ದಿನ ಭವಿಷ್ಯ 10 ಅಕ್ಟೋಬರ್ 2019

0
291
Loading...

ಮೇಷ– ಪರವಾಗಿಲ್ಲ ಇಂದು ನಿಮ್ಮ ದಿನ ಚೆನ್ನಾಗಿದೆ. ನ್ಯಾಯಬದ್ಧವಾದ ಜೀವನ ದೊರೆಯಲಿದೆ. ನೀವು ಮಾಡುತ್ತಿರುವ ಕೆಲಸ ಕಲಬೆರಕೆ, ಊಟ ತಿನ್ನುವ ಊಟ ಕಲಬೆರಕೆ, ಈ ರೀತಿ ನೀವು ಮಾಡುವ ಕೆಲಸಗಳಲ್ಲಿ ಅಡ್ಡ ಪರಿಣಾಮಗಳು ಉಂಟಾಗಲಿವೆ. ಅಡ್ಡದಾರಿ ಸಂಪಾದನೆ ಬಗ್ಗೆ ಯೋಚಿಸಬೇಡಿ ಬೇಡದ ಯೋಚನೆಗಳ ಬಗ್ಗೆ ಚಿಂತನೆ ಮಾಡುವುದು ತಪ್ಪು ಜಾಗರೂಕತೆ ಶುಭವಾಗಲಿ.

ವೃಷಭ– ಇಂದು ನಿಮ್ಮ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ ಒಂದು ರೀತಿಯ ವಜ್ರಮುಷ್ಟಿ ಹಿಡಿದು ಹಟವನ್ನು ಸಾಧಿಸಿಕೊಳ್ಳುತ್ತೀರಿ. ವ್ಯಾಪಾರ, ವ್ಯವಹಾರ, ಟ್ರಾವೆಲ್, ಟೆಕ್ನಿಷಿಯನ್, ಟೆಕ್ನಿಕಲ್, ಸಿಐಡಿ, ಸಿಬಿಐ ತುಂಬಾ ದೊಡ್ಡದಾದಂತೆ ಪ್ರಯೋಗಾತ್ಮಕ ಕಂಡುಹಿಡಿಯುವಂತೆ ಸಂಸ್ಥೆಗಳು ಇಂಥ ವಿಭಾಗಗಳಲ್ಲಿ ಕೆಲಸ, ಕಾರ್ಯ ಮಾಡುತ್ತಿದ್ದರೆ ವಿಶೇಷ ಪ್ರಗತಿ ಶುಭವಾಗಲಿದೆ.

ಮಿಥುನ– ಸ್ವಲ್ಪ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ. ದಿಢೀರ್ ದೈವದರ್ಶನ, ಗುರುದರ್ಶನ ಕಡೆ ಮನಸ್ಸು ವಾಲಲಿದೆ. ಸ್ವಲ್ಪ ಆರೋಗ್ಯದ ಏರುಪೇರುಗಳು ಉಂಟಾಗಲಿದೆ. ದಿನನಿತ್ಯ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಮಾಂಸಾಹಾರವನ್ನು ತಿನ್ನುವುದನ್ನು ಕಡಿಮೆ ಮಾಡಿಕೊಳ್ಳಿ ಜಾಗರೂಕತೆ.

ಕಟಕ– ನೀವು ತಿನ್ನುವ ಊಟ ಕಲುಷಿತ, ಮನಸ್ಸು ಕಲುಷಿತ, ಮಾಡುವ ಕೆಲಸಗಳು ಕಲುಷಿತ ಜಾಗರೂಕತೆ. ದುರ್ಗಾ ಪ್ರಚೋದನೆ ಮಾಡಿಕೊಳ್ಳಿ, ದುರ್ಗ ದರ್ಶನ ಮಾಡಿಕೊಳ್ಳಿ ಮುಖ್ಯ ನಿರ್ಧಾರಗಳು, ಮುಖ್ಯ ಜವಾಬ್ದಾರಿಗಳ ಕೆಲಸ ಬೇಡ ಜಾಗರೂಕತೆ ಶುಭವಾಗಲಿ.

ಸಿಂಹ– ಸ್ನೇಹಿತರ ಜೊತೆ ಆತ್ಮೀಯರ ಜೊತೆ ಬೇರೆಯವರನ್ನು ನಂಬಿಕೊಂಡು ಮಾಡುತ್ತಿರುವಂತಹ ಕೆಲಸ ಕಾರ್ಯಗಳಲ್ಲಿ ಒಂದು ಹುಳಿ ಉಂಟು ಜಾಗರೂಕತೆ. ನಾಲ್ಕು ಬಾರಿ ಕೇಳಿ ವಿಚಾರಿಸಿ ಯೋಚಿಸಿ ಹೆಜ್ಜೆ ಇಡುವುದು ಸೂಕ್ತ. ತಪ್ಪು ಮಾಡಿಬಿಟ್ಟು ನಂತರ ಯೋಚಿಸಿದರೆ ಏನೂ ಪ್ರಯೋಜನವಿಲ್ಲ. ನೀವು ಮಾಡಿರುವ ತಪ್ಪಿಗೆ ಇನ್ನೊಬ್ಬರನ್ನು ಬೈಯುತ್ತೀರಿ ಆ ರೀತಿ ಮಾಡಬೇಡಿ ಶುಭವಾಗಲಿ.

ಕನ್ಯಾ– ಇಂದು ನಿಮ್ಮ ದಿನ ಚೆನ್ನಾಗಿದೆ. ಕೆಲಸ, ಕಾರ್ಯ, ವ್ಯವಹಾರಗಳು ತಕ್ಕಮಟ್ಟಿಗೆ ವೃದ್ಧಿ ಅದರಲ್ಲೂ ವಿದೇಶಿ, ಪರಸ್ಥಳ, ಪ್ರದೇಶ, ಎಕ್ಸ್ಪೋರ್ಟ್ -ಇಂಪೋರ್ಟ್, ಬಿಸಿನೆಸ್, ಟೆಕ್ನಿಕಲ್ ಲೈನ್, ಸರ್ವಿಸ್ ಲೈನ್, ಸರ್ವೀಸ್ ಇಂಡಸ್ಟ್ರಿ ಇಂಥ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೆ ಖಂಡಿತ ಒಂದು ಅದ್ಭುತ ಅಭಿವೃದ್ಧಿ ಕಾಣುತ್ತೀರಿ ಶುಭವಾಗಲಿದೆ.

ತುಲಾ– ಒಂದು ರೀತಿ ಎಲ್ಲ ಇದೆ, ಆದರೆ ಏನೂ ಇಲ್ಲ ಎಂಬ ಭಾವ. ಏನೂ ಇಲ್ಲ ಏನು ಬರಲಿದೆ ಅದನ್ನು ತೆಗೆದುಕೊಳ್ಳುವ ಭಾವ.! ಸ್ವಲ್ಪ ಯೋಚಿಸಿ ಹೆಜ್ಜೆಯಿಡಿ ಅನುಭವಸ್ಥರ ಮಾತನ್ನು ಕೇಳಿ ಆಲೋಚನೆ ಮಾಡುವುದು ಒಳ್ಳೆಯದು. ದುರ್ಗಾ ಮಾತೆಯ ಪೂಜೆಯನ್ನು ಮಾಡಿಕೊಳ್ಳಿ ಬಹಳ ಒಳ್ಳೆಯದು.

ವೃಶ್ಚಿಕ– ಸ್ವಲ್ಪ ಏನೋ ಒಂದು ರೀತಿಯ ಮದ, ಭಯ, ತುಂಬಾ ಬಲ ಬಂದರೆ ಕೆಟ್ಟು ಹೋಗುತ್ತಾರೆ ಎಂಬ ಮಾತಿದೆ. ಇಂದು ನಿಮ್ಮನ್ನು ನೀವೇ ಒಂದು ಪರೀಕ್ಷೆಗೆ ಒಳಪಡಿಸಿಕೊಳ್ಳಿ ಚಿಂತನೆ ಮಾಡಬೇಡಿ ಒಳ್ಳೆಯದಾಗಲಿದೆ.

ಧನಸ್ಸು– ಜಾಗ ನಂಬಿ ಕೊಟ್ಟು, ತೆಗೆದುಕೊಂಡು ಸ್ನೇಹಿತರು, ಆತ್ಮೀಯರು ಯಾವುದೋ ಒಂದು ಅಪವಾದ, ಅವಮಾನದ ಮೂಟೆಯೊಂದು ನಿಮ್ಮನ್ನು ಕಾಡಲಿದೆ. ಒಂದು ದುಡುಕಬೇಡಿ ಬಹಳ ಜಾಗರೂಕತೆಯಿಂದ ಕೆಲಸ ಮಾಡಿ ಕೆಲವೊಮ್ಮೆ ನಿಮ್ಮ ಪಾಡಿಗೆ ನೀವು ಇದ್ದರೂ ಕೂಡ ಏನಾದರೊಂದು ಮೋಸ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಜಾಗರೂಕತೆ. ಆದಷ್ಟು ಯೋಚಿಸಿ ಹೆಜ್ಜೆ ಇಡುವುದು ಒಳ್ಳೆಯದು ಶುಭವಾಗಲಿ.

ಮಕರ– ಕುಟುಂಬ ವಿಚಾರ, ಉದ್ಯೋಗ ವಿಚಾರದಲ್ಲಿ ಒಂದು ತಳಮಳ. ಆತುರ ನಿರ್ಧಾರ ತೆಗೆದುಕೊಂಡು ಒಂದು ಎಡವಟ್ಟು ಮಾಡಿಕೊಳ್ಳುತ್ತೀರಿ ಜಾಗರೂಕತೆ. ಕೌಟುಂಬಿಕ ವಿಚಾರದಲ್ಲಿ ಹಣಕಾಸಿನ ವ್ಯವಹಾರದಲ್ಲಿ ಮುಂದೆ ಎಡವಟ್ಟು ಮಾಡಿಕೊಳ್ಳುವ ಪ್ರಸಂಗಗಳು ಉಂಟು ಜಾಗರೂಕತೆ ದುಡಕಬೇಡಿ ಶುಭವಾಗಲಿ.

ಕುಂಭ– ಇಂದು ನಿಮ್ಮ ದಿನ ಚೆನ್ನಾಗಿದೆ. ನಿಮ್ಮ ಮಾತು, ಗತ್ತು, ತೂಕ, ಆಲೋಚನಾ ಭರಿತವಾದ ಹೆಜ್ಜೆಯಿಂದ ಮುಂದೆ ಹೋಗುತ್ತೀರಿ ಒಳ್ಳೆ ಅದ್ಭುತವಾದ ಯಶಸ್ಸನ್ನು ನೋಡುತ್ತೀರಿ. ಸ್ವಲ್ಪ ಆತುರದ ಸ್ವಭಾವ, ಏನೋ ಒಂದು ರೀತಿಯ ಪುಷ್ಟಿ, ದೇಹ ಪುಷ್ಟಿ, ಅಧಿಕಾರ ಪುಷ್ಟಿ, ಪ್ರಸಾದ ಪುಷ್ಟಿ, ಆಕಸ್ಮಿಕ ದೈವದರ್ಶನ, ಸುಯೋಗ ಗುರುದರ್ಶನ, ಸುಯೋಗ ಇರುವಂಥ ದಿನ ಚೆನ್ನಾಗಿದೆ.

ಮೀನ– ಇಂದು ಮೈಯೆಲ್ಲಾ ಬಾರ, ಏನೋ ಒಂದು ಮಾಂತ್ರಿಕ ಪ್ರಭಾವಕ್ಕೆ ಒಳಗಾಗುತ್ತೀರಿ. ತುಂಬಾ ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಿದ್ದೀರಿ ಯಾವುದೋ ಒಂದು ಜಿಟಿಪಿಟಿ, ಜಿಟಿಪಿಟಿ ಎನ್ನುವ ಸ್ವಭಾವ. ಇಂದು ಬೆಳಗ್ಗೆ ಎದ್ದೇಳುವ ಮುನ್ನ ಮೆಣಸಿನಕಾಯಿಯನ್ನು ಹಿಡಿದು ದೃಷ್ಟಿಯನ್ನು ತೆಗೆದು ಅದರ ಜೊತೆಗೆ ಉಪ್ಪನ್ನು ತೆಗೆದುಕೊಂಡು ಬೆಂಕಿಗೆ ಹಾಕಿ ನಂತರ ಕೆಲಸಕ್ಕೆ ಹೊರಡುವುದು ಒಳ್ಳೆಯದು.

Loading...

LEAVE A REPLY

Please enter your comment!
Please enter your name here