ದಿನ ಭವಿಷ್ಯ 28 ಡಿಸೆಂಬರ್ 2019!

0
256

ಮೇಷ– ಯಾಕೋ ಸೂರ್ಯ ಕೇತು ಸಾರದಲ್ಲಿ ಇರುವುದರಿಂದ, ಯಾರೋ ಸ್ತ್ರೀಗೆ ಸಂಬಂಧಿಸಿದ ನೋವು, ಮನೆಯಲ್ಲಿ ವಯಸ್ಸಾದವರು, ತಾಯಿ, ಅತ್ತೆ, ತಂದೆ ಸ್ಥಾನದಲ್ಲಿರುವಂತ ವ್ಯಕ್ತಿಗಳಲ್ಲಿ ಎಳೆದಾಟ. ಗ್ರಹಣ ಸ್ಥಿತಿ ಒಂದು ಪ್ರಭಾವ ಜಾಗರೂಕತೆ. ಅವಮಾನಕ್ಕೆ ಒಳಗಾಗುತ್ತೀರಿ. ತುಂಬಾ ದೊಡ್ಡ ಎತ್ತರದ ಸ್ಥಾನ, ಸರ್ಕಾರದ ಮಟ್ಟದ ಉದ್ಯೋಗ, ಗೃಹ ರಕ್ಷಣಾ ಇಲಾಖೆ, ರಕ್ಷಣಾ ಇಲಾಖೆ ಇಂಥ ಒಂದು ಸ್ಥಾನದಲ್ಲಿ ಇದ್ದರೆ ಅಪಮಾನ, ಅವಮಾನ, ಬೆಂಕಿ ಹಚ್ಚುವಂಥ ಪ್ರಸಂಗಗಳು ಇರಲಿದೆ ಎಚ್ಚರಿಕೆ. ಸರ್ಕಾರ ಮಟ್ಟದಲ್ಲಿ ಇರುವವರು ಎಚ್ಚರಿಕೆ! ಶಿವ ಪೂಜೆಯಿಂದ ಒಂದು ನೆಮ್ಮದಿ ದೊರೆಯಲಿದೆ.

 

ವೃಷಭ– ಸರಕಾರಿ ಮಟ್ಟದ ಕೆಲಸ ಕಾರ್ಯಗಳಲ್ಲಿ ವಿಳಂಬವಾದರೂ ಕೂಡ ಒಳ್ಳೆಯದಾಗುತ್ತದೆ ತೊಂದರೆಯೇನಿಲ್ಲ. ಗಾಬರಿ ಪಡಬೇಡಿ, ದಾರಿ ಉಂಟು ಆದಷ್ಟು ದುಡುಕಬೇಡಿ. ದುಡುಕು ಮಾತು ಪೆಟ್ಟು.! ನಿಮ್ಮ ನಾಲಿಗೆ ನಿಮ್ಮ ಪ್ರಬಲ ಶತ್ರು, ಮಿತ್ರ ಜಾಗರೂಕತೆ.

 

ಮಿಥುನ– ಸೂರ್ಯ ಅಸ್ತಂಗತ.! ಸ್ವಲ್ಪ ತಂದೆ, ಹಿರಿಯರ ಜವಾಬ್ದಾರಿ, ಕೆಲಸ, ಜವಾಬ್ದಾರಿಯುತವಾದ ಕೆಲಸದಲ್ಲಿದ್ದರೆ ತೊಳಲಾಟ ಇರುತ್ತದೆ. ನಿಭಾಯಿಸಿಕೊಂಡು ಹೋಗುತ್ತೇನಾ.? ಎಂಬ ಯೋಚನೆ ಮಾಡುತ್ತೀರಿ. ಶಿವ ಬೀಜಾಕ್ಷರಿ ಮಂತ್ರವನ್ನು ಓಂ ನಮಃ ಶಿವಾಯ ಎಂದು ಜಪ ಮಾಡಿಕೊಳ್ಳಿ ಒಳ್ಳೆಯದಾಗಲಿದೆ. ಹಿರಿಯರು, ತಂದೆ ತಾಯಂದಿರು, ಅನಾಥರು ಇವರ ಸೇವೆಯನ್ನು ಮಾಡಿ ತುಂಬ ಒಳ್ಳೆಯದಾಗುತ್ತದೆ.

 

ಕಟಕ– ಸಮಾಧಾನ.! ವೃತ್ತಿಗೆ ಸಂಬಂಧಿತ ವಿಚಾರಗಳಲ್ಲಿ ಒಂದು ಪ್ರಗತಿ ಧೈರ್ಯವಾಗಿ ಮುನ್ನುಗ್ಗಿ ಭಯಬೀಳಬೇಡಿ. ಸೂರ್ಯ ಕೇತು ಸೇರಿರುವುದರಿಂದ ಆತಂಕ ಇರುತ್ತದೆ ಆತಂಕ ಪಡುವ ಅವಶ್ಯಕತೆ ಇಲ್ಲ.

 

ಸಿಂಹ– ಗ್ರಹಣ ಪ್ರಭಾವದ ಒಂದು ಛಾಯೆ ಇರುತ್ತದೆ. ಇಂದು ಒಂದು ಆತಂಕ ಅನ್ನಿಸುತ್ತದೆ. ಏನೂ ಆಗುವುದಿಲ್ಲ, ಸ್ವಲ್ಪ ಜೇನುತುಪ್ಪ ತಂದೆ ತಾಯಿರಿಗೆ ಸಿಹಿ ನೀಡಿ. ಅವರನ್ನು ಖುಷಿ ಪಡಿಸಿ ಒಳ್ಳೆಯದಾಗಲಿದೆ.

 

ಕನ್ಯಾ– ಪರಮಶಿವನ ಪರಿಪೂರ್ಣ ದರ್ಶನ , ಗತ್ತು, ತೂಕ, ಹೆಸರು, ಕೀರ್ತಿ, ವೃತ್ತಿರಂಗದಲ್ಲಿ, ವ್ಯವಹಾರದಲ್ಲಿ ಸಮಯ ಕೂಡಿ ಬರತಕ್ಕಂತಹ ಒಂದು ಸುಯೋಗ ಧೈರ್ಯವಾಗಿ ಹೋಗಿ. ಸುಖಕ್ಕೋಸ್ಕರ ಖರ್ಚು ಆಗಲಿದೆ ಯೋಚಿಸಬೇಡಿ.

 

ತುಲಾ– ಲಾಭವೇ ಇಂದು ನಿಮಗೆ. ಒಡಹುಟ್ಟಿದವರಿಂದ, ಹತ್ತಿರದವರಿಂದ, ತಿಳಿದವರಿಂದ ಧೈರ್ಯವಾಗಿ ಮುಂದೆ ಹೆಜ್ಜೆ ಇಟ್ಟು ನಿಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮುಗಿಸುವಂತ ದಿನ.

 

ವೃಶ್ಚಿಕ– ಗ್ರಹಣದ ಒಂದು ಛಾಯೆ ಇರಲಿದೆ. ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಂದಗತಿಯ ದಿನ. ಏನೊ ಒದ್ದಾಟ, ಏನೋ ತೊಳಲಾಟ, ಏನೊ ಎಳೆದಾಟ ಇರುವಂಥ ಕಂಪನ ಅನ್ನಿಸುತ್ತದೆ. ವಯಸ್ಸಾದವರ ಆರೋಗ್ಯವನ್ನು ನೋಡಿಕೊಳ್ಳಿ ಒಳ್ಳೆಯದಾಗಲಿದೆ.

 

ಧನಸ್ಸು– ಬರುವ ಅದೃಷ್ಟ ಪೂರ್ಣವಾಗಿ ಬಂದಿಲ್ಲ ಅನ್ನಿಸುತ್ತದೆ. ಒಂದಿಷ್ಟು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಒಂದಿಷ್ಟು ಗೋಧಿ, ಒಂದಿಷ್ಟು ರವೆಯನ್ನು ಅರ್ಧ ಕೆಜಿ ಶಿವಾಲಯದ ಅರ್ಚಕರಿಗೊ, ಆಚಾರ್ಯರಿಗೊ, ಬಡವರಿಗೊ ಕೊಡತಕ್ಕಂತಹ ಕೆಲಸ ಮಾಡಿ ಒಳ್ಳೆಯದಾಗುತ್ತದೆ.

 

ಮಕರ– ತೀರಾ ಒಳ್ಳೆಯದಾಗುತ್ತದೆ. ವ್ಯವಹಾರ ನಿಮಿತ್ತ, ಉದ್ಯೋಗ ನಿಮಿತ್ತ, ಪ್ರಯಾಣ ನಿಮಿತ್ತ, ಟೆನ್ಷನ್ ಇದ್ದರೂ ಕೂಡ ಸಾಧಿಸಿಕೊಂಡು ಬರುವಂಥ ಒಂದು ಅದ್ಭುತವಾದ ದಿನ.

 

ಕುಂಭ– ಸೂರ್ಯ ನಿಮಗೆ ಹೆಚ್ಚಾಗಿ ಬಲವಿಲ್ಲದ ಕಾರಣದಲ್ಲಿ ರಾಜ ಕಾರ್ಯಗಳು ನೆರವೇರತಕ್ಕಂತ ಕೆಲಸಗಳು ಆಗುತ್ತದೆ. ಅದ್ಭುತವಾದಂತ ಯಶಸ್ಸು, ಉದ್ಯೋಗದಲ್ಲಿ ವ್ಯವಹಾರದಲ್ಲಿ ಪಡೆಯತಕ್ಕಂತ ಒಂದು ಅದ್ಭುತ ಸುಯೋಗ.

 

ಮೀನ– ಬೇವು ಬೆಲ್ಲ ಎರಡೂ ಉಂಟು. ಉನ್ಮಾದ, ಉದ್ರೇಕ, ಕೋಪ, ಸಿಟ್ಟು, ಉದ್ಯೋಗ, ವ್ಯವಹಾರ, ಸ್ವಂತ ವ್ಯಾಪಾರ ಮಾಡುತ್ತಿರುವವರಿಗೆ ಈ ಒಂದು ಭಾವ ಅನ್ನಿಸುತ್ತದೆ. ಏನು ಯೋಚಿಸಬೇಡಿ ತಾಯಿಯ ಕೈ ತುತ್ತು ತಿಂದು ನಂತರ ಕೆಲಸಕ್ಕೆ ಹೊರಡಿ ಒಳ್ಳೆಯದಾಗುತ್ತದೆ.

LEAVE A REPLY

Please enter your comment!
Please enter your name here