ಮೇಷ– ಸುಖ ವೃದ್ಧಿ, ಸಲ್ಲಾಪ, ಸಂತೋಷ ,ಸರಸ, ಪ್ರೀತಿ, ಪ್ರೇಮ ,ವಾಹನ, ಆಭರಣ, ಬಂಗಾರ ವಿಶೇಷ ವಸ್ತುಗಳ ಖರೀದಿ. ಇವತ್ತು ಅದ್ಭುತವಾದ ದಿನ ಚೆನ್ನಾಗಿದೆ ಶುಭವಾಗಲಿ.
ವೃಷಭ– ಭೋಗದಿಂದ ಸುಖವನ್ನು ನೋಡುತ್ತೀರಿ. ಭೋಗಕ್ಕೆ ಸಂಬಂಧಪಟ್ಟಂತ ಎಂಟರ್ಟೇನ್ಮೆಂಟ್, ಥಿಯೇಟರ್, ಟ್ರಾವೆಲ್ಸ್ , ಫ್ಯಾಷನ್ ಡಿಸೈನಿಂಗ್, ಕಲೆಗಾರರು ಇಂಥ ಒಂದು ರಂಗದಲ್ಲಿ ಕೆಲಸ ,ಕಾರ್ಯ ಮಾಡುತ್ತಿರುವವರಿಗೆ ಶುಭ ವೃದ್ಧಿ.
ಮಿಥುನ– ಎಷ್ಟು ಕಷ್ಟ ಪಟ್ಟಿದ್ದೀರ, ಅದಕ್ಕೆ ತಕ್ಕ ಫಲವನ್ನು ನೋಡುತ್ತೀರಿ. ಖರ್ಚು ಮಾಡುವಂಥ ಒಂದು ದಿನ. ಭಗವಂತ ನಮಗೆ ಅಂಥ ಒಂದು ಖರ್ಚು ಇಟ್ಟಿರುತ್ತಾನೆ ಹಾಗಾಗಿ ಯೋಚಿಸಬೇಡಿ. ತೀರ ಲೆಕ್ಕಾಚಾರದ ವಿಚಾರ ಬೇಡ, ಹೋಗಬೇಡಿ ಶುಭವಾಗಲಿ.
ಕಟಕ– ಸಂತೋಷಕ್ಕೆ ಕೊನೆಯಿಲ್ಲ. ಇವತ್ತು ನಿಮ್ಮ ದಿನವೇ, ಪ್ರೀತಿಪಾತ್ರರನ್ನು ಸೋದರ, ಸೋದರಿಯರು, ಆತ್ಮೀಯರು, ಗೆಳೆತನ ಅಲ್ಲೊಂದು ಸುತ್ತಾಟ, ಓಡಾಟ, ಭೋಜನ ಕೂಟ ಇರಲಿದೆ ಅನುಭವಿಸಿ ಶುಭವಾಗಲಿದೆ.
ಸಿಂಹ– ಎಲ್ಲೋ ಒಂದು ತಲ್ಲಣ ಅನ್ನಿಸುತ್ತದೆ. ಕುಟುಂಬ ವಿಚಾರಗಳಲ್ಲಿ ಯೋಚಿಸಬೇಡಿ, ಗಾಬರಿ ಪಡಬೇಡಿ ಇವತ್ತು ಒಳ್ಳೆಯ ಸುದ್ದಿಯನ್ನು ಕೇಳ ತಕ್ಕಂತ ಒಂದು ದಿನ ಶುಭವಾಗಲಿದೆ.
ಕನ್ಯಾ– ಶಾಪಿಂಗ್, ಓಡಾಟ, ಸುತ್ತಾಟ, ಪ್ರಯಾಣ ಇವುಗಳನ್ನು ನೋಡಕ್ಕಂತ ಒಂದು ದಿನ. ಅಷ್ಟು ವಿಶೇಷ ನಿಮ್ಮಗೆ ಚೆನ್ನಾಗಿದೆ. ಪ್ರೀತಿಪಾತ್ರರೊಂದಿಗೆ ಊಟ, ವಿಶೇಷ ಭೋಜನಕೂಟ, ಸಂತೋಷ ಇರಲಿದೆ.
ತುಲಾ– ಅಂದುಕೊಂಡಿರುವ ಕೆಲಸ, ಕಾರ್ಯ ಎಲ್ಲವನ್ನೂ ಪಡೆಯುತ್ತೀರಿ. ಸಂತೋಷ ವಾರ್ತೆಯನ್ನು ಕೇಳುವಿರಿ. ಸ್ವಂತ ಕೆಲಸ, ಬಂಗಾರ ಚೆನ್ನಾಗಿದೆ ಶುಭವಾಗಲಿ.
ವೃಶ್ಚಿಕ– ಅದ್ಭುತವಾದಂತ ದಿನ ಚೆನ್ನಾಗಿದೆ. ಯಾವ ತೊಂದರೆಯೂ ಇಲ್ಲ. ನೆಮ್ಮದಿಯಾಗಿ ಹೆಜ್ಜೆ ಇಡಿ ವಿಶೇಷ ಫಲವನ್ನು ಉದ್ಯೋಗ ನಿಮಿತ್ತ, ವ್ಯಾಪಾರ ನಿಮಿತ್ತ, ಕುಟುಂಬ ನಿಮಿತ್ತ, ಸಂತಸದ ವಾರ್ತೆಯನ್ನು ಕೇಳುತ್ತೀರಿ, ನೋಡುತ್ತೀರಿ ಮಜಾ ಮಾಡಿ ಒಳ್ಳೆಯದಾಗಲಿ.
ಧನಸ್ಸು– ಬಂದಿರುವ ಲಾಭವನ್ನು ಖರ್ಚು ಮಾಡುತ್ತೀರಿ. ಯಾವುದೋ ರೀತಿಯಲ್ಲಿ ಕುಟುಂಬಕ್ಕೋಸ್ಕರ, ಮನೆಗೋಸ್ಕರ, ಆರೋಗ್ಯಕ್ಕೋಸ್ಕರ, ಓಡಾಟಕ್ಕೋಸ್ಕರ, ಖುಷಿಗೋಸ್ಕರ ಖರ್ಚು ತೊಂದರೆಯೇನಿಲ್ಲ.
ಮಕರ– ಅದ್ಭುತವಾದಂತಹ ದಿನ. ಏನೆಲ್ಲಾ ಮಾಡಬೇಕು ಎಂದುಕೊಂಡಿದ್ದೀರಿ ಅದನ್ನು ಮಾಡಿಕೊಳ್ಳುತ್ತೀರಿ. ನೀವು ಪಟ್ಟಿರುವ ಶ್ರಮಕ್ಕೆ ಫಲವನ್ನು ನೋಡುತ್ತೀರಿ.
ಕುಂಭ– ಒಂದು ರೀತಿ ಖುಷಿ, ಸಂಭ್ರಮ, ವ್ಯವಹಾರ, ಕುಟುಂಬ, ಪ್ರೀತಿ, ಪ್ರೇಮ, ಆತ್ಮೀಯರೊಂದಿಗೆ ಓಡಾಟ, ಸುತ್ತಾಟ ಇವೆಲ್ಲವನ್ನೂ ಪಡೆಯ ತಕ್ಕಂತ ವಿಶೇಷವಾದ ದಿನ.
ಮೀನ– ನಿಮಗೋಸ್ಕರ, ಮಕ್ಕಳಿಗೋಸ್ಕರ, ಆರೋಗ್ಯಕ್ಕೋಸ್ಕರ, ಎಂಟರ್ಟೇನ್ಮೆಂಟ್, ಖುಷಿಗೋಸ್ಕರ ಖರ್ಚು ಹೆಚ್ಚಾಗಲಿದೆ ತೊಂದರೆಯಿಲ್ಲ ಖುಷಿಯ ದಿನವೇ.