ದಿನ ಭವಿಷ್ಯ 07 ಅಕ್ಟೋಬರ್ 2019

0
209
Loading...

ಇಂದು ದಸರಾ ಹಬ್ಬದ ಆಯುಧ ಪೂಜೆಯ ಸಂಭ್ರಮ ಎಲ್ಲರಿಗೂ ಒಳ್ಳೆಯದಾಗಲಿ. ಗುರುವಾರ ಹುಟ್ಟಿದ ವ್ಯಕ್ತಿಗಳ ವಿಶೇಷತೆಗಳ ಬಗ್ಗೆ ಇಂದಿನ ಸಂಚಿಕೆಯಲ್ಲಿ ಶ್ರೀ ರವಿಶಂಕರ್ ಗುರೂಜಿಯವರು ತಿಳಿಸಿಕೊಟ್ಟಿದ್ದಾರೆ. ನೀವು ಒಂದು ರೀತಿ ಮೈಕ್ ಟೈಸನ್ ಇದ್ದ ಹಾಗೆ, ಅವರ ಶಕ್ತಿಯ ರೀತಿ ನಿಮ್ಮಲ್ಲೂ ಅದ್ಭುತ ಶಕ್ತಿ ಇದೆ. ಮೈಕ್ ಟೈಸನ್ ಅವರ ಜನ್ಮ ಚರಿತ್ರೆಯನ್ನು ಒಂದು ಬಾರಿ ತಿರುಗಿ ನೋಡಿ. ಅವರು ಹುಟ್ಟು ಒರಟುತನ ಅದರೆ, ಅತ್ಯಂತ ಪರಾಕ್ರಮಿ ವ್ಯಕ್ತಿತ್ವ. ನೀವು ಏನು ಮಾಡಿದ್ದೀರಿ ಎಂಬ ತಪ್ಪು ನಿಮಗೆ ಅರಿವಾಗುವುದಿಲ್ಲ. ಇಂಥ ಪರಿಸ್ಥಿತಿಗಳು ಎದುರಾಗಲಿದೆ. ತಪ್ಪು ಮಾಡಿ, ತಪ್ಪಾದ ನಂತರ ತಟಸ್ಥರಾಗಿರುತ್ತೀರಿ. ಇನ್ನೊಬ್ಬರಿಗೆ ನೀವು ದಾರಿ ತೋರಿಸುವ ಶಕ್ತಿ ನಿಮ್ಮಲ್ಲಿದೆ. ನಿಮಗೆ ದಾರಿ, ಬೆಳಕು ಕಾಣದ ಪರಿಸ್ಥಿತಿಗಳು ಎದುರಾಗುತ್ತವೆ. ಗುರುವಾರ ಹುಟ್ಟಿದ ವ್ಯಕ್ತಿಗಳು ಬೇಗ ಹಳ್ಳಕ್ಕೆ ಬೀಳುತ್ತೀರಿ. ಮತ್ತಷ್ಟು ವಿಶೇಷತೆಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಶ್ರೀ ರವಿಶಂಕರ್ ಗುರೂಜಿ ಅವರು ತಿಳಿಸಿಕೊಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,

ಮೇಷ– ಸರ್ಕಾರಿ ಮಟ್ಟದ ಕೆಲಸ, ಕಾರ್ಯ ವ್ಯವಹಾರಗಳು, ಸ್ವಂತ ಉದ್ಯೋಗ, ಸ್ವಂತ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವವರು ದೃಢ ನಿಶ್ಚಯದಿಂದ ಮುಂದೆ ಹೋಗಿ ಜಯ ನಿಮ್ಮದೇ ಶುಭವಾಗಲಿದೆ.

ವೃಷಭ– ಭೂಮಿ, ಹೊಲ, ತೋಟ ಇಂಥ ಯಾವುದೋ ವ್ಯವಹಾರಗಳಲ್ಲಿ ಟೆಂಡರ್ ಹಣದ ವ್ಯವಸ್ಥೆ ಕೊಡುವ, ತೆಗೆದುಕೊಳ್ಳುವ ವಿಚಾರದಲ್ಲೊಂದು ತೊಡಕು ಉಂಟಾಗಲಿದೆ ಜಾಗರೂಕತೆ. ಶಿವ ಪೂಜೆ ಮಾಡಿಕೊಳ್ಳಿ ಶುಭವಾಗಲಿದೆ.

ಮಿಥುನ-ಇಂದು ನಿಮ್ಮ ದಿನ ಚೆನ್ನಾಗಿದೆ. ದರ್ಪ, ಗರ್ವ, ಸನ್ಮಾನ, ಗೌರವ, ಹೆಸರು ನೀವು ಮಾಡುತ್ತಿರುವ ಕೆಲಸದಲ್ಲಿ ಅದ್ಭುತ ಸನ್ಮಾನವನ್ನು ಪಡೆಯುವಂತ ಯೋಗವಿದೆ ಚೆನ್ನಾಗಿದೆ ಶುಭವಾಗಲಿ.

ಕಟಕ– ಇಂದು ಸಂಗಾತಿ ಜತೆ, ಹತ್ತಿರದವರ ಜೊತೆ ಸಣ್ಣ ಕಿರಿಕಿರಿ ಉಂಟಾಗಲಿದೆ. ಯಾರೋ ತುಂಬ ನಂಬಿಸಿ ನಿಮ್ಮನ್ನು ಮೋಸ ಮಾಡುತ್ತಾರೆ. ಈ ರೀತಿಯ ಒಂದು ತೊಳಲಾಟ ಎದುರಾಗಲಿದೆ. ದುರ್ಗಾದೇವಿ ಉಪಾಸನ ಮಾಡಿಕೊಳ್ಳಿ ಶುಭವಾಗಲಿದೆ.

ಸಿಂಹ– ಇಂದು ನಿಮಗೆ ಬೆಂಕಿಯೇ. ನಿಮ್ಮ ಸುತ್ತಮುತ್ತಲು ಬೆಂಕಿಯ ರೀತಿಯಲ್ಲಿ ಪರಿಸ್ಥಿತಿಗಳು ಎದುರಾಗಲಿದೆ. ಆಯುಧ ಪೂಜೆ ಆಗಿರುವುದರಿಂದ ಇಂದು ನಿಮಗೆ ಒಂದು ರೀತಿಯ ಆಯುಧ ಪೂಜೆಯೇ, ಎಲ್ಲೋ ಒಂದು ಗಲಾ‌ಟೆ ಮಾಡಿಕೊಳ್ಳುತ್ತೀರ. ಮನೆಯವರ ಮೇಲೆ, ತಂದೆ, ಹೆಂಡತಿ, ಮಕ್ಕಳು ಅಥವಾ ನಿಮ್ಮ ಸುತ್ತಮುತ್ತಲಿನವರೊಡನೆ ಒರಟು ರೀತಿಯಲ್ಲಿ ನಡೆದುಕೊಳ್ಳುತ್ತೀರ. ಇಂದು ಒಂದು ಚಮಚ ಜೇನುತುಪ್ಪವನ್ನು ಸೇವಿಸಿ ಹೊರಡಿ ಒಳ್ಳೆಯದಾಗಲಿದೆ.

ಕನ್ಯಾ– ಇಂದು ನಿಮಗೆ ಹೆಚ್ಚಾಗಿ ಹಣ ವ್ಯಯಾ ಆಗಲಿದೆ. ಭೂಮಿ, ಮನೆ, ವಾಹನ,ಮಕ್ಕಳು, ಹೊಲ ವಿಚಾರಕ್ಕೆ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಗಂಡು ಮಕ್ಕಳ ಬಗ್ಗೆ ಒಂದು ರೀತಿಯ ಗಾಬರಿ ಪಡುತ್ತಿರಿ. ಹೆದರಬೇಡಿ ಗಂಡು ಮಕ್ಕಳು ಸಾಧನೆ ಮಾಡುತ್ತಾರೆ. ಭಗವಂತನ ಕೃಪಾಕಟಾಕ್ಷ ನಿಮ್ಮ ಮೇಲಿದೆ ಶುಭವಾಗಲಿದೆ.

ತುಲಾ– ಸ್ವಂತ ಕೆಲಸ ಹಾಗೂ ಇರುವ ಉದ್ಯೋಗದಲ್ಲಿ ಒಂದು ತೊಂದರೆ, ಅವಮಾನ, ಪೆಟ್ಟು ಬೀಳಲಿದೆ. ದಿಢೀರ್ ಸ್ಥಾನ ಬದಲಾವಣೆ, ಟ್ರಾನ್ಸ್ಫರ್ ಆಗುವ ಪರಿಸ್ಥಿತಿ ಎದುರಾಗಲಿದೆ ಜಾಗೂರುಕತೆ.

ವೃಶ್ಚಿಕ– ಇಂದು ನೀವು ಮಾಡುವ ಪೂಜೆ, ಹೋಮ ಯಾವ ಕೆಲಸ ಮಾಡಬೇಕು ಅಂದುಕೊಂಡಿದ್ದೀರಿ ಆ ಕೆಲಸಗಳನ್ನು ಮಾಡಿಕೊಂಡು ಹೋಗಿ ಅದ್ಭುತವಾದ ಯಶಸ್ಸನ್ನು ನೋಡುತ್ತೀರಿ. ಸ್ವಂತ ವ್ಯವಹಾರ, ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರೆ ಖಂಡಿತ ನಿಮಗೆ ಇಂದು ಅನುಕೂಲವಾಗುವಂತ ದಿನವಾಗಿರಲಿದೆ. ನೀವು ಮುಟ್ಟಿದೆಲ್ಲಾ ಚಿನ್ನವೇ ಶುಭವಾಗಲಿದೆ.

ಧನಸು– ಅತೀ ಶೀಘ್ರದಲ್ಲೇ ಪ್ರಮೋಷನ್, ಪೋಸಿಷನ್, ಶುಭವಾರ್ತೆ ನಿಮಗೆ ಇಂದು ಕೇಳಲಿದೆ. ವೃತ್ತಿಪರವಾಗಿ ಒಂದು ದೃಢ ನಿರ್ಧಾರ ಮಾಡುತ್ತಿರಿ. ಅದ್ಭುತವಾದ ಸುದ್ದಿ ಕೇಳುತ್ತಿರಿ ಶುಭವಾಗಲಿದೆ.

ಮಕರ– ಪಿಸ್ತೂಲ, ಹೊಟ್ಟೆ ನೋವು, ಸೊಂಟ ನೋವು, ಮೋಷನ್, ಕತ್ತು ನೋವು, ಮೈಗ್ರೇನ್ ನೋವು ಈ ರೀತಿಯ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡಲಿದೆ. ತುಂಬ ಚಿಂತೆ ಮಾಡುತ್ತಿದ್ದರೆ ಕಾಯಿಲೆಗಳು ಮತ್ತಷ್ಟು ಹೆಚ್ಚಾಗಿ ಕಾಡಲಿದೆ ಜಾಗರೂಕತೆ. ಸಂಗಾತಿ ಹತ್ತಿರದವರೊಡನೆ ಜಗಳ ಮಾಡಿಕೊಳ್ಳುವ ಪ್ರಸಂಗಗಳು ಎದುರಾಗಲಿದೆ ಎಚ್ಚರಿಕೆ ಒಳ್ಳೆಯದಾಗಲಿ.

ಕುಂಭ– ಇಂದು ನಿಮ್ಮ ದಿನ ಚೆನ್ನಾಗಿದೆ. ಸರಕಾರಿ ಮಟ್ಟದ ವ್ಯವಹಾರ, ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ ಪ್ರಗತಿ ನೋಡುತ್ತೀರಿ. ಆಗದ ಕೆಲಸಗಳು ನಿಮಗೆ ಇಂದು ದಿಢೀರ್ ಆಗಲಿದೆ ಚೆನ್ನಾಗಿದೆ ಶುಭವಾಗಲಿದೆ.

ಮೀನ– ಸಂಗಾತಿಯ ಜೊತೆ ಒಂದು ಕಿರಿಕಿರಿ. ಸಂಗಾತಿ ಆರೋಗ್ಯದಲ್ಲಿ ಒಂದು ಕಿರಿಕಿರಿ. ಸಂಗಾತಿ ಅಪ್ಪ- ಅಮ್ಮನ ವಿಚಾರದಲ್ಲೊಂದು ಲಾಭ. ಯಾವುದೋ ಪಿತ್ರಾರ್ಜಿತ ಆಸ್ತಿ, ಮಾವನವರ ಆಸ್ತಿ, ಅತ್ತೆಯವರ ಆಸ್ತಿ ಅಂಥ ವಿಚಾರದಲ್ಲಿ ಒಂದು ಲಾಭವನ್ನು ನೋಡ್ತೀರಿ ಶುಭವಾಗಲಿದೆ.

Loading...

LEAVE A REPLY

Please enter your comment!
Please enter your name here