ಭಾನುವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆ ಹೇಗಿರಲಿದೆ ಎಂಬುದನ್ನು ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ನಿಮಗೆ ಸೂರ್ಯ ತೇಜಸ್ಸು ನಿಮ್ಮಲ್ಲಿರಲಿದೆ. ಹಿಡಿದ ಕಾರ್ಯವನ್ನು ನೀವು ಬಿಡುವುದಿಲ್ಲ. ಅಂತ ತೇಜಸ್ಸು ನಿಮ್ಮಲ್ಲಿದೆ. ನಿಮ್ಮ ಕಣ್ಣಿನಲ್ಲಿ ಕಾಂತಿ ಇರುತ್ತದೆ. ಹಣೆ ಅಗಲವಾಗಿರುತ್ತದೆ, ಸ್ವಲ್ಪ ಸೂಕ್ಷ್ಮ ಸ್ವಭಾವದವರಾಗಿರುತ್ತೀರ. ಹೊಗಳಿಕೆಗೆ ಬೇಗ ಬಗ್ಗುವಂತ ಜನ ನೀವು. ಯಾರಾದರೂ ಬೆಣ್ಣೆಯಂಥ ಮಾತುಗಳನ್ನು ಆಡಿದರೆ ನೀವು ಅವರ ಮಾತಿಗೆ ಕರಗಿ ಹೋಗುತ್ತೀರಿ. ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಯಾವುದನ್ನೋ ಮಾಡಲೇಬೇಕು ಎಂಬ ಯೋಚನೆ ನೀವು ಮಾಡಿದರೆ, ಆ ಕೆಲಸ ಮುಗಿಯುವವರೆಗೂ ಹಿಡಿದ ಹಠವನ್ನು ನೀವು ಬಿಡುವುದಿಲ್ಲ. ನಿಮಗೆ ಇಷ್ಟವಾಗದಿದ್ದರೆ ನೀವು ಅದನ್ನು ನೇರವಾಗಿ ಹೇಳುತ್ತೀರಿ. ಯಾವ ವ್ಯಕ್ತಿ, ಯಾವ ಪರಿಸ್ಥಿತಿ ಎಂದು ಯೋಚಿಸುವುದಿಲ್ಲ. ಹಾಗಾಗಿ ಶತ್ರುಗಿಂತ ಹಿತಶತ್ರುಗಳೇ ನಿಮಗೆ ಜಾಸ್ತಿ ಇರುತ್ತಾರೆ. ಈ ಭಾನುವಾರ ಹುಟ್ಟಿದ ವ್ಯಕ್ತಿಗಳ ಬಗ್ಗೆ ಇನ್ನಷ್ಟು ವಿಶೇಷ ಮಾಹಿತಿಗಳನ್ನು ತಿಳಿಸಿಕೊಡುತ್ತಾರೆ ಮುಂದಿನ ಸಂಚಿಕೆಗಳಲ್ಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಮನಸ್ಸಿನಲ್ಲೊಂದು ತಲ್ಲಣ ಉಂಟಾಗಲಿದೆ. ಆರೋಗ್ಯ ವಿಚಾರದಲ್ಲಿ ಏರುಪೇರಾಗಲಿದೆ. ಒಂದು ರೀತಿಯ ಗಲಿಬಿಲಿಗೆ ಒಳಗಾಗುವಂಥ ದಿನವಾಗಿರಲಿದೆ. ಯಾರಾದರೂ ಗುರುಗಳಿಗೆ ಪಾದ ಪೂಜೆ ಮಾಡಿ ಒಳ್ಳೆಯದಾಗಲಿದೆ.
ವೃಷಭ– ಇವತ್ತು ಯಾವುದೋ ಒಂದು ಅಶುಭ ಸುದ್ದಿ. ಅಶುಭ ಘಟನೆ, ಮನಸ್ಸಿಗೆ ನೋವಾಗುವಂತಹ ಘಟನೆ ಎದುರಾಗಲಿದೆ. ಉದ್ಯೋಗ ನಿಮಿತ್ತ, ಕುಟುಂಬ ನಿಮಿತ್ತ ವ್ಯವಹಾರ, ನಿಮಿತ್ತ ಆರೋಗ್ಯ ನಿಮಿತ್ತ ಆರ್ಥಿಕ ನಿಮಿತ್ತ ಒಂದು ರೀತಿಯ ಸಮಸ್ಯೆ ಕಾಡಲಿದೆ ಜಾಗೃತ ಶುಭವಾಗಲಿ.
ಮಿಥುನ– ಯಾರೊ ತಂತ್ರ, ಕುತಂತ್ರ ಮಾಡಿ ನಿಮಗೆ ತೊಂದರೆಯನ್ನುಂಟು ಮಾಡುತ್ತಾರೆ. ನೀವು ತುಂಬಾ ಲೆಕ್ಕಾಚಾರ ಮಾಡುವ ವ್ಯಕ್ತಿಗಳು! ಆದರೆ ತೀರಾ ಲೆಕ್ಕಾಚಾರ ಮಾಡಿದರೆ ನಿಮ್ಮ ಎದುರು ಒಬ್ಬ ವ್ಯಕ್ತಿ ನಿಲ್ಲಬೇಕಲ್ಲ.? ನಿಮ್ಮ ಲೆಕ್ಕಾಚಾರದಲ್ಲಿ ಎಡವಟ್ಟು ಉಂಟಾಗುವುದು ಜಾಗೃತ.
ಕಟಕ– ಇವತ್ತು ಒಂದು ಪ್ರಕೃತಿ ಅವಘಡವನ್ನು ನೋಡುತ್ತೀರಿ. ಅದು ನಿಶ್ಚಿತ. ಬಹುದೊಡ್ಡ ವ್ಯಕ್ತಿ, ಯಾಕೋ ಮನಸ್ಸಿನಲ್ಲಿ ಗಲಿಬಿಲಿ ಉಂಟಾಗುತ್ತದೆ. ಮನಸ್ಸಿನಲ್ಲಿ ದೊಡ್ಡ ಮಟ್ಟದ ತಳಮಳ ಉಂಟಾಗಲಿದೆ. ಇಂದು ಆದರೆ ವಿಷ್ಣು ಆಲಯಕ್ಕೆ ಭೇಟಿ ನೀಡಿ ವಿಷ್ಣು ಸಹಸ್ರನಾಮ ಕೇಳಿ ಒಂದು ತುಳಸಿ ಅರ್ಚನೆ ಮಾಡಿ ಒಳ್ಳೆಯದಾಗಲಿದೆ.
ಸಿಂಹ -ಮಕ್ಕಳು, ಹಿರಿಯರು, ಯಾರೋ ಹತ್ತಿರದವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಲಿದೆ. ಚುಚ್ಚುವಂಥ ಮನಸ್ಸಿಗೆ ಘಾಸಿ ಉಂಟಾಗುವಂತಹ ಮಾತುಗಳು ಕೇಳಿಬರುತ್ತವೆ. ಅದರಿಂದ ನೀವು ತುಂಬಾ ಹಿಂಸೆಗೆ ಒಳಗಾಗುತ್ತೀರಿ. ಆದಷ್ಟು ಯಾರಾದರೂ ಒಬ್ಬ ಅಂಧರಿಗೆ, ಅಂಗವಿಕಲರಿಗೆ ಊಟದ ವ್ಯವಸ್ಥೆ. ಹಣ್ಣು, ಸಿಹಿ ಇಂಥದ್ದನ್ನು ಕೊಡುವುದನ್ನು ಮಾಡಿ ಸಮಾಧಾನ ದೊರೆಯಲಿದೆ ಒಳ್ಳೆಯದಾಗಲಿ.
ಕನ್ಯಾ-ಉದ್ಯೋಗದಲ್ಲಿ ಪರಿಶ್ರಮ ಬರುವಂಥ ಲಾಭವನ್ನು ಕಷ್ಟಪಟ್ಟು ಪಡೆಯುತ್ತೀರಿ. ಹಣ ಸಂಪಾದನೆಗಿಂತ, ಹೆಸರು ಸಂಪಾದನೆ ಮಾಡಿದ್ದೀರಿ ಯೋಚಿಸಬೇಡಿ. ಕನ್ಯಾ ರಾಶಿಯವರಿಗೆ ಇಂದು ಅದ್ಭುತವಾದಂತಹ ದಿನ ಯೋಚಿಸಬೇಡಿ ಶುಭವಾಗಲಿದೆ.
ತುಲಾ– ಸ್ವಲ್ಪ ಒಡಹುಟ್ಟಿದವರ ವಿಚಾರದಲ್ಲಿ, ಹತ್ತಿರದವರ ವಿಚಾರದಲ್ಲಿ ಅಲ್ಲೊಂದು ತಳಮಳ ಉಂಟಾಗಲಿದೆ. ಒಡಹುಟ್ಟಿದವರು, ಯಜಮಾನರ ಕಡೆಯವರು, ಹೆಂಡತಿಯ ಕಡೆಯವರು, ಮನೆಯ ಹಿರಿಯರು ಅನಾರೋಗ್ಯದ ಸಮಸ್ಯೆ, ಕಾನೂನು ಸಂಬಂಧಪಟ್ಟ ಸಮಸ್ಯೆ ಎದುರಾಗಲಿದೆ ಜಾಗೃತ. ರಾಜರಾಜೇಶ್ವರಿ, ಕಾಳಿ, ದುರ್ಗಾ ಮಾತೆ ಇಂಥ ಮಾರಿಕಾಂಬ ಆಲಯಕ್ಕೆ ಭೇಟಿ ನೀಡಿ ದರ್ಶನ ಮಾಡಿ ಒಳ್ಳೆಯದಾಗಲಿದೆ.
ವೃಶ್ಚಿಕ– ಇವತ್ತು ಒಂದು ಅಶುಭ ಸುದ್ದಿ. ಅಸಮಾಧಾನದ ಮಾತು, ಇಲ್ಲ ಒಂದು ಎಲ್ಲೋ ಒಂದು ಸಣ್ಣ ಕದಲಿಕೆ ಉಂಟಾಗಲಿದೆ. ಕುಟುಂಬ ನಿಮಿತ್ತ ,ಸಂಗಾತಿ ನಿಮಿತ್ತ, ಕುಟುಂಬ ನಿಮಿತ್ತ ತೊಂದರೆ ಉಂಟಾಗಲಿದೆ ಜಾಗೃತ.
ಧನಸ್ಸು– ಇಂದು ನಿಮ್ಮ ದಿನ ಚೆನ್ನಾಗಿದೆ. ಆದರೆ ಕಳ್ಳನ ಮನಸ್ಸು ಉಳ್ಳ ಹಾಗೆ ಅನ್ನುವ ಹಾಗೆ ನಮ್ಮ ಮನಸ್ಸಿನಲ್ಲಿ ಏನೋ ಒಂದು ತೊಳಲಾಟ ಕಾಡಲಿದೆ. ಏನೋ ಒಂದು ಅಶಿಸ್ತಿನ ಜೀವನ ನಿಮಗೆ ಕಾಡಲಿದೆ. ತೀರಾ ಶಿಸ್ತನ್ನು ಪಾಲಿಸಿದರೆ ಅವರೆ ಸ್ವಲ್ಪ ತೊಂದರೆಗೆ ಸಿಕ್ಕಿಹಾಕಿಕೊಳ್ಳುವವರು. ಮನೆಯಲ್ಲಿ ಒಂದು ಪುಟ್ಟ ತುಪ್ಪದ ದೀಪ ಹಚ್ಚಿ ಮನಸ್ಸಿನ ವೈರಾಗ್ಯ ಭಾವ ಕಡಿಮೆಯಾಗಲಿದೆ ಒಳ್ಳೆಯದಾಗಲಿ.
ಮಕರ– ಇಂದು ನಿಮ್ಮ ದಿನ ಚೆನ್ನಾಗಿದೆ. ದೂರ ಪ್ರಯಾಣದಲ್ಲಿ ಒಂದು ವಿಘ್ನ. ದೂರದಲ್ಲಿ ಮಾಡುವ ಕೆಲಸ, ಕಾರ್ಯ ,ವ್ಯವಹಾರದಲ್ಲಿ ಒಂದು ಎಳೆದಾಟ ತೊಳಲಾಟ ಉಂಟಾಗಲಿದೆ. ಹನುಮನಿಗೆ ಒಂದು ಬೊಗಸೆ ವೀಳ್ಯದೆಲೆಯನ್ನು ಅರ್ಪಿಸಿ ಒಳ್ಳೆಯದಾಗಲಿದೆ.
ಕುಂಭ– ಕಾಣದ ದೈವಕ್ಕೆ ಮೊರೆ ಹೋಗುತ್ತೀರಿ. ದೈವದರ್ಶನ, ಆಕಸ್ಮಿಕ ದೇವಿ ದರ್ಶನ, ಗುರುದರ್ಶನ ಒಂದು ರೀತಿಯ ಸಮಾಧಾನ. ನಾನು ಎಂದು ಅಹಂಕಾರದಲ್ಲಿ ಮೆರದರೆ ಒಂದು ದೊಡ್ಡ ಹೊಡೆತ ಜಾಗೃತ ಒಳ್ಳೆಯದಾಗಲಿ ಶುಭವಾಗಲಿದೆ.
ಮೀನಾ– ಉದ್ಯೋಗದಲ್ಲಿ ಒಂದು ರೀತಿಯ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದೀರಿ, ಅಂದುಕೊಂಡ ಸ್ಥಾನ ದೊರೆಯಲಿದೆ. ಆದರೆ ತುಂಬ ದೊಡ್ಡ ಸ್ಥಾನ ನಿರೀಕ್ಷೆ ಇಟ್ಟುಕೊಂಡರೆ ಖಂಡಿತ ಸಿಗುವುದಿಲ್ಲ. ನಿಮ್ಮ ಸ್ಥಾನವನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದುಕೊಂಡರೆ ಅದು ನಿಮ್ಮ ಭ್ರಮೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ರಾಜರಾಜೇಶ್ವರಿ, ಬನಶಂಕರಿ, ಚಾಮುಂಡೇಶ್ವರಿ, ನಿಮಿಷಾಂಬೆ ತಾಯಿಯ ದರ್ಶನ ಪಡೆದುಕೊಳ್ಳಿ ಒಳ್ಳೆಯದಾಗಲಿದೆ.