳಿ ವಿನಾಯಕನ ಸನ್ನಿಧಿಗೆ ಭೇಟಿ ನೀಡಿ ಅಭಿಷೇಕ ಮಾಡಿಸಿ ತಿಲಕ ಇಟ್ಟುಕೊಂಡು ಹೊರಡಿ ಒಳ್ಳೆಯದಾಗಲಿದೆ.

ಮಕರ– ಯಾವುದೋ ವ್ಯವಹಾರದ ಸಹಾಯವನ್ನು ನಿರೀಕ್ಷಿಸುತ್ತಿದ್ದೀರಿ. ಉದ್ಯೋಗ, ಹೊಸ ವ್ಯಾಪಾರ, ಹೊಸ ಕೆಲಸದ ಬಗ್ಗೆ ಚಿಂತನೆ ಆಗುತ್ತಾ ಇಲ್ಲವಾ? ಎಂದು. ಯಾವುದೋ ಕಾಣದ ಹಸ್ತ ನಿಮ್ಮನ್ನು ಕೈ ಹಿಡಿಯಲಿದೆ. ಆದರೆ ಸ್ವಲ್ಪ ನೀವು ಸೋಮಾರಿ ಆಗಿರುತ್ತೀರಿ ಹೆಚ್ಚು ಆತ್ಮವಿಶ್ವಾಸ ಇನ್ನೊಂದು ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗರೂಕತೆ.

ಕುಂಭ– ಪ್ರಯಾಣಗಳಲ್ಲಿ ಸ್ವಲ್ಪ ಲಾಭ, ಸಂಗಾತಿ ವಿಚಾರದಲ್ಲಿ ಸಣ್ಣ ಕಿರಿಕಿರಿ ಅಥವಾ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಲಿದೆ. ಆದರೆ ಮಿಕ್ಕಂತೆ ಇನ್ನು ಯಾವ ತೊಂದರೆ ಇಲ್ಲ! ದಿಢೀರ್ ಲಾಭವನ್ನು ನೋಡುತ್ತೀರಿ. ವಿಶೇಷವಾಗಿ ಇನ್ಸ್ಟ್ರುಮೆಂಟ್ಸ್, ಎಲೆಕ್ಟ್ರಿಕಲ್, ಟೆಲಿಕಮ್ಯುನಿಕೇಷನ್, ಎಂಜಿನಿಯರ್ ಈ ಹುದ್ದೆಗಳಲ್ಲಿ ಇದ್ದವರಿಗೆ ಅದ್ಭುತ ಪ್ರಗತಿ ಕಾಣ ತಕ್ಕಂತ ದಿನವಾಗಿರಲಿದೆ.

ಮೀನ– ಯಾವುದೋ ಒಂದು ಸೌಭಾಗ್ಯದ ಸುದ್ದಿ, ಶುಭ ಸುದ್ದಿ, ವ್ಯವಹಾರ ನಿಮಿತ್ತ ,ಉದ್ಯೋಗ ನಿಮಿತ್ತ ,ಕಲ್ಯಾಣ ನಿಮಿತ್ತ ಒಂದು ಒಳ್ಳೆ ಶುಭ ಸುದ್ದಿಯನ್ನು ಕೇಳಲೇಬೇಕು ಆಗಲೇಬೇಕು ಅದೇ ತಪ್ಪುವುದಿಲ್ಲ ಯೋಚಿಸಬೇಡಿ. ತುಂಬಾ ಚೆನ್ನಾಗಿದೆ ಇಂದು ನಿಮ್ಮ ದಿನ. ಮಕ್ಕಳೊಂದಿಗೆ, ಆತ್ಮೀಯರೊಂದಿಗೆ, ಅಲಂಕಾರ, ಒಪ್ಪ, ಓರಣ’ ಖುಷಿಯ ವಾತಾವರಣ ನಿಮಗಿರಲಿದೆ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here