ಗ್ರಹಣದ ನಂತರದ ಸಂಕಲ್ಪಗಳ ಬಗ್ಗೆ ಶ್ರೀ ರವಿಶಂಕರ್ ಗುರೂಜಿ ಅವರು ಇಂದಿನ ಸಂಚಿಕೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಇವತ್ತು ಎಲ್ಲರೂ ಮನೆಯಲ್ಲಿರುವ ವಿಗ್ರಹಗಳನ್ನು ಶುದ್ಧಿ ಮಾಡಿ. ಹೌದು, ಗರಿಕೆಯನ್ನು ತಂದು ಒಂದು ಪಾತ್ರೆಯಲ್ಲಿ ಎಲ್ಲ ವಿಗ್ರಹಗಳನ್ನು ಹಾಕಿ. ಶ್ರೀಚಕ್ರ, ಯಂತ್ರ, ಗಣಪತಿ, ಸೀತಾರಾಮ ಫೋಟೋಗಳು, ಫೋಟೋಗಳ ಮೇಲೆ ಗರಿಕೆ ನೀರನ್ನು ಪ್ರೋಕ್ಷಣೆ ಮಾಡಿ. ಎಲ್ಲ ವಿಗ್ರಹಗಳನ್ನು ಸ್ವಲ್ಪ ತುಳಸಿ, ಸ್ವಲ್ಪ ಗರಿಕೆ ನೀರಿನಲ್ಲಿ ಹಾಕಿ ಪಾತ್ರೆಗಳನ್ನು ತೊಳೆಯಿರಿ. ತೊಳೆದು ಹಾಕಿದ ಮೇಲೆ, ವೇದಿಕೆ ದೇವರಿಗೆ ಅಂತ ಒಂದು ವೇದಿಕೆಯನ್ನು ಪ್ರಾಶಸ್ತ್ಯ ಮಾಡಿ ಗರಿಕೆ ನೀರು, ತುಳಸಿ ನೀರು ತೀರ್ಥ ಏನಾದರೂ ಇದ್ದರೆ ಅದನ್ನು ಹಾಕಿ ಶುದ್ಧಿ ಮಾಡಿಕೊಳ್ಳಿ.
ದೇವತಾ ಪ್ರತಿಷ್ಠಾಪನೆ ಮಾಡಿ, ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳಿ. ಒಂದು ಬೂದುಗುಂಬಳ ಕಾಯಿಯನ್ನು ತೆಗೆದು, ದೃಷ್ಟಿ ತೆಗೆದು ಹೊಡೆದು ಹಾಕಿ ಅಥವಾ ಮನೆಯ ಬಾಗಿಲಿಗೆ ಕಟ್ಟಿ ಒಂದು ಕಪ್ಪು ದಾರದಲ್ಲಿ ಕಟ್ಟಿ. ಒಂದು ದೃಷ್ಟಿ ತೆಗೆದು ಹೊಸಲು ಹೊರಗೆ ಹಾಕಿ. ಮನೆಯಲ್ಲಿ ವಯಸ್ಸಾದವರು ಇದ್ದರೆ ಅವರಿಗೆ ಮೊದಲು ದೃಷ್ಟಿ ತೆಗೆಯಿರಿ ಚಿಕ್ಕ ಬೂದುಗುಂಬಳಕಾಯಿ ತೆಗೆದು ವಯಸ್ಸಾದವರು ಮಲಗಿದ್ದರೆ ಅವರ ಸುತ್ತ ತೆಗೆದು ಹೊಡೆದು ಹಾಕಿ. ಇಲ್ಲ ಮನೆಯಲ್ಲಿ ಕೆಂಡವನ್ನು ಮಾಡಿ ಎಡಗೈನಲ್ಲಿ ಮನೆಯ ಗೃಹಲಕ್ಷ್ಮಿಯು ಒಂದಿಷ್ಟು ಮೆಣಸು, ಉಪ್ಪನ್ನು, ಒಂದಿಷ್ಟು ಮೆಣಸಿನ ಕಾಯಿಯನ್ನು ತೆಗೆದುಕೊಂಡು ಮನೆಯ ಪುಟ್ಟ ಮಕ್ಕಳಿಗೆ ದೃಷ್ಟಿ ತೆಗೆದು, ಕೆಂಡಕ್ಕೆ ಹಾಕಿ ಇನ್ನು ಅತಿ ಮುಖ್ಯವಾಗಿ ಒಂದು ಕೆಂಡವನ್ನು ಮಾಡಿ ಅದನ್ನು ಹೊರಗಡೆ ಇಟ್ಟು ಬಿಡಿ.
ಅತಿ ಮುಖ್ಯವಾಗಿ ವಯಸ್ಸಾದವರಿಗೆ ಒಂದು ಕಪ್ಪು ಬಳೆಯನ್ನು ತೆಗೆದುಕೊಂಡು ಅದರಲ್ಲಿ ದೃಷ್ಟಿ ತೆಗೆದು ಹಾಕಿ. ಏಕೆಂದರೆ ವಯಸ್ಸಾದವರಿಗೆ ಈ ಒಂದು ಗ್ರಹಣ ಬೇಗ ತಟ್ಟಿರುತದೆ. ಕುಂಕುಮ, ವಿಭೂತಿಯನ್ನು ಇಡುವ ಒಂದು ಪದ್ಧತಿಯಿದೆ. ಅದಕ್ಕೆ ಅದರದ್ದೆ ಆದ ಒಂದು ರೀತಿ ಇರುತ್ತದೆ. ಎಷ್ಟೋ ಜನಕ್ಕೆ ಸರಿಯಾಗಿ ಯಾವ ಬೆರಳಿನಲ್ಲಿ ಕುಂಕುಮ, ವಿಭೂತಿಯನ್ನು ಇಟ್ಟುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಸ್ವಲ್ಪ ಅವಲಕ್ಕಿಯನ್ನು ನೆನೆಸಿಟ್ಟು ಸ್ವಲ್ಪ ಬಾಳೆಹಣ್ಣು, ಸಕ್ಕರೆ ಕಲಿಸಿ ತೆಗೆದುಕೊಂಡು ಹಸುವಿಗೆ ತಿನ್ನಿಸಿ ಬಹಳ ಒಳ್ಳೆಯದು ಮಾಡಿಕೊಳ್ಳಿ. ಶುಭವಾಗಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ,
ಮೇಷ– ಸಮೃದ್ಧಿ, ಆನಂದ, ಪರದೇಶ, ಪರಸ್ಥಳ, ಸುತ್ತಾಟ, ಓಡಾಟ, ಭೋಜನಕೂಟ, ವಯ್ಯಾರ, ಮೇಕಪ್ ,ಕಾಲ್ಗೆಜ್ಜೆ, ಮೊಬೈಲ್ ವೀಕೆಂಡ್ ಮಜಾವೇ ಇವತ್ತು ನಿಮಗೆ ಚೆನ್ನಾಗಿದೆ.
ವೃಷಭ– ಎಲ್ಲದರಲ್ಲೂ ಸಮೃದ್ಧಿ, ಸಂತೃಪ್ತಿ ,ತುಂಟತನ ,ಅಲಂಕಾರ ಏನೋ ಒಂದು ವಸ್ತುವನ್ನು ಖರೀದಿ ಮಾಡುತ್ತೀರಿ ಒಂದು ಸುಯೋಗ ಉಂಟು ಶುಭವಾಗಲಿದೆ.
ಮಿಥುನ– ಆತ್ಮೀಯಕೂಟ, ಭೋಜನ ಕೂಟ, ಸಮೃದ್ಧಿಯನ್ನು ನೋಡಕ್ಕಂತ ಒಂದು ದಿನ ಚೆನ್ನಾಗಿದೆ ಶುಭವಾಗಲಿದೆ ಚೆನ್ನಾಗಿದೆ.
ಕಟಕ– ಏನೋ ಒಂದು ತೊಳಲಾಟ, ಕಳೆದು ಹೋದ ಜೀವನ, ಕಳೆದುಹೋದ ಯೌವನ, ಕಳೆದು ಹೋದ ಘಟನೆ ಎಲ್ಲವನ್ನೂ ನೆನಪು ಮಾಡಿಕೊಂಡು ತೊಳಲಾಟ ಪಡುತ್ತೀರಿ. ಶುಕ್ರ ನೇರವಾಗಿ ನೋಡುತ್ತಿರುವುದರಿಂದ ಒಂದು ಆತ್ಮೀಯ ಸಂಗಾತಿಯ ಪ್ರೀತಿಯ ಸಿಂಚನ, ಸಂಗಾತಿ, ದಂಪತಿಗಳಿಗೆ ತುಂಟತನ ಜಾಸ್ತಿ.
ಸಿಂಹ– ಸ್ವಲ್ಪ ಕುತ್ತಿಗೆ ನೋವು, ಸೊಂಟ ನೋವು, ಬೆನ್ನುನೋವು ಈ ರೀತಿಯ ನೋವುಗಳಿಂದ ಬಳಲುತ್ತೀರಿ. ಮಂಡಿ ನೋವು, ಪಿಸ್ತೂಲ, ಸೊಂಟ ನೋವು ಉಲ್ಬಣಿಸುತ್ತದೆ ಜಾಗರೂಕತೆ. ಆರೋಗ್ಯದ ಬಗ್ಗೆ ಜಾಗರೂಕತೆ ಇರಲಿ.
ಕನ್ಯಾ– ಒಂದು ರೀತಿ ತುಂಬಾ ಖುಷಿ ಸಂಭ್ರಮವನ್ನು ನೋಡುವಂಥ ಒಂದು ದಿನ. ಆನಂದದ ದಿನ, ವಿಶೇಷವಾದ ಶುಭ ವಾರ್ತೆಗಳನ್ನು, ಶುಭ ಸುದ್ದಿಯನ್ನು ಕೇಳುವಂತ ಅದ್ಭುತವಾದ ದಿನ.
ತುಲಾ– ಕಲಾವಿದರಿಗೆ, ಆರ್ಟಿಸ್ಟ್ ಗಳಿಗೆ ಅದ್ಭುತವಾದ, ವಿಶೇಷವಾದಂಥ ದಿನ. ವೃದ್ಧಿ, ಅಭಿವೃದ್ಧಿ, ಹಣಕಾಸು, ಹೆಸರು ಖ್ಯಾತಿ ಅದರಲ್ಲೂ ಕಾಲಿಗೆ ಗೆಜ್ಜೆ ಕಟ್ಟಿರುವ ವಾದ್ಯ, ನೃತ್ಯ ಮಾಡಿಸುವ ಮಾಡುವಂಥ ಮ್ಯೂಸಿಕ್ ಡೈರೆಕ್ಟರ್, ನೃತ್ಯಗಾರರಾಗಿದ್ದರೆ ಕುಣಿದಾಡುವಂತ ಒಂದು ದಿನ.
ವೃಶ್ಚಿಕ– ತುಂಬಾ ತುಂಟತನ, ಖಂಡಿತ ಖುಷಿಯಾದ ವಾರ್ತೆಯನ್ನು ಕೇಳುತ್ತೀರಿ. ಹೋಟೆಲ್, ಅಡುಗೆ ಪದಾರ್ಥ, ಕಾಂಡಿಮೆಂಟ್ಸ್, ಬೇಕರಿ, ಹೂವು ,ಹಣ್ಣು, ತರಕಾರಿ, ಸಿಹಿ ಪದಾರ್ಥ ಬೆಲ್ಲದ ಪದಾರ್ಥಗಳ ವ್ಯಾಪಾರ ಮಾಡುತ್ತಿರುವವರಿಗೆ ಸಿಹಿ ಸುದ್ದಿ ಕೇಳುವಂತ ಒಂದು ದಿನ.
ಧನಸ್ಸು– ಇವತ್ತು ತುಂಟತನಕ್ಕೆ ಏನು ಕಡಿಮೆ ಇಲ್ಲ. ಏನೋ ಒಂದು ವೈಭೋಗ, ಏನೋ ಒಂದು ಖುಷಿ, ನವ ಮನ್ಮಥರಾಗಿರುತ್ತೀರಿ. ತುಂಟತನ ಕಂಟ್ರೋಲ್ ಮಾಡಲು ಆಗುವುದಿಲ್ಲ ಅಷ್ಟು ಜಾಸ್ತಿ ಇರುತ್ತದೆ ಜಾಗರೂಕತೆ.
ಮಕರ– ತುಂಬಾ ದೊಡ್ಡ ಫಿಲ್ಮ್ ನಿರ್ಮಾಪಕರು, ನಿರ್ದೇಶಕರು, ಡಿಸ್ಟ್ರಿಬ್ಯೂಟರ್, ಇವೆಂಟ್, ಟ್ರಾವೆಲ್ಸ್ ,ವೆಹಿಕಲ್, ಬಿಸಿನೆಸ್ ಬಹಳ ದೊಡ್ಡ ಶುಭ ಯೋಗ ನಿಮಗೆ ದೊರೆಯುತ್ತದೆ. ಅಲಂಕಾರಿಕ, ಫ್ಲೋರಿಂಗ್, ಟೈಲ್ಸ್, ವಾಲ್ಪೇಪರ್ ಪೇಂಟಿಂಗ್, ಇಂಟೀರಿಯರ್ ಅದ್ಭುತವಾದಂತಹ ಪ್ರಗತಿ.
ಕುಂಭ– ಇಂದು ನಿಮ್ಮ ದಿನ ಚೆನ್ನಾಗಿದೆ. ಪ್ರಯಾಣಗಳಲ್ಲಿ ಅಭಿವೃದ್ಧಿ. ವ್ಯವಹಾರಗಳಲ್ಲಿ ಅಭಿವೃದ್ಧಿ, ಕಲೆಗಾರರಾಗಿದ್ದರೆ ಇದು ಚಾರ್ಮ್ ನಿಮ್ಮಲ್ಲಿರುತ್ತದೆ. ಯಾವುದೇ ಕೆಲಸ ಮಾಡುವಂಥ ಶಕ್ತಿ, ಹುಮ್ಮಸ್ಸು ನಿಮ್ಮಲ್ಲಿರುತ್ತದೆ. ಆತ್ಮೀಯ ಗೆಳೆಯ, ಗೆಳತಿಯರ ಜೊತೆ ಔತಣಕೂಟ ಭೋಜನಕೂಟ ಇರಲಿದೆ ಶುಭವಾಗಲಿ.
ಮೀನ– ಧರ್ಮಾಕಾರಿಯಾಗಿ ಧರ್ಮಕಾರ್ಯ, ಜಡ್ಜ್, ಲಾಯರ್, ಅಡ್ವೈಸರ್ ಇಂಥ ಒಂದು ವಿಭಾಗಗಳಲ್ಲಿ ಕೆಲಸ ಕಾರ್ಯ ಮಾಡುತ್ತಿರುವವರಿಗೆ ಕಾನೂನು ಪಂಡಿತರು, ಟೀಚರ್, ಪ್ರೊಫೆಸರ್, ಡೆಂಟಿಸ್ಟ್ ಕೆಲಸ ಮಾಡತಕ್ಕಂತಹ ಮೇಕಪ್ ಕೆಲಸ ಮಾಡತಕ್ಕಂತಹ ಅವರಿಗೆ ವಿಶೇಷ ಪ್ರಗತಿ ಕಾಣ ತಕ್ಕಂತೆ ಅದ್ಭುತ ದಿನ ಶುಭವಾಗಲಿ.