ದಿನ ಭವಿಷ್ಯ 09 ಸೆಪ್ಟೆಂಬರ್ 2019

0
1521

ಭಾನುವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ಗುರೂಜಿಯವರು ಹೇಳುತ್ತಿದ್ದರು. ಅದನ್ನು ಇಂದಿನ ಸಂಚಿಕೆಯಲ್ಲೂ ಮುಂದುವರಿಸಿದ್ದಾರೆ ಶ್ರೀ ರವಿಶಂಕರ್ ಗುರೂಜಿಯವರು. ಭಾನುವಾರ ಹುಟ್ಟಿದ ವ್ಯಕ್ತಿಗಳು ಆದಿತ್ಯವಾರದಂದು ಹುಟ್ಟಿರುವ ಕಾರಣ ನಿಮಗೆ ಒಂದು ಒಳ್ಳೆ ಅದ್ಭುತವಾದ ತೇಜಸ್ಸು ನಿಮ್ಮಲ್ಲಿ ಕಾಣಲಿದೆ. ಭಾನುವಾರ ಹುಟ್ಟಿದ ವ್ಯಕ್ತಿಗಳು ಅಪರೂಪ, ಏಕಾಗ್ರತೆಗೆ ಹೇಳಿ, ಕೇಳಿ ಮಾಡಿಸಿದಂಥ ವ್ಯಕ್ತಿಗಳು. ನಿಯಮಬದ್ಧವಾಗಿ ನಿಮ್ಮ ಜೀವನವನ್ನು ಸಾಗಿಸುತ್ತೀರಿ. ನೀವು ಹಿಡಿದದ್ದೇ ಹಠ! ನೀವು ಮಾಡಿದ್ದೇ ಕೆಲಸ ಇದು ನಿಮ್ಮ ಜೀವನ ಶೈಲಿ. ನೀವು ಕೊಟ್ಟ ಮಾತಿಗೆ ತಪ್ಪುವ ವ್ಯಕ್ತಿಗಳಲ್ಲ ಅದು ನಿಮ್ಮ ಜನ್ಮ ಸಿದ್ಧ ಹಕ್ಕಿನ ರೀತಿ ಇರಲಿದೆ. ನೀವು ನಿಂತರೆ ಎಂಥ ಸಂದರ್ಭದಲ್ಲಾದರೂ ಪ್ರಾಣವನ್ನು ಬೇಕಾದರೂ ಕೊಡುತ್ತೀರಿ ಮಾತು ಕೊಟ್ಟರೆ ಮೀರುವ ವ್ಯಕ್ತಿ ನೀವುಗಳಲ್ಲ ಅಂತಹ ವ್ಯಕ್ತಿಗಳು ನೀವು. ಅದಕ್ಕೆ ಕರ್ಣನೆ ಸಾಕ್ಷಿ, ಕರ್ಣನ ಜೀವನವನ್ನು ಆಧಾರವಾಗಿ ಇಟ್ಟುಕೊಂಡರೆ ನಿಮಗೆ ತಿಳಿಯುತ್ತದೆ. ಭಾನುವಾರ ಹುಟ್ಟಿದವರ ಶಕ್ತಿ ಏನು ಎಂಬುದು ನಿಮಗೆ ತಿಳಿದಿದೆ. ನೀವು ಯಾವುದೇ ಕೆಲಸವನ್ನು ಮಾಡಿದರು, ಇನ್ನೊಬ್ಬರಿಗೆ ಹೇಳಿ ಮಾಡುತ್ತೀರಿ. ತಪ್ಪು ಎಂದರೆ ಅದನ್ನು ವಾದ ಮಾಡುತ್ತೀರಿ ಆ ಶಕ್ತಿ ನಿಮ್ಮಲ್ಲಿದೆ. ಪರಮಾವಧಿ, ನೀತಿಯಲ್ಲಿ ಬದುಕುತ್ತೀರಿ. ಭಾನುವಾರ ಹುಟ್ಟಿದ ವ್ಯಕ್ತಿಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಸುತ್ತೇನೆ ಮುಂದಿನ ಸಂಚಿಕೆಯಲ್ಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ,

ಮೇಷ– ಸಂಗಾತಿ, ಸ್ನೇಹಿತರು ಆತ್ಮೀಯರೊಡನೆ ಸೇರಿಕೊಂಡು ಮಾಡುವ ವ್ಯವಹಾರ, ವ್ಯಾಪಾರದಲ್ಲಿ ವಿಶೇಷ ಪ್ರಗತಿ ಕಾಣತಕ್ಕಂತ ದಿನ ಚೆನ್ನಾಗಿದೆ. ಹೋಟೆಲ್ ಉದ್ಯಮದಲ್ಲಿ ಇರುವವರಿಗೆ ಒಳ್ಳೆಯ ಲಾಭವನ್ನು ಕಾಣತಕ್ಕಂತ ದಿನ ಚೆನ್ನಾಗಿದೆ. ಯಾವ ತೊಂದರೆಯು ಇಲ್ಲ ಶುಭವಾಗಲಿ.

ವೃಷಭ– ಸ್ವಲ್ಪ ಖರ್ಚು ವೆಚ್ಚ ಹೆಚ್ಚಾಗಲಿದೆ. ಒಂದು ವಿದ್ಯೆಯನ್ನು ಕಲಿಯುತ್ತಿದ್ದಿರಾ.! ಅದನ್ನು ಉಪಯೋಗಿಸಿಕೊಳ್ಳಿ. ಇಲ್ಲವಾದರೆ ನೀವು ಕಲಿತಿದ್ದು ಎಲ್ಲ ನೀರಿನಲ್ಲಿ ಹೋಮ ಮಾಡಿದ ಹಾಗೆ. ಒಳ್ಳೆಯ ಕೆಲಸಕ್ಕಾಗಿ ಖರ್ಚು ಮಾಡುತ್ತಿದ್ದೀರಾ ಒಳ್ಳೆಯದಾಗಲಿದೆ.

ಮಿಥುನ– ಮೇಕಪ್, ಅಲಂಕಾರ ಮಾಡಿಕೊಳ್ಳುವ ವಿಶೇಷ ದಿನವಾಗಿರಲಿದೆ. ಪೇಂಟಿಂಗ್, ಅಲಂಕಾರಿಕ ವಸ್ತುಗಳು, ಮೇಕಪ್, ಬಂಗಾರ ಇಂಥ ಒಂದು ವ್ಯವಹಾರ, ಉದ್ಯೋಗದಲ್ಲಿ ತೊಡಗಿಸಿಕೊಂಡರೆ ಅದ್ಭುತ ಪ್ರಗತಿ ಕಾಣತಕ್ಕಂತ ದಿನ ಶುಭವಾಗಲಿದೆ.

ಕಟಕ– ಯಾಕೋ ಸ್ವಲ್ಪ ಅತ್ತೆ ಸೊಸೆ ಜಗಳ ಮನೆಯಲ್ಲಿ ಉಂಟಾಗಲಿದೆ. ಅದು ಇರಲಿದೆ ನೀವು ಎಷ್ಟೇ ಚೆನ್ನಾಗಿದ್ದರೂ, ಅಲ್ಲೊಂದು ಸಮಸ್ಯೆ ಉಂಟಾಗುತ್ತದೆ. ನಿಮ್ಮ ವೃತ್ತಿ ಕೆಲಸದಲ್ಲಿ ಒಂದು ರೀತಿಯ ತೊಳಲಾಟ ಉಂಟಾಗಲಿದೆ ಜಾಗೃತ. ಒಂದು ಮೊಳ ಕನಕಾಂಬರ ಹೂವನ್ನು ವಿಷ್ಣು ದೇವಾಲಯಕ್ಕೆ ಅರ್ಪಿಸಿ ಅನಂತರ ಅದನ್ನು ಪ್ರಸಾದವಾಗಿ ಸ್ವೀಕರಿಸಿ ಒಳ್ಳೆಯದಾಗಲಿದೆ.

ಸಿಂಹ– ಇಂದು ಬಹಳ ಖುಷಿಯಾಗಿರುವಂತ ದಿನ ನಿಮ್ಮ ದಿನ ಚೆನ್ನಾಗಿರಲಿದೆ ಅದ್ಭುತವಾಗಿರಲಿದೆ. ತುಂಬಾ ಖುಷಿಯಿಂದ ಏನಾದರೊಂದು ಪೆಟ್ಟು ತಿನ್ನುತ್ತೀರಿ ಎಚ್ಚರಿಕೆ ವಹಿಸಿ ಶುಭವಾಗಲಿ.

ಕನ್ಯಾ– ಇಂದು ಗ್ಯಾರಂಟಿ ಒಂದು ಸಂಪೂರ್ಣ ಕನ್ಯರೇ ನೀವು. ಕನ್ಯಾ ರಾಶಿ ಅಂದ,ಚೆಂದ, ಆ ಮಾತು ತುಂಟತನ ಅಪರೂಪ. ಕನ್ಯಾ ರಾಶಿಯವರಿಗೆ ಇರುವಷ್ಟು ಸ್ವಾರ್ಥ, ನನ್ನತನ, ನಮ್ಮತನ ಎಂಬುದು ಯಾರಿಗೂ ಬರುವುದಿಲ್ಲ. ಆದ್ದರಿಂದ ಇಂದು ಒಂದು ಒಪ್ಪ, ಓರಣ, ಅಲಂಕಾರ ನೆರವೇರಿಸಿಕೊಂಡು ಹೋಗುವಂಥ ದಿನ ಚೆನ್ನಾಗಿದೆ ಶುಭವಾಗಲಿ.

ತುಲಾ– ವ್ಯಾಪಾರ, ವ್ಯವಹಾರ ಸಂಬಂಧಪಟ್ಟ ಹಾಗೆ ಖುಷಿಯ ದಿನ ಚೆನ್ನಾಗಿದೆ. ಒಂದು ಸ್ವಲ್ಪ ಕಾಸಿಗೆ ತಕ್ಕಂತೆ ಕಜ್ಜಾಯವನ್ನು ನೋಡುತ್ತೀರಿ ಶುಭವಾಗಲಿದೆ.

ವೃಶ್ಚಿಕ– ನೆನಪಿಟ್ಟುಕೊಳ್ಳಿ! ವೈರಾಗ್ಯ ಭಾವ ಯಾವಾಗ ಬರಬೇಕು ಆಗಲೇ ಬರಬೇಕು. ಎಲ್ಲ ಸಂದರ್ಭದಲ್ಲೂ ವೈರಾಗ್ಯ ಭಾವವನ್ನೇ ಇಟ್ಟುಕೊಳ್ಳುವುದು ತಪ್ಪು! ಆಯಾ ಸಂದರ್ಭಕ್ಕೆ ಹಾಗೆಯೇ ಇರಬೇಕು ಅದು ನಿಮಗೆ ಬಿಟ್ಟಿದ್ದು, ನೀವು ಯಾವ ರೀತಿ ಇರುತ್ತೀರಿ ಎಂಬುದು ನೀವು ತಿಳಿದುಕೊಳ್ಳಬೇಕು.

ಧನಸ್ಸು– ಇಂದು ನಿಮ್ಮ ದಿನ ಚೆನ್ನಾಗಿದೆ. ಒಂದು ಶಾಪಿಂಗ್ ಮಾಡೋದು, ಬಟ್ಟೆಯನ್ನು ಖರೀದಿಸುವುದು ಸ್ನೇಹಿತರೊಂದಿಗೆ ಸಣ್ಣ ಸುತ್ತಾಟ, ಓಡಾಟ ಕೆಲಸದಲ್ಲೂ ಕೂಡ ತುಂಟತನ ಮಾಡುತ್ತೀರಿ. ಇಂದು ನಿಮ್ಮ ಸ್ವಭಾವ ಹೀಗೇ ಇರಲಿದೆ ಚೆನ್ನಾಗಿದೆ ಒಳ್ಳೆಯದಾಗಲಿ.

ಮಕರ– ದೂರ ವಿಚಾರಗಳಲ್ಲಿ ಒಂದು ತೊಳಲಾಟ ಉಂಟಾಗಲಿದೆ. ದೂರದ ಕೆಲಸ ಕಾರ್ಯಗಳಲ್ಲಿ ಒಂದು ದುಡ್ಡು ಬರಬೇಕು ಅಂತ ವಿಚಾರಗಳಲ್ಲಿ ಸ್ವಲ್ಪ ಖುಷಿ, ಸ್ವಲ್ಪ ಕಹಿ ಎರಡೂ ಇರಲಿದೆ. ಸ್ತ್ರೀಯೊಂದಿಗೆ, ಸಂಗಾತಿಯೊಂದಿಗೆ ನಿಮ್ಮ ಮನಸ್ತಾಪಗಳು ದೂರವಾಗಲಿದೆ ಶುಭವಾಗಲಿ.

ಕುಂಭ -ಇಂದು ನಿಮಗೆ ತುಂಟತನದ ಭಾವ. ಕಲಾವಿದರು, ಧಾರ್ಮಿಕ ಸಂಸ್ಥೆಯನ್ನು ನಡೆಸುತ್ತಿದ್ದೀರಿ. ನೃತ್ಯ ,ಕಲೆಗಾರ, ಆಗಮ ಶಾಸ್ತ್ರ, ವಾಸ್ತು ಶಾಸ್ತ್ರ, ಆರ್ಕಿಟೆಕ್ಟ್, ಇಂಟೀರಿಯರ್ಸ್, ಜ್ಯೋತಿಷಿ ಹೇಳುತ್ತಿದ್ದೀರಿ, ದೊಡ್ಡ ಚಲನಚಿತ್ರ ನಡೆಸುತ್ತಿದ್ದೀರಿ ಇಂಥ ವ್ಯವಹಾರ ನಡೆಸುತ್ತಿರುವವರಿಗೆ ಅದ್ಭುತ ಪ್ರಗತಿ ಕಾಣತಕ್ಕಂತ ದಿನ ಚೆನ್ನಾಗಿದೆ. ಅದ್ಭುತವಾದಂತಹ ದಿನ ಯೋಚಿಸಬೇಡಿ ಶುಭವಾಗಲಿದೆ.

ಮೀನ-ಸೊಂಟ ನೋವು, ಹೊಟ್ಟೆ ನೋವು ಇದ್ದರೆ ಉಲ್ಬಣಿಸಿದರೆ ಒಂದು ಸಮಸ್ಯೆ ಕಾಡಲಿದೆ. ಯಾರಾದರೂ ಸ್ತ್ರೀಯರೊಂದಿಗೆ ಕಿರಿಕಿರಿ ಇಂಥ ವಿಚಾರಗಳು ಕೇಳಿ ಬರಲಿದೆ. ಅಪಮಾನ, ಅವಮಾನ ನಿಮಗೆ ಇಂದು ಕಾಡಲಿದೆ ಎಚ್ಚರಿಕೆ ಜಾಗರೂಕತೆ.

LEAVE A REPLY

Please enter your comment!
Please enter your name here