ದಿನ ಭವಿಷ್ಯ 10 ಸೆಪ್ಟೆಂಬರ್ 2019

0
391

ಭಾನುವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಇಂದಿನ ಸಂಚಿಕೆಯಲ್ಲೂ ಕೂಡ ತಿಳಿಸಿಕೊಟ್ಟಿದ್ದಾರೆ ಶ್ರೀ ರವಿಶಂಕರ್ ಗುರೂಜಿಯವರು. ನೀವು ಮಾಡುವ ಕೆಲಸ ಕಾರ್ಯಗಳು ಅಡ್ಮಿನಿಸ್ಟ್ರೇಷನ್, ಮಿಲಿಟರಿ, ಡಿಫೆನ್ಸ್ ,ಪೊಲೀಸ್, ಕಲೆಕ್ಟರ್, ಈ ಒಂದು ತೆರಿಗೆ ಇಲಾಖೆ, ರೆವೆನ್ಯೂ ಡಿಪಾರ್ಟ್ಮೆಂಟ್, ಪೊಲೀಸ್ ಇಲಾಖೆ,ರೆವಿನ್ಯೂ ಇಲಾಖೆ. ಒಂದು ರೀತಿ ಜವಾಬ್ದಾರಿಯುತವಾದ ಕಾರ್ಯಗಳ ಕಡೆ ಹೆಜ್ಜೆ ಇಡಿ, ನೀವು ಸಣ್ಣ ಜವಾಬ್ದಾರಿಯನ್ನು ಕೂಡ ದೊಡ್ಡದಾಗಿ ಪರಿಗಣಿಸುತ್ತೀರಿ ಅದೇ ದೇವರು ನಿಮಗೆ ಕೊಟ್ಟಿರುವ ದೊಡ್ಡ ಕಾಣಿಕೆ ಎಂದೇ ಹೇಳಬಹುದು. ಭಾನುವಾರ ಹುಟ್ಟಿದ ವ್ಯಕ್ತಿಗಳು ಒಂದೇ ಟ್ರ್ಯಾಕ್ನಲ್ಲಿ ಹೋಗುವಂತ ಶಕ್ತಿ ,ಯುಕ್ತಿ ಇದೆ. ಅದ್ಭುತ ತೇಜಸ್ಸು, ಆರೋಗ್ಯ ನಿಮ್ಮಲ್ಲಿ. ಒಂದೇ ರೀತಿಯ ಭಾವ ಇರುತ್ತದೆ. ಭಾನುವಾರ ಹುಟ್ಟಿದ ವ್ಯಕ್ತಿಗಳ ಹಿಡಿತ ಹೀಗೇ ಇರುತ್ತದೆ. ಅಳೆದು ತೂಗಿ ಮಾತನಾಡುವ ವಾಕ್ಚಾತುರ್ಯ ನಿಮ್ಮಲ್ಲಿದೆ. ಹಾಗಾಗಿಯೇ ನಿಮ್ಮನ್ನು ಯಾರೂ ದ್ವೇಷ ಮಾಡಲಿಕ್ಕೆ ಸಾಧ್ಯವಿಲ್ಲ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ. ಯಾರನ್ನೂ ತೀರ ಹಚ್ಚಿಕೊಳ್ಳುವುದಿಲ್ಲ, ಯಾರ ಬಗ್ಗೆಯೂ ಆಲೋಚನೆ ಮಾಡುವುದಿಲ್ಲ!. ದೇವರು ನಿಮಗೆ ಕೊಟ್ಟಿರುವ ದುಡ್ಡು ಇನ್ನೊಬ್ಬರಿಗೆ ಸಹಾಯ ಮಾಡಲೆಂದು. ಅಹಂಕಾರದಿಂದ ದರ್ಪ ತೋರುವುದಲ್ಲ. ಅಹಂಕಾರ ದರ್ಪದಲ್ಲಿ ಭಾನುವಾರ ಹುಟ್ಟಿದ ವ್ಯಕ್ತಿಗಳು ಇರುವುದಿಲ್ಲ. ಇಂಥ ವ್ಯಕ್ತಿತ್ವ ನಿಮ್ಮದಲ್ಲ ,ಇದು ನಿಮ್ಮ ಒಳ್ಳೆಯ ಗುಣ ಅದನ್ನು ನೀವು ಭಗವಂತನಿಂದ ವರಸಿದ್ಧಿ ಪಡೆದುಕೊಂಡಿದ್ದೀರಾ. ಭಿಕ್ಷುಕ ಸ್ಥಿತಿಯಲ್ಲಿರುವ ಸ್ನೇಹಿತನ ಹೆಗಲ ಮೇಲೆ ಕೈ ಹಾಕಿ ಮಾತನಾಡುವ ವ್ಯಕ್ತಿತ್ವ ನಿಮ್ಮದು. ಭಾನುವಾರ ಹುಟ್ಟಿದ ವ್ಯಕ್ತಿಗಳು ಎಲ್ಲರೊಡನೆ ಬೆರೆಯುತ್ತಾರೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವ ವ್ಯಕ್ತಿತ್ವದ ವ್ಯಕ್ತಿಗಳು ನೀವು ಒಳ್ಳೆಯದಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ಬಹಳ ಸಿಡಿ-ಮಿಡಿ ಎಂದು ಇರುತ್ತೀರಿ. ನಾನು ಮಾಡಿದ್ದೇ ಸರಿ ಎಂಬ ಯೋಚನೆಯಲ್ಲಿ ಮುಂದಿರುತ್ತೀರಿ, ಆದ್ರೆ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಂದು ನೀವು ಸಿಸ್ಟಮ್ಯಾಟಿಕ್ ಆಗಿ ನೀವು ಅಂದುಕೊಂಡ ಹಾಗೆ ಹೋಗುವುದು ಒಳ್ಳೆಯದು ಶುಭವಾಗಲಿ.

ವೃಷಭ– ತುಂಬಾ ಸಿಸ್ಟಮ್ನ ಕಟ್ಟು ಹಾಕಿಕೊಳ್ಳುತ್ತೀರಿ. ಮನೆ, ವ್ಯವಹಾರ, ಕುಟುಂಬವನ್ನು ನೋಡಲು ಯೋಚನೆ ಮಾಡುತ್ತಿದ್ದೀರಿ. ಆದಿತ್ಯ ಮಂತ್ರವನ್ನು ಜಪ ಮಾಡಿಕೊಳ್ಳಿ ಬಹಳ ಒಳ್ಳೆಯದು ಇನ್ನೊಬ್ಬರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಶುಭವಾಗಲಿ.

ಮಿಥುನ– ಇಂದು ನಿಮ್ಮ ದಿನ ಚೆನ್ನಾಗಿದೆ. ರಾಜ್ಯಾಧಿಕಾರ, ಕೆಲಸದಲ್ಲಿ ಅಧಿಕಾರ, ವ್ಯವಹಾರದಲ್ಲಿ ನಿಮ್ಮ ಸಂಗಾತಿ ಮೂಲಕ ಮಾಡುತ್ತಿರುವ ವ್ಯವಹಾರ, ವ್ಯಾಪಾರದಲ್ಲಿ ವಿಶೇಷ ಪ್ರಗತಿ. ಸ್ನೇಹಿತರ ಜೊತೆ ಕೂಡಿ ಮಾಡುತ್ತಿರುವ ವ್ಯವಹಾರಗಳಲ್ಲಿ ಕೂಡ ಅದ್ಭುತ ಪ್ರಗತಿ ಒಳ್ಳೆಯದಾಗಲಿದೆ.

ಕಟಕ– ದಂಡಯಾತ್ರೆ ಮಾಡುವ ಕೆಲಸ ಕಾರ್ಯಗಳಲ್ಲಿ ಬಹುದೊಡ್ಡ ಹೆಸರು, ಸರ್ಕಾರಿ ಕೆಲಸ, ಸರ್ಕಾರಿ ಯೋಜನೆಗಳು ಅಂಥ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಅದ್ಭುತ ಪ್ರಗತಿ ಕಾಣತಕ್ಕಂತ ದಿನ ತೊಂದರೆ ಇಲ್ಲ ಚೆನ್ನಾಗಿದೆ. ಸ್ವಲ್ಪ ಮೈಗ್ರೇನ್, ಬೆನ್ನು ನೋವು ಇಂಥ ಸಮಸ್ಯೆಗಳಿಂದ ಅನುಭವಿಸುತ್ತಿದ್ದೀರಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಿಕೊಳ್ಳಿ ಒಳ್ಳೆಯದಾಗಲಿದೆ.

ಸಿಂಹ– ಎಲ್ಲ ನಾನೇ ನನ್ನಿಂದಲೇ ಎಲ್ಲವೂ ನಡೆಯುತ್ತಿದೆ ಎಂಬ ಯೋಚನೆ, ಗರ್ವದಲ್ಲಿದ್ದೀರಿ ಅದು ಬೇಡ ಒಳ್ಳೆಯದಲ್ಲ. ದೊರೆ ಸ್ಥಾನ,ಅಧಿಕಾರ ಸ್ಥಾನ
ಯಾವುದೂ ಶಾಶ್ವತ ಅಲ್ಲ! ನಾನು ಎಂಬ ಅಹಂಕಾರ ನೋಡಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗೃತ.

ಕನ್ಯಾ -ಬುದ್ಧಿಶಕ್ತಿ, ಮೇಧಾಶಕ್ತಿ ಎಲ್ಲವನ್ನೂ ಉಪಯೋಗಿಸಿ ಮಾಡುವ ಕೆಲಸ, ಕಾರ್ಯಗಳಲ್ಲಿ ಅದ್ಭುತ ಪ್ರಗತಿ ಕಾಣತಕ್ಕಂತ ದಿನ ಚೆನ್ನಾಗಿದೆ. ಬುದ್ಧಿಶಕ್ತಿ, ಮೆಧಾಶಕ್ತಿ ಉಪಯೋಗಿಸಿ ಮಾಡುವ ನಿರ್ಧಾರಗಳಲ್ಲಿ ಖಂಡಿತ ಯಶಸ್ಸನ್ನು ನೋಡುತ್ತೀರಿ. ವೃತ್ತಿಪರವಾಗಿ, ವ್ಯವಹಾರ ಪರವಾಗಿ, ಕುಟುಂಬ ಪರವಾಗಿ ಒಂದು ಶುಭ ಸುದ್ದಿಯೊಂದನ್ನು ಕೇಳುತ್ತೀರಿ. ದಿಟ್ಟ ನಿರ್ಧಾರ, ದಿಟ್ಟ ಯಶಸ್ಸು ನಿಮ್ಮದು ಒಳ್ಳೆಯದಾಗಲಿದೆ.

ತುಲಾ– ಸಂಗಾತಿ, ಕುಟುಂಬ, ವ್ಯವಹಾರ, ವ್ಯವಹಾರದಲ್ಲೇ ತಲ್ಲಣ ತೊಳಲಾಟ ಉಂಟಾಗಲಿದೆ. ಯಾವುದೋ ಒಂದು ಸರ್ಕಾರಿ ಕಾನೂನು ವ್ಯವಹಾರಗಳಲ್ಲಿ ತೊಡಕು ಕಾಡಲಿದೆ ಜಾಗೃತ ಶುಭವಾಗಲಿದೆ.

ವೃಶ್ಚಿಕ– ಬೇಡವೆಂದರೂ ಅಧಿಕಾರ ಬರಲಿದೆ ಸ್ಥಾನ ಸಿಗಲಿದೆ ನಿಮ್ಮ ಯೋಗ್ಯತೆಗೆ ತಕ್ಕಂತೆ ಭಗವಂತ ಕೊಡುತ್ತಿದ್ದಾನೆ. ನಿಮ್ಮ ಕೆಲಸದ ಬಗ್ಗೆ ಯೋಚನೆ ಮಾಡಿ ಇನ್ಯಾವುದರ ಬಗ್ಗೆಯು ಯೋಚನೆ ಬೇಡ ಒಳ್ಳೆಯದಾಗಲಿದೆ.

ಧನಸ್ಸು– ಇನ್ನು ನಿಮ್ಮ ದಿನ ಅದ್ಭುತವಾಗಿದೆ. ತಂದೆಯ ಮಟ್ಟದ ಹಿರಿಯ ಅಧಿಕಾರಿ ವರ್ಗದವರಿಂದ ಅನುಕೂಲವಾಗಲಿದೆ. ಸ್ವಲ್ಪ ಆಲಿಸೋ ಬುದ್ಧಿ ನಿಮಗಿದೆ. ಇವತ್ತು ನಿಮ್ಮ ಸಮಯ ಸರಿಯಿಲ್ಲ, ಆದರೂ ಕೂಡ ಒಳ್ಳೆಯ ವ್ಯಕ್ತಿಗಳು ನಿಮ್ಮನ್ನ ಇಂದು ಭೇಟಿ ಮಾಡಿ ನಿಮಗೆ ಬುದ್ಧಿವಾದ ಹೇಳುತ್ತಾರೆ ಅದನ್ನು ಅನುಸರಿಸಿ ಒಳ್ಳೆಯದಾಗಲಿದೆ.

ಮಕರ– ಪೈಲ್ಸ್, ಪಿಸ್ತೂಲ, ಹಾರ್ಟ್ ಪ್ರಾಬ್ಲಂ, ಬಿಪಿ, ಶುಗರ್, ಮೈಗ್ರೇನ್ ಇಂಥ ಸಮಸ್ಯೆಯಿಂದ ಬಳಲುತ್ತಿದ್ದಿರಿ. ಆದಷ್ಟು ಓಂ ನಮಃ ಶಿವಾಯ ಎಂದು ಜಪ ಮಾಡಿಕೊಳ್ಳಿ ಶಿವನನ್ನು ಆರಾಧಿಸಿ ಒಳ್ಳೆಯದಾಗಲಿದೆ.

ಕುಂಭ-ರಾಜ ಸನ್ಮಾನ, ರಾಜ್ಯ ಗೌರವ ಪಡೆಯುವಂಥ ದಿನವಾಗಿರಲಿದೆ. ಇಚ್ಛಾಶಕ್ತಿ ಪಡೆಯುವಂಥ ದಿನ ನಿಮ್ಮದಾಗಲಿದೆ. ತುಂಬಾ ದೊಡ್ಡ ಅಧಿಕಾರಿಗಳು ನಿಮ್ಮ ಬಳಿ ಬಂದು ಅವರ ಕೆಲಸವನ್ನು ನಿಮ್ಮ ಬಳಿ ನಿಮ್ಮ ಹತ್ತಿರ ಮಾಡಿಸಿಕೊಳ್ಳುತ್ತಾರೆ ಅಂತ ಯೋಗ ನಿಮಗೆ ದೊರೆಯಲಿದೆ. ಆದರೆ ಇಂದು ದೇವಾಲಯದಲ್ಲಿ ತುಳಸಿ ತೀರ್ಥವನ್ನು ಕೇಳಿ ಸೇವಿಸಿ ಶಾಂತಚಿತ್ತರಾಗುತ್ತಿರಿ ಒಳ್ಳೆಯದಾಗಲಿದೆ.

ಮೀನ– ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಇಂಥ ಪರಿಸ್ಥಿತಿಗಳು, ಸನ್ನಿವೇಶಗಳು ನಿಮಗೆ ಎದುರಾಗಲಿವೆ. ಕೆಲಸ, ಕಾರ್ಯಗಳಲ್ಲಿ ಅಂತ ಏನು ವಿಶೇಷತೆಗಳು ಹೆಚ್ಚು ನಿಮಗಿರುವುದಿಲ್ಲ. ಆದರೆ ಇಂದು ದೇವಸ್ಥಾನದಲ್ಲಿ ಒಂದು ಪುಟ್ಟ ಅರ್ಚನೆ, ಹುಳಿ ಪದಾರ್ಥಗಳಿಂದ ದೂರ ಇರಿ. ಉಷ್ಣ ಪದಾರ್ಥಗಳಿಂದ ದೂರ ಇರಿ ಒಳ್ಳೆಯದಾಗಲಿದೆ.

LEAVE A REPLY

Please enter your comment!
Please enter your name here