ದಿನ ಭವಿಷ್ಯ 09 ಅಕ್ಟೋಬರ್ 2019

0
274
Loading...

ಗುರುವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಗುರುವಾರ ಹುಟ್ಟಿದ ವ್ಯಕ್ತಿಗಳು ನೀವು ಆದಷ್ಟು ಟೀಚಿಂಗ್, ಲಾಯರ್, ರಾಜಕೀಯ, ಡಾಕ್ಟರ್, ಅಡ್ವೈಸರ್ ,ಫೈನಾನ್ಷಿಯಲ್ ಅಡ್ವೈಸರ್ ಆಗಿ, ಮ್ಯೂಚುಯಲ್ ಫಂಡ್ ಕನ್ಸಲ್ಟೆಂಟ್, ಆರ್ಥಿಕ ಸಮಸ್ಯೆಗೆ ಸಂಬಂಧಿಸಿದಂತಹ ಇನ್ನೊಬ್ಬರಿಗೆ ಮಾರ್ಗದರ್ಶನ ನೀಡುವಂಥ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೆ ತುಂಬಾ ಯಶಸ್ಸನ್ನು ನೋಡುತ್ತೀರಿ. ಯಾಕೆಂದರೆ ನೀವು ಹುಟ್ಟಿರುವುದೇ ಗುರು ಸ್ವಭಾವದಲ್ಲಿ. ಗುರುವಾರ ಹುಟ್ಟಿದ ವ್ಯಕ್ತಿಗಳಲ್ಲಿ ಬೃಹಸ್ಪತಿಯ ಒಂದು ನೋಟವಿರುತ್ತದೆ. ಭಗವಂತ ನಿಮಗೆ ಇನ್ನೊಬ್ಬರಿಗೆ ಮಾರ್ಗದರ್ಶನ ನೀಡುವಂಥ ಶಕ್ತಿ ಕೊಟ್ಟಿದ್ದಾನೆ ಇನ್ನೊಬ್ಬರಿಗೆ ತಿಳಿ ಹೇಳಿ, ಗುರು ಸ್ಥಾನದಲ್ಲಿ ನಿಂತುಕೊಳ್ಳುವ ಪ್ರಯತ್ನ ಮಾಡಿ.

ಸ್ವಲ್ಪ ನಿಮ್ಮ ಮಾತಿನ ವರಸೆಯನ್ನು ಸರಿಪಡಿಸಿಕೊಳ್ಳಲು ಯೋಚನೆ ಮಾಡಿ, ಓದಲು ಒಂದು ತಯಾರಿ ಮಾಡಿಕೊಳ್ಳಿ, ಎಚ್ಚರ.! ಗುರು ಒಂದೇ ಸ್ಥಾನದಲ್ಲಿ ಇರುವುದಿಲ್ಲ ಆ ಸ್ಥಳವನ್ನು ಬದಲಾಯಿಸುತ್ತಿರುತ್ತಾನೆ ಹಾಗಾಗಿ ಒಂದೇ ಸ್ಥಾನದಲ್ಲಿ ನಿಂತುಕೊಳ್ಳಲು ಯೋಚನೆ ಮಾಡಬೇಡಿ ಮುಂದುವರಿಯುವುದರ ಬಗ್ಗೆ ಯೋಚನೆ ಮಾಡಿ. ಗುರುವಾರ ಹುಟ್ಟಿದ ವ್ಯಕ್ತಿಗಳು ಮಾರ್ಗದರ್ಶಕರೇ ನೀವು ಹೆಚ್ಚು ಕಲಿಕೆಯನ್ನು ಮಾಡಿ ಇನ್ನೊಬ್ಬರಿಗೆ ಮಾರ್ಗದರ್ಶನ ನೀಡಿ, ಅದರ ಬದಲು ನಾನು ಎಲ್ಲ ತಿಳಿದಿರುವೆ ಎಂಬ ಗರ್ವ ನಿಮಗೆ ಒಳ್ಳೆಯದಲ್ಲ ಎಚ್ಚರಿಕೆ ಶುಭವಾಗಲಿ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಇಂದು ನಿಮ್ಮ ದಿನ ಚೆನ್ನಾಗಿದೆ. ಸರಕಾರಿ ಮಟ್ಟದ ಕೆಲಸ, ಕಾರ್ಯ, ವ್ಯವಹಾರ ಸ್ವಂತ ವ್ಯವಹಾರ, ಕೆಲಸ ಕಾರ್ಯಗಳಲ್ಲಿ ಸ್ವಂತ ಪರಿಶ್ರಮದಿಂದ ಅದ್ಭುತ ಪ್ರಗತಿಯನ್ನು ಕಾಣುತ್ತೀರಿ. ಯಾವ ರೀತಿಯ ತೊಂದರೆಯೂ ಇಲ್ಲ ಶುಭವಾಗಲಿದೆ.

ವೃಷಭ– ಇಂದು ಯಾಕೋ ಒಂದು ರೀತಿಯ ತಳಮಳ, ತುಂಬಾ ದೊಡ್ಡ ಜವಾಬ್ದಾರಿ ಹೆಗಲ ಮೇಲೆ ತೆಗೆದುಕೊಂಡು ಹೋಗುತ್ತಿದ್ದೀರಿ ನಿಭಾಯಿಸಿಕೊಂಡು ಹೋಗಲು ಪರದಾಡುತ್ತೀರಿ ಜಾಗರೂಕತೆ. ತಂದೆಯ ಆರೋಗ್ಯದಲ್ಲಿ ಏರುಪೇರು, ಇಲ್ಲ ಬಾಸ್ ವಿಚಾರಗಳಲ್ಲಿ ಕಿರಿಕಿರಿ ಮನಸ್ಸಿಗೆ ತೊಂದರೆ ಉಂಟಾಗುವುದು ಎಚ್ಚರಿಕೆ. ವಾದ ವಿವಾದಗಳಿಂದ ದೂರವಿರಿ ಒಳ್ಳೆಯದಾಗಲಿದೆ.

ಮಿಥುನ– ಇಂದು ನಿಮಗೆ ಏನಾದರೊಂದು ಕಿರಿಕಿರಿ ನಿಶ್ಚಿತ. ಯಾವುದಾದರೂ ಅಧಿಕಾರಿ ಜತೆ ಕುಟುಂಬದವರ ಜೊತೆ ಏನೋ ಒಂದು ಸಮಸ್ಯೆ ಅಥವಾ ಯಾವುದೋ ಒಂದು ಸಮಸ್ಯೆಯನ್ನು ಹುಡುಕಿಕೊಂಡು ಹೋಗುತ್ತೀರಿ. ಯಾವುದಾದರೂ ಕಾಯಿಲೆ ಇದ್ದರೆ ಅದು ಉಲ್ಬಣಿಸುತ್ತದೆ. ಭೂಮಿ ವ್ಯವಹಾರದಲ್ಲಿ ಒಂದು ಕಲಹ, ಒಂದು ರೀತಿಯ ಕಲಹಕ್ಕೆ ನೀವೇ ನಾಂದಿ ಹಾಡುತ್ತೀರಿ ಜಾಗರೂಕತೆ.

ಕಟಕ– ಇಂದು ನಿಮಗೆ ಯೋಗ ವೃದ್ಧಿ, ಭೂಮಿ ,ಮನೆ, ವ್ಯವಹಾರದಲ್ಲಿ, ರೇಷ್ಮೆ ಬೆಳೆ, ದವಸ, ಧಾನ್ಯಗಳ ಬೆಳೆಯಲ್ಲಿ, ಈ ಒಂದು ಭೂಮಿಯೊಳಗೆ ಬೆಳೆಯುವ ಬೆಳೆಗಳು, ಗ್ರಾನೈಟ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ,ರಕ್ಷಣಾ ಇಲಾಖೆ ಇಂಥ ಒಂದು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಶೇಷ ಪ್ರಗತಿ ಕಾಣುವಂತ ದಿನವಾಗಿರಲಿದೆ.

ಸಿಂಹ– ಇಂದು ನೀವು ಮಹಾ ಬಲಶಾಲಿ ಆಗುತ್ತೀರಿ. ನಾನೇ, ನಂದೇ ಎಂಬುದು ನಿಮ್ಮಲ್ಲಿ ಹೆಚ್ಚು ಕಾಣಲಿದೆ. ಜಗಳ ಕಲಹ ಉಂಟು ಮಾಡಿಕೊಳ್ಳುತ್ತೀರಿ. ಇವತ್ತು ನೀವು ಏನೋ ಮಾತನಾಡುತ್ತಿದ್ದೀರಿ, ತಿಳಿದುಕೊಂಡಿದ್ದೀರಿ ಎಂದರೆ ಅದು ನಿಮ್ಮ ಹಿರಿಯರು ನಿಮಗೆ ತಿಳಿಸಿಕೊಟ್ಟಿರುವುದು. ಇಂದು ನಿಮ್ಮ ಅಹಂಕಾರವನ್ನು ದೂರವಿಡುವುದು ಒಳ್ಳೆಯದು ಶುಭವಾಗಲಿ.

ಕನ್ಯಾ– ಇಂದು ನಿಮಗೆ ಓಡಾಟ, ಸುತ್ತಾಟ, ಕೆಲಸ, ಕಾರ್ಯಗಳಲ್ಲಿ ಒಂದು ರೀತಿಯ ತೊಡಕು. ಮನಸ್ಸಿಗೆ ತಳಮಳ ಉಂಟು ಮಾಡಲಿದೆ. ಪ್ರಯಾಣಗಳಲ್ಲಿ ವಿಘ್ನ, ತೊಳಲಾಟವೂ ಉಂಟು ಜಾಗರೂಕತೆ. ಒಡಹುಟ್ಟಿದವರ ಜೊತೆ, ಸ್ನೇಹಿತರ ಜತೆ ಜಗಳವಾಡುವಂತ ಪರಿಸ್ಥಿತಿ ಎದರಾಗಲಿದೆ ಗಣಪತಿ ಅನುಷ್ಠಾನ ಮಾಡಿಕೊಳ್ಳಿ ಶುಭವಾಗಲಿದೆ.

ತುಲಾ– ಅಪಘಾತ ಭೀತಿ, ಅವಮಾನ ಭೀತಿ, ಕೈ ಸುಡುವ ಭೀತಿ, ತಂದೆ ತಾಯಿಯೊಡನೆ ವಾಗ್ವಾದ ಒಡಹುಟ್ಟಿದವರೊಡನೆ ಎಳೆದಾಟ ಭೀತಿ ಎದುರಾಗಲಿದೆ ಜಾಗರೂಕತೆ. ಸುಬ್ರಹ್ಮಣ್ಯ ಆರಾಧನೆ ಮಾಡಿಕೊಳ್ಳಿ ಮುಖ್ಯ ನಿರ್ಧಾರಗಳು ಬೇಡ ಶುಭವಾಗಲಿದೆ.

ವೃಶ್ಚಿಕ– ಕುಟುಂಬ ವ್ಯವಹಾರ, ಉದ್ಯೋಗ, ವ್ಯಾಪಾರ ಇವುಗಳಲ್ಲಿ ವಿಶೇಷ ಪ್ರಗತಿಯನ್ನು ಕಾಣುವಂಥ ದಿನ. ಯಾವ ಕೆಲಸ ಮಾಡಬೇಕು ಎಂದು ನಿರ್ಧರಿಸುತ್ತೀರಿ ಅಂತ ಕೆಲಸಗಳಲ್ಲಿ ಅಭಿವೃದ್ಧಿ ಹೊಂದುತ್ತೀರಿ. ಸ್ವಂತ ಕಾರ್ಯ, ಸ್ವಂತ ಉದ್ಯೋಗ, ಸ್ವಂತ ವ್ಯಾಪಾರ, ಸರ್ಕಾರಿ ಮಟ್ಟದ ಕೆಲಸ, ಕಾರ್ಯಗಳಲ್ಲಿ ವಿಶೇಷ ಅನುಕೂಲ ದೊರೆಯುವಂತ ಹಾಗೂ ವಿಶೇಷ ಸಾಮರ್ಥ್ಯದಿಂದ ಮುಂದುವರಿಯುವಿರಿ ಶುಭವಾಗಲಿದೆ.

ಧನಸ್ಸು– ಇಂದು ನಿಮ್ಮ ಮುಂಗೋಪವನ್ನು ಸ್ವಲ್ಪ ಪಕ್ಕಕ್ಕಿಟ್ಟು ಕೆಲಸ ಮಾಡಿದರೆ ಒಂದು ಶುಭವನ್ನು ನೋಡುತ್ತೀರಿ. ಒಂದು ದರ್ಪದ ಜೀವನ, ಧೈರ್ಯದ ಜೀವನ ಎಲ್ಲವನ್ನೂ ಸಾಧಿಸಿ ಕೊಳ್ಳುವಂಥ ಸಾಮರ್ಥ್ಯ ನಿಮ್ಮೊಳಗಿದೆ ಧೈರ್ಯದಿಂದ ಹೆಜ್ಜೆ ಇಡಿ ಶುಭವಾಗಲಿದೆ.

ಮಕರ– ಇಂದು ಎಲ್ಲಿ ಧೈರ್ಯ ತೆಗೆದುಕೊಳ್ಳಬೇಕು ಅಲ್ಲಿ ತೆಗೆದುಕೊಳ್ಳುವುದಿಲ್ಲ, ಎಲ್ಲಿ ಧೈರ್ಯ ತೆಗೆದುಕೊಳ್ಳಬಾರದು ಅಲ್ಲಿ ಧೈರ್ಯ ತೆಗೆದುಕೊಳ್ಳುತ್ತೀರಿ ಇಂಥ ಪ್ರಸಂಗಗಳು ಎದುರಾಗಲಿದೆ. ವಿಪರೀತ ಆತುರದಿಂದ ಯಾವುದಾದರೂ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತೀರಿ ಎಚ್ಚರಿಕೆ.

ಕುಂಭ– ಇಂದು ನಿಮ್ಮದು ಹುಚ್ಚು ಮನಸ್ಸು, ವಿಪರೀತ ಉದ್ವೇಗ, ವಿಪರೀತ ಬಲ, ವಿಪರೀತ ಆತುರ ಜಾಗರೂಕತೆಯಿಂದ ಹೆಜ್ಜೆಯಿಡಿ ಮಾಡುವಂಥ ಎಲ್ಲ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರಗತಿ ನೋಡುವಂಥ ಸುಯೋಗವಿದೆ. ಭೂಮಿ ವ್ಯವಹಾರದಲ್ಲಿ ಅನಗತ್ಯವಾದ ಕಿರಿಕಿರಿ ಉಂಟಾದರೂ ಕೂಡಾ ಲಾಭವನ್ನು ನೋಡುತ್ತೀರಿ ಶುಭವಾಗಲಿದೆ.

ಮೀನ– ಇಂದು ನಿಮಗೆ ವಿಶೇಷವಾದಂತಹ ದಿನ. ಮಾಡುವ ಕೆಲಸ, ಕಾರ್ಯ ವ್ಯವಹಾರಗಳಲ್ಲಿ ಪ್ರಗತಿ ನೋಡ ತಕ್ಕಂತ ದಿನವಾಗಿರಲಿದೆ. ಯಾವ ರೀತಿಯ ತೊಂದರೆ ಇಲ್ಲ, ಸದವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಗಾಡಿ, ವಾಹನ, ಮನೆ ಖರೀದಿಸಬೇಕು ಎಂಬ ಯೋಚನೆ ಮಾಡುತ್ತಿದ್ದೀರಿ ಖಂಡಿತ ಯಶಸ್ಸನ್ನು ನೋಡುತ್ತೀರಿ ಶುಭವಾಗಲಿದೆ.

Loading...

LEAVE A REPLY

Please enter your comment!
Please enter your name here